RCB 2024 Schedule: ಆರ್​ಸಿಬಿ ಮೊದಲ 5 ಪಂದ್ಯಗಳ ವೇಳಾಪಟ್ಟಿ; ಬೆಂಗಳೂರಿನಲ್ಲಿ ಮೊದಲ ಪಂದ್ಯ ಯಾವಾಗ?
ಕನ್ನಡ ಸುದ್ದಿ  /  ಕ್ರಿಕೆಟ್  /  Rcb 2024 Schedule: ಆರ್​ಸಿಬಿ ಮೊದಲ 5 ಪಂದ್ಯಗಳ ವೇಳಾಪಟ್ಟಿ; ಬೆಂಗಳೂರಿನಲ್ಲಿ ಮೊದಲ ಪಂದ್ಯ ಯಾವಾಗ?

RCB 2024 Schedule: ಆರ್​ಸಿಬಿ ಮೊದಲ 5 ಪಂದ್ಯಗಳ ವೇಳಾಪಟ್ಟಿ; ಬೆಂಗಳೂರಿನಲ್ಲಿ ಮೊದಲ ಪಂದ್ಯ ಯಾವಾಗ?

RCB IPL 2024 Schedule : ಪ್ರಕಟವಾಗಿರುವ ಐಪಿಎಲ್​ನ ಆರಂಭಿಕ 21 ಪಂದ್ಯಗಳ ವೇಳಾಪಟ್ಟಿಯಲ್ಲಿ ಆರ್​​ಸಿಬಿ 5 ಪಂದ್ಯಗಳನ್ನಾಡಲಿದೆ. ಆರ್​ಸಿಬಿ ತಂಡದ ಮೊದಲ ಐದು ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ.

ಐಪಿಎಲ್​ನಲ್ಲಿ ಆರ್​ಸಿಬಿ ಮೊದಲ 5 ಪಂದ್ಯಗಳ ವೇಳಾಪಟ್ಟಿ
ಐಪಿಎಲ್​ನಲ್ಲಿ ಆರ್​ಸಿಬಿ ಮೊದಲ 5 ಪಂದ್ಯಗಳ ವೇಳಾಪಟ್ಟಿ

2024ರ ಐಪಿಎಲ್ ವೇಳಾಪಟ್ಟಿ ಪ್ರಕಟವಾಗಿದೆ. ಮಾರ್ಚ್ 22ರಂದು ಚೆನ್ನೈನಲ್ಲಿ ನಡೆಯಲಿರುವ ಐಪಿಎಲ್ ಆರಂಭಿಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು (RCB vs CSK) ಎದುರಿಸಲಿದೆ. ಆ ಬಳಿಕ ಮಾರ್ಚ್ 25ರಂದು ತವರಿನ ಚಿನ್ನಸ್ವಾಮಿ ಮೈದಾನದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಕಾದಾಟ ನಡೆಸಲಿದೆ. ಸದ್ಯ ಪ್ರಕಟವಾಗಿರುವ ಆರಂಭಿಕ 21 ಪಂದ್ಯಗಳ ವೇಳಾಪಟ್ಟಿಯಲ್ಲಿ ಆರ್​​ಸಿಬಿ 5 ಪಂದ್ಯಗಳನ್ನಾಡಲಿದೆ. ಆ ಪಂದ್ಯಗಳ ವೇಳಾಪಟ್ಟಿ ಈ ಮುಂದಿನಂತಿದೆ.

ಆರ್​​ಸಿಬಿಯ ಮೊದಲೈದು ಪಂದ್ಯಗಳ ವೇಳಾಪಟ್ಟಿ

ಚೆನ್ನೈ ಸೂಪರ್ ಕಿಂಗ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು - ಮಾರ್ಚ್ 22 ಚೆನ್ನೈ, ಸಂಜೆ 7:30ಕ್ಕೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಪಂಜಾಬ್ ಕಿಂಗ್ಸ್ - ಮಾರ್ಚ್ 25, ಬೆಂಗಳೂರು, ಸಂಜೆ 7:30ಕ್ಕೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಕೋಲ್ಕತ್ತಾ ನೈಟ್​ ರೈಡರ್ಸ್ - ಮಾರ್ಚ್ 29, ಬೆಂಗಳೂರು, ಸಂಜೆ 7:30ಕ್ಕೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಲಕ್ನೋ ಸೂಪರ್ ಜೈಂಟ್ಸ್ - ಏಪ್ರಿಲ್ 2, ಬೆಂಗಳೂರು, ಸಂಜೆ 7:30ಕ್ಕೆ

ರಾಜಸ್ಥಾನ್ ರಾಯಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು - ಏಪ್ರಿಲ್ 6, ಜೈಪುರ, ಸಂಜೆ 7:30ಕ್ಕೆ

ಪ್ರಮುಖರನ್ನು ಕೈಬಿಟ್ಟ ಆರ್​ಸಿಬಿ

ಐಪಿಎಲ್ ಹರಾಜಿನ ಮೊದಲು ಆರ್​ಸಿಬಿ ಪ್ರಮುಖ ಆಟಗಾರರನ್ನು ಕೈಬಿಟ್ಟಿತು. ಜೋಶ್ ಹೇಜಲ್‌ವುಡ್ ಮತ್ತು ವನಿಂದು ಹಸರಗಾ ಅವರನ್ನು ಹರಾಜಿನ ಮೊದಲು ಕೈಬಿಟ್ಟಿತು. ಅಲ್ಜಾರಿ ಜೋಸೆಫ್, ಲಾಕಿ ಫರ್ಗುಸನ್, ಟಾಮ್ ಕರನ್ ಖರೀದಿಸಿತು. ಆರ್​ಸಿಬಿ ಪರ ವೇಗದ ಬೌಲಿಂಗ್​ ದಾಳಿಯನ್ನು ಮೊಹಮ್ಮದ್ ಸಿರಾಜ್ ಮುನ್ನಡೆಸುತ್ತಾರೆ. ಆದರೆ, ಐಪಿಎಲ್ 2024 ಗಾಗಿ ಆರ್‌ಸಿಬಿಯ ಬೌಲಿಂಗ್ ದಾಳಿಯ ಮೇಲೆ ಸಾಗರೋತ್ತರ ಆಯ್ಕೆಗಳು ಪ್ರಶ್ನೆಗಳನ್ನು ಹುಟ್ಟುಹಾಕಿವೆ.'

ಆರ್​ಸಿಬಿ ಸಾಮರ್ಥ್ಯ: ಆರ್‌ಸಿಬಿ ತಂಡದ ಶಕ್ತಿ ತಂಡದ ಬ್ಯಾಟಿಂಗ್. ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ರಜತ್ ಪಾಟೀದಾರ್ ಮತ್ತು ಕ್ಯಾಮರೂನ್ ಗ್ರೀನ್ ಗುಣಮಟ್ಟದ ಅಗ್ರ ಕ್ರಮಾಂಕ ರೂಪಿಸಿದ್ದಾರೆ. ಯಾರೇ ಕ್ರೀಸ್​ನಲ್ಲಿ ಕಚ್ಚಿನಿಂತರೂ ದೊಡ್ಡ ಮಟ್ಟದ ಸ್ಕೋರ್ ಕಲೆ ಹಾಕುವುದು ಖಚಿತವಾಗಿದೆ.

ಆರ್​ಸಿಬಿ ದೌರ್ಬಲ್ಯ: ಆರ್‌ಸಿಬಿಯ ದೌರ್ಬಲ್ಯ ಅಂದರೆ ಬೌಲಿಂಗ್​ ವಿಭಾಗ. ಸಿರಾಜ್ ಉತ್ತಮ ಬೌಲರ್ ಆದರೆ ಅಲ್ಜಾರಿ ಜೋಸೆಫ್, ಟಾಮ್ ಕರನ್, ಲಾಕಿ ಫರ್ಗುಸನ್, ಯಶ್ ದಯಾಲ್ ಅವರಂತಹ ಬ್ಯಾಕಪ್ ವೇಗಿಗಳು ಹೆಚ್ಚಿನ ಆತ್ಮವಿಶ್ವಾಸ ತುಂಬಬೇಕಿದೆ. ಉತ್ತಮ ಬೌಲರ್‌ಗಳಾದರೂ ಸ್ಥಿರತೆ ಅವರಿಗೆ ಕಳವಳಕಾರಿಯಾಗಿದೆ.

ಆರ್​ಸಿಬಿ ತಂಡ ಇಂತಿದೆ

ವಿಕೆಟ್‌ ಕೀಪರ್‌ಗಳು: ಅನುಜ್ ರಾವತ್, ದಿನೇಶ್ ಕಾರ್ತಿಕ್.

ಬ್ಯಾಟರ್ಸ್: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಸುಯಶ್ ಪ್ರಭುದೇಸಾಯಿ, ಸೌರವ್ ಚೌಹಾಣ್.

ಆಲ್‌ರೌಂಡರ್‌ಗಳು: ಮಹಿಪಾಲ್ ಲೊಮ್ರೊರ್, ಗ್ಲೆನ್ ಮ್ಯಾಕ್ಸ್‌ವೆಲ್, ಮನೋಜ್ ಭಾಂಡಗೆ, ಟಾಮ್ ಕರನ್, ಸ್ವಪ್ನಿಲ್ ಸಿಂಗ್, ವಿಲ್ ಜಾಕ್ಸ್, ಕ್ಯಾಮರೂನ್ ಗ್ರೀನ್.

ಬೌಲರ್‌ಗಳು: ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ಕರ್ಣ್ ಶರ್ಮಾ, ರಾಜನ್ ಕುಮಾರ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ಅಲ್ಜಾರಿ ಜೋಸೆಫ್, ಲಾಕಿ ಫರ್ಗುಸನ್, ಯಶ್ ದಯಾಲ್, ವಿಜಯ್‌ಕುಮಾರ್ ವೈಶಾಕ್, ಮಯಾಂಕ್ ಡಾಗರ್.

Whats_app_banner