ಆರ್‌ಸಿಬಿ ಐಪಿಎಲ್ 2025 ವೇಳಾಪಟ್ಟಿ: ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಮ್ಯಾಚ್‌ಗಳ ದಿನಾಂಕ, ಸ್ಥಳ ಮತ್ತು ಇತರೆ ವಿವರ
ಕನ್ನಡ ಸುದ್ದಿ  /  ಕ್ರಿಕೆಟ್  /  ಆರ್‌ಸಿಬಿ ಐಪಿಎಲ್ 2025 ವೇಳಾಪಟ್ಟಿ: ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಮ್ಯಾಚ್‌ಗಳ ದಿನಾಂಕ, ಸ್ಥಳ ಮತ್ತು ಇತರೆ ವಿವರ

ಆರ್‌ಸಿಬಿ ಐಪಿಎಲ್ 2025 ವೇಳಾಪಟ್ಟಿ: ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಮ್ಯಾಚ್‌ಗಳ ದಿನಾಂಕ, ಸ್ಥಳ ಮತ್ತು ಇತರೆ ವಿವರ

RCB IPL 2025 Schedule: ಐಪಿಎಲ್ 2025ರ ವೇಳಾಪಟ್ಟಿ ಪ್ರಕಟವಾಗಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಂದ್ಯಗಳು ಯಾವಾಗ ಎಂಬ ಕುತೂಹಲ ಸಹಜ. ಆರ್‌ಸಿಬಿ ಐಪಿಎಲ್ 2025 ವೇಳಾಪಟ್ಟಿಯ ವಿವರ ಇಲ್ಲಿದ್ದು, ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಮ್ಯಾಚ್‌ಗಳ ದಿನಾಂಕ, ಸ್ಥಳ ಮತ್ತು ಇತರೆ ವಿವರ ಇಲ್ಲಿದೆ.

ಆರ್‌ಸಿಬಿ ಐಪಿಎಲ್ 2025 ವೇಳಾಪಟ್ಟಿ ಪ್ರಕಟವಾಗಿದ್ದು, ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಮ್ಯಾಚ್‌ಗಳ ದಿನಾಂಕ, ಸ್ಥಳ ಮತ್ತು ಇತರೆ ವಿವರ
ಆರ್‌ಸಿಬಿ ಐಪಿಎಲ್ 2025 ವೇಳಾಪಟ್ಟಿ ಪ್ರಕಟವಾಗಿದ್ದು, ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಮ್ಯಾಚ್‌ಗಳ ದಿನಾಂಕ, ಸ್ಥಳ ಮತ್ತು ಇತರೆ ವಿವರ

RCB IPL 2025 Schedule: ಐಪಿಎಲ್ 2025ರ ವೇಳಾಪಟ್ಟಿ ಪ್ರಕಟವಾದ ಕೂಡಲೇ ಮೊದಲು ನೋಡುವುದು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಪಂದ್ಯಗಳು ಯಾವಾಗ ಎಲ್ಲಿ ಎಂಬಿತ್ಯಾದಿ ಮಾಹಿತಿ. ಈ ಬಾರಿ ಐಪಿಎಲ್ 2025ರ ಸೀಸನ್ ಶುರುವಾಗುವುದೇ ಆರ್‌ಸಿಪಿ ಪಂದ್ಯದೊಂದಿಗೆ ಎಂಬುದು ಆರ್‌ಸಿಬಿ ಫ್ಯಾನ್‌ಗಳಿಗೆ ಖುಷಿ ಕೊಡುವ ವಿಚಾರ. ಹೌದು, ಮೊದಲ ಪಂದ್ಯ ಮಾರ್ಚ್‌ 22ಕ್ಕೆ ನಡೆಯಲಿದ್ದು, ಹಾಲಿ ಚಾಂಪಿಯನ್‌ ಕೋಲ್ಕತ್ತ ನೈಟ್‌ ರೈಡರ್ಸ್‌ (ಕೆಕೆಆರ್‌) ತಂಡವನ್ನು ಆರ್‌ಸಿಬಿ ಎದುರಿಸಲಿದೆ. ಕೋಲ್ಕತದ ಈಡನ್‌ ಗಾರ್ಡನ್‌ ಮೈದಾನದಲ್ಲಿ ಈ ಮ್ಯಾಚ್ ನಡೆಯಲಿದೆ.

ಐಪಿಎಲ್ ವೇಳಾಪಟ್ಟಿ 2025- ಆರ್‌ಸಿಬಿ ಐಪಿಎಲ್ ವೇಳಾಪಟ್ಟಿ ಹೀಗಿದೆ

ಬಿಸಿಸಿಐ ಘೋಷಿಸಿದ ಪ್ರಕಾರ, ರಾಯಲ್ ಚಾಲೆಂಜರ್ಸ್ (ಆರ್‌ಸಿಬಿ) ತಂಡವು ಮಾರ್ಚ್ 22 ರಂದು ಸೀಸನ್‌ನ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತ ನೈಟ್ ರೈಡರ್ಸ್‌ ತಂಡವನ್ನು ಕೋಲ್ಕತ್ತದ ಈಡೆನ್ ಗಾರ್ಡನ್ಸ್‌ನಲ್ಲಿ ಎದುರಿಸಲಿದೆ.

ಕೆಕೆಆರ್ vs ಆರ್‌ಸಿಬಿ - ಮಾರ್ಚ್ 22 ರಂದು ರಾತ್ರಿ 7.30ಕ್ಕೆ (ಕೋಲ್ಕತ್ತ)

ಸಿಎಸ್‌ಕೆ vs ಆರ್‌ಸಿಬಿ - ಮಾರ್ಚ್ 28 ರಂದು ರಾತ್ರಿ 7.30ಕ್ಕೆ (ಚೆನ್ನೈ)

ಆರ್‌ಸಿಬಿ vs ಜಿಟಿ (ಗುಜರಾತ್‌ ಟೈಟನ್ಸ್‌) - ಏಪ್ರಿಲ್ 2 ರಂದು ರಾತ್ರಿ 7.30ಕ್ಕೆ (ಬೆಂಗಳೂರು)

ಮುಂಬಯಿ ಇಂಡಿಯನ್ಸ್ vs ಆರ್‌ಸಿಬಿ- ಏಪ್ರಿಲ್ 7 ರಂದು ರಾತ್ರಿ 7.30ಕ್ಕೆ (ಮುಂಬಯಿ)

ಆರ್‌ಸಿಬಿ vs ಡಿಸಿ - ಏಪ್ರಿಲ್ 10 ರಂದು ರಾತ್ರಿ 7.30ಕ್ಕೆ (ಬೆಂಗಳೂರು)

ಆರ್‌ಆರ್‌ vs ಆರ್‌ಸಿಬಿ - ಏಪ್ರಿಲ್ 13 ರಂದು ಮಧ್ಯಾಹ್ನ ನಂತರ 3.30ಕ್ಕೆ (ಜೈಪುರ)

ಆರ್‌ಸಿಬಿ vs ಪಿಬಿಕೆಎಸ್‌ - ಏಪ್ರಿಲ್ 18 ರಂದು ರಾತ್ರಿ 7.30ಕ್ಕೆ (ಬೆಂಗಳೂರು)

ಪಿಬಿಕೆಎಸ್‌ vs ಆರ್‌ಸಿಬಿ ಏಪ್ರಿಲ್ 20 ರಂದು ಮಧ್ಯಾಹ್ನ ನಂತರ 3.30ಕ್ಕೆ (ಮುಲ್ಲಾನ್‌ಪುರ)

ಆರ್‌ಸಿಬಿ vs ಆರ್‌ಆರ್‌ - ಏಪ್ರಿಲ್ 24 ರಂದು ರಾತ್ರಿ 7.30ಕ್ಕೆ (ಬೆಂಗಳೂರು)

ಡಿಸಿ vs ಆರ್‌ಸಿಬಿ - ಏಪ್ರಿಲ್ 27 ರಂದು ರಾತ್ರಿ 7.30ಕ್ಕೆ (ದೆಹಲಿ)

ಆರ್‌ಸಿಬಿ vs ಸಿಎಸ್‌ಕೆ - ಮೇ 3 ರಂದು ರಾತ್ರಿ 7.30ಕ್ಕೆ ( ಬೆಂಗಳೂರು)

ಎಲ್‌ಎಸ್‌ಜಿ vs ಆರ್‌ಸಿಬಿ - ಮೇ 9 ರಂದು ರಾತ್ರಿ 7.30ಕ್ಕೆ (ಲಖನೌ)

ಆರ್‌ಸಿಬಿ vs ಎಸ್‌ಆರ್‌ಎಚ್‌ - ಮೇ 13 ರಂದು ರಾತ್ರಿ 7.30 ಕ್ಕೆ (ಬೆಂಗಳೂರು)

ಆರ್‌ಸಿಬಿ vs ಕೆಕೆಆರ್‌ - ಮೇ 17 ರಂದು ರಾತ್ರಿ 7.30ಕ್ಕೆ (ಬೆಂಗಳೂರು)

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
Whats_app_banner