750 ಕೆಜಿ ಅಂಬಾರಿ ಇಟ್ಕೊಂಡಿರೋ ನಮಗೆ ಜುಜುಬಿ 7.5 ಕೆಜಿ ಕಪ್ ಯಾಕೆ; ಜವಾರಿ ನಾಟಕದಲ್ಲೂ ಆರ್​ಸಿಬಿ ಹವಾ, ನೋಡಿ ನಕ್ಬಿಡಿ
ಕನ್ನಡ ಸುದ್ದಿ  /  ಕ್ರಿಕೆಟ್  /  750 ಕೆಜಿ ಅಂಬಾರಿ ಇಟ್ಕೊಂಡಿರೋ ನಮಗೆ ಜುಜುಬಿ 7.5 ಕೆಜಿ ಕಪ್ ಯಾಕೆ; ಜವಾರಿ ನಾಟಕದಲ್ಲೂ ಆರ್​ಸಿಬಿ ಹವಾ, ನೋಡಿ ನಕ್ಬಿಡಿ

750 ಕೆಜಿ ಅಂಬಾರಿ ಇಟ್ಕೊಂಡಿರೋ ನಮಗೆ ಜುಜುಬಿ 7.5 ಕೆಜಿ ಕಪ್ ಯಾಕೆ; ಜವಾರಿ ನಾಟಕದಲ್ಲೂ ಆರ್​ಸಿಬಿ ಹವಾ, ನೋಡಿ ನಕ್ಬಿಡಿ

Royal Challengers Bengaluru: ಆರ್​​ಸಿಬಿ ಅಭಿಮಾನಿಗಳ ನಿಷ್ಠೆಯ ಕುರಿತು ಹಾಸ್ಯಮಯವಾಗಿ ಪ್ರೇಕ್ಷಕರ ಮುಂದಿಟ್ಟಿದ್ದಾರೆ ಉತ್ತರ ಕರ್ನಾಟಕ ಜವಾರಿ ನಾಟಕದ ಪಾತ್ರದಾರಿಗಳು.. ಅವರ ಹಾಸ್ಯಮಯ ದೃಶ್ಯ ಇಲ್ಲಿದೆ ನೋಡಿ.

750 ಕೆಜಿ ಅಂಬಾರಿ ಇಟ್ಕೊಂಡಿರೋ ನಮಗೆ ಜುಜುಬಿ 7.5 ಕೆಜಿ ಕಪ್ ಯಾಕೆ; ಜವಾರಿ ನಾಟಕದಲ್ಲೂ ಆರ್​ಸಿಬಿ ಹವಾ, ನೋಡಿ ನಕ್ಬಿಡಿ
750 ಕೆಜಿ ಅಂಬಾರಿ ಇಟ್ಕೊಂಡಿರೋ ನಮಗೆ ಜುಜುಬಿ 7.5 ಕೆಜಿ ಕಪ್ ಯಾಕೆ; ಜವಾರಿ ನಾಟಕದಲ್ಲೂ ಆರ್​ಸಿಬಿ ಹವಾ, ನೋಡಿ ನಕ್ಬಿಡಿ

Royal Challengers Bengaluru: ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋಲಿನೊಂದಿಗೆ ಹೊರ ನಡೆಯಿತು. ಟೂರ್ನಿ ಮುಗಿದು ಒಂದು ವಾರ ಕಳೆಯುತ್ತಿದ್ದರೂ ಆರ್​ಸಿಬಿ ಹವಾ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ. ಸೋತರೂ ಗೆದ್ದರೂ ಬೆಂಗಳೂರು ತಂಡವೇ ಟಾಪ್​ ಟ್ರೆಂಡಿಂಗ್​​ನಲ್ಲಿರುತ್ತದೆ ಎಂಬುದಕ್ಕೆ ಪ್ರಸ್ತುತ ಈ ಒಂದು ವಿಡಿಯೋ ಸಾಕ್ಷಿ ಎಂದರೂ ತಪ್ಪಾಗಲ್ಲ. ಒಂದು ಬಾರಿಯೂ ಟ್ರೋಫಿ ಜಯಿಸಿದ ರಾಯಲ್ ಚಾಲೆಂಜರ್ಸ್​ ಈಗ ಜವಾರಿ ನಾಟಕದಲ್ಲೂ ಸದ್ದು ಮಾಡುತ್ತಿದೆ.

ಉತ್ತರ ಕರ್ನಾಟಕ ಜವಾರಿ ನಾಟಕದಲ್ಲಿ ಪಾತ್ರದಾರಿಗಳು ಆರ್​ಸಿಬಿ ಟ್ರೋಫಿ ಗೆಲ್ಲದ ವಿಷಯವನ್ನೇ ಬಳಸಿಕೊಂಡು ನಕ್ಕು ನಗಿಸಿದ್ದಾರೆ. ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದ್ದಾರೆ. ವೇದಿಕೆ ಮಲೆ ಪುರುಷ ಮತ್ತು ಮಹಿಳಾ ಪಾತ್ರದಾರಿಗಳು ಚೆನ್ನೈ ಸೂಪರ್ ಕಿಂಗ್ಸ್ ಎರಡು ವರ್ಷ ಬ್ಯಾನ್ ಆಗಿದ್ದನ್ನೂ ಮಾತನಾಡಿದ್ದಾರೆ. ಅಲ್ಲದೆ, ಬೆಂಗಳೂರು ತಂಡದ ನಿಷ್ಠೆಯನ್ನೂ ಹೊಗಳಿದ್ದಾರೆ. ವೈರಲ್ ಆಗಿರುವ 1 ನಿಮಿಷದ ವಿಡಿಯೋದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಸಂಭಾಷಣೆ ಹೀಗಿತ್ತು ನೋಡಿ..

ಮಹಿಳಾ ಪಾತ್ರದಾರಿ: ನೀವು ಯಾವಾಗ್ ಗೆದ್ದಿದ್ರೋ?

ಪುರುಷ ಪಾತ್ರದಾರಿ: ಅಯ್ಯೋ.. ಸೋತಿವಿ, ನಿಯತ್ಲೇ ಸೋತಿವಿ.. ಫಿಕ್ಸಿಂಗ್ ಮಾಡಿ ಯಾವತ್ತೂ ಗೆದ್ ಬಂದೋನಲ್ಲ, ನಾವು

ಮಹಿಳಾ ಪಾತ್ರದಾರಿ: ಅದಕ್ಕೆ ವರ್ಷ ವರ್ಷ ಕಪ್ ನಮ್ದೆ.. ಕಪ್ ನಮ್ದೆ ಅಂದು ಕಡೆಗೆ ನಿಮಗ್ ಒಂದು ಚಿಪ್ಪೇ..

ಪುರುಷ ಪಾತ್ರದಾರಿ: ಯಾರಿಗ್ ಬೇಕಾಗಯತ್ಲೇ ಆ ಕಪ್.. 750 ಕೆಜಿ ಅಂಬಾರಿನೇ ಇಟ್ಕೊಂಡ್ ನನ್ ಮಕ್ಳು ನಾವು.. ಜುಜುಬಿ 7.5 ಕೆಜಿ ಕಪ್​ಗೆ ಗುದ್ದಾಡ್ತೇವೇನ್​ ನಾವು..

ಪಾಪ ಮುಖ್ಯ ಅಲ್ಲ ನಮಗ್ ಮನುಷ್ಯ ಮುಖ್ಯ.. ಅಯ್ಯೋ.. ಸೀಸನ್​ ಸ್ಟಾರ್ಟ್​ ಆದಗಿಂದ ನಿಲ್ಲ ಮಟ ಒಂದಾ ಟೀಮ್ನಾಗಿರೋ ಯಾವನ್.. ಒಬ್ನ ವಿರಾಟ್ ಕೊಹ್ಲಿ...

ಹತ್ ಇವ ಕೊಟ್ಟ, ಇಪ್ಪತ್ ಅವ ಕೊಟ್ಟ ಅಂತ ಟೀಮ್​ಗೆ ಮೋಸ ಮಾಡಿ ಅಡ್ಡಾಡೋದಲ್ಲ.. ನಮ್ ಟೀಮ್... ಏನೇ ಆಗಲಿ, ಪ್ರಾಣ ಹೋಗಲಿ.. ನಿಯತ್ತು ಮುಖ್ಯ ನಮ್ಮವರದ್ದು....

ಮಹಿಳಾ ಪಾತ್ರದಾರಿ: ಕುಣಿಯೋಕೆ ಬರಲಾರ್ದವನಿಗೆ ನೆಲ ಡೊಂಕು ಅಂದ್ನಂತೆ..

ಈ ಮಾತುಗಳನ್ನು ಪಾತ್ರದಾರಿಗಳ ಅಭಿನಯದಲ್ಲಿ ಕೇಳಿದರೆ, ನೀವು ನಗದೆ ಸುಮ್ಮನಿರಲಾರರು.

ಪ್ರಸಕ್ತ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಆಫ್​ ಪ್ರವೇಶಿಸುವುದೇ ಅಸಂಭವವಾಗಿತ್ತು. ಏಕೆಂದರೆ, ಮೊದಲ ಎಂಟು ಪಂದ್ಯಗಳಲ್ಲಿ ಕೇವಲ ಗೆದ್ದಿದ್ದು 1ರಲ್ಲಿ ಮಾತ್ರ. ಹೀಗಾಗಿ ಅಂತಿಮ 4ರಲ್ಲಿ ಸ್ಥಾನ ಪಡೆಯಲು ಅವಕಾಶ ಇದ್ದಿದ್ದೇ ಒಂದು ಪರ್ಸೆಂಟ್. ಆದರೆ, ಕ್ರಿಕೆಟ್ ಪಂಡಿತರು, ತಜ್ಞರು, ಮಾಜಿ ಕ್ರಿಕೆಟರ್​​ಗಳು ಯಾವುದೇ ಕಾರಣಕ್ಕೂ ಆರ್​​ಸಿಬಿ ಪ್ಲೇಆಫ್​ಗೆ ಹೋಗಲ್ಲ ಎಂದು ಭವಿಷ್ಯ ನುಡಿದಿದ್ದರು. ಆದರೆ, ಆಗಿದ್ದು ಮಾತ್ರ ಪವಾಡ.

ಹೌದು, 8ಕ್ಕೆ 1 ಗೆದ್ದು 7 ಸೋತಿದ್ದ ಆರ್​​ಸಿಬಿ ನಂತರ ಸತತ 6 ಗೆಲುವು ದಾಖಲಿಸಿ ಪ್ಲೇಆಫ್ ಪ್ರವೇಶಿಸಿದ್ದೇ ಒಂದು ದೊಡ್ಡ ಪವಾಡ. ಪ್ಲೇಆಫ್ ಪ್ರವೇಶಿಸಲು ಹಲವು ತಂಡಗಳ ಪೈಪೋಟಿ ಇದ್ದರೂ, ಅದೃಷ್ಟದಾಟದಲ್ಲಿ ಆರ್​​ಸಿಬಿ ಸಾಹಸಮಯ ರೀತಿಯಲ್ಲಿ ಅಗ್ರ-4ರಲ್ಲಿ ಸ್ಥಾನ ಪಡೆದುಕೊಂಡಿತು. ಆರ್​​ಸಿಬಿ ಹೋರಾಟ ಕಂಡ ಅಭಿಮಾನಿಗಳು ಸಹ ಈ ಸಲ ಕಪ್ ಗೆಲ್ಲುವುದು ಖಚಿತ ಎನ್ನುವ ವಿಶ್ವಾಸ ಹೊಂದಿದ್ದರು. ಆದರೆ ಆಗಿದ್ದೇ ಬೇರೆ. ಎಲಿಮಿನೇಟರ್​ ಪಂದ್ಯದಲ್ಲಿ ಆರ್​ಆರ್ ವಿರುದ್ಧ ಹೀನಾಯವಾಗಿ ಸೋತು ನಿರಾಸೆ ಮೂಡಿಸಿತು.

Whats_app_banner