ಆರ್‌ಸಿಬಿ ಸಂಪೂರ್ಣ ವೇಳಾಪಟ್ಟಿ; ತವರಿನ ಪಂದ್ಯಗಳು ಯಾವಾಗ, ಸಮಯ, ದಿನಾಂಕ, ತಂಡದ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ
RCB IPL 2025 Full Schedule: ರಜತ್ ಪಾಟೀದಾರ್ ನಾಯಕತ್ವದಲ್ಲಿ ಆಡಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಂಪೂರ್ಣ ವೇಳಾಪಟ್ಟಿ, ತಂಡ, ಸಮಯ, ದಿನಾಂಕ ಸೇರಿದಂತೆ ವಿವರ ಇಂತಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು (Royal Challengers Bengaluru) ಇಂಡಿಯನ್ ಪ್ರೀಮಿಯರ್ ಲೀಗ್‌ನ (IPL 2025) 18ನೇ ಆವೃತ್ತಿಯನ್ನು ಹೊಸ ನಾಯಕನ ನೇತೃತ್ವದಲ್ಲಿ ಪ್ರಾರಂಭಿಸಲಿದೆ. ಈ ಋತುವಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಲಿರುವ ಫಾಫ್ ಡು ಪ್ಲೆಸಿಸ್ ಅವರಿಂದ ರಜತ್ ಪಾಟೀದಾರ್ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ಪಾಟೀದಾರ್ ಆರ್‌ಸಿಬಿ ತಂಡದ ಎಂಟನೇ ನಾಯಕ. 2021ರಲ್ಲಿ ಬೆಂಗಳೂರು ಮೂಲದ ಫ್ರಾಂಚೈಸಿಗೆ ಸೇರಿದಾಗಿನಿಂದ 3 ಸೀಸನ್‌ಗಳನ್ನು ಆಡಿರುವ 31 ವರ್ಷದ ಇಂದೋರ್‌ನಲ್ಲಿ ಜನಿಸಿದ ಬ್ಯಾಟ್ಸ್‌ಮನ್, 2022ರ ಸೀಸನ್ ಮಧ್ಯದಲ್ಲಿ ಲುವ್ನಿತ್ ಸಿಸೋಡಿಯಾ ಬದಲಿಗೆ ಆರ್‌ಸಿಬಿಗೆ ಮರಳಿದ್ದರು. 2021ರಲ್ಲಿ ಆಡಿದ್ದು, ಕೇವಲ 4 ಪಂದ್ಯಗಳನ್ನಷ್ಟೆ. ಐಪಿಎಲ್ ಮೆಗಾ ಹರಾಜಿಗೂ ಮೊದಲು ಆರ್‌ಸಿಬಿ ತಂಡವು ಪಾಟೀದಾರ್, ಯಶ್ ದಯಾಳ್ ಮತ್ತು ವಿರಾಟ್ ಕೊಹ್ಲಿ ಮೂವರನ್ನು ಮಾತ್ರ ಉಳಿಸಿಕೊಂಡಿತ್ತು.
ಐಪಿಎಲ್ 2025: ಆರ್‌ಸಿಬಿಯ ಪೂರ್ಣ ವೇಳಾಪಟ್ಟಿ
1. ಮಾರ್ಚ್ 22, ಶನಿವಾರ ಸಂಜೆ - 7:30: ಆರ್‌ಸಿಬಿ vs ಕೋಲ್ಕತ್ತಾ ನೈಟ್ ರೈಡರ್ಸ್ (ಕೋಲ್ಕತ್ತಾ)
2. ಮಾರ್ಚ್ 28, ಶುಕ್ರವಾರ - 7:30: ಆರ್‌ಸಿಬಿ vs ಚೆನ್ನೈ ಸೂಪರ್ ಕಿಂಗ್ಸ್ (ಚೆನ್ನೈ)
3. ಏಪ್ರಿಲ್ 2, ಬುಧವಾರ - 7:30: ಆರ್‌ಸಿಬಿ vs ಗುಜರಾತ್ ಟೈಟಾನ್ಸ್ (ಬೆಂಗಳೂರು)
4. ಏಪ್ರಿಲ್ 7, ಸೋಮವಾರ ಸಂಜೆ - 7:30: ಆರ್‌ಸಿಬಿ vs ಮುಂಬೈ ಇಂಡಿಯನ್ಸ್ (ಮುಂಬೈ)
5. ಏಪ್ರಿಲ್ 10, ಗುರುವಾರ ಸಂಜೆ - 7:30: ಆರ್‌ಸಿಬಿ vs ಡೆಲ್ಲಿ ಕ್ಯಾಪಿಟಲ್ಸ್ (ಬೆಂಗಳೂರು)
6. ಏಪ್ರಿಲ್ 13, ಭಾನುವಾರ ಮಧ್ಯಾಹ್ನ - 3:30: ಆರ್‌ಸಿಬಿ vs ರಾಜಸ್ಥಾನ ರಾಯಲ್ಸ್ (ಜೈಪುರ)
7. ಏಪ್ರಿಲ್ 18, ಶುಕ್ರವಾರ ಸಂಜೆ - 7:30: ಆರ್‌ಸಿಬಿ vs ಪಂಜಾಬ್ ಕಿಂಗ್ಸ್ (ಬೆಂಗಳೂರು)
8. ಏಪ್ರಿಲ್ 20, ಭಾನುವಾರ ಮಧ್ಯಾಹ್ನ - 3:30: ಆರ್‌ಸಿಬಿ vs ಪಂಜಾಬ್ ಕಿಂಗ್ಸ್ (ಮುಲ್ಲನ್‌ಪುರ)
9. ಏಪ್ರಿಲ್ 24, ಗುರುವಾರ ಸಂಜೆ - 7:30: ಆರ್‌ಸಿಬಿ vs ರಾಜಸ್ಥಾನ ರಾಯಲ್ಸ್ (ಬೆಂಗಳೂರು)
10. ಏಪ್ರಿಲ್ 27, ಭಾನುವಾರ ಸಂಜೆ - 7:30: ಆರ್‌ಸಿಬಿ vs ಡೆಲ್ಲಿ ಕ್ಯಾಪಿಟಲ್ಸ್ (ದೆಹಲಿ)
11. ಮೇ 3, ಶನಿವಾರ ಸಂಜೆ - 7:30: ಆರ್‌ಸಿಬಿ vs ಚೆನ್ನೈ ಸೂಪರ್ ಕಿಂಗ್ಸ್ (ಬೆಂಗಳೂರು)
12. ಮೇ 9, ಶುಕ್ರವಾರ ಸಂಜೆ - 7:30: ಆರ್‌ಸಿಬಿ vs ಲಕ್ನೋ ಸೂಪರ್ ಜೈಂಟ್ಸ್ (ಲಕ್ನೋ)
13. ಮೇ 13, ಮಂಗಳವಾರ ಸಂಜೆ - 7:30: ಆರ್‌ಸಿಬಿ vs ಸನ್‌ರೈಸರ್ಸ್ ಹೈದರಾಬಾದ್ (ಬೆಂಗಳೂರು)
14. ಮೇ 17, ಶನಿವಾರ ಸಂಜೆ - 7:30: ಆರ್‌ಸಿಬಿ vs ಕೋಲ್ಕತ್ತಾ ನೈಟ್ ರೈಡರ್ಸ್ (ಬೆಂಗಳೂರು)
ಆರ್‌ಸಿಬಿ ಸಂಪೂರ್ಣ ತಂಡ
ಬ್ಯಾಟ್ಸ್‌ಮನ್: ವಿರಾಟ್ ಕೊಹ್ಲಿ, ರಜತ್ ಪಾಟೀದಾರ್, ದೇವದತ್ ಪಡಿಕ್ಕಲ್, ಸ್ವಸ್ತಿಕ್ ಚಿಕಾರಾ, ಅಭಿನಂದನ್ ಸಿಂಗ್
ವಿಕೆಟ್‌ಕೀಪರ್: ಫಿಲ್ ಸಾಲ್ಟ್, ಜಿತೇಶ್ ಶರ್ಮಾ
ಆಲ್ ರೌಂಡರ್: ಲಿಯಾಮ್ ಲಿವಿಂಗ್‌ಸ್ಟೋನ್, ಕೃನಾಲ್ ಪಾಂಡ್ಯ, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ಮನೋಜ್ ಭಾಂಡಗೆ, ಜಾಕೋಬ್ ಬೆಥೆಲ್, ಸ್ವಪ್ನಿಲ್ ಸಿಂಗ್
ಬೌಲರ್: ಯಶ್ ದಯಾಳ್, ಜೋಶ್ ಹೇಜಲ್‌ವುಡ್, ರಸಿಖ್ ದಾರ್, ಸುಯಶ್ ಶರ್ಮಾ, ಭುವನೇಶ್ವರ್ ಕುಮಾರ್, ಲುಂಗಿ ಎನ್‌ಗಿಡಿ, ನುವಾನ್ ತುಷಾರ, ಮೋಹಿತ್ ರಾಠಿ.
