Ashwin vs Erasmus: ತಾಳ್ಮೆ ಕಳೆದುಕೊಂಡು ಅಂಪೈರ್ ಮರೈಸ್ ಎರಾಸ್ಮಸ್ ಜೊತೆಗೆ ಜಗಳಕ್ಕಿಳಿದ ಅಶ್ವಿನ್
India vs England 2nd Test : ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ನ ಮೊದಲ ದಿನದ ಕೊನೆಯಲ್ಲಿ ರವಿಚಂದ್ರನ್ ಅಶ್ವಿನ್, ಅಂಪೈರ್ ಮರೈಸ್ ಎರಾಸ್ಮಸ್ ವಿರುದ್ಧ ವಾಗ್ವಾದ ನಡೆಸಿದ್ದಾರೆ.
ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನ ಭಾರತ ತಂಡ (India vs England 2nd Test) ಉತ್ತಮ ಸ್ಥಿತಿಯಲ್ಲಿದೆ. ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ದುಕೊಂಡರು. ಆದರೆ ಒಬ್ಬ ಬ್ಯಾಟ್ಸ್‌ಮನ್ ಹೊರತುಪಡಿಸಿ ತಂಡದ ಉಳಿದ ಬ್ಯಾಟ್ಸ್‌ಮನ್‌ಗಳು ವಿಫಲರಾದರು.
ಯಶಸ್ವಿ ಜೈಸ್ವಾಲ್ ಇಂಗ್ಲೆಂಡ್ ಬೌಲರ್‌ಗಳನ್ನು ಏಕಾಂಗಿಯಾಗಿ ಎದುರಿಸಿ ತಂಡವನ್ನು ಹಿಮ್ಮೆಟ್ಟಿಸಿದರು. ಆದರೆ ದಿನದ ಕೊನೆಯಲ್ಲಿ ರವಿಚಂದ್ರನ್ ಅಶ್ವಿನ್ (Ravichandran Ashwin) ಅಂಪೈರ್ ಮರೈಸ್ ಎರಾಸ್ಮಸ್ (Marais Erasmus) ವಿರುದ್ಧ ವಾಗ್ವಾದಕ್ಕಿಳಿದಿದ್ದು, ಚರ್ಚೆಗೆ ಗ್ರಾಸವಾಗಿದೆ.
ಕ್ರಿಕೆಟ್ ಮೈದಾನದಲ್ಲಿ ಒಂದಿಲ್ಲೊಂದು ವಿವಾದಗಳಲ್ಲಿ ಸಿಲುಕುವ ಭಾರತದ ಹಿರಿಯ ಸ್ಪಿನ್ನರ್ ಆರ್ ಅಶ್ವಿನ್ ವಿಶಾಖಪಟ್ಟಣಂ ಟೆಸ್ಟ್ ಪಂದ್ಯದ ಮೊದಲ ದಿನ ಅಂಪೈರ್ ಜೊತೆ ಜಗಳವಾಡಿದ್ದಾರೆ. ದಿನದಾಟದ ಕೊನೆಯಲ್ಲಿ ತೀವ್ರ ವಾಗ್ವಾದ ನಡೆಸಿ ಮತ್ತೊಮ್ಮೆ ಗಮನ ಸೆಳೆದರು. ಮೈದಾನದಲ್ಲಿ ಎದುರಾಳಿ ಆಟಗಾರರ ಜತೆ ಜಗಳವಾಡಿಕೊಂಡು ಆಗಾಗ ಸುದ್ದಿಯಾಗುತ್ತಿದ್ದ ಅಶ್ವಿನ್ ಈ ವೇಳೆ ಅಂಪೈರ್ ಜತೆ ವಾಗ್ವಾದಕ್ಕಿಳಿದಿದ್ದು ಕಂಡು ಬಂತು.
ಕಾರಣ ಇದೇ ಇರಬಹುದು ನೋಡಿ
ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದ ಅಂತ್ಯದಲ್ಲಿ ಭಾರತದ ಅನುಭವಿ ಆಟಗಾರ ಅಶ್ವಿನ್ ಮೈದಾನದ ಅಂಪೈರ್ ಮರೈಸ್ ಎರಾಸ್ಮಸ್ ಅವರೊಂದಿಗೆ ವಾಗ್ವಾದಕ್ಕಿಳಿದರು. ಅವರ ಚರ್ಚೆಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ದಿನದ ಕೊನೆಯ ಓವರ್‌ಗಳಲ್ಲಿ ಅಶ್ವಿನ್, ಯಶಸ್ವಿ ಜೈಸ್ವಾಲ್ ಅವರೊಂದಿಗೆ ಸುದೀರ್ಘ ಸಂಭಾಷಣೆ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ. ಇದಕ್ಕಾಗಿ ಅನುಭವಿ ಜಿಂಬಾಬ್ವೆಯ ಅಂಪೈರ್ ಅವರಿಗೆ ಅಡ್ಡಿಪಡಿಸಿದರು. ಕೆಲವು ವರದಿಗಳು ಅಂಪೈರ್ಗೆ ಏನೋ ದೂರು ನೀಡಿದ್ದು ಎಂದೂ ಹೇಳಲಾಗುತ್ತಿವೆ.
ಟೀಮ್ ಇಂಡಿಯಾ ಮೊದಲ ದಿನದಾಟದ ಅಂತ್ಯಕ್ಕೆ ಜೈಸ್ವಾಲ್ ಅಜೇಯ 179 ರನ್ ಸಿಡಿಸಿದ್ದಾರೆ. ಅಶ್ವಿನ್ 5 ರನ್ ಗಳಿಸಿ ಅಜೇಯರಾಗಿ ಉಳಿದರು. ದಿನದ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 336 ರನ್ ಗಳಿಸಿದೆ. ದಿನದಾಟದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಜತ್ ಪಾಟೀದಾರ್ ಅವರಿಗೆ ಅಶ್ವಿನ್ ಅಂಪೈರ್ ಜೊತೆಗಿನ ಸಂಭಾಷಣೆಯ ಬಗ್ಗೆ ಕೇಳಲಾಯಿತು. ತನ್ನ ಚೊಚ್ಚಲ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ 72 ಎಸೆತಗಳಲ್ಲಿ 32 ರನ್ ಗಳಿಸಿದ ಪಾಟಿದಾರ್, ನನಗೆ ಸಂಭಾಷಣೆ ಬಗ್ಗೆ ಏನು ತಿಳಿದಿಲ್ಲ ಎಂದು ಹೇಳಿದರು.
ರೋಹಿತ್ ಹಳೆಯ ಪೋಸ್ಟ್ ವೈರಲ್
ಇಂಗ್ಲೆಂಡ್ ವಿರುದ್ಧ ಏಕಾಂಗಿ ಹೋರಾಟ ನಡೆಸುತ್ತಿರುವ ಜೈಸ್ವಾಲ್ ಅವರನ್ನು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಈ ಹಿಂದೆ ಗುಣಗಾನ ಮಾಡಿದ್ದ ಹಳೆಯ ಪೋಸ್ಟ್ವೊಂದು 162 ವಾರಗಳ ನಂತರ ಭಾರಿ ವೈರಲ್ ಆಗುತ್ತಿದೆ. ಜೈಸ್ವಾಲ್ ಅವರನ್ನು ಸೂಪರ್ ಸ್ಟಾರ್ ಎಂದು ರೋಹಿತ್ ಕರೆದಿರುವ ಪೋಸ್ಟ್ ಹರಿದಾಡುತ್ತಿದೆ. ಮುಂಬೈ ಪರ ಜೈಸ್ವಾಲ್ ಶತಕ ಸಿಡಿಸಿದಾಗ ರೋಹಿತ್ ಈ ಟ್ವೀಟ್ ಮಾಡಿದ್ದರು. ವಿಜಯ್ ಹಜಾರೆಯಲ್ಲಿ ಶತಕ ಸಿಡಿಸಿದ ನಂತರ ಜೈಸ್ವಾಲ್, ಇನ್ಸ್ಟಾಗ್ರಾಂ ಪೋಸ್ಟ್ ಮಾಡಿದ್ದರು. ಅದಕ್ಕೆ ರೋಹಿತ್, ಮುಂದಿನ ಸೂಪರ್ಸ್ಟಾರ್ ಎಂದು ಕಮೆಂಟ್ ಮಾಡಿದ್ದರು.