ಔಟ್ OR ನಾಟೌಟ್; ವಿವಾದಾತ್ಮಕ ತೀರ್ಪಿಗೆ ಬಲಿಯಾದ ಜಡೇಜಾ, ಅಂಪೈರ್​ ವಿರುದ್ಧ ಇನ್ನೂ ನಿಲ್ಲದ ಆಕ್ರೋಶ
ಕನ್ನಡ ಸುದ್ದಿ  /  ಕ್ರಿಕೆಟ್  /  ಔಟ್ Or ನಾಟೌಟ್; ವಿವಾದಾತ್ಮಕ ತೀರ್ಪಿಗೆ ಬಲಿಯಾದ ಜಡೇಜಾ, ಅಂಪೈರ್​ ವಿರುದ್ಧ ಇನ್ನೂ ನಿಲ್ಲದ ಆಕ್ರೋಶ

ಔಟ್ OR ನಾಟೌಟ್; ವಿವಾದಾತ್ಮಕ ತೀರ್ಪಿಗೆ ಬಲಿಯಾದ ಜಡೇಜಾ, ಅಂಪೈರ್​ ವಿರುದ್ಧ ಇನ್ನೂ ನಿಲ್ಲದ ಆಕ್ರೋಶ

DRS Controversy: ವಿವಾದಾತ್ಮಕ ತೀರ್ಪಿಗೆ ಆಲ್​ರೌಂಡರ್​ ರವೀಂದ್ರ ಜಡೇಜಾ ಔಟಾಗಿದ್ದು, ಮೂರನೇ ಅಂಪೈರ್​ ವಿರುದ್ಧ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿವಾದಾತ್ಮಕ ತೀರ್ಪಿಗೆ ಬಲಿಯಾದ ಜಡೇಜಾ.
ವಿವಾದಾತ್ಮಕ ತೀರ್ಪಿಗೆ ಬಲಿಯಾದ ಜಡೇಜಾ.

ಹೈದರಾಬಾದ್​​ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯ ರೋಚಕ ಘಟ್ಟದತ್ತ ಸಾಗುತ್ತಿದೆ. ಮೊದಲ ಇನ್ನಿಂಗ್ಸ್​​ನಲ್ಲಿ ಇಂಗ್ಲೆಂಡ್​ ಗಳಿಸಿದ್ದ 246 ರನ್​ಗಳಿಗೆ ಉತ್ತರವಾಗಿ ಭಾರತ 3ನೇ ದಿನದಾಟದಂದು 436 ರನ್ ಕಲೆ ಹಾಕಿ ಪ್ರಾಬಲ್ಯ ಮೆರೆಯಿತು. ರವೀಂದ್ರ ಜಡೇಜಾ (87 ರನ್), ಅಕ್ಷರ್ ಪಟೇಲ್ (44 ರನ್) 8ನೇ ವಿಕೆಟ್​​ಗೆ ನಿರ್ಣಾಯಕ 78 ರನ್​ಗಳ ಜೊತೆಯಾಟದ ಮೂಲಕ ಭಾರತದ ಮುನ್ನಡೆಯನ್ನು 190 ರನ್​ಗಳಿಗೆ ವಿಸ್ತರಿಸಿದರು.

ಮೂರನೇ ದಿನದಾಟದಂದೇ ಇಂಗ್ಲೆಂಡ್ ದ್ವಿತೀಯ ಇನ್ನಿಂಗ್ಸ್​ ಆರಂಭಿಸಿ 126 ರನ್​ಗಳ ಮುನ್ನಡೆ ಪಡೆದಿದೆ. ಅಲ್ಲದೆ, ಒಲ್ಲಿ ಪೋಪ್ ಶತಕ ಸಿಡಿಸಿ ಇಂಗ್ಲೆಂಡ್​ ತಂಡಕ್ಕೆ ಆಸರೆ ಆಗಿದ್ದಾರೆ. 3ನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ 316 ರನ್ ಗಳಿಸಿ 6 ವಿಕೆಟ್ ಕಳೆದುಕೊಂಡಿದೆ. 4ನೇ ದಿನವೂ ಬ್ಯಾಟಿಂಗ್​ ನಡೆಸಿ ಭಾರತಕ್ಕೆ ಸವಾಲಿನ ಗುರಿ ನೀಡಲು ಸಿದ್ಧಗೊಂಡಿದೆ. ಒಂದು ದಿನ ಕಳೆದರೂ ಆ ವಿಷಯದ ಬಗ್ಗೆ ಚರ್ಚೆ ಇನ್ನೂ ನಿಂತಿಲ್ಲ.

ಜಡೇಜಾ ವಿವಾದಾತ್ಮಕ ಔಟ್

ಹೌದು, ರವೀಂದ್ರ ಜಡೇಜಾ ವಿವಾದಾತ್ಮಕ ಔಟ್​ ಬಗ್ಗೆ ಇನ್ನೂ ಚರ್ಚೆಗಳು ನಡೆಯುತ್ತಿವೆ. ಮೂರನೇ ದಿನದಂದು ಜಡೇಜಾ ಅವರ ಮೊದಲ ವಿಕೆಟ್ ಬಿದ್ದಿತು. ಜೋ ರೂಟ್​​ನಲ್ಲಿ ಎಲ್​ಬಿ ಬಲೆಗೆ ಬಿದ್ದ ಜಡ್ಡು, ಮೂರನೇ ಅಂಪೈರ್​ ಮೊರೆ ಹೋದರು. ಆದರೆ ಅಂಪೈರ್​ ನಡೆಗೆ ಬೇಸರ ವ್ಯಕ್ತಪಡಿಸಿದ ಆಲ್​ರೌಂಡರ್, ಬ್ಯಾಟ್​ಗೆ ತಾಗಿದೆ ಎಂದು ಹೇಳುತ್ತಿದ್ದರು. ಆದರೆ ಮೂರನೇ ಅಂಪೈರ್​ ಸಹ ಔಟ್​ ಎಂದು ತೀರ್ಪು ಕೊಟ್ಟರು.

ಇನ್ನಿಂಗ್ಸ್​ನ 120ನೇ ಓವರ್​​ನಲ್ಲಿ ಇಂಗ್ಲೆಂಡ್ ಬೌಲಿಂಗ್ ದಾಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಜೋ ರೂಟ್ ಅವರ ಎಸೆತವನ್ನು ಡಿಪೆಂಡ್ ಮಾಡಲು ಜಡೇಜಾ ಮುಂದಾದರು. ಆದರೆ ಚೆಂಡು ಅವರ ಪ್ಯಾಡ್​ಗಳಿಗೆ ಅಪ್ಪಳಿಸಿತು. ರೂಟ್​ ಮತ್ತು ಇಂಗ್ಲೆಂಡ್ ಆಟಗಾರರು ಅಪೀಲ್ ಮಾಡುತ್ತಿದ್ದಂತೆ ಅಂಪೈರ್ ಔಟ್ ಎಂದು ತೀರ್ಪು ನೀಡಿದರು. ಇದನ್ನು ಪರಿಶೀಲಿಸಲು ಮೂರನೇ ಅಂಪೈರ್ ಮೊರೆ ಹೋದರು.

ಬ್ಯಾಟ್​ಗೆ ತಾಗಿದಂತಿತ್ತು?

ಸೂಕ್ಷ್ಮವಾಗಿ ಪರಿಶೀಲಿಸುವಾಗ ಚೆಂಡು ಬ್ಯಾಟ್ ಮತ್ತು ಪ್ಯಾಡ್ ನಡುವೆ ಇತ್ತು. ಬ್ಯಾಟ್​ ತಾಗಿದ ಬಳಿಕ ಪ್ಯಾಡ್​​ಗೆ ಟಚ್​ ಆಗಿದೆ ಎನ್ನುವಂತಿತ್ತು. ಆದರೆ ಅಲ್ಟ್ರಾ ಎಡ್ಜ್ ಸ್ಪೈಕ್ ತೋರಿಸುತ್ತಿದ್ದಂತೆ ಪ್ರೇಕ್ಷಕರ ಸಂಭ್ರಮ ಮುಗಿಲು ಮುಟ್ಟಿತ್ತು. ಆದಾಗ್ಯೂ, ಚೆಂಡು ಮೊದಲು ಬ್ಯಾಟ್​ಗೆ ಅಪ್ಪಳಿಸಿದೆಯೇ ಎಂದು ಟಿವಿ ಅಂಪೈರ್​​ಗೆ ಖಚಿತವಾಗಿ ನಿರ್ಧರಿಸಲು ಸಾಧ್ಯವಾಗಲಿಲ್ಲ.

ಹಾಗಾಗಿ ಬಾಲ್​ ಟ್ರ್ಯಾಕಿಂಗ್​ ಮೂಲಕ ಈ ನಿರ್ಧಾರ ತೆಗೆದುಕೊಳ್ಳಲು ಮೂರನೇ ಅಂಪೈರ್​ ತೀರ್ಮಾನಿಸಿದರು. ಚೆಂಡು ಸ್ಟಂಪ್​ಗಳ ಮೇಲ್ಭಾಗಕ್ಕೆ ಬಡಿಯಿತು. ತೀವ್ರ ಗೊಂದಲದ ನಡುವೆಯೂ ಔಟ್ ಎಂದು ನಿರ್ಧಾರ ತೆಗೆದುಕೊಳ್ಳಲಾಯಿತು. ಈ ನಿರ್ಧಾರದಿಂದ ಬೇಸರಗೊಂಡ ಜಡೇಜಾ, ಮರು ಮಾತನಾಡದೆ ಮೈದಾನದಿಂದ ಹೊರನಡೆದರು. ಆದರೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದರು.

ಅಂಪೈರ್​ ವಿರುದ್ಧ ನೆಟ್ಟಿಗರು ಆಕ್ರೋಶ

ಸಾಮಾಜಿಕ ಜಾಲತಾಣಗಳಲ್ಲಿ ಅಂಪೈರ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಯಿತು. ನಾಟೌಟ್​ ಇದ್ದರೂ ಔಟ್​ ನೀಡಲಾಗಿದೆ. ಅಂಪೈರ್​ಗಳನ್ನು ಬದಲಿಸಿ ಎಂದು ಕಿಡಿಕಾರಿದ್ದಾರೆ. ಈ ಘಟನೆ ನಡೆದು ಒಂದು ದಿನ ಕಳೆದರೂ ವಿವಾದ ಮಾತ್ರ ತಣ್ಣಗಾಗಿಲ್ಲ. ಇಂಗ್ಲೆಂಡ್ ಪರ ಜೋ ರೂಟ್ 79 ರನ್ ನೀಡಿ 4 ವಿಕೆಟ್ ಪಡೆದರೆ, ಟಾಮ್ ಹಾರ್ಟ್ಲೆ (131ಕ್ಕೆ 2) ಮತ್ತು ರೆಹಾನ್ ಅಹ್ಮದ್ (105ಕ್ಕೆ 2) ತಲಾ 2 ವಿಕೆಟ್ ಪಡೆದರು.

ಜೋ ರೂಟ್​ ಅವರದ್ದು ಸಹ ಇದೇ ರೀತಿ ಬ್ಯಾಟ್ ಮತ್ತು ಪ್ಯಾಡ್ ನಡುವೆ ಚೆಂಡು ಸ್ಟ್ರೈಕ್​ ಆಗಿತ್ತು. ಆದರೆ ರೂಟ್​ ಅವರನ್ನು ನಾಟೌಟ್​ ಎಂದು ಘೋಷಿಸಲಾಗಿತ್ತು. ಬಾಲ್-ಟ್ರ್ಯಾಕಿಂಗ್ ಕಾಣಿಸಿಕೊಂಡಾಗ, ಅಲ್ಟ್ರಾ ಅಂಚಿನಲ್ಲಿ ಸ್ಪೈಕ್ ಇತ್ತು. ಆದಾಗ್ಯೂ, 3ನೇ ಅಂಪೈರ್ ರೂಟ್ ಅವರನ್ನು ನಾಟೌಟ್ ತೀರ್ಪು ನೀಡುವಂತೆ ಒತ್ತಾಯಿಸಿದರು. ಒಬ್ಬೊಬ್ಬರಿಗೆ ಒಂದೊಂದು ನ್ಯಾಯವೇ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

(This copy first appeared in Hindustan Times Kannada website. To read more like this please logon to kannada.hindustantime.com )

Whats_app_banner