ಕನ್ನಡ ಸುದ್ದಿ  /  Cricket  /  Rajat Patidar Set To Retain His Place In India Playing Xi For 5th Test Against England Dharamsala Devdutt Padikkal Prs

ದೇದವತ್ ಪಡಿಕ್ಕಲ್ ಮತ್ತೆ ಬೆಂಚ್​, ರಜತ್ ಪಾಟೀದಾರ್​ಗೆ ಕೊನೆಯ ಅವಕಾಶ ನೀಡಲು ಚಿಂತನೆ; ಭಾರತದ ಸಂಭಾವ್ಯ ಪ್ಲೇಯಿಂಗ್ XI

Rajat Patidar : ಇಂಗ್ಲೆಂಡ್ ವಿರುದ್ಧ ಇಲ್ಲಿಯವರೆಗೆ ಆಡಿರುವ ಮೂರು ಟೆಸ್ಟ್‌ಗಳಲ್ಲಿ ಸಿಡಿಯಲು ವಿಫಲವಾಗಿರುವ ಭಾರತದ ಸ್ಟಾರ್ ಮಧ್ಯಮ ಕ್ರಮಾಂಕದ ಬ್ಯಾಟರ್ ರಜತ್ ಪಾಟೀದಾರ್​, ಅಂತಿಮ ಟೆಸ್ಟ್​ ಪಂದ್ಯದಲ್ಲಿ ಆಡುವ 11ರಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವ ಸಾಧ್ಯತೆ ಇದೆ.

ದೇದವತ್ ಪಡಿಕ್ಕಲ್ ಮತ್ತೆ ಬೆಂಚ್​, ರಜತ್ ಪಾಟೀದಾರ್​ಗೆ ಕೊನೆಯ ಅವಕಾಶ ನೀಡಲು ಚಿಂತನೆ
ದೇದವತ್ ಪಡಿಕ್ಕಲ್ ಮತ್ತೆ ಬೆಂಚ್​, ರಜತ್ ಪಾಟೀದಾರ್​ಗೆ ಕೊನೆಯ ಅವಕಾಶ ನೀಡಲು ಚಿಂತನೆ

ಇಂಗ್ಲೆಂಡ್ ವಿರುದ್ಧದ ಅಂತಿಮ ಹಾಗೂ 5ನೇ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾ (India vs England 5th Test) ಸಜ್ಜಾಗುತ್ತಿದೆ. ಮಾರ್ಚ್ 7ರಂದು ಧರ್ಮಶಾಲಾದಲ್ಲಿ ಈ ಪಂದ್ಯ ನಡೆಯಲಿದೆ. ಈಗಾಗಲೇ 3-1ರಲ್ಲಿ ಸರಣಿ ಗೆದ್ದುಕೊಂಡಿರುವ ಭಾರತ, ಕೊನೆಯ ಟೆಸ್ಟ್ ಅನ್ನೂ ಗೆಲ್ಲಲು ಭರ್ಜರಿ ಸಿದ್ಧತೆ ನಡೆಸುತ್ತಿದೆ. ಮತ್ತೊಂದೆಡೆ ಅಂತಿಮ ಪಂದ್ಯದಲ್ಲಿ ಜಯದ ನಗೆ ಬೀರಿ ಸರಣಿಯನ್ನು ಮುಗಿಸುವ ಲೆಕ್ಕಾಚಾರದಲ್ಲಿ ಇಂಗ್ಲೆಂಡ್ ಇದೆ.

ಧರ್ಮಶಾಲಾ ಟೆಸ್ಟ್​ ಪಂದ್ಯಕ್ಕೆ ಯಾರನ್ನೆಲ್ಲಾ ಕಣಕ್ಕಿಳಿಸಬೇಕು ಎನ್ನುವ ಗೊಂದಲದಲ್ಲಿ ಟೀಮ್ ಮ್ಯಾನೇಜ್ಮೆಂಟ್ ಇದೆ. ಸದ್ಯ ಸರಣಿ ಗೆದ್ದಿದ್ದೇವೆ ಎಂಬ ಕಡೆಗಣನೆ ಸಲ್ಲದು. ಏಕೆಂದರೆ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್ ಪ್ರವೇಶಿಸಲು ಪ್ರತಿಯೊಂದು ಗೆಲುವು ಸಹ ಮುಖ್ಯವಾಗಿದೆ. ಇದರ ನಡುವೆಯೂ ಸತತ ವೈಫಲ್ಯ ಅನುಭವಿಸಿದ ರಜತ್ ಪಾಟೀದಾರ್​ಗೆ ಮತ್ತೆ ಅವಕಾಶ ನೀಡಲು ಟೀಮ್ ಮ್ಯಾನೇಜ್ಮೆಂಟ್ ನಿರ್ಧರಿಸಿದೆ.

ಮತ್ತೊಮ್ಮೆ ಪಾಟೀದಾರ್​ಗೆ ಅವಕಾಶ

ಇಂಗ್ಲೆಂಡ್ ವಿರುದ್ಧ ಇಲ್ಲಿಯವರೆಗೆ ಆಡಿರುವ ಮೂರು ಟೆಸ್ಟ್‌ಗಳಲ್ಲಿ ಸಿಡಿಯಲು ವಿಫಲವಾಗಿರುವ ಭಾರತದ ಸ್ಟಾರ್ ಮಧ್ಯಮ ಕ್ರಮಾಂಕದ ಬ್ಯಾಟರ್ ರಜತ್, ಅಂತಿಮ ಟೆಸ್ಟ್​ ಪಂದ್ಯದಲ್ಲಿ ಆಡುವ 11ರಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವ ಸಾಧ್ಯತೆ ಇದೆ. 2ನೇ ಟೆಸ್ಟ್‌ನಲ್ಲಿ ಟೆಸ್ಟ್‌ಗೆ ಪದಾರ್ಪಣೆಗೈದ ಮಧ್ಯಪ್ರದೇಶ ಬ್ಯಾಟರ್‌ಗೆ ಇನ್ನೊಂದು ಅವಕಾಶ ನೀಡುವ ಮನಸ್ಥಿತಿಯಲ್ಲಿ ಟೀಮ್​ ಮ್ಯಾನೇಜ್ಮೆಂಟ್ ಇದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ಪಾಟೀದಾರ್​ ಸತತ ವೈಫಲ್ಯ ಅನುಭವಿಸಿದ ಕಾರಣ ಆತನ ಬದಲಿಗೆ ದೇವದತ್ ಪಡಿಕ್ಕಲ್​ಗೆ ಅವಕಾಶ ನೀಡಲು ಚಿಂತನೆಯೂ ನಡೆದಿತ್ತು. ಆದರೆ, ಪಾಟೀದಾರ್​ಗೆ ಕೊನೆಯ ಅವಕಾಶ ಕೊಟ್ಟು ನೋಡೋಣ ಎಂಬ ನಿರ್ಧಾರಕ್ಕೆ ಟೀಮ್ ಮ್ಯಾನೇಜ್ಮೆಂಟ್ ನಿರ್ಧರಿಸಿದೆ. ಕಳೆದ ಆರು ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 32, 9, 5, 0, 17 ಮತ್ತು 0 ರನ್ ಗಳಿಸಿ ರಜತ್ ಪಾಟೀದಾರ್​ ನಿರಾಸೆ ಮೂಡಿಸಿದ್ದಾರೆ. ಕೊನೆಯ ಅವಕಾಶದಲ್ಲಿ ತನ್ನ ಪ್ರತಿಭೆಯನ್ನು ಹೊರಹಾಕುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.

ಕೆಎಲ್ ರಾಹುಲ್‌ಗೆ ಬದಲಿ ಆಟಗಾರನಾಗಿ ರಾಜ್‌ಕೋಟ್ ಟೆಸ್ಟ್‌ಗೆ ಮುಂಚಿತವಾಗಿ ತಂಡದಲ್ಲಿ ಸೇರ್ಪಡೆಗೊಂಡ ಪಡಿಕ್ಕಲ್, ಭಾರತಕ್ಕಾಗಿ ಟೆಸ್ಟ್ ಪಂದ್ಯವನ್ನು ಆಡಿಲ್ಲ. ಪಾಟೀದಾರ್​ಗೆ ಅವಕಾಶ ನೀಡಲು ಚಿಂತನೆ ನಡೆಸುತ್ತಿರುವ ಮ್ಯಾನೇಜ್ಮೆಂಟ್ ಕೊನೆಯ ಕ್ಷಣದಲ್ಲಿ ನಿರ್ಧಾರ ಬದಲಿಸಿದರೂ ಅಚ್ಚರಿ ಇಲ್ಲ. ಏಕೆಂದರೆ ದೇವದತ್ ಪಡಿಕ್ಕಲ್ ಸಹ ರಣಜಿ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದು, ಅವರಿಗೂ ಒಂದು ಅವಕಾಶ ಕೊಟ್ಟು ನೋಡೋಣ ಎಂದರೂ ಅಚ್ಚರಿ ಇಲ್ಲ.

5ನೇ ಟೆಸ್ಟ್‌ಗೆ ಮರಳಿದ ಬುಮ್ರಾ

ಕೆಲಸದ ಹೊರೆ ನಿರ್ವಹಣೆಯ ಭಾಗವಾಗಿ ರಾಂಚಿಯಲ್ಲಿ ನಡೆದ ನಾಲ್ಕನೇ ಟೆಸ್ಟ್‌ಗೆ ವಿಶ್ರಾಂತಿ ಪಡೆದಿದ್ದ ಭಾರತದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಅವರನ್ನು ಧರ್ಮಶಾಲಾದಲ್ಲಿ ಐದನೇ ಟೆಸ್ಟ್‌ಗೆ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ ಮತ್ತು ಅವರು ಕೂಡ ಆಡಲು ಸಿದ್ಧರಾಗಿದ್ದಾರೆ. ಉಪನಾಯಕನಾಗಿ ತಂಡವನ್ನು ಸೇರಿಕೊಂಡಿರುವ ಬುಮ್ರಾ, ಕಣಕ್ಕಿಳಿಯುವುದು ಖಚಿತವಾಗಿದ್ದು, ಅವರ ಬದಲಿಗೆ ಆಡಿದ್ದ ಆಕಾಶ್ ದೀಪ್ ಬೆಂಚ್​ಗೆ ಸೀಮಿತವಾಗಲಿದ್ದಾರೆ.

ಭಾರತದ ಸಂಭಾವ್ಯ ತಂಡ

ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ರಜತ್ ಪಾಟೀದಾರ್​, ಸರ್ಫರಾಜ್ ಖಾನ್, ಧ್ರುವ್ ಜುರೆಲ್ (ವಿಕೆಟ್ ಕೀಪರ್​), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.

IPL_Entry_Point