ಆರ್ಸಿಬಿ ಚೋಕರ್ಸ್ ಎಂದ ಸಿಎಸ್ಕೆ ಫ್ಯಾನ್ಸ್; 2 ವರ್ಷ ಬ್ಯಾನ್ ಆಗಿದ್ದು ನಾವಲ್ಲ ಎಂದು ನಮ್ಮವರಿಂದ ಸಖತ್ ಕೌಂಟರ್
RCB Fans vs CSK Fans : ಐಪಿಎಲ್ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋಲು ಕಾಣುತ್ತಿದ್ದಂತೆ ಚೋಕರ್ಸ್ ಎಂದು ಟ್ರೋಲ್ ಮಾಡಿದ ಸಿಎಸ್ಕೆ ಅಭಿಮಾನಿಗಳಿಗೆ ಆರ್ಸಿಬಿ ಅಭಿಮಾನಿಗಳು ಕೌಂಟರ್ ಕೊಟ್ಟಿದ್ದಾರೆ.
17ನೇ ಆವೃತ್ತಿಯ ಐಪಿಎಲ್ನ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (RR vs RCB) ಸೋಲಿನ ಫ್ಯಾನ್ ವಾರ್ ಶುರುವಾಗಿದೆ. ಆರ್ಸಿಬಿ ಸೋಲನ್ನು ಚೆನ್ನೈ ಸೂಪರ್ ಕಿಂಗ್ಸ್ (CSK) ಅಭಿಮಾನಿಗಳು ಹಬ್ಬದಂತೆ ಸಂಭ್ರಮಿಸುತ್ತಿದ್ದಾರೆ. ಕರ್ನಾಟಕದವರೇ ಬೆಂಗಳೂರು ಪರಾಭವಕ್ಕೆ ಖುಷಿಪಡುತ್ತಿರುವುದು ಆಘಾತಕಾರಿ ಸಂಗತಿಯಾಗಿದೆ. ವಿರಾಟ್ ಕೊಹ್ಲಿ (Virat Kohli) ಮತ್ತು ಆರ್ಸಿಬಿ ತಂಡವನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿರುವ ಯಲ್ಲೋ ಆರ್ಮಿ ಫ್ಯಾನ್ಸ್ಗೆ ನಮ್ಮವರು ಸರಿಯಾಗಿ ಕೌಂಟರ್ ಕೊಟ್ಟಿದ್ದಾರೆ.
ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿ ನಡೆದ ಎಲಿಮಿನೇಟರ್ ಕದನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ, ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಲಷ್ಟೇ ಶಕ್ತವಾಯಿತು. 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿತ್ತು. ಈ ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್, 19 ಓವರ್ಗಳಲ್ಲೇ ಗೆಲುವಿನ ನಗೆ ಬೀರಿತು. ಇದರೊಂದಿಗೆ ಎರಡನೇ ಕ್ವಾಲಿಫೈಯರ್ಗೆ ಲಗ್ಗೆ ಹಾಕಿದ್ದು, ಮೇ 24ರಂದು ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಸೆಣಸಾಡಲಿದೆ. ಆರ್ಸಿಬಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಆರ್ಸಿಬಿಯನ್ನು ಚೋಕರ್ಸ್ ಎಂದ ಸಿಎಸ್ಕೆ ಫ್ಯಾನ್ಸ್
ಎಲಿಮಿನೇಟರ್ ಕದನದಲ್ಲಿ ಆರ್ಸಿಬಿ ಸೋಲನುಭವಿಸುತ್ತಿದ್ದಂತೆ ಸಿಎಸ್ಕೆ ಫ್ಯಾನ್ಸ್ ಚೋಕರ್ಸ್ ಎಂದು ಕರೆಯುತ್ತಿದ್ದಾರೆ. ಒಂದೇ ಒಂದು ಟ್ರೋಫಿ ಗೆಲ್ಲೋಕೆ ಆಗಲಿಲ್ಲ. ನಾವು ಐದು ಟ್ರೋಫಿ ಗೆದ್ದಿದ್ದೇವೆ ಎಂದು ವ್ಯಂಗ್ಯವಾಡುತ್ತಿದ್ದಾರೆ. ಸಿಎಸ್ಕೆ ತಂಡವನ್ನು ಸೋಲಿಸಿದ್ದನ್ನು ಅರಗಿಸಿಕೊಳ್ಳಲು ಸಾಧ್ಯವಾಗದ ಯಲ್ಲೊ ಆರ್ಮಿ, ಕರ್ಮ ರಿಟರ್ನ್ಸ್, ನಾವೀಗ ನೆಮ್ದಿಯಾಗಿ ನಿದ್ದೆ ಮಾಡುತ್ತೇವೆ. RIP RCB ಎಂದು ಟ್ರೋಲ್ ಮಾಡುತ್ತಿದ್ದಾರೆ. ಸಾಕಷ್ಟು ಕಡೆ ಪಟಾಕಿ ಹೊಡೆದು ಸಂಭ್ರಮಿಸಿದ್ಧಾರೆ.
ವಿರಾಟ್ ಕೊಹ್ಲಿಯನ್ನು ಚೋಕ್ಲಿ ಎಂದ ಕಿಡಿಗೇಡಿಗಳು
17 ವರ್ಷಗಳಿಂದ ಆರ್ಸಿಬಿ ಪರವೇ ಆಡುತ್ತಿರುವ ವಿರಾಟ್ ಕೊಹ್ಲಿ ಅವರನ್ನು ಚೋಕ್ಲಿ ಎಂದು ಟ್ರೋಲ್ ಮಾಡುತ್ತಿದ್ದಾರೆ ಕಿಡಿಗೇಡಿಗಳು. ಚೋಕ್ಲಿ ಸಿನ್ಸ್ 2008 ಎಂದು ಪೋಸ್ಟ್ಗಳನ್ನು ಹಾಕುತ್ತಿದ್ದಾರೆ. ಸಿಎಸ್ಕೆ ಎದುರು ಗೆದ್ದ ಆರ್ಸಿಬಿ, ಫೈನಲ್ ಪ್ರವೇಶಿಸುವುದಕ್ಕೂ ಮೊದಲೇ ಟ್ರೋಫಿ ಗೆದ್ದಂತೆ ಸಂಭ್ರಮಿಸಿತು ಎಂದು ಅಣಕಿಸಿದ್ದಾರೆ. ಕೆಲವೊಬ್ಬರು ವಿರಾಟ್ ಕೊಹ್ಲಿ ಭಾವುಕರಾಗಿರುವ ಚಿತ್ರದೊಂದಿಗೆ ಮುಂದಿನ ಸಲ ಕಪ್ ನಮ್ದೆ ಎಂದು ಪೋಸ್ಟ್ ಹಾಕಿದ್ದಾರೆ. ಎಲಿಮಿನೇಟರ್ ಪಂದ್ಯಕ್ಕೆ ಸಿಎಸ್ಕೆ ಫ್ಯಾನ್ಸ್ ಬಂದಿದ್ದರು.
2 ವರ್ಷ ಬ್ಯಾನ್ ಆಗಿದ್ದು ನಾವಲ್ಲ ಎಂದ ಆರ್ಸಿಬಿ ಫ್ಯಾನ್ಸ್
ಚೋಕರ್ಸ್ ಎಂದ ಸಿಎಸ್ಕೆ ಫ್ಯಾನ್ಸ್ಗೆ ಆರ್ಸಿಬಿ ಅಭಿಮಾನಿಗಳು ಸರಿಯಾಗಿ ಕೌಂಟರ್ ಕೊಟ್ಟಿದ್ದಾರೆ. ಕ್ರಿಕೆಟ್ಗೆ ಕಳಂಕ ತಂದ ಸಿಎಸ್ಕೆ ನಮಗೆ ಬುದ್ದಿ ಹೇಳೋಕೆ ಬರ್ತಿದೆ. ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡು ಎರಡು ವರ್ಷ ಬ್ಯಾನ್ ಆಗಿದ್ದು ನಾವಲ್ಲ. ಭಾರತೀಯ ಕ್ರಿಕೆಟ್ಗೆ ಸಿಎಸ್ಕೆ ದೊಡ್ಡ ಅವಮಾನ ಮಾಡಿದೆ. 5 ಕಪ್ ಗೆದ್ದರೂ ಆ ಮ್ಯಾಚ್ ಫಿಕ್ಸಿಂಗ್ ಕಳಂಕ ಅಳಿಸಲು ಸಾಧ್ಯವಿಲ್ಲ ಎಂದು ತಿರುಗೇಟು ಕೊಟ್ಟಿದ್ದಾರೆ. ಕಪ್ ಗೆದ್ದಿಲ್ಲ ಎಂದು ನಮ್ಮ ತಂಡವನ್ನು ಯಾವತ್ತೂ ಕೊಟ್ಟವರಲ್ಲ. ನಿಯತ್ತಿಗೆ ಬ್ರಾಂಡ್ ಅಂಬಾಸಿಡರ್ ಎಂದಿದ್ದಾರೆ ಆರ್ಸಿಬಿ ಫ್ಯಾನ್ಸ್.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)