ಕನ್ನಡ ಸುದ್ದಿ  /  ಕ್ರಿಕೆಟ್  /  ಮಳೆಯಿಂದ ಪಂದ್ಯ ರದ್ದು; ಎಲಿಮಿನೇಟರ್​​ನಲ್ಲಿ ಆರ್​​ಸಿಬಿಗೆ ರಾಜಸ್ಥಾನ್ ರಾಯಲ್ಸ್ ಎದುರಾಳಿ, ಪ್ಲೇಆಫ್​ ವೇಳಾಪಟ್ಟಿ ಹೀಗಿದೆ

ಮಳೆಯಿಂದ ಪಂದ್ಯ ರದ್ದು; ಎಲಿಮಿನೇಟರ್​​ನಲ್ಲಿ ಆರ್​​ಸಿಬಿಗೆ ರಾಜಸ್ಥಾನ್ ರಾಯಲ್ಸ್ ಎದುರಾಳಿ, ಪ್ಲೇಆಫ್​ ವೇಳಾಪಟ್ಟಿ ಹೀಗಿದೆ

KKR vs RR: 2024ರ ಐಪಿಎಲ್​ನ ಕೊನೆಯ ಲೀಗ್​​ನ​ ರಾಜಸ್ಥಾನ್ ರಾಯಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯವು ರದ್ದುಗೊಂಡಿತು. ಇದರೊಂದಿಗೆ ಪ್ಲೇಆಫ್​​ನಲ್ಲಿ ಮುಖಾಮುಖಿಯಾಗುವ ತಂಡಗಳು ಅಂತಿಮಗೊಂಡವು.

ಮಳೆಯಿಂದ ಪಂದ್ಯ ರದ್ದು; ಎಲಿಮಿನೇಟರ್​​ನಲ್ಲಿ ಆರ್​​ಸಿಬಿಗೆ ರಾಜಸ್ಥಾನ್ ರಾಯಲ್ಸ್ ಎದುರಾಳಿ, ಪ್ಲೇಆಫ್​ ವೇಳಾಪಟ್ಟಿ ಹೀಗಿದೆ
ಮಳೆಯಿಂದ ಪಂದ್ಯ ರದ್ದು; ಎಲಿಮಿನೇಟರ್​​ನಲ್ಲಿ ಆರ್​​ಸಿಬಿಗೆ ರಾಜಸ್ಥಾನ್ ರಾಯಲ್ಸ್ ಎದುರಾಳಿ, ಪ್ಲೇಆಫ್​ ವೇಳಾಪಟ್ಟಿ ಹೀಗಿದೆ

ರಾಜಸ್ಥಾನ್ ರಾಯಲ್ಸ್​ ಹಾಗೂ ಕೋಲ್ಕತ್ತಾ ನೈಟ್​ ರೈಡರ್ಸ್ (RR vs KKR) ನಡುವಿನ 17ನೇ ಆವೃತ್ತಿಯ ಐಪಿಎಲ್​ನ (IPL 2024) 70ನೇ ಹಾಗೂ ಅಂತಿಮ ಲೀಗ್​​​ ಪಂದ್ಯದ ಟಾಸ್ ಜರುಗಿದರೂ ಒಂದೂ ಎಸೆತ ಕಾಣದೆ ಮಳೆಯಿಂದ ರದ್ದಾಯಿತು. ಅಂಕಪಟ್ಟಿಯಲ್ಲಿ 2ನೇ ಸ್ಥಾನ ಪಡೆದು ಮೊದಲ ಕ್ವಾಲಿಫೈಯರ್​​ ಆಡುವ ನಿರೀಕ್ಷೆಯಲ್ಲಿದ್ದ ಸಂಜು ಸ್ಯಾಮ್ಸನ್​ ಪಡೆಗೆ ಭಾರಿ ನಿರಾಸೆಯಾಗಿದೆ. ಸನ್​ರೈಸರ್ಸ್​ ಹೈದರಾಬಾದ್ 2ನೇ ಸ್ಥಾನ ಪಡೆದು ಕ್ವಾಲಿಫೈಯರ್​-1ಕ್ಕೆ ಅರ್ಹತೆ ಪಡೆದುಕೊಂಡಿದೆ.

ಟ್ರೆಂಡಿಂಗ್​ ಸುದ್ದಿ

ಗುವಾಹತಿಯ ಬರ್ಸಾಪುರ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು. ಭಾರಿ ಮಳೆಯ ಕಾರಣ ಟಾಸ್​ ಪ್ರಕ್ರಿಯೆ ವಿಳಂಬವಾಯಿತು. 7 ಗಂಟೆಗೆ ನಡೆಯಬೇಕಿದ್ದ ಟಾಸ್​ 10.30ಕ್ಕೆ ನಡೆಯಿತು. ತಲಾ 7 ಓವರ್​​ಗಳ ಪಂದ್ಯಕ್ಕೂ ನಿರ್ಧಾರ ತೆಗೆದುಕೊಳ್ಳಲಾಯಿತು. ಆದರೆ ಟಾಸ್ ಮುಗಿದ ಐದೇ ನಿಮಿಷಕ್ಕೆ ಮತ್ತೆ ವರುಣನ ಆಗಮನವಾಯಿತು. ಕೆಲಹೊತ್ತು ಕಾದು ನೋಡಿದರೂ ನಿಲ್ಲದ ಲಕ್ಷಣ ಕಾಣದ್ದಕ್ಕೆ ಪಂದ್ಯ ಸ್ಥಗಿತಗೊಳಿಸಿ ಉಭಯ ತಂಡಗಳಿಗೂ ತಲಾ 1 ಅಂಕ ನೀಡಲಾಯಿತು.

ಆರ್​ಸಿಬಿ-ಆರ್​ಆರ್​​ ನಡುವೆ ಎಲಿಮಿನೇಟರ್​ ಪಂದ್ಯ

ಮೇ 22 ರಂದು ಅಹ್ಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿ ನಡೆಯುವ ಎಲಿಮಿನೇಟರ್​ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ. ಆರ್​ಆರ್​ 14 ಪಂದ್ಯಗಳಲ್ಲಿ 8 ಗೆಲುವು, 5 ಸೋಲು, 1 ಪಂದ್ಯ ರದ್ದಾಗಿ ಒಟ್ಟು 17 ಅಂಕ ಪಡೆದು 3ನೇ ಸ್ಥಾನದಲ್ಲಿದೆ. ಆರ್​ಸಿಬಿ 14ರಲ್ಲಿ ತಲಾ 7 ಗೆಲುವು-ಸೋಲು ಕಂಡು 14 ಅಂಕ ಸಂಪಾದಿಸಿ 4ನೇ ಸ್ಥಾನದಲ್ಲಿದೆ. ಸತತ 6 ಗೆಲುವು ಸಾಧಿಸಿರುವ ಆರ್​ಸಿಬಿ ಅದೃಷ್ಟ ಕೈ ಹಿಡಿಯುತ್ತಾ ಎಂಬುದನ್ನು ಕಾದುನೋಡೋಣ.

ಮೊದಲ ಕ್ವಾಲಿಫೈಯರ್​​ನಲ್ಲಿ ಕೆಕೆಆರ್​​-ಎಸ್​ಆರ್​ಹೆಚ್

ಇಂದು (ಮೇ 19ರ ಭಾನುವಾರ) ನಡೆದ ಮೊದಲ ಪಂದ್ಯದಲ್ಲಿ ಸನ್​ರೈಸರ್ಸ್, ಪಂಜಾಬ್ ಕಿಂಗ್ಸ್ ವಿರುದ್ದ ಗೆದ್ದ ನಂತರ 2ನೇ ಸ್ಥಾನಕ್ಕೆ ಲಗ್ಗೆ ಇಟ್ಟಿತು. ಒಂದು ವೇಳೆ ಕೆಕೆಆರ್​ ವಿರುದ್ಧ ಆರ್​ಆರ್​ ಗೆಲುವು ಸಾಧಿಸಿದ್ದರೆ 2ನೇ ಸ್ಥಾನ ಪಡೆಯುವ ಅವಕಾಶ ಇತ್ತು. ಆದರೆ, ಮಳೆರಾಯ ತಣ್ಣೀರೆರಚಿ ಬಿಟ್ಟನು. ಆರ್​ಆರ್​ ಮತ್ತು ಎಸ್​ಆರ್​ಹೆಚ್​ ತಲಾ 17 ಅಂಕ ಪಡೆದಿದ್ದರೂ ರನ್​​ರೇಟ್​​ನಲ್ಲಿ ಹೈದರಾಬಾದ್ ಎರಡನೇ ಸ್ಥಾನ ಪಡೆದಿದೆ. ಇನ್ನು 20 ಅಂಕ ಪಡೆದಿರುವ ಕೆಕೆಆರ್​ ಅಗ್ರಸ್ಥಾನದಲ್ಲಿದ್ದು, ಮೇ 21ರಂದು ನಡೆಯುವ ಮೊದಲ ಕ್ವಾಲಿಫೈಯರ್​​ನಲ್ಲಿ ಎಸ್​ಆರ್​ಹೆಚ್ ತಂಡವನ್ನು ಎದುರಿಸಲಿದೆ.

ಐಪಿಎಲ್​-2024ರ ಪ್ಲೇಆಫ್​ ವೇಳಾಪಟ್ಟಿ

  • ಮೇ 21 - ಕೆಕೆಆರ್​ vs ಎಸ್​ಆರ್​ಹೆಚ್, ನರೇಂದ್ರ ಮೋದಿ ಸ್ಟೇಡಿಯಂ​​ (ಮೊದಲ ಕ್ವಾಲಿಫೈಯರ್​​)
  • ಮೇ 22 - ಆರ್​ಆರ್​​ vs ಆರ್​ಸಿಬಿ, ನರೇಂದ್ರ ಮೋದಿ ಸ್ಟೇಡಿಯಂ (ಎಲಿಮಿನೇಟರ್​​)
  • ಮೇ 24 - ಕ್ವಾಲಿಫೈಯರ್​-1 ಸೋತವರು vs ಎಲಿಮಿನೇಟರ್ ಗೆದ್ದವರು, ಚೆಪಾಕ್ ಮೈದಾನ (2ನೇ ಕ್ವಾಲಿಫೈಯರ್​)
  • ಮೇ 26 - ಫೈನಲ್​ ಪಂದ್ಯ, ಚೆಪಾಕ್ ಮೈದಾನ

 

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024

ಕ್ರಿಕೆಟ್‌ಗೆ ಸಂಬಂಧಿಸಿದ ಎಲ್ಲ ಸುದ್ದಿ, T20 ವಿಶ್ವಕಪ್, T20 ವಿಶ್ವಕಪ್ ವೇಳಾಪಟ್ಟಿ, T20 ವಿಶ್ವಕಪ್ ಅತ್ಯಧಿಕ ರನ್‌ಗಳು, T20 ವಿಶ್ವಕಪ್ ಪಾಯಿಂಟ್ಸ್ ಟೇಬಲ್, T20 ವಿಶ್ವಕಪ್ ಲೈವ್ ಸ್ಕೋರ್, T20 ವಿಶ್ವಕಪ್ ಅಂಕಿಅಂಶಗಳು.. ಕ್ರಿಕೆಟ್‌ಗೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ HT ಕನ್ನಡ ವೆಬ್‌ಸೈಟ್ ನೋಡಿ