ಕನ್ನಡ ಸುದ್ದಿ  /  ಕ್ರಿಕೆಟ್  /  Rcb Playoff: ಆರ್​ಸಿಬಿ ಪ್ಲೇಆಫ್​ಗೆ ಅರ್ಹತೆ ಪಡೆಯಲು ಉಳಿದ 9 ಪಂದ್ಯಗಳಲ್ಲಿ ಎಷ್ಟು ಗೆಲ್ಲಬೇಕು? ಹೆಜ್ಜೆ ಹೆಜ್ಜೆಗೂ ಸವಾಲು

RCB Playoff: ಆರ್​ಸಿಬಿ ಪ್ಲೇಆಫ್​ಗೆ ಅರ್ಹತೆ ಪಡೆಯಲು ಉಳಿದ 9 ಪಂದ್ಯಗಳಲ್ಲಿ ಎಷ್ಟು ಗೆಲ್ಲಬೇಕು? ಹೆಜ್ಜೆ ಹೆಜ್ಜೆಗೂ ಸವಾಲು

RCB Playoffs qualification scenario: ಪ್ರಸಕ್ತ ಆವೃತ್ತಿಯ ಐಪಿಎಲ್​ನಲ್ಲಿ ಆಡಿರುವ ಐದು ಪಂದ್ಯಗಳಲ್ಲಿ 4ರಲ್ಲಿ ಸೋತಿರುವ ಆರ್​ಸಿಬಿ, ಪ್ಲೇಆಫ್​ಗೆ ಅರ್ಹತೆ ಪಡೆಯಬೇಕೆಂದರೆ ಉಳಿದ 9 ಪಂದ್ಯಗಳಲ್ಲಿ ಎಷ್ಟು ಗೆಲ್ಲಬೇಕು? ಇಲ್ಲಿದೆ ವಿವರ.

ಆರ್​ಸಿಬಿ ಪ್ಲೇಆಫ್​ಗೆ ಅರ್ಹತೆ ಪಡೆಯಲು ಉಳಿದ 9 ಪಂದ್ಯಗಳಲ್ಲಿ ಎಷ್ಟು ಗೆಲ್ಲಬೇಕು
ಆರ್​ಸಿಬಿ ಪ್ಲೇಆಫ್​ಗೆ ಅರ್ಹತೆ ಪಡೆಯಲು ಉಳಿದ 9 ಪಂದ್ಯಗಳಲ್ಲಿ ಎಷ್ಟು ಗೆಲ್ಲಬೇಕು

17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್​ ಲೀಗ್​ನಲ್ಲಿ ರಾಯಲ್​ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳಿಗೆ ನಿರಾಸೆ ಮೂಡಿಸುತ್ತಿದೆ. ಸತತ ಸೋಲುಗಳೊಂದಿಗೆ ಮುಖಭಂಗಕ್ಕೆ ಒಳಗಾಗಿದೆ. ಈಗಾಗಲೇ ಆಡಿದ 5 ಪಂದ್ಯಗಳಲ್ಲಿ 4ರಲ್ಲಿ ಮುಗ್ಗರಿಸಿದ್ದು, 9 ಪಂದ್ಯಗಳು ಮಾತ್ರ ಉಳಿದಿವೆ. ರಾಜಸ್ಥಾನ್ ರಾಯಲ್ಸ್ ವಿರುದ್ಧ 6 ವಿಕೆಟ್​ಗಳ ಅಂತರದಿಂದ ಪರಾಭವಗೊಂಡ ಬಳಿಕ ಆರ್​​ಸಿಬಿ ಪ್ಲೇಆಫ್​​ ಲೆಕ್ಕಾಚಾರ ಶುರುವಾಗಿದೆ. ಹಾಗಿದ್ದರೆ ಪ್ಲೇಆಫ್ ಪ್ರವೇಶಿಸಲು ಆರ್​ಸಿಬಿ ಎಷ್ಟು ಪಂದ್ಯ ಗೆಲ್ಲಬೇಕಿದೆ?

ಟ್ರೆಂಡಿಂಗ್​ ಸುದ್ದಿ

ಮಾರ್ಚ್​ 22ರಿಂದ ಐಪಿಎಲ್ ಆರಂಭಗೊಂಡಿದ್ದು, ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲಿನೊಂದಿಗೆ ಅಭಿಯಾನ ಆರಂಭಿಸಿದ ಆರ್​ಸಿಬಿ, ತನ್ನ 2ನೇ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್​ ವಿರುದ್ಧ ಗೆದ್ದು ಲಯಕ್ಕೆ ಮರಳಿತು. ಆದರೆ ಅದೇ ಲಯ ಮುಂದುವರೆಸಲು ಬೆಂಗಳೂರು ತಂಡ ವಿಫಲವಾಗಿದೆ. ಕೋಲ್ಕತ್ತಾ ನೈಟ್​ ರೈಡರ್ಸ್, ಲಕ್ನೋ ಸೂಪರ್ ಜೈಂಟ್ಸ್ ಮತ್ತು ಆರ್​​ಆರ್ ವಿರುದ್ಧ ಸತತ ಸೋಲು ಕಂಡಿದೆ. ಈಗ ತನ್ನ 6ನೇ ಪಂದ್ಯದಲ್ಲಿ ಏಪ್ರಿಲ್ 11ರಂದು ಮುಂಬೈ ಇಂಡಿಯನ್ಸ್ ಕದನಕ್ಕೆ ಸಜ್ಜಾಗುತ್ತಿದೆ.

ಅಂಕಪಟ್ಟಿಯಲ್ಲಿ ಯಾವ ತಂಡಕ್ಕೆ ಯಾವ ಸ್ಥಾನ?

5 ಪಂದ್ಯಗಳಲ್ಲಿ ನಾಲ್ಕರಲ್ಲಿ ಸೋತಿರುವ ಆರ್​ಸಿಬಿ, 1 ಗೆಲುವಿನಿಂದ ಕೇವಲ 2 ಅಂಕ ಸಂಪಾದಿಸಿ 8ನೇ ಸ್ಥಾನದಲ್ಲಿದೆ. ನೆಟ್ ​ರನ್​ ರೇಟ್​ -0.843. ರಾಜಸ್ಥಾನ್ ರಾಯಲ್ಸ್ 8 ಅಂಕ ಪಡೆದು ಸಂಪಾದಿಸಿ ಮೊದಲ ಸ್ಥಾನ ಪಡೆದಿದೆ. ಕೋಲ್ಕತ್ತಾ ನೈಟ್ ರೈಡರ್ಸ್​ 6 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ. ಚೆನ್ನೈ, ಲಕ್ನೋ, ಸನ್​ರೈಸರ್ಸ್, ಪಂಜಾಬ್, ಗುಜರಾತ್ ತಂಡಗಳು ತಲಾ 2 ಪಂದ್ಯ ಗೆದ್ದು, ತಲಾ 4 ಅಂಕ ಪಡೆದಿವೆ. ಡೆಲ್ಲಿ ಮತ್ತು ಆರ್​​ಸಿಬಿ 1 ಪಂದ್ಯ ಜಯಿಸಿ 2 ಅಂಕ ಪಡೆದಿವೆ. ಮುಂಬೈ ಇನ್ನೂ ಖಾತೆ ತೆರೆದಿಲ್ಲ.

ಆರ್​ಸಿಬಿ ಪ್ಲೇಆಫ್​ ಪ್ರವೇಶಿಸಲು ಎಷ್ಟು ಪಂದ್ಯ ಗೆಲ್ಲಬೇಕು?

ಪ್ರಸ್ತುತ 5ರಲ್ಲಿ ಕಣಕ್ಕಿಳಿದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇನ್ನೂ 9 ಪಂದ್ಯಗಳನ್ನು ಆಡಬೇಕಿದೆ. ಈಗಾಗಲೇ ಒಂದು ಪಂದ್ಯದಲ್ಲಿ ಗೆಲುವಿನ ನಗೆ ಬೀರಿರುವ ಆರ್​ಸಿಬಿ, ಪ್ಲೇಆಫ್ ಪ್ರವೇಶಿಸಲು ಕನಿಷ್ಠ ಏಳು ಪಂದ್ಯಗಳಲ್ಲಿ ಗೆಲುವು ಸಾಧಿಸುವುದು ಅನಿವಾರ್ಯ. ಏಕೆಂದರೆ, ಯಾವುದೇ ತಂಡ ಪ್ಲೇಆಫ್​ಗೇರಲು ಒಟ್ಟು 16 ಅಂಕ ಗಳಿಸಬೇಕು. ಅಂದರೆ 8 ಪಂದ್ಯಗಳಲ್ಲಿ ಜಯಿಸಬೇಕು. ಈ ಲೆಕ್ಕಾಚಾರ ಹಾಕಿದರೆ, ಆರ್​​ಸಿಬಿ ಇನ್ನೂ 7ರಲ್ಲಿ ಗೆಲ್ಲಬೇಕು. ಕೇವಲ ಗೆಲ್ಲುವುದಲ್ಲ, ಅದರ ಜೊತೆಗೆ ಭರ್ಜರಿ ನೆಟ್ ​​ರನ್​ ರೇಟ್​ ಅನ್ನೂ ಕಾಯ್ದುಕೊಳ್ಳಬೇಕಿದೆ.

ಆದರೆ ಆರ್​ಸಿಬಿ ಕೇವಲ 8ರಲ್ಲಿ ಗೆದ್ದರೆ ಸಾಲದು. ಉಳಿದ 9ರಲ್ಲಿ ಎಲ್ಲಾ ಪಂದ್ಯಗಳನ್ನು ಗೆದ್ದರಷ್ಟೇ ಯಾವುದೇ ಸಮಸ್ಯೆ ಇಲ್ಲದೆ, ನೇರವಾಗಿ ಪ್ಲೇ ಆಫ್​ಗೆ ಎಂಟ್ರಿಕೊಡಲಿದೆ. ಆಗ 10 ಗೆಲುವು ಸಾಧಿಸಿದಂತಾಗುತ್ತದೆ. ಇದು ಸಾಧ್ಯವಾಗಲಿಲ್ಲವೆಂದರೂ 9ರ ಪೈಕಿ 8 ರಲ್ಲಾದರೂ ಗೆಲ್ಲಲೇಬೇಕು. ಆಗ 9 ಜಯದೊಂದಿ 18 ಅಂಕ ಪಡೆಯಲಿದೆ. ಪ್ರಸ್ತುತ ಎಲ್ಲಾ ತಂಡಗಳಿಂದ ಉತ್ತಮ ಪ್ರದರ್ಶನ ಹೊರ ಬರುತ್ತಿದ್ದು, ಪಂದ್ಯ ಪಂದ್ಯಕ್ಕೂ ಅನೇಕ ಸವಾಲುಗಳನ್ನು ಮೆಟ್ಟಿನಿಲ್ಲಬೇಕಿದೆ. ಹೆಜ್ಜೆ ಹೆಜ್ಜೆಗೂ ಸವಾಲುಗಳಿವೆ.

ಆಟಗಾರರು ಫಾರ್ಮ್​ಗೆ ಬಂದರೆ ಗೆಲುವು ದೊಡದೇನಲ್ಲ

ತಂಡದಲ್ಲಿ ವಿರಾಟ್ ಕೊಹ್ಲಿ ಮಾತ್ರ ಅಬ್ಬರಿಸುತ್ತಿದ್ದಾರೆ. 1 ಶತಕ, 2 ಅರ್ಧಶತಕ ಸಹಿತ ಟೂರ್ನಿಯಲ್ಲಿ 316 ರನ್ ಗಳಿಸಿದ್ದಾರೆ. ಕೊಹ್ಲಿ ಹೊರತುಪಡಿಸಿ ಉಳಿದವರು ರನ್ ಗಳಿಸಲು ಪರದಾಡುತ್ತಿದ್ದಾರೆ. ನಾಯಕ ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್​ವೆಲ್, ರಜತ್ ಪಾಟೀದಾರ್, ಕ್ಯಾಮರೂನ್ ಗ್ರೀನ್ ಬ್ಯಾಟಿಂಗ್​ನಲ್ಲಿ ವಿಫಲರಾಗುತ್ತಿದ್ದಾರೆ. ಬೌಲಿಂಗ್​ನಲ್ಲಿ ಯಾರಿಂದಲೂ ಇಂಪ್ಯಾಕ್ಟ್​ಫುಲ್ ಇನ್ನಿಂಗ್ಸ್​ ಇದುವರೆಗೂ ಬಂದೇ ಇಲ್ಲ. ಮುಂದಿನ ಪಂದ್ಯಗಳಲ್ಲಿ ತಂಡದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರೆ, ಗೆಲುವಿನ ಟ್ರ್ಯಾಕ್​ಗೆ ಮರಳುವುದು ಖಚಿತ.

ಆರ್​ಸಿಬಿ ಉಳಿದ 9 ಪಂದ್ಯಗಳ ವೇಳಾಪಟ್ಟಿ

ಮುಂಬೈ ಇಂಡಿಯನ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು - ಏಪ್ರಿಲ್ 11 ಮುಂಬೈ, ಸಂಜೆ 7:30ಕ್ಕೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಸನ್​ರೈಸರ್ಸ್​ ಹೈದರಾಬಾದ್ - ಏಪ್ರಿಲ್ 15, ಬೆಂಗಳೂರು, ಸಂಜೆ 7:30ಕ್ಕೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಕೋಲ್ಕತ್ತಾ ನೈಟ್​ ರೈಡರ್ಸ್ - ಏಪ್ರಿಲ್ 21, ಕೋಲ್ಕತ್ತಾ, ಮಧ್ಯಾಹ್ನ 3:30ಕ್ಕೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಸನ್​ರೈಸರ್ಸ್​ ಹೈದರಾಬಾದ್ - ಏಪ್ರಿಲ್ 25, ಹೈದರಾಬಾದ್, ಸಂಜೆ 7:30ಕ್ಕೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಗುಜರಾತ್ ಟೈಟಾನ್ಸ್ - ಏಪ್ರಿಲ್ 28, ಗುಜರಾತ್, ಮಧ್ಯಾಹ್ನ 3:30ಕ್ಕೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಗುಜರಾತ್ ಟೈಟಾನ್ಸ್ - ಮೇ 04, ಬೆಂಗಳೂರು, ಮಧ್ಯಾಹ್ನ, ಸಂಜೆ 7:30ಕ್ಕೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಪಂಜಾಬ್ ಕಿಂಗ್ಸ್ - ಮೇ 09, ಧರ್ಮಶಾಲಾ, ಸಂಜೆ 7:30ಕ್ಕೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಡೆಲ್ಲಿ ಕ್ಯಾಪಿಟಲ್ಸ್ - ಮೇ 12, ಬೆಂಗಳೂರು, ಸಂಜೆ 7:30ಕ್ಕೆ

ಚೆನ್ನೈ ಸೂಪರ್ ಕಿಂಗ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು - ಮೇ 18, ಬೆಂಗಳೂರು, ಸಂಜೆ 7:30ಕ್ಕೆ

ಕ್ರ.ಸಂತಂಡಪಂದ್ಯಗೆಲುವುಸೋಲುಅಂಕNRR
1ರಾಜಸ್ಥಾನ್ ರಾಯಲ್ಸ್4408+1.120
2ಕೋಲ್ಕತ್ತಾ ನೈಟ್ ರೈಡರ್ಸ್3306+2.518
3ಚೆನ್ನೈ ಸೂಪರ್ ಕಿಂಗ್ಸ್4214+0.517
4ಲಕ್ನೋ ಸೂಪರ್ ಜೈಂಟ್ಸ್3214+0.483
5ಸನ್​ರೈಸರ್ಸ್ ಹೈದರಾಬಾದ್4224+0.409
6ಪಂಜಾಬ್ ಕಿಂಗ್ಸ್4224-0.220
7ಗುಜರಾತ್ ಟೈಟಾನ್ಸ್4224-0.580
8ರಾಯಲ್ ಚಾಲೆಂಜರ್ಸ್ ಬೆಂಗಳೂರು5142-0.843
9ಡೆಲ್ಲಿ ಕ್ಯಾಪಿಟಲ್ಸ್4132-1.347
10ಮುಂಬೈ ಇಂಡಿಯನ್ಸ್3030-1.423

IPL_Entry_Point