ಕನ್ನಡ ಸುದ್ದಿ  /  ಕ್ರಿಕೆಟ್  /  ಕಪ್ ಗೆಲ್ಲೋಕೆ ಆರ್​ಸಿಬಿಗೆ ಸಿಕ್ಕಿದೆ ಸಕ್ಸಸ್ ಸೂತ್ರ; ಬೆಂಗಳೂರು ಸತತ ಗೆಲುವಿನ ಹಿಂದಿದೆ ಈ ಯಶಸ್ಸಿನ ಮಂತ್ರ!

ಕಪ್ ಗೆಲ್ಲೋಕೆ ಆರ್​ಸಿಬಿಗೆ ಸಿಕ್ಕಿದೆ ಸಕ್ಸಸ್ ಸೂತ್ರ; ಬೆಂಗಳೂರು ಸತತ ಗೆಲುವಿನ ಹಿಂದಿದೆ ಈ ಯಶಸ್ಸಿನ ಮಂತ್ರ!

RCB Success sutra: ಪ್ಲೇಆಫ್​ಗೆ ಎಂಟ್ರಿಕೊಡುವ ಲೆಕ್ಕಾಚಾರದಲ್ಲಿರುವ ಆರ್​ಸಿಬಿ, ಯಶಸ್ಸಿನ ಸೂತ್ರವೇನು? ಸತತ ಸೋಲುಗಳಿಂದ ಹೊರ ಬಂದು ಸತತ ಗೆಲುವು ದಾಖಲಿಸಿದ್ದರ ಹಿಂದಿರುವ ಕಾರಣವೇನು? ಇಲ್ಲಿದೆ ವಿವರ.

ಕಪ್ ಗೆಲ್ಲೋಕೆ ಆರ್​ಸಿಬಿಗೆ ಸಿಕ್ಕಿದೆ ಸಕ್ಸಸ್ ಸೂತ್ರ; ಬೆಂಗಳೂರು ಸತತ ಗೆಲುವಿನ ಹಿಂದಿದೆ ಈ ಯಶಸ್ಸಿನ ಮಂತ್ರ!
ಕಪ್ ಗೆಲ್ಲೋಕೆ ಆರ್​ಸಿಬಿಗೆ ಸಿಕ್ಕಿದೆ ಸಕ್ಸಸ್ ಸೂತ್ರ; ಬೆಂಗಳೂರು ಸತತ ಗೆಲುವಿನ ಹಿಂದಿದೆ ಈ ಯಶಸ್ಸಿನ ಮಂತ್ರ!

ಊರಿಗೆ ಬಂದವಳು ನೀರಿಗೆ ಬರಲ್ವಾ ಅನ್ನೋ ಮಾತಿದೆ. ಇದು ಹಳೇ ಡೈಲಾಗ್.. ಹೊಸ ಡೈಲಾಗ್ ಏನಂದರೆ 16 ಐಪಿಎಲ್ ಸೀಸನ್ ಆಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB 2024), 17ನೇ ಆವೃತ್ತಿಯಲ್ಲಿ ಕಪ್ ಗೆಲ್ದೇ ಇರುತ್ತಾ ಅನ್ನೋದು! ಸತತ ಸೋಲುಗಳ ನಡುವೆಯೂ ವಿಶ್ವಾಸ ಕಳೆದುಕೊಳ್ಳದೆ ಸತತ ಜಯ ಸಾಧಿಸಿ ಈಗ ಪ್ಲೇಆಫ್​ ಪ್ರವೇಶಿಸುವ ಭರವಸೆ ಮೂಡಿಸಿದೆ. ಪ್ರತಿ ಸೀಸನ್​​ನಲ್ಲೂ ನಿರಾಸೆಯೇ ಮೂಡಿಸುತ್ತಿರುವ ಆರ್​ಸಿಬಿ ಅದೃಷ್ಟ, ಈ ಬಾರಿಯ ಐಪಿಎಲ್​ನಲ್ಲಿ ಖಂಡಿತ ಬದಲಾಗುವ ಸಾಧ್ಯತೆ ಇದೆ.

ಟ್ರೆಂಡಿಂಗ್​ ಸುದ್ದಿ

ಏಕೆಂದರೆ ಪ್ಲೇಆಫ್​ ಪ್ರವೇಶಿಸುವುದೇ ಅನುಮಾನವಾಗಿದ್ದ ಇದೇ ತಂಡ, ಈಗ ಅಂತಿಮ 4ರಲ್ಲಿ ಸ್ಥಾನ ಪಡೆಯಲು ಕಠಿಣ ಪೈಪೋಟಿ ನಡೆಸುತ್ತಿದೆ. ಮೊದಲಾರ್ಧದಲ್ಲಿ 7 ಪಂದ್ಯಗಳಲ್ಲಿ 6 ಸೋತಿದ್ದ ಫಾಫ್ ಪಡೆಯು, ಸೆಕೆಂಡ್​ ಹಾಫ್​ನಲ್ಲಿ 6 ಪಂದ್ಯಗಳಲ್ಲಿ 5 ಗೆದ್ದಿದೆ. ಇದೀಗ ತನ್ನ ಕೊನೆಯ ಹಣಾಹಣಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲು ಸಜ್ಜಾಗಿದೆ. ಪ್ಲೇಆಫ್​ಗೆ ಎಂಟ್ರಿಕೊಡುವ ಲೆಕ್ಕಾಚಾರದಲ್ಲಿರುವ ಆರ್​ಸಿಬಿ, ಯಶಸ್ಸಿನ ಸೂತ್ರವೇನು? ಸತತ ಸೋಲುಗಳಿಂದ ಹೊರ ಬಂದು ಸತತ ಗೆಲುವು ದಾಖಲಿಸಿದ್ದರ ಹಿಂದಿರುವ ಕಾರಣವೇನು? ಇಲ್ಲಿದೆ ವಿವರ.

ಆತ್ಮವಿಶ್ವಾಸ ಕಳೆದುಕೊಳ್ಳದ ವಿರಾಟ್​ ಕೊಹ್ಲಿ

ವಿರಾಟ್​ ಕೊಹ್ಲಿ ಅದ್ಭುತ ಪ್ರದರ್ಶನವೇ ಆರ್​​ಸಿಬಿ ಸತತ ಗೆಲುವು ಸಾಧಿಸಲು ಪ್ರಮುಖ ಕಾರಣ. ಮೊದಲಾರ್ಧದಲ್ಲಿ ಆರ್​​ಸಿಬಿ ಸತತ ಸೋಲುಗಳಿಂದ ಆತ್ಮವಿಶ್ವಾಸ ಕಳೆದುಕೊಳ್ಳದ ಕೊಹ್ಲಿ, ಪ್ರತಿ ಪಂದ್ಯದಲ್ಲೂ ಅತ್ಯುತ್ತಮ ಪ್ರದರ್ಶನ ತೋರುವ ಮೂಲಕ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದರು. ನಾಯಕನಲ್ಲದಿದ್ದರೂ ಅಂಗಳದಲ್ಲಿ ವಿರಾಟ್ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರದಲ್ಲೂ ತಂಡವು ಯಶಸ್ಸು ಕಾಣುತ್ತಿದೆ. ಎದುರಾಳಿಗಳ ವೀಕ್ನೆಸ್​ ಮೇಲೆ ಪ್ರಯೋಗ ನಡೆಸಿ ಪಾಸ್​ ಆಗುತ್ತಿದ್ದಾರೆ.

ಆರ್​​​ಸಿಬಿ ತಂಡದ ಕೈಹಿಡಿದ ಮ್ಯಾಚ್​ ವಿನ್ನರ್ಸ್

ಫಸ್ಟ್ ಹಾಫ್​ನಲ್ಲಿ ಆರ್​ಸಿಬಿಗೆ ಮ್ಯಾಚ್​ ವಿನ್ನರ್​​ಗಳೇ ಕೈಕೊಟ್ಟಿದ್ದರು. ಅದೇ ಮ್ಯಾಚ್​ ವಿನ್ನರ್​​ಗಳು ಸೆಕೆಂಡ್ ಹಾಫ್​ನಲ್ಲಿ ಕೈ ಹಿಡಿದರು. ಫಾಫ್ ಡು ಪ್ಲೆಸಿಸ್​, ರಜತ್ ಪಾಟೀದಾರ್, ಕ್ಯಾಮರೂನ್ ಗ್ರೀನ್, ಮೊಹಮ್ಮದ್ ಸಿರಾಜ್, ಯಶ್ ದಯಾಳ್ ಸೇರಿದಂತೆ ಎಲ್ಲಾ ಬೌಲರ್​​ಗಳು ಮ್ಯಾಚ್​​ ವಿನ್ನಿಂಗ್​ ಪರ್ಫಾಮೆನ್ಸ್ ಕೊಡುತ್ತಿದ್ದಾರೆ. ಒಂದಿಲ್ಲೊಂದು ಪಂದ್ಯದಲ್ಲಿ ಒಬ್ಬ ಆಟಗಾರ, ಮ್ಯಾಚ್​ ವಿನ್ನರ್​ ಆಗಿ ತಂಡದ ಕೈ ಹಿಡಿಯುತ್ತಿದ್ದಾರೆ.

ಮ್ಯಾಕ್ಸ್​ವೆಲ್ ಸ್ಥಾನಕ್ಕೆ ಬಂದ ವಿಲ್ ಜಾಕ್ಸ್ ಅಬ್ಬರ

ಗ್ಲೆನ್ ಮ್ಯಾಕ್ಸ್​ವೆಲ್ ಸತತ ಅವಕಾಶ ಪಡೆದರೂ ಮಿಂಚಲಿಲ್ಲ. ಹೀಗಾಗಿ ಮೊದಲಾರ್ಧದಲ್ಲಿ ಅವರೇ ಸ್ವಂತ ನಿರ್ಧಾರದಿಂದ ಪ್ಲೇಯಿಂಗ್​ ಇಲೆವೆನ್​ನಿಂದ ಹೊರಗುಳಿದರು. ಹೀಗಾಗಿ ಅವರ ಜಾಗಕ್ಕೆ ಇಂಗ್ಲೆಂಡ್ ತಂಡದ ಹಿಟ್ಟರ್​ ವಿಲ್​ ಜಾಕ್ಸ್, ಆಡುವ 11ರ ಬಳಗದಲ್ಲಿ ಸ್ಥಾನ ಪಡೆದರು. ಇದರ ನಂತರ ಆರ್​ಸಿಬಿ ನಸೀಬು ಬದಲಾಗಿ ಹೋಯ್ತು. ಅವರು ಶತಕ, ಅರ್ಧಶತಕ ಸಿಡಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಆದರೀಗ ಅವರು ಕೊನೆಯ ಪಂದ್ಯಕ್ಕೆ ಲಭ್ಯರಿಲ್ಲ.

ತಂಡದ ಆಯ್ಕೆಯಲ್ಲಿ ಗೊಂದಲಕ್ಕೀಡಾಗದ ಫಾಫ್

ಮೊದಲಾರ್ಧದಲ್ಲಿ ತಂಡದ ಪ್ಲೇಯಿಂಗ್ ಇಲೆವೆನ್ ಆಯ್ಕೆಯೇ ಕ್ಯಾಪ್ಟನ್ ಫಾಫ್ ಡು ಪ್ಲೆಸಿಸ್​ಗೆ ತಲೆನೋವಿಗೆ ಕಾರಣವಾಗಿತ್ತು. ಉತ್ತಮ ಸಮತೋಲನ ತಂಡ ಆಯ್ಕೆಯಲ್ಲಿ, ಪದೇ ಪದೇ ಎಡವುತ್ತಿದ್ದ ಫಾಫ್​, ದ್ವಿತಿಯಾರ್ಧದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್​​ ವಿಭಾಗದಲ್ಲಿ ಪರ್ಫೆಕ್ಟ್ ಪ್ಲೇಯಿಂಗ್ ಇಲೆವೆನ್ ಸಿಕ್ಕಿದೆ. ಇದು ಕೂಡ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಸಕ್ಸಸ್​ಗೆ ಕಾರಣವಾಗಿದೆ. ​

ಫೈಟಿಂಗ್ ಸ್ಪಿರಿಟ್, ಗೆಲ್ಲುವ ಆತ್ಮವಿಶ್ವಾಸ

ಪ್ರತಿ ಐಪಿಎಲ್​ ಸೀಸನ್​ಗಳಲ್ಲಿ ಆರ್​ಸಿಬಿ ತಂಡಕ್ಕೆ ಮುಳುವಾಗಿದ್ದೇ, ಅತಿಯಾದ ಆತ್ಮವಿಶ್ವಾಸ. ಒಮ್ಮೆ ಗೆದ್ದರೆ ಹಿಗ್ಗುವ, ಸೋತರೆ ಕುಗ್ಗುತ್ತಿದ್ದ ಕೊಹ್ಲಿ ಬಾಯ್ಸ್, ​ಈ ಬಾರಿ ತಮ್ಮ ಮನಸ್ಥಿತಿ ಬದಲಿಸಿಕೊಂಡಿದ್ದಾರೆ. ಅತಿಯಾದ ಆತ್ಮವಿಶ್ವಾಸ ತೋರದೆ, ಸೋತರು ಕುಗ್ಗದೆ, ಆತ್ಮ ವಿಶ್ವಾಸದೊಂದಿಗೆ ಹೋರಾಡುವ ಛಲ ಮೈಗೂಡಿಸಿಕೊಂಡಿದ್ದಾರೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಈ ಟೂರ್ನಿಯಲ್ಲಿ ಆರಂಭದಲ್ಲಿ ಸೋತರು, ಮತ್ತೆ ಮತ್ತೆ ಪುಟಿದೆದ್ದು ಮ್ಯಾಚ್​ ವಿನ್ನಿಂಗ್​ ಪರ್ಫಾಮೆನ್ಸ್ ನೀಡುತ್ತಾ ಮುನ್ನುಗ್ಗುತ್ತಿರುವುದು.

ಸ್ವಪ್ನಿಲ್ ಸಿಂಗ್​ ಬಂದಾಗಿನಿಂದ ಪಂದ್ಯ ಸೋತೇ ಇಲ್ಲ

ಸ್ವಪ್ನಿಲ್ ಸಿಂಗ್​ ಪ್ಲೇಯಿಂಗ್​ XIನಲ್ಲಿ ಅವಕಾಶ ಪಡೆದಾಗಿನಿಂದ ಆರ್​ಸಿಬಿ ಐದಕ್ಕೆ ಐದೂ ಗೆದ್ದಿದೆ. ಇನ್ನಿಂಗ್ಸ್​ನ ಮೊದಲ ಓವರ್​​ ಮಾಡುವ ಸ್ವಪ್ನಿಲ್, ವಿಕೆಟ್ ಪಡೆಯದೆ ವಾಪಸ್ ಹೋಗಿದ್ದೇ ಇಲ್ಲ. ಆರಂಭಿಕ ಓವರ್​​ನಲ್ಲೇ ಎದುರಾಳಿಗೆ ಆಘಾತ ನೀಡಿ, ಆರ್​ಸಿಬಿ ಯಶಸ್ಸು ತಂದುಕೊಡುತ್ತಿದ್ದಾರೆ. ಅವರು ಬ್ಯಾಟಿಂಗ್​ನಲ್ಲೂ ಕಾಣಿಕೆ ನೀಡುತ್ತಿದ್ದಾರೆ.

ಈ ಬಾರಿ ಆರ್​ಸಿಬಿ ಸಕ್ಸಸ್​​​ಗೆ ಮತ್ತೊಂದು ಕಾರಣ, ಆರ್​​ಸಿಬಿ ತಂಡದ ಡೈರೆಕ್ಟರ್​ ಮೊ ಬೊಬಾಟ್ ಹಾಗೂ ಕೋಚ್​ ಆ್ಯಂಡಿ ಫ್ಲವರ್​. ತೆರೆಯ ಹಿಂದೆ ಉಳಿದು ಎದುರಾಳಿ ವಿರುದ್ಧ ರಣತಂತ್ರ ರೂಪಿಸುತ್ತಿದ್ದಾರೆ. ಅದನ್ನು ಚಾಚುತಪ್ಪದೇ ಅಂಗಳದಲ್ಲಿ ಫಾಫ್ ಕಾರ್ಯರೂಪಕ್ಕೆ ಇಳಿಸುವ ಮೂಲಕ, ಆರ್​ಸಿಬಿ ಯಶಸ್ಸಿಗೆ ಕಾರಣರಾಗಿದ್ದಾರೆ.

ಒಟ್ಟಿನಲ್ಲಿ ಪರ್ಫೆಕ್ಟ್​ ಟೀಮ್ ವರ್ಕ್​, ಬೆಸ್ಟ್ ಟೀಮ್ ಕಾಂಬಿನೇಷನ್ ಸಿಕ್ಕಿದರೆ ಗೆಲುವು ಸಾಧ್ಯ ಅನ್ನೋದಕ್ಕೆ ಆರ್​​ಸಿಬಿ ತಂಡವೇ ಬೆಸ್ಟ್ ಎಕ್ಸಾಂಪಲ್. ಇದೀಗ ಸಿಎಸ್​ಕೆ ವಿರುದ್ಧ 11 ಎಸೆತ ಉಳಿದಿ ಚೇಸಿಂಗ್​ ನಡೆಸಿದರೆ ಅಥವಾ 18 ರನ್​​ಗಳ ಅಂತರದಿಂದ ಗೆದ್ದ ಖಚಿತವಾಗಿ ಪ್ಲೇಆಫ್ ಪ್ರವೇಶಿಸಲಿದೆ.

 

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024

ಕ್ರಿಕೆಟ್‌ಗೆ ಸಂಬಂಧಿಸಿದ ಎಲ್ಲ ಸುದ್ದಿ, T20 ವಿಶ್ವಕಪ್, T20 ವಿಶ್ವಕಪ್ ವೇಳಾಪಟ್ಟಿ, T20 ವಿಶ್ವಕಪ್ ಅತ್ಯಧಿಕ ರನ್‌ಗಳು, T20 ವಿಶ್ವಕಪ್ ಪಾಯಿಂಟ್ಸ್ ಟೇಬಲ್, T20 ವಿಶ್ವಕಪ್ ಲೈವ್ ಸ್ಕೋರ್, T20 ವಿಶ್ವಕಪ್ ಅಂಕಿಅಂಶಗಳು.. ಕ್ರಿಕೆಟ್‌ಗೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ HT ಕನ್ನಡ ವೆಬ್‌ಸೈಟ್ ನೋಡಿ