ಏನಪ್ಪಾ ಇಷ್ಟೊಂದ್ ಕ್ರೇಜ್! ಪಾಕಿಸ್ತಾನ ಪ್ರೀಮಿಯರ್ ಲೀಗ್​ನಲ್ಲೂ ಆರ್​​ಸಿಬಿ ಜೆರ್ಸಿಯೊಂದಿಗೆ ಕಾಣಿಸಿಕೊಂಡ ಅಭಿಮಾನಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಏನಪ್ಪಾ ಇಷ್ಟೊಂದ್ ಕ್ರೇಜ್! ಪಾಕಿಸ್ತಾನ ಪ್ರೀಮಿಯರ್ ಲೀಗ್​ನಲ್ಲೂ ಆರ್​​ಸಿಬಿ ಜೆರ್ಸಿಯೊಂದಿಗೆ ಕಾಣಿಸಿಕೊಂಡ ಅಭಿಮಾನಿ

ಏನಪ್ಪಾ ಇಷ್ಟೊಂದ್ ಕ್ರೇಜ್! ಪಾಕಿಸ್ತಾನ ಪ್ರೀಮಿಯರ್ ಲೀಗ್​ನಲ್ಲೂ ಆರ್​​ಸಿಬಿ ಜೆರ್ಸಿಯೊಂದಿಗೆ ಕಾಣಿಸಿಕೊಂಡ ಅಭಿಮಾನಿ

Royal Challengers Bangalore : ಇತ್ತೀಚೆಗೆ ಪಾಕಿಸ್ತಾನ ಸೂಪರ್ ಲೀಗ್​​ನ ಲಾಹೋರ್ ಖಲಂದರ್ಸ್ ಮತ್ತು ಪೇಶಾವರ್ ಝಲ್ಮಿ ನಡುವಿನ ಪಂದ್ಯದ ಸಂದರ್ಭದಲ್ಲಿ ಆರ್‌ಸಿಬಿ ಜೆರ್ಸಿ ಧರಿಸಿದ್ದ ಅಭಿಮಾನಿಯೊಬ್ಬ ಕಾಣಿಸಿಕೊಂಡಿದ್ದಾನೆ.

ಪಾಕಿಸ್ತಾನ ಪ್ರೀಮಿಯರ್ ಲೀಗ್​ನಲ್ಲೂ ಆರ್​​ಸಿಬಿ ಜೆರ್ಸಿಯೊಂದಿಗೆ ಕಾಣಿಸಿಕೊಂಡ ಅಭಿಮಾನಿ
ಪಾಕಿಸ್ತಾನ ಪ್ರೀಮಿಯರ್ ಲೀಗ್​ನಲ್ಲೂ ಆರ್​​ಸಿಬಿ ಜೆರ್ಸಿಯೊಂದಿಗೆ ಕಾಣಿಸಿಕೊಂಡ ಅಭಿಮಾನಿ

ಆರ್​ಸಿಬಿ ಐಪಿಎಲ್‌ನಲ್ಲಿ ಅತ್ಯಂತ ನಿಷ್ಠಾವಂತ ಅಭಿಮಾನಿಗಳನ್ನು ಹೊಂದಿರುವ ತಂಡ. ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿದ್ದರೂ ಅಭಿಮಾನಿಗಳು ತುಂಬು ಉತ್ಸಾಹದಿಂದ ಬಂದು ತಂಡವನ್ನು ಹುರಿದುಂಬಿಸುತ್ತಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳು ಕೇವಲ ಭಾರತಕ್ಕೆ ಸೀಮಿತವಾಗಿಲ್ಲ, ವಿಶ್ವ ಮಟ್ಟದಲ್ಲೂ ಇದ್ದಾರೆ ಎಂಬುದು ವಿಶೇಷ.

ಇದಕ್ಕೆ ಪಾಕಿಸ್ತಾನವೇನು ಹೊರತಾಗಿಲ್ಲ. ಹೌದು, ಇತ್ತೀಚೆಗೆ ಪಾಕಿಸ್ತಾನ ಸೂಪರ್ ಲೀಗ್​​ನ ಲಾಹೋರ್ ಖಲಂದರ್ಸ್ ಮತ್ತು ಪೇಶಾವರ್ ಝಲ್ಮಿ ನಡುವಿನ ಪಂದ್ಯದ ಸಂದರ್ಭದಲ್ಲಿ ಆರ್‌ಸಿಬಿ ಜೆರ್ಸಿ ಧರಿಸಿದ್ದ ಅಭಿಮಾನಿಯೊಬ್ಬ ಕಾಣಿಸಿಕೊಂಡಿದ್ದಾನೆ. ತಕ್ಷಣವೇ ಆತನ ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಲೈವ್ ನೋಡುತ್ತಿದ್ದ ಕ್ರಿಕೆಟ್ ಪ್ರಿಯರು, ಆ ಅಭಿಮಾನಿ ಸ್ಕ್ರೀನ್‌ಶಾಟ್‌ಗಳನ್ನು ತಕ್ಷಣವೇ ಸಾಮಾಜಿಕ ಮಾಧ್ಯಮದಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

ಭಾರತೀಯ ಅಭಿಮಾನಿಗಳಂತೂ ಈ ಫೋಟೋ ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದಪ್ಪಾ ಆರ್​ಸಿಬಿ ಕ್ರೇಜ್ ಅಂದರೆ, ನಂಬಲಾಗದ ಅಭಿಮಾನಿಗಳ ಬಳಗ ಇರುವ ತಂಡ ಎಂದು ಕಾಮೆಂಟ್ ಹಾಕುತ್ತಿದ್ದಾರೆ. ಆದರೆ, ಎಲ್ಲೆಲ್ಲೂ ಆರ್​​ಸಿಬಿಯದ್ದೇ ಹವಾ, ಕಪ್​ ಗೆಲ್ಲದಿದ್ದರೂ ಇಂತಹ ಫ್ಯಾನ್​ ಬೇಸ್ ಹೊಂದಿರುವ ವಿಶ್ವದ ಏಕೈಕ ತಂಡ ಎಂದೆಲ್ಲಾ ಬಗೆಬಗೆಯ ಪ್ರತಿಕ್ರಿಯೆ ಹಾಕುತ್ತಿದ್ದಾರೆ.

ಸ್ಮೃತಿ ಮಂಧಾನಗೆ ಮಾತನಾಡಲು ಬಿಡದ ಆರ್​ಸಿಬಿ ಫ್ಯಾನ್ಸ್

ಡಬ್ಲ್ಯುಪಿಎಲ್​ನಲ್ಲಿ ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ನಾಯಕಿ ಸ್ಮೃತಿ ಮಂಧಾನ ಟಾಸ್​ ವೇಳೆ ಮಾತನಾಡಲು ಹೋದಾಗ ಅಭಿಮಾನಿಗಳು, ಆರ್​ಸಿಬಿ... ಆರ್​​ಸಿಬಿ ಎಂದು ಕೂಗಿದ್ದು ಮೈದಾನವೇ ರಿ ಸೌಂಡ್ ಬರ್ತಿತ್ತು. ಅಲ್ಲದೆ, ಸ್ಟೇಡಿಯಂ ಕೂಡ ಭರ್ತಿಯಾಗಿದ್ದು ವಿಶೇಷ. ಪಂದ್ಯದುದ್ದಕ್ಕೂ ಆರ್​​ಸಿಬಿ ಆರ್​​ಸಿಬಿ ಎಂದು ಕೂಗುತ್ತಿದ್ದರು. ಪಂದ್ಯ ಗೆಲ್ಲುತ್ತಿದ್ದಂತೆ ಅಭಿಮಾನಿಗಳ ಹರುಷ ಮುಗಿಲು ಮುಟ್ಟಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಉದ್ಘಾಟನಾ ಪಂದ್ಯದಲ್ಲಿ ಆರ್​ಸಿಬಿ vs ಸಿಎಸ್​ಕೆ

2024ರ ಐಪಿಎಲ್ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಲೋಕಸಭಾ ಚುನಾವಣೆ ಹಿನ್ನೆಲೆ ಎರಡು ಹಂತಗಳಲ್ಲಿ ಟೂರ್ನಿ ನಡೆಯಲಿದೆ. ಮಾರ್ಚ್​​ 22ರಂದು ನಡೆಯುವ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ಸೆಣಸಾಟ ನಡೆಯಲಿದೆ. ಟೂರ್ನಿಯ ಮೊದಲ 21 ಪಂದ್ಯಗಳ ವೇಳಾಪಟ್ಟಿ ಮಾತ್ರ ಪ್ರಕಟಿಸಲಾಗಿದೆ. ಲೋಕಸಭಾ ಚುನಾವಣಾ ದಿನಾಂಕ ಪ್ರಕಟವಾದ ನಂತರ ಮುಂದಿನ ವೇಳಾಪಟ್ಟಿಯನ್ನು ಬಿಸಿಸಿಐ ಬಹಿರಂಗಪಡಿಸಲಿದೆ.

ಐಪಿಎಲ್ 2024ರ ಹರಾಜಿನಲ್ಲಿ ಆರ್​ಸಿಬಿ ಖರೀದಿಸಿದ ಆಟಗಾರರು: ಅಲ್ಜಾರಿ ಜೋಸೆಫ್ (11.50 ಕೋಟಿ ರೂಪಾಯಿ), ಯಶ್ ದಯಾಲ್ (5 ಕೋಟಿ ರೂಪಾಯಿ), ಟಾಮ್ ಕರನ್ (1.5 ಕೋಟಿ ರೂಪಾಯಿ), ಲಾಕಿ ಫರ್ಗುಸನ್ (2 ಕೋಟಿ ರೂಪಾಯಿ), ಸ್ವಪ್ನಿಲ್ ಸಿಂಗ್ (20 ಲಕ್ಷ ರೂಪಾಯಿ), ಸೌರವ್ ಚೌಹಾಣ್ (20 ಲಕ್ಷ ರೂಪಾಯಿ).

ಆರ್‌ಸಿಬಿ ಪೂರ್ಣ ತಂಡ

ಫಾಫ್ ಡು ಪ್ಲೆಸಿಸ್ (ನಾಯಕ), ಗ್ಲೆನ್ ಮ್ಯಾಕ್ಸ್‌ವೆಲ್, ವಿರಾಟ್ ಕೊಹ್ಲಿ, ರಜತ್ ಪಾಟೀದಾರ್, ಅನೂಜ್ ರಾವತ್, ದಿನೇಶ್ ಕಾರ್ತಿಕ್, ಸುಯಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಮಹಿಪಾಲ್ ಲೊಮ್ರೋರ್, ಕರ್ಣ್ ಶರ್ಮಾ, ಮನೋಜ್ ಭಾಂಡಗೆ, ಮಯಾಂಕ್ ದಾಗರ್, ವಿಜಯ್‌ಕುಮಾರ್ ವೈಶಾಕ್, ಆಕಾಶ್ ದೀಪ್, ಆಕಾಶ್ ದೀಪ್, ಸಿರಾಜ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಾಜನ್ ಕುಮಾರ್, ಕ್ಯಾಮೆರಾನ್ ಗ್ರೀನ್, ಅಲ್ಜಾರಿ ಜೋಸೆಫ್, ಯಶ್ ದಯಾಳ್, ಟಾಮ್ ಕರನ್, ಲಾಕಿ ಫರ್ಗುಸನ್, ಸ್ವಪ್ನಿಲ್ ಸಿಂಗ್, ಸೌರವ್ ಚೌಹಾನ್.

Whats_app_banner