ಆರ್​ಸಿಬಿ vs ಸಿಎಸ್​ಕೆ ಪಂದ್ಯಕ್ಕೆ ವರುಣನ ಕರಿನೆರಳು; ಮಳೆಯಿಂದ ಪಂದ್ಯ ರದ್ದಾದರೆ ಯಾವ ತಂಡಕ್ಕಿದೆ ಪ್ಲೇಆಫ್​ ಚಾನ್ಸ್?
ಕನ್ನಡ ಸುದ್ದಿ  /  ಕ್ರಿಕೆಟ್  /  ಆರ್​ಸಿಬಿ Vs ಸಿಎಸ್​ಕೆ ಪಂದ್ಯಕ್ಕೆ ವರುಣನ ಕರಿನೆರಳು; ಮಳೆಯಿಂದ ಪಂದ್ಯ ರದ್ದಾದರೆ ಯಾವ ತಂಡಕ್ಕಿದೆ ಪ್ಲೇಆಫ್​ ಚಾನ್ಸ್?

ಆರ್​ಸಿಬಿ vs ಸಿಎಸ್​ಕೆ ಪಂದ್ಯಕ್ಕೆ ವರುಣನ ಕರಿನೆರಳು; ಮಳೆಯಿಂದ ಪಂದ್ಯ ರದ್ದಾದರೆ ಯಾವ ತಂಡಕ್ಕಿದೆ ಪ್ಲೇಆಫ್​ ಚಾನ್ಸ್?

RCB vs CSK: ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯಕ್ಕೆ ಮಳೆ ಭೀತಿ ಉಂಟಾಗಿದೆ. ಮಳೆಯಿಂದ ಪಂದ್ಯ ರದ್ದಾದರೆ ಪ್ಲೇಆಫ್ ಪ್ರವೇಶಿಸುವ ತಂಡ ಯಾವುದು? ಇಲ್ಲಿದೆ ವಿವರ.

ಆರ್​ಸಿಬಿ vs ಸಿಎಸ್​ಕೆ ಪಂದ್ಯಕ್ಕೆ ವರುಣನ ಕರಿನೆರಳು; ಮಳೆಯಿಂದ ಪಂದ್ಯ ರದ್ದಾದರೆ ಪ್ಲೇಆಫ್​ ಚಾನ್ಸ್ ಯಾರಿಗೆ?
ಆರ್​ಸಿಬಿ vs ಸಿಎಸ್​ಕೆ ಪಂದ್ಯಕ್ಕೆ ವರುಣನ ಕರಿನೆರಳು; ಮಳೆಯಿಂದ ಪಂದ್ಯ ರದ್ದಾದರೆ ಪ್ಲೇಆಫ್​ ಚಾನ್ಸ್ ಯಾರಿಗೆ?

17ನೇ ಆವೃತ್ತಿಯ ಐಪಿಎಲ್​ನ (IPL 2024) ಬಹುನಿರೀಕ್ಷಿತ ಪಂದ್ಯಕ್ಕೆ ಆರ್​ಸಿಬಿ-ಸಿಎಸ್​ಕೆ (RCB vs CSK) ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಗೆದ್ದವರಿಗೆ ಪ್ಲೇಆಫ್​ ಟಿಕೆಟ್ ಅಧಿಕೃತವಾಗಲಿರುವ ಕಾರಣ ತೀವ್ರ ಕುತೂಹಲ ಮೂಡಿಸಿದೆ. ಉಭಯ ತಂಡಗಳ ಮಹತ್ವದ ಪಂದ್ಯಕ್ಕೆ ಟಿಕೆಟ್​ಗಳು ಸಹ ಸೋಲ್ಡ್​ ಔಟ್ ಆಗಿವೆ. ಐಪಿಎಲ್​ನ 68ನೇ ಪಂದ್ಯದಲ್ಲಿ ಬೆಂಗಳೂರು ಮತ್ತು ಚೆನ್ನೈ ತಂಡಗಳು ಎಂ ಚಿನ್ನಸ್ವಾಮಿ ಮೈದಾನದಲ್ಲಿ ಕಾದಾಡಲಿದೆ. ಆದರೆ ಈ ಪಂದ್ಯಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ಫ್ಯಾನ್ಸ್​​​ಗೆ ಕಹಿ ಸುದ್ದಿ ಕೇಳಿಬಂದಿದೆ.

ಮೇ 18ರಂದು ಶನಿವಾರ ನಡೆಯುವ ಹೈವೋಲ್ಟೇಜ್ ಕದನಕ್ಕೆ ಮಳೆ ಕಾಡುವ ಸಂಭವ ಇದೆ. ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಮೇ 19ರವರೆಗೂ ಧಾರಾಕಾರ ಮಳೆ ಸುರಿಯುವ ನಿರೀಕ್ಷೆ ಇದೆ. ಕಳೆದ 10 ದಿನಗಳಿಂದ ಬೆಂಗಳೂರು ಸೇರಿದಂತೆ ಕರ್ನಾಟಕದ ಇತರೆ ಭಾಗಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದೆ. ನಿರ್ಣಾಯಕ ಹಂತದಲ್ಲಿ ಮಳೆ ಕಾಟ ಐಪಿಎಲ್ ತಂಡಗಳನ್ನು ಇಕ್ಕಟ್ಟಿಗೆ ಸಿಲುಕಿಸುವಂತೆ ಮಾಡಿದೆ. ಇದೀಗ ಜಿದ್ದಾಜಿದ್ದಿನ ಕದನಕ್ಕೂ ಮಳೆ ಅಪಕೃಪ ತೋರಲಿದ್ದಾನೆ ವರದಿ ಹೇಳುತ್ತಿದೆ.

ಮೇ 13ರಂದು ನಡೆದ ಗುಜರಾತ್ ಟೈಟಾನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯವು ಮಳೆಯಿಂದ ರದ್ದಾಯಿತು. ಹೀಗಾಗಿ ಒಂದೂ ಎಸೆತವನ್ನು ಕಾಣದೆ ಸ್ಥಗಿತಗೊಂಡಿದ್ದು, ಉಭಯ ತಂಡಗಳು ತಲಾ ಒಂದೊಂದು ಅಂಕ ಪಡೆದವು. ಪ್ಲೇಆಫ್ ಮೇಲೆ ಕಣ್ಣು ಹಾಕಿದ್ದ ಶುಭ್ಮನ್ ಗಿಲ್ ನೇತೃತ್ವದ ಗುಜರಾತ್ ಟೈಟಾನ್ಸ್ ಮಳೆಯ ಕಾರಣದಿಂದ 11 ಅಂಕಗಳೊಂದಿಗೆ ಟೂರ್ನಿಯಿಂದಲೇ ಹೊರಬಿತ್ತು. ಕೋಲ್ಕತ್ತಾ 19 ಅಂಕಗಳೊಂದಿಗೆ ಅಗ್ರಸ್ಥಾನದ ಜತೆಗೆ ಮೊದಲ ಕ್ವಾಲಿಫೈಯರ್​​ಗೂ ಅರ್ಹತೆ ಪಡೆಯಿತು.

ಆರ್​ಸಿಬಿ-ಸಿಎಸ್​ಕೆ ಪಂದ್ಯಕ್ಕೂ ವರಣನ ಕರಿನೆರಳು?

ಒಂದು ವೇಳೆ ಈ ಪಂದ್ಯದಲ್ಲಿ ಗೆಲುವು ಸಾಧಿಸಿದ್ದರೆ, ಗುಜರಾತ್ ಟೈಟಾನ್ಸ್ ಪ್ಲೇಆಫ್ ಕನಸು ಜೀವಂತವಾಗಿರುತ್ತಿತ್ತು. ಆದರೆ ವರುಣನ ಅವಕೃಪೆಯಿಂದ ಗುಜರಾತ್​ಗೆ ತೀವ್ರ ನಿರಾಸೆಯಾಯಿತು. ಇದೀಗ ಇದೇ ಪಂದ್ಯದಂತೆ, ಆರ್​ಸಿಬಿ ಮತ್ತು ಸಿಎಸ್​ಕೆ ಪಂದ್ಯದ ಮೇಲೂ ಮಳೆಯ ಕರಿನೆರಳು ಬಿದ್ದಿದೆ. ಗುಜರಾತ್ ತಂಡವನ್ನು ಮನೆಗೆ ಕಳುಹಿಸಿದ ವರುಣ, ಈಗ ಆರ್​ಸಿಬಿ ಕನಸಿನ ಮೇಲೂ ತಣ್ಣೀರು ಎರಚುವಂತಿದೆ. ಉಭಯ ತಂಡಗಳಿಗೂ ಈ ಪಂದ್ಯ ಜಯಿಸುವುದು ಬಹಳ ಮುಖ್ಯವಾಗಿದೆ. ಆದರೆ ಸಿಎಸ್​ಕೆಗಿಂತ ಆರ್​ಸಿಬಿಗೆ ಆತಂಕ ಶುರುವಾಗಿದೆ.

ಮೇ 18ರಂದು ಬೆಂಗಳೂರಿನಲ್ಲಿ ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ. ಶೇ 80 ರಿಂದ 90ರಷ್ಟು ಮಳೆ ಸುರಿಯಲಿದೆ ಎಂದು ವೆದರ್ ರಿಪೋರ್ಟ್ ಹೇಳುತ್ತಿದೆ. ಟೂರ್ನಿಯ ಫಸ್ಟ್​ ಹಾಫ್​ನಲ್ಲಿ ಹೀನಾಯ ಪ್ರದರ್ಶನ ನೀಡಿದ್ದ ಆರ್​ಸಿಬಿ, ಸೆಕೆಂಡ್ ಹಾಫ್​​ನಲ್ಲಿ ಸತತ ಜಯಗಳೊಂದಿಗೆ ಮುನ್ನುಗ್ಗುತ್ತಿದೆ. ಪ್ಲೇಆಫ್​ ಪ್ರವೇಶಿಸುವುದೇ ಅಸಾಧ್ಯ ಇಲ್ಲ ಎನ್ನುವಂತಹ ಸ್ಥಿತಿಯಿಂದ ಈಗ ಪ್ರಬಲ ಪೈಪೋಟಿ ನೀಡುವ ತಂಡವಾಗಿ ಮಾರ್ಪಟ್ಟಿದೆ. ಪ್ಲೇಆಫ್ ಆಸೆ ಜೀವಂತವಾಗಿರಿಸಿಕೊಂಡಿದೆ.

ಪಂದ್ಯ ರದ್ದಾದರೆ ಪ್ಲೇಆಫ್ ಪ್ರವೇಶಿಸುವುದು ಯಾರು?

ಆರ್​ಸಿಬಿ ಪ್ರಸ್ತುತ 13 ಪಂದ್ಯಗಳಲ್ಲಿ 6ರಲ್ಲಿ ಗೆದ್ದು 12 ಅಂಕಗಳೊಂದಿಗೆ 0.387 ರನ್ ರೇಟ್‌ನೊಂದಿಗೆ 5ನೇ ಸ್ಥಾನದಲ್ಲಿದೆ. ಬೆಂಗಳೂರು ತನ್ನ ಕೊನೆಯ ಪಂದ್ಯದಲ್ಲಿ ಸಿಎಸ್​ಕೆ, 18ಕ್ಕೂ ಹೆಚ್ಚು ರನ್​ಗಳ ಅಂತರದಿಂದ ಸೋಲಿಸಬೇಕು. ಇಲ್ಲವಾದಲ್ಲಿ ಸಿಎಸ್ ಕೆ ವಿರುದ್ಧ 18.1 ಓವರ್​​​ಗಳಲ್ಲಿ ಚೇಸ್ ಮಾಡಬೇಕು. ಆಗ ಸಿಎಸ್​ಕೆಗಿಂತ ಉತ್ತಮ ರನ್ ರೇಟ್ ಪಡೆಯಲು ಸಾಧ್ಯವಾಗುತ್ತದೆ. ಅಲ್ಲದೆ, ಪ್ಲೇ ಆಫ್​​ಗೂ ಅರ್ಹತೆ ಪಡೆಯಲಿದೆ. ಆದರೆ ಮಳೆ ಬಂದು ಪಂದ್ಯ ರದ್ದಾದರೆ ಸಿಎಸ್​​ಕೆ ಪ್ಲೇಆಫ್​ಗೆ ಅರ್ಹತೆ ಪಡೆಯಲಿದೆ. ಆರ್​ಸಿಬಿ ಹೊರಬೀಳಲಿದೆ.

ಮತ್ತೊಂದೆಡೆ ಒಂದು ವೇಳೆ ಸಿಎಸ್​ಕೆ ವಿರುದ್ಧ ಗೆದ್ದರೂ ನೆಟ್​ರನ್​ರೇಟ್ ಕಡಿಮೆ ಇದ್ದರೂ ಆರ್​ಸಿಬಿ ಪ್ಲೇಆಫ್ ಪ್ರವೇಶಿಸಲು ಮತ್ತೊಂದು ಅವಕಾಶ ಇದೆ. ಸನ್​ರೈಸರ್ಸ್ ಹೈದರಾಬಾದ್ ತಂಡವು ತನ್ನ ಎರಡೂ ಪಂದ್ಯಗಳಲ್ಲಿ ಸೋತು ನೆಟ್​ರನ್​ರೇಟ್ ಕುಸಿದರೆ, ಆರ್​ಸಿಬಿ ಪ್ಲೇಆಫ್ ಪ್ರವೇಶಿಸಲಿದೆ. ಆಗ ಸಿಎಸ್​ಕೆ ಮತ್ತು ಆರ್​ಸಿಬಿ ಎರಡೂ ತಂಡಗಳು ಎಲಿಮಿನೇಟರ್ ಆಡಲಿವೆ. ಪ್ರಸ್ತುತ ಭರ್ಜರಿ ಫಾರ್ಮ್​ನಲ್ಲಿರುವ ಆರ್​ಸಿಬಿ, ಸಿಎಸ್​ಕೆ ತಂಡವನ್ನು ಸೋಲಿಸುವ ವಿಶ್ವಾಸದಲ್ಲಿದೆ.

Whats_app_banner