ಕನ್ನಡ ಸುದ್ದಿ  /  Cricket  /  Rajat Patidar Gets Brutally Trolled After Consistent Miserable Performance In The Test Against England Kuldeep Yadav Prs

ನಿನಗಿಂತ ಕುಲ್ದೀಪ್ ಯಾದವ್ ಬೆಸ್ಟ್; ರಜತ್ ಪಾಟೀದಾರ್ ಸತತ ವೈಫಲ್ಯಕ್ಕೆ‌ ಕೊತ‌ಕೊತ‌ ಕುದಿಯುತ್ತಿರುವ ನೆಟ್ಟಿಗರು

Rajat Patidar Trolled: ನಾಲ್ಕನೇ ಟೆಸ್ಟ್​ನ ಎರಡನೇ ಇನ್ನಿಂಗ್ಸ್​​ನಲ್ಲಿ ಡಕೌಟ್​ ಆದ ಮಧ್ಯಮ ಕ್ರಮಾಂಕದ ಬ್ಯಾಟರ್ ರಜತ್ ಪಾಟೀದಾರ್​​ ಮತ್ತೆ ವಿಫಲರಾಗಿದ್ದು, ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ರಜತ್ ಪಾಟೀದಾರ್ ಸತತ ವೈಫಲ್ಯಕ್ಕೆ‌ ಕೊತ‌ಕೊತ‌ ಕುದಿಯುತ್ತಿರುವ ನೆಟ್ಟಿಗರು
ರಜತ್ ಪಾಟೀದಾರ್ ಸತತ ವೈಫಲ್ಯಕ್ಕೆ‌ ಕೊತ‌ಕೊತ‌ ಕುದಿಯುತ್ತಿರುವ ನೆಟ್ಟಿಗರು

ರಾಂಚಿಯ ಜೆಎಸ್​ಸಿಎ ಇಂಟರ್​ನ್ಯಾಷನಲ್​ ಸ್ಟೇಡಿಯಂನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್​ ಪಂದ್ಯದಲ್ಲಿ ಭಾರತ ತಂಡ ಭರ್ಜರಿ 5 ವಿಕೆಟ್​ಗಳ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು ವಶಪಡಿಸಿಕೊಂಡಿದೆ. ತವರಿನಲ್ಲಿ ಭಾರತ ಗೆದ್ದುಕೊಂಡ ಸತತ 17ನೇ ಸರಣಿ ಇದಾಗಿದೆ. ಆದರೆ ಮಧ್ಯಮ ಕ್ರಮಾಂಕದ ಬ್ಯಾಟರ್ ರಜತ್ ಪಾಟೀದಾರ್​​ ಮತ್ತೆ ವಿಫಲರಾಗಿದ್ದು, ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಅವರ ಅಲಭ್ಯತೆಯಲ್ಲಿ ಅವಕಾಶ ಪಡೆದ ಆರ್​ಸಿ​ಬಿ ಬ್ಯಾಟರ್ ರಜತ್ ಪಾಟೀದಾರ್, ಪ್ರಸ್ತುತ ನಡೆಯುತ್ತಿರುವ ಇಂಗ್ಲೆಂಡ್ ಸರಣಿಯಲ್ಲಿ ಸತತ ವೈಫಲ್ಯ ಅನುಭವಿಸಿದ್ದಾರೆ. ಒಂದೇ ಒಂದು ಅದ್ಭುತ ಇನ್ನಿಂಗ್ಸ್ ಅವರಿಂದ ಮೂಡಿ ಬಂದಿಲ್ಲ. ಇದೀಗ ನಾಲ್ಕನೇ ಟೆಸ್ಟ್​​ನಲ್ಲಿ ಮತ್ತೊಮ್ಮೆ ಡಕೌಟ್ ಆಗಿದ್ದಾರೆ. ಎರಡು ಮತ್ತು ಮೂರನೇ ಟೆಸ್ಟ್​​ನಲ್ಲಿ ಭಾರತ ಗೆಲುವು ದಾಖಲಿಸಿದ ಕಾರಣ ಪಾಟೀದಾರ್ ಕಳಪೆ ಪ್ರದರ್ಶನದ ಬಗ್ಗೆ ಹೆಚ್ಚು ಚರ್ಚೆಯಾಗಿರಲಿಲ್ಲ.

ಇದೀಗ 4ನೇ ಟೆಸ್ಟ್ ಪಂದ್ಯದ ಮೊದಲ ಮತ್ತು ಎರಡನೇ ಇನ್ನಿಂಗ್ಸ್​​ನಲ್ಲೂ ಭಾರತದ ಸಂಕಷ್ಟದಲ್ಲಿದ್ದಾಗ ರಜತ್ ಪಾಟೀದಾರ್ ದೊಡ್ಡ ಇನ್ನಿಂಗ್ಸ್ ಕಟ್ಟಲಿಲ್ಲ. ತಂಡವನ್ನು ರಕ್ಷಿಸುವ ಕೆಲಸಕ್ಕೆ ಮುಂದಾಗಲಿಲ್ಲ. ಈ ಪಂದ್ಯದ ಪ್ರಥಮ ಮತ್ತು ದ್ವಿತೀಯ ಇನ್ನಿಂಗ್ಸ್​ನಲ್ಲಿ ಕ್ರಮವಾಗಿ 17 ಮತ್ತು 0 ರನ್ ಗಳಿಸಿದ್ದಾರೆ. ಇದು ಕ್ರಿಕೆಟ್ ಪ್ರೇಮಿಗಳಿಗೆ ಕೋಪ ತರಿಸಿದೆ. ಇದರ ಬೆನ್ನಲ್ಲೇ ನಿನಗಿಂತ ಕುಲ್ದೀಪ್ ಯಾದವ್ ಬೆಸ್ಟ್. ಅವರು ಅದ್ಭುತ ಬ್ಯಾಟಿಂಗ್​ ಪ್ರದರ್ಶನ ತೋರಿದ್ದಾರೆ ಎನ್ನುತ್ತಿದ್ದಾರೆ ನೆಟ್ಟಿಗರು.

ಕುಲ್ದೀಪ್​ ಬೆಂಬಲಿಸಿದ ಫ್ಯಾನ್ಸ್

ನಾಲ್ಕನೇ ಟೆಸ್ಟ್​ನ ಪ್ರಥಮ ಇನ್ನಿಂಗ್ಸ್​​ನಲ್ಲಿ 42 ಎಸೆತಗಳಲ್ಲಿ 17 ರನ್ ಕಲೆ ಹಾಕಿದ ರಜತ್, ಇಂಗ್ಲೆಂಡ್​ನ ಯುವ ಸ್ಪಿನ್ನರ್​ ಶೋಯೆಬ್ ಬಶೀರ್​ಗೆ ಔಟಾದರು. ಮತ್ತು ದ್ವಿತೀಯ ಇನ್ನಿಂಗ್ಸ್​​ನಲ್ಲಿ ಭಾರತ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ 6 ಎಸೆತಗಳಲ್ಲಿ ಶೂನ್ಯಕ್ಕೆ ಔಟಾದರು. ರಜತ್ ಮತ್ತೊಂದು ಕಳಪೆ ಬ್ಯಾಟಿಂಗ್ ಮೂಲಕ ಅಭಿಮಾನಿಗಳ ಟೀಕೆಗೆ ಗುರಿಯಾಗಿದ್ದಾರೆ. ನೆಟ್ಸ್​​ನಲ್ಲಿ ಅಭಿಮಾನಿಗಳು ಹೆಚ್ಚು ಟ್ರೋಲ್ ಮಾಡುತ್ತಿದ್ದಾರೆ. ಐದನೇ ಟೆಸ್ಟ್​ ಪಂದ್ಯಕ್ಕೆ ಪಾಟೀದಾರ್​ನನ್ನು ತಂಡದಿಂದ ಕೈಬಿಡುವಂತೆ ಕೆಲವರು ಒತ್ತಾಯಿಸುತ್ತಿದ್ದಾರೆ.

ಕುಲ್ದೀಪ್ ಯಾದವ್ ಬ್ಯಾಟಿಂಗ್

ಕುಲ್ದೀಪ್ ಯಾದವ್ ಈ ಸರಣಿಯಲ್ಲಿ 3 ಪಂದ್ಯಗಳ 5 ಇನ್ನಿಂಗ್ಸ್​ಗಳಿಂದ ಒಟ್ಟು 67 ರನ್ ಗಳಿಸಿದ್ದಾರೆ. ಇದಕ್ಕಾಗಿ ಒಟ್ಟು 293 ಎಸೆತಗಳನ್ನು ಎದುರಿಸಿದ್ದಾರೆ. ಪ್ರಮುಖ ಆಟಗಾರರ ಜೊತೆಗೆ ಶತಕದ ಜೊತೆಯಾಟ ಕೂಡ ಆಡಿದ್ದಾರೆ. 16.75ರ ಸರಾಸರಿಯಲ್ಲಿ ಬ್ಯಾಟಿಂಗ್​ ನಡೆಸಿದ್ದಾರೆ. ಆದರೆ, ರಜತ್ 3 ಟೆಸ್ಟ್​ಗಳ 6 ಇನ್ನಿಂಗ್ಸ್​​ಗಳಲ್ಲಿ 63 ರನ್ ಮಾತ್ರ ಸಿಡಿಸಿದ್ದಾರೆ. 164 ಎಸೆತಗಳನ್ನು ಎದುರಿಸಿದ್ದಾರೆ. 10.5ರ ಬ್ಯಾಟಿಂಗ್ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಒಬ್ಬ ಬ್ಯಾಟರ್​ಗಿಂತ ಒಬ್ಬ ಬೌಲರ್​​ ಅದ್ಭುತ ಪ್ರದರ್ಶನದ ಮೂಲಕ ಗಮನ ಸೆಳೆದಿರುವುದು ರಜತ್ ಟೀಕೆಗೆ ಗುರಿಯಾಗಿದೆ.

ಮತ್ತೊಂದೆಡೆ ಸರ್ಫರಾಜ್ ಖಾನ್ ಮತ್ತು ಧ್ರುವ್ ಜುರೆಲ್ ಕೂಡ ಇದೇ ಸರಣಿಯಲ್ಲಿ ಪದಾರ್ಪಣೆ ಮಾಡಿದರು. ಅವರು ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡರು. ಅರ್ಧಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆದರೆ ಸಿಕ್ಕ ಅವಕಾಶ ಕೈ ಚೆಲ್ಲಿದ್ದಲ್ಲದೆ, ತಂಡದಲ್ಲಿ ಸ್ಥಾನ ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದಾರೆ.

IPL_Entry_Point