ರವಿ ಶಾಸ್ತ್ರಿ, ಗಿಲ್, ಮಯಾಂಕ್ ಅಗರ್ವಾಲ್; ಯಾರಿಗೆಲ್ಲ ಒಲಿಯಿತು ಬಿಸಿಸಿಐ ಪ್ರಶಸ್ತಿ? ಸಂಪೂರ್ಣ ಪಟ್ಟಿ ಇಲ್ಲಿದೆ
BCCI Awards: ಶುಭ್ಮನ್ ಗಿಲ್ 2022-23ನೇ ಸಾಲಿನ ಪಾಲಿ ಉಮ್ರಿಗರ್ ಪ್ರಶಸ್ತಿ ಗೆದ್ದರೆ, ಭಾರತದ ವೇಗಿ ಜಸ್ಪ್ರೀತ್ ಬುಮ್ರಾ 2021-2022ರ ಋತುವಿನ ಪ್ರದರ್ಶನಕ್ಕಾಗಿ ವಿಶೇಷ ಗೌರವ ತಮ್ಮದಾಗಿಸಿಕೊಂಡರು. ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮತ್ತು ವೇಗಿ ಮೊಹಮ್ಮದ್ ಶಮಿ ಅವರಿಗೆ ಪಾಲಿ ಉಮ್ರಿಗರ್ ಪ್ರಶಸ್ತಿ ನೀಡಲಾಗಿದೆ.
ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಅವರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) 2024ರ ಆವೃತ್ತಿಯಲ್ಲಿ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದೆ. ಇದೇ ವೇಳೆ, ತೆಲಂಗಾಣದ ರಾಜಧಾನಿ ಹೈದರಾಬಾದ್‌ನಲ್ಲಿ ನಡೆದ ಸಮಾರಂಭದಲ್ಲಿ ಭಾರತದ ಮಾಜಿ ವಿಕೆಟ್ ಕೀಪರ್ ಹಾಗೂ ಬ್ಯಾಟರ್ ಫಾರೂಕ್ ಎಂಜಿನಿಯರ್ ಅವರು ಜೀವಮಾನ ಸಾಧನೆ ಪ್ರಶಸ್ತಿಯನ್ನು ಸ್ವೀಕರಿಸಿದರು.
ಐಸಿಸಿ ಶ್ರೇಯಾಂಕದಲ್ಲಿ ಪಾಕಿಸ್ತಾನದ ಬಾಬರ್ ಅಜಾಮ್ ಅವರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದ ಭಾರತದ ಆರಂಭಿಕ ಬ್ಯಾಟರ್ ಶುಬ್ಮನ್ ಗಿಲ್ ಪುರುಷರ ವಿಭಾಗದಲ್ಲಿ ಅತ್ಯುತ್ತಮ ಅಂತಾರಾಷ್ಟ್ರೀಯ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಚಿನ್ ತೆಂಡೂಲ್ಕರ್, ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ ನಂತರ ಐಸಿಸಿ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನವನ್ನು ಪಡೆದ ನಾಲ್ಕನೇ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಗಿಲ್ ಪಾತ್ರರಾಗಿದ್ದಾರೆ. ಏಕದಿನ ಸವರೂಪದಲ್ಲಿ ಅವರು ವೇಗವಾಗಿ 2000 ರನ್ ಗಡಿ ದಾಟಿದ ಸಾಧನೆ ಮಾಡಿದ್ದಾರೆ.
ಇದನ್ನೂ ಓದಿ | ರಾಹುಲ್-ಭರತ್ ಇನ್, ಮೂವರು ಆಲ್‌ರೌಂಡರ್‌ಗಳು; ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ಗೆ ಭಾರತ ಆಡುವ ಬಳಗ
2019ರ ನಂತರ ಇದೇ ಮೊದಲ ಬಾರಿಗೆ ಬಿಸಿಸಿಐ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದೆ. ಶುಭ್ಮನ್ ಗಿಲ್ 2022-23ನೇ ಸಾಲಿನ ಪಾಲಿ ಉಮ್ರಿಗರ್ ಪ್ರಶಸ್ತಿ ಗೆದ್ದರೆ, ಭಾರತದ ವೇಗಿ ಜಸ್ಪ್ರೀತ್ ಬುಮ್ರಾ 2021-2022ರ ಋತುವಿನಲ್ಲಿ ತಮ್ಮ ವೀರೋಚಿತ ಪ್ರದರ್ಶನಕ್ಕಾಗಿ ವಿಶೇಷ ಗೌರವ ತಮ್ಮದಾಗಿಸಿಕೊಂಡರು. ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮತ್ತು ವೇಗಿ ಮೊಹಮ್ಮದ್ ಶಮಿ ಅವರನ್ನು 2021-21 ಮತ್ತು 2019-2020ರ ಸಾಲಿನ ಅಮೋಘ ಪ್ರದರ್ಶನಕ್ಕಾಗಿ ಪಾಲಿ ಉಮ್ರಿಗರ್ ಪ್ರಶಸ್ತಿ ನೀಡಲಾಗಿದೆ.
BCCI ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ
ಕರ್ನಲ್ ಸಿಕೆ ನಾಯುಡು ಜೀವಮಾನ ಸಾಧನೆ ಪ್ರಶಸ್ತಿ: ರವಿಶಾಸ್ತ್ರಿ, ಫರೋಖ್ ಇಂಜಿನಿಯರ್ (2019-20).
ವರ್ಷದ ಅತ್ಯುತ್ತಮ ಪುರುಷರ ಕ್ರಿಕೆಟಿಗರಿಗೆ ಪಾಲಿ ಉಮ್ರಿಗರ್ ಪ್ರಶಸ್ತಿ: ಶುಭ್ಮನ್ ಗಿಲ್ (2022-23), ಜಸ್ಪ್ರೀತ್ ಬುಮ್ರಾ (2021-22), ರವಿಚಂದ್ರನ್ ಅಶ್ವಿನ್ (2020-21), ಮೊಹಮ್ಮದ್ ಶಮಿ (2019-20).
ಅತ್ಯುತ್ತಮ ಅಂತಾರಾಷ್ಟ್ರೀಯ ಕ್ರಿಕೆಟಿಗ (ವನಿತೆಯರ ವಿಭಾಗ): ದೀಪ್ತಿ ಶರ್ಮಾ (2019-20, 2022-23), ಸ್ಮೃತಿ ಮಂಧಾನ (2020-21, 2021-22).
ಅತ್ಯುತ್ತಮ ಅಂತಾರಾಷ್ಟ್ರೀಯ ಪದಾರ್ಪಣೆ: ಮಯಾಂಕ್ ಅಗರ್ವಾಲ್ (2019-20), ಅಕ್ಸರ್ ಪಟೇಲ್ (2020-21), ಶ್ರೇಯಸ್ ಅಯ್ಯರ್ (2021-22), ಯಶಸ್ವಿ ಜೈಸ್ವಾಲ್ (2022-23).
ಅತ್ಯುತ್ತಮ ಅಂತಾರಾಷ್ಟ್ರೀಯ ಪದಾರ್ಪಣೆ (ವನಿತೆಯರು): ಪ್ರಿಯಾ ಪುನಿಯಾ (2019-20), ಶಫಾಲಿ ವರ್ಮಾ (2020-21), ಎಸ್ ಮೇಘನಾ (2021-22), ಅಮನ್ಜೋತ್ ಕೌರ್ (2022-23).
ದಿಲೀಪ್ ಸರ್ದೇಸಾಯಿ ಪ್ರಶಸ್ತಿ (2022-23): ಅತ್ಯಧಿಕ ರನ್‌ಗಳು: ಯಶಸ್ವಿ ಜೈಸ್ವಾಲ್; ಗರಿಷ್ಠ ವಿಕೆಟ್: ಆರ್ ಅಶ್ವಿನ್.
ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ - ವನಿತೆಯರು: ಪೂನಮ್ ರಾವತ್ (2019-20), ಮಿಥಾಲಿ ರಾಜ್ (2020-21), ಹರ್ಮನ್‌ಪ್ರೀತ್ ಕೌರ್ (2021-22), ಜೆಮಿಮಾ ರೋಡ್ರಿಗಸ್ (2022-23).
ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ - ವನಿತೆಯರು: ಪೂನಂ ಯಾದವ್ (2019-20), ಜೂಲನ್ ಗೋಸ್ವಾಮಿ (2020-21), ರಾಜೇವರಿ ಗಾಯಕ್‌ವಾಡ್ (2021-22), ದೇವಿಕಾ ವೈದ್ಯ (2022-23).
ದೇಶೀಯ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಅಂಪೈರ್: ಕೆಎನ್ ಅನಂತಪದ್ಮನಾಭನ್ (2019-20), ವೃಂದಾ ರಾಥಿ (2020-21), ಜೆ ಮದಗೋಪಾಲ್ (2021-22), ರೋಹನ್ ಪಂಡಿತ್ (2022-23).
ಇದನ್ನೂ ಓದಿ | BCCI Awards: ಶುಭ್ಮನ್ ಗಿಲ್‌ಗೆ ವರ್ಷದ ಕ್ರಿಕೆಟಿಗ ಪ್ರಶಸ್ತಿ; ರವಿಶಾಸ್ತ್ರಿಗೆ ಬಿಸಿಸಿಐ ವಿಶೇಷ ಗೌರವ
ದೇಶೀಯ ಪಂದ್ಯಾವಳಿಗಳಲ್ಲಿ ಅತ್ಯುತ್ತಮ ಪ್ರದರ್ಶನ: ಮುಂಬೈ (2019-20).
ಲಾಲಾ ಅಮರನಾಥ್ ಪ್ರಶಸ್ತಿ: ದೇಶೀಯ ಸೀಮಿತ-ಓವರ್ ಸ್ಪರ್ಧೆಗಳಲ್ಲಿ ಅತ್ಯುತ್ತಮ ಆಲ್ ರೌಂಡರ್: ಬಾಬಾ ಅಪರಾಜಿತ್ (2019-20), ರಿಷಿ ಧವನ್ (2020-21, 2021-22), ರಿಯಾನ್ ಪರಾಗ್ (2022-23).
ಲಾಲಾ ಅಮರನಾಥ್ ಪ್ರಶಸ್ತಿ: ರಣಜಿ ಟ್ರೋಫಿಯಲ್ಲಿ ಅತ್ಯುತ್ತಮ ಆಲ್ ರೌಂಡರ್: ಮಣಿಶಂಕರ್ ಮುರಾ ಸಿಂಗ್ (2019-20), ಶಮ್ಸ್ ಮುಲಾನಿ (2021-22), ಸರನ್ಶ್ ಜೈನ್ (2022-23).
ಮಾಧವರಾವ್ ಸಿಂಧಿಯಾ ಟ್ರೋಫಿ: ರಣಜಿ ಟ್ರೋಫಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ: ರಾಹುಲ್ ದಲಾಲ್ (2019-20), ಸರ್ಫರಾಜ್ ಖಾನ್ (2021-22), ಮಯಾಂಕ್ ಅಗರ್ವಾಲ್ (2022-23).
ಮಾಧವರಾವ್ ಸಿಂಧಿಯಾ ಟ್ರೋಫಿ: ರಣಜಿ ಟ್ರೋಫಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್: ಜಯದೇವ್ ಉನದ್ಕತ್ (2019-20), ಶಮ್ಸ್ ಮುಲಾನಿ (2021-22), ಜಲಜ್ ಸಕ್ಸೇನಾ (2022-23).
ಎಂಎ ಚಿದಂಬರಂ ಟ್ರೋಫಿ: U19 ಕೂಚ್ ಬೆಹಾರ್ ಟ್ರೋಫಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರು: ಹರ್ಷ್ ದುಬೆ (2019-20), ಎಆರ್ ನಿಶಾದ್ (2021-22), ಮಾನವ್ ಚೋಥಾನಿ (2022-23).
MA ಚಿದಂಬರಂ ಟ್ರೋಫಿ: U19 ಕೂಚ್ ಬೆಹಾರ್ ಟ್ರೋಫಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ: ಪಿ ಕಾನ್ಪಿಲ್ಲೆವಾರ್ (2019-20), ಮಯಾಂಕ್ ಶಾಂಡಿಲ್ಯ (2021-22), ಡ್ಯಾನಿಶ್ ಮಾಲೆವಾರ್ (2022-23).
ಎಂಎ ಚಿದಂಬರಂ ಟ್ರೋಫಿ: U23 ಕರ್ನಲ್ ಕಾಕ್ ನಾಯುಡು ಟ್ರೋಫಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರು: ಅಂಕುಶ್ ತ್ಯಾಗಿ (2019-20), ಹರ್ಷ್ ದುಬೆ (2021-22), ವಿಶಾಲ್ ಜಯಸ್ವಾಲ್ (2022-23).
ಎಂಎ ಚಿದಂಬರಂ ಟ್ರೋಫಿ: U23 ಕರ್ನಲ್ ಕಾಕ್ ನಾಯುಡು ಟ್ರೋಫಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ: ಪಾರ್ಥ್ ಪಲಾವತ್ (2019-20), ವೈವಿ ರಾಥೋಡ್ (2021-22), ಕ್ಷಿತಿಜ್ ಪಟೇಲ್ (2022-23). (This copy first appeared in Hindustan Times Kannada website. To read more like this please logon to kannada.hindustantime.com )