ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆದ ತಂಡಗಳು ಯಾವುವು? ನಾಕೌಟ್‌ ಹಂತದ ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ
ಕನ್ನಡ ಸುದ್ದಿ  /  ಕ್ರಿಕೆಟ್  /  ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆದ ತಂಡಗಳು ಯಾವುವು? ನಾಕೌಟ್‌ ಹಂತದ ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ

ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆದ ತಂಡಗಳು ಯಾವುವು? ನಾಕೌಟ್‌ ಹಂತದ ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ

Ranji Trophy 2024 Knockout Stages: 32 ತಂಡಗಳೊಂದಿಗೆ ಆರಂಭವಾದ ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಇದೀಗ 8 ತಂಡಗಳು ಮಾತ್ರ ಉಳಿದಿವೆ. ಪ್ರಶಸ್ತಿ ಸುತ್ತಿಗೆ ಹತ್ತಿರವಾಗಲು ಎಂಟು ತಂಡಗಳು ಹೋರಾಡಲಿವೆ. ಮುಂದೆ ಕ್ವಾರ್ಟರ್ ‌ಫೈನಲ್ ಪಂದ್ಯ‌ಗಳು ನಡೆಯಲಿದ್ದು, ಈ ಕುರಿತ ಮಾಹಿತಿ ಇಲ್ಲಿದೆ.

ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆದ ತಂಡಗಳು ಯಾವುವು
ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆದ ತಂಡಗಳು ಯಾವುವು (PTI)

ದೇಶಿಯ ಕ್ರಿಕೆಟ್‌ನ ರಾಜ ರಣಜಿ ಟ್ರೋಫಿಯ (Ranji Trophy) 2024ನೇ ಆವೃತ್ತಿಯು ಅಂತಿಮ ಹಂತದತ್ತ ಬಂದಿದೆ. ಟೂರ್ನಿಯ ಗುಂಪು ಹಂತದ ಪಂದ್ಯಗಳು ಫೆಬ್ರವರಿ 19ರ ಸೋಮವಾರ ಕೊನೆಗೊಂಡಿತು. ಮುಂದೆ ನಾಕೌಟ್ ಹಂತದ ಪಂದ್ಯಗಳಿಗೆ ಮೈದಾನಗಳು ಸಜ್ಜಾಗುತ್ತಿವೆ. ಈ ನಡುವೆ ಚಂಡೀಗಢ ವಿರುದ್ದದ ಪಂದ್ಯವು ಡ್ರಾದಲ್ಲಿ ಅಂತ್ಯವಾದ ಬಳಿಕ, ಮಯಾಂಕ್‌ ಅಗರ್ವಾಲ್‌ ನೇತೃತ್ವದ ಕರ್ನಾಟಕ ತಂಡ ಕೂಡಾ ರಣಜಿ ಟ್ರೋಫಿ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಇಟ್ಟಿದೆ.

ರಣಜಿ ಟ್ರೋಫಿಯು ಎಲೈಟ್ ಗುಂಪು ಹಂತದ ಪಂದ್ಯಗಳೊಂದಿಗೆ ಆರಂಭವಾಯ್ತು. 32 ತಂಡಗಳೊಂದಿಗೆ ಆರಂಭವಾದ ಪಂದ್ಯಾವಳಿಯಲ್ಲಿ ಇದೀಗ 8 ತಂಡಗಳು ಮಾತ್ರ ಉಳಿದಿವೆ. ಉಳಿದ ತಂಡಗಳು ಎಲಿಮನೇಟ್‌ ಆಗಿವೆ. ಪ್ರಶಸ್ತಿ ಸುತ್ತಿಗೆ ಹತ್ತಿರವಾಗಲು ಎಂಟು ತಂಡಗಳು ಹೋರಾಡಲಿವೆ. ಈ ಎಲ್ಲಾ ಎಂಟು ತಂಡಗಳು ಈಗ ಪ್ರಶಸ್ತಿಯನ್ನು ಗೆಲ್ಲಲು ಕೇವಲ ಮೂರು ಪಂದ್ಯಗಳ ದೂರದಲ್ಲಿವೆ. ಮುಂದೆ ಕ್ವಾರ್ಟರ್ ‌ಫೈನಲ್ ಪಂದ್ಯ‌ಗಳು ನಡೆಯಲಿದ್ದು, ಈ ಕುರಿತ ಮಾಹಿತಿ ಇಲ್ಲಿದೆ.

ಕ್ವಾರ್ಟರ್‌ ಫೈನಲ್‌ಗೆ ಎಂಟ್ರಿಯಾದ ತಂಡಗಳು

ವಿದರ್ಭ ಮತ್ತು ಸೌರಾಷ್ಟ್ರ ತಂಡಗಳು ಎ ಗುಂಪಿನಲ್ಲಿ ಒಂದು ಮತ್ತು ಎರಡನೇ ಸ್ಥಾನ ಪಡೆದು ನಾಕೌಟ್‌ ಪ್ರವೇಶಿಸಿವೆ. ಅತ್ತ ರಣಜಿ ಟ್ರೋಫಿ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ತಂಡ, 41 ಬಾರಿಯ ಚಾಂಪಿಯನ್ ಮುಂಬೈ ಬಿ ಗುಂಪಿನಲ್ಲಿ ಅಗ್ರಸ್ಥಾನ ಗಳಿಸಿತು. ಆಂಧ್ರಪ್ರದೇಶದ ಜೊತೆಗೆ ಕೊನೆಯ ಎಂಟರ ಘಟ್ಕಕ್ಕೆ ಹೆಜ್ಜೆ ಹಾಕಿತು. ಸಿ ಗುಂಪಿನಿಂದ ತಮಿಳುನಾಡು ಮತ್ತು ಕರ್ನಾಟಕ ತಂಡಗಳು ಕ್ರಮವಾಗಿ ಒಂದು ಮತ್ತು ಎರಡನೇ ಸ್ಥಾನ ಪಡೆದವು. ಡಿ ಗುಂಪಿನಿಂದ ಮಧ್ಯಪ್ರದೇಶ ಮತ್ತು ಬರೋಡಾ ತಂಡಗಳು ಕ್ವಾರ್ಟರ್‌ ಫೈನಲ್‌ಗೆ ಅರ್ಹತೆ ಪಡೆದಿವೆ.

ಇದನ್ನೂ ಓದಿ | ರಣಜಿ ಟ್ರೋಫಿ: ಚಂಡೀಗಢ ವಿರುದ್ಧದ ಪಂದ್ಯ ಡ್ರಾಗೊಂಡರೂ ಕ್ವಾರ್ಟರ್‌ ಫೈನಲ್ ಪ್ರವೇಶಿಸಿದ ಕರ್ನಾಟಕ

ರಣಜಿ ಟ್ರೋಫಿ 2024ರ ನಾಕೌಟ್ ಪಂದ್ಯಗಳ ವೇಳಾಪಟ್ಟಿ

ಕ್ವಾರ್ಟರ್‌ ಫೈನಲ್‌ನ ಎಲ್ಲಾ ನಾಲ್ಕು ಪಂದ್ಯಗಳು ಫೆಬ್ರುವರಿ 23ರಿಂದ 27ರವರೆಗೆ ನಡೆಯಲಿದೆ.

  • ಕ್ವಾರ್ಟರ್‌ಫೈನಲ್ 1: ವಿದರ್ಭ vs ಕರ್ನಾಟಕ, VCA ಸ್ಟೇಡಿಯಂ ನಾಗ್ಪುರ
  • ಕ್ವಾರ್ಟರ್‌ಫೈನಲ್ 2: ಮಧ್ಯಪ್ರದೇಶ vs ಆಂಧ್ರ, ಹೋಲ್ಕರ್ ಸ್ಟೇಡಿಯಂ ಇಂದೋರ್
  • ಕ್ವಾರ್ಟರ್‌ಫೈನಲ್ 3: ಮುಂಬೈ vs ಬರೋಡಾ, BKC ಮುಂಬೈ
  • ಕ್ವಾರ್ಟರ್‌ಫೈನಲ್ 4: ತಮಿಳುನಾಡು vs ಸೌರಾಷ್ಟ್ರ, ಕೊಯಮತ್ತೂರು

ಸೆಮಿಫೈನಲ್‌ ಪಂದ್ಯಗಳು (ಮಾರ್ಚ್ 2ರಿಂದ 6)

  • ಸೆಮಿಫೈನಲ್‌ 1 - ಕ್ವಾರ್ಟರ್‌ಫೈನಲ್ 1ರ ವಿಜೇತ ತಂಡ vs ಕ್ವಾರ್ಟರ್‌ಫೈನಲ್ 4ರ ವಿಜೇತ ತಂಡ, TBC ವಿಜೇತ
  • ಸೆಮಿಫೈನಲ್‌ 2 - ಕ್ವಾರ್ಟರ್‌ಫೈನಲ್ 2ರ ವಿಜೇತ ತಂಡ vs ಕ್ವಾರ್ಟರ್‌ಫೈನಲ್ 3ರ ವಿಜೇತ ತಂಡ

ಫೈನಲ್‌ ಪಂದ್ಯ (ಮಾರ್ಚ್ 10ರಿಂದ 14)

  • ಸೆಮಿಫೈನಲ್‌ 1ರ ವಿಜೇತ ತಂಡ vs ಸೆಮಿಫೈನಲ್‌ 2ರ ವಿಜೇತ ತಂಡ

ಇದನ್ನೂ ಓದಿ | ಬಿಹಾರ ವಿರುದ್ಧದ ರಣಜಿ ಪಂದ್ಯದ ಬಳಿಕ ಮನೋಜ್ ತಿವಾರಿ ವಿದಾಯ; ಕೋಲ್ಕತ್ತಾದ ಈಡನ್‌ ಗಾರ್ಡನ್ಸ್‌ ಭಾವುಕ

ಕರ್ನಾಟಕ ಮತ್ತು ಚಂಡೀಗಢ ನಡುವಿನ ಪಂದ್ಯವು ಡ್ರಾದಲ್ಲಿ ಅಂತ್ಯಗೊಂಡಿತು. ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಉಳಿಸಿಕೊಂಡಿರುವ ತಂಡ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಇಟ್ಟಿತು. ಹುಬ್ಬಳ್ಳಿಯ ಕೆಎಸ್‌ಸಿಎ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಚಂಡೀಗಢ, ಮೊದಲ ಇನ್ನಿಂಗ್ಸ್‌ನಲ್ಲಿ 267 ರನ್‌ಗಳಿಗೆ ಆಲೌಟ್ ಆಯ್ತು. ಇದಕ್ಕೆ ಪ್ರತಿಯಾಗಿ ಕರ್ನಾಟಕ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 563 ರನ್‌ಗಳಿಗೆ 5 ವಿಕೆಟ್‌ ಕಳೆದುಕೊಂಡಿದ್ದಾಗ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತು.‌ ರಾಜ್ಯ ತಂಡದ ಪರ ಮೂವರು ಶತಕ ಸಿಡಿಸಿ ಅಬ್ಬರಿಸಿದರು. ಎರಡನೇ ಇನ್ನಿಂಗ್ಸ್‌ ನಡೆಸಿದ ಚಂಡೀಗಢ 5 ವಿಕೆಟ್‌ ಕಳೆದುಕೊಂಡು 236 ರನ್‌ ಗಳಿಸಿತು. ಅಂತಿಮವಾಗಿ ಪಂದ್ಯ ಡ್ರಾಗೊಂಡಿತು.

Whats_app_banner