ಫಿಟ್ ಆಗಿರಲು ವಿರಾಟ್ ಕೊಹ್ಲಿ ಕುಡೀತಾರೆ ಆರೋಗ್ಯಕರ ನೀರು; ವಿದೇಶದಿಂದ ತರಿಸುವ ಬಾಟಲ್ ನೀರು ಬಲು ದುಬಾರಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಫಿಟ್ ಆಗಿರಲು ವಿರಾಟ್ ಕೊಹ್ಲಿ ಕುಡೀತಾರೆ ಆರೋಗ್ಯಕರ ನೀರು; ವಿದೇಶದಿಂದ ತರಿಸುವ ಬಾಟಲ್ ನೀರು ಬಲು ದುಬಾರಿ

ಫಿಟ್ ಆಗಿರಲು ವಿರಾಟ್ ಕೊಹ್ಲಿ ಕುಡೀತಾರೆ ಆರೋಗ್ಯಕರ ನೀರು; ವಿದೇಶದಿಂದ ತರಿಸುವ ಬಾಟಲ್ ನೀರು ಬಲು ದುಬಾರಿ

ಆರ್‌ಸಿಬಿ ತಂಡದ ಸ್ಟಾರ್‌ ಆಟಗಾರ ವಿರಾಟ್‌ ಕೊಹ್ಲಿ ಫಿಟ್‌ನೆಸ್‌ ಬಗ್ಗೆ ತಿಳಿದುಕೊಳ್ಳಲು ಜನರಿಗೆ ಭಾರಿ ಆಸಕ್ತಿ ಇರುತ್ತದೆ. ಅವರು ಕುಡಿಯುವ ನೀರಿನಿಂದ ಹಿಡಿದು, ಅವರ ಆಹಾರಕ್ರಮದ ಬಗ್ಗೆಯೂ ಜನರಿಗೆ ಆಸಕ್ತಿ ಹೆಚ್ಚು. ವಿರಾಟ್‌ ಕೊಹ್ಲಿ ಕುಡಿಯುವ ನೀರಿನ ಬಗ್ಗೆ ಮಾಹಿತಿ ಇಲ್ಲಿದೆ.

ವಿರಾಟ್ ಕೊಹ್ಲಿ ಕುಡೀತಾರೆ ಆರೋಗ್ಯಕರ ನೀರು; ವಿದೇಶದಿಂದ ತರಿಸುವ ಬಾಟಲ್ ನೀರು ಬಲು ದುಬಾರಿ
ವಿರಾಟ್ ಕೊಹ್ಲಿ ಕುಡೀತಾರೆ ಆರೋಗ್ಯಕರ ನೀರು; ವಿದೇಶದಿಂದ ತರಿಸುವ ಬಾಟಲ್ ನೀರು ಬಲು ದುಬಾರಿ (Insta, Pexel)

ಜಾಗತಿಕ ಕ್ರಿಕೆಟ್‌ನಲ್ಲಿ ಅತ್ಯಂತ ಜನಪ್ರಿಯ ಹಾಗೂ ಪ್ರತಿಭಾವಂತ ಕ್ರಿಕೆಟಿಗ ವಿರಾಟ್‌ ಕೊಹ್ಲಿ ಎನ್ನುವರದಲ್ಲಿ ಯಾವುದೇ ಸಂಶಯವಿಲ್ಲ. ಇದೇ ವೇಳೆ ಅವರು ಅತ್ಯಂತ ಫಿಟ್‌ ಆಟಗಾರನೂ ಹೌದು. ಮೈದಾನದಲ್ಲಿ ಪಾದರಸದಂತೆ ಓಡಾಡುವ ವಿರಾಟ್‌, ತಮ್ಮ ಫಿಟ್‌ನೆಸ್‌ ಹಾಗೂ ಆರೋಗ್ಯದ ಬಗ್ಗೆ ಅಪಾರ ಕಾಳಜಿ ವಹಿಸುತ್ತಾರೆ. ಸೀಮಿತ ಆಹಾರ ಮಾತ್ರವಲ್ಲದೆ, ಮಾಂಸಾಹಾರವನ್ನು ಸಂಪೂರ್ಣವಾಗಿ ಬಿಟ್ಟಿದ್ದಾರೆ. ಆರೋಗ್ಯದ ಬಗ್ಗೆ ಅಪಾರ ಕಾಳಜಿ ಇರುವ ಕಾರಣದಿಂದ ನೀರು ಕುಡಿಯುವಲ್ಲೂ ತುಂಬಾ ಜಾಗರೂಕರಾಗಿರುತ್ತಾರೆ. ಒಂದೇ ಬ್ರಾಂಡ್‌ನ ಆರೋಗ್ಯಕರ ನೀರನ್ನು ಕುರಿಯುತ್ತಾರೆ ಎಂದು ವಿವಿಧ ಮಾಧ್ಯಮ ವರದಿಗಳು ತಿಳಿಸಿವೆ.

ವಿರಾಟ್ ಕೊಹ್ಲಿ ಜೊತೆಗೆ ಅವರ ಪತ್ನಿ ಅನುಷ್ಕಾ ಶರ್ಮಾ ಕೂಡಾ ಫಿಟ್ನೆಸ್ ವಿಷಯದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ನಿತ್ಯ ವ್ಯಾಯಾಮದಿಂದ ಹಿಡಿದು, ಆಹಾರ ಸೇವನೆ, ಜಿಮ್‌ ಹಾಗೂ ನಿದ್ರೆಯ ವಿಷಯದಲ್ಲೂ ಎಚ್ಚರಿಕೆಯಿಂದಿರುತ್ತಾರೆ. ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವಲ್ಲಿ ನಿರ್ದಿಷ್ಟ ಶೈಲಿ ಅನುಸರಿಸುತ್ತಾರೆ.

ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕನ ಆರೋಗ್ಯ ವಿಷಯ ಹಾಗೂ ಅವರ ಫಿಟ್‌ನೆಸ್‌ ಬಗ್ಗೆ ಜನರಿಗೂ ಹೆಚ್ಚು ಆಸಕ್ತಿ ಇರುತ್ತದೆ. ಅವರು ಕುಡಿಯುವ ನೀರಿನಿಂದ ಹಿಡಿದು, ಅವರ ಆಹಾರಕ್ರಮದ ಬಗ್ಗೆಯೂ ಜನರಿಗೆ ಆಸಕ್ತಿ ಹೆಚ್ಚು. ವಿರಾಟ್‌ ಕುಡಿಯುವ ನೀರಿನ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲೂ ಆಗಾಗ ಚರ್ಚೆ ನಡೆಯುತ್ತದೆ. ಅದರ ಬೆಲೆಯ ಬಗ್ಗೆಯೂ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತವೆ.

ಆರೋಗ್ಯದ ಬಗ್ಗೆ ತುಂಬಾ ಕಾಳಜಿ ವಹಿಸುವ ವಿರಾಟ್‌, ತಾವು ಕುಡಿಯುವ ನೀರಿನ ವಿಷಯದಲ್ಲೂ ತುಂಬಾ ನಿರ್ದಿಷ್ಟವಾಗಿದ್ದಾರೆ. ಒಂದೇ ಬ್ರಾಂಡ್‌ನ ನೀರನ್ನು ಮಾತ್ರ ಕುಡಿಯುತ್ತಾರೆ. ವಿರಾಟ್ ಮತ್ತು ಅನುಷ್ಕಾ ಇಬ್ಬರೂ ಕುಡಿಯುವ ನೀರು ಭಾರತದಲ್ಲಿ ನೇರವಾಗಿ ಸಿಗುವುದಿಲ್ಲ. ಹೀಗಾಗಿ ಅದನ್ನು ಆಮದು ಮೂಲಕ ತರಿಸುತ್ತಾರೆ. ಜನಸಾಮಾನ್ಯರು ಕುಡಿಯುವ ನೀರಿಗಿಂತ ಈ ನೀರು ದುಬಾರಿಯಾಗಿದೆ.

ವಿರಾಟ್‌ ಕುಡಿಯುವ ನೀರು ಎಲ್ಲಿದ್ದು?

ವಿವಿಧ ಮಾಧ್ಯಮ ವರದಿಗಳ ಪ್ರಕಾರ, ವಿರಾಟ್ ಕೊಹ್ಲಿ ಪ್ರಸಿದ್ಧ ಎವಿಯನ್ ನ್ಯಾಚುರಲ್ ಸ್ಪ್ರಿಂಗ್ ನೀರನ್ನು ಕುಡಿಯುತ್ತಾರೆ. ಈ ನೀರು ಫ್ರಾನ್ಸ್‌ನ ಏವಿಯನ್-ಲೆಸ್-ಬೇನ್ಸ್‌ನದ್ದು ಎಂದು ವರದಿಗಳು ಹೇಳುತ್ತವೆ. ಇದರಲ್ಲಿ ಯಾವುದೇ ರಾಸಾಯನಿಕಗಳಿಲ್ಲ. ಹೀಗಾಗಿ ಇದು ಶುದ್ಧ ನೀರು ಎಂದು ತಿಳಿದುಬಂದಿದೆ.

ಈ ಬಾಟಲ್ ನೀರು ಭಾರತದಲ್ಲೂ ಲಭ್ಯವಿದೆ. ಆದರೆ, ಇದು ಭಾರತ ಮೂಲದ ನೀರಲ್ಲ. ಆನ್‌ಲೈನ್‌ ಮೂಲಕ ಈ ನೀರು ತರಿಸಿಕೊಳ್ಳಬಹುದು. ಆದರೆ, ವಿರಾಟ್‌ ಕುಡಿಯುವ ನೀರನ್ನು ವಿಶೇಷವಾಗಿ ಫ್ರಾನ್ಸ್‌ನಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಜಿನೀವಾ ಸರೋವರದ ದಕ್ಷಿಣ ತೀರದಲ್ಲಿರುವ ಏವಿಯನ್-ಲೆಸ್-ಬೇನ್ಸ್ ಎಂಬುದು ಒಂದು ಸ್ಥಳ. ಇದು ಪಶ್ಚಿಮ ಯುರೋಪಿನ ಅತಿದೊಡ್ಡ ಸರೋವರಗಳಲ್ಲಿ ಒಂದಾಗಿದ್ದು, ಸ್ವಿಟ್ಜರ್ಲೆಂಡ್ ಮತ್ತು ಫ್ರಾನ್ಸ್‌ನ ನಡುವೆ ಬರುತ್ತದೆ.

ನೀರಿನ ಬೆಲೆ ಇಷ್ಟು ದುಬಾರಿ

ವಿರಾಟ್‌ ಕೊಹ್ಲಿ ಕುಡಿಯುವ ಒಂದು ಲೀಟರ್ ಎವಿಯನ್ ಬಾಟಲಿಯ ನೀರಿನ ಬೆಲೆ ಸುಮಾರು 600 ರೂ. ಎಂದು ತಿಳಿದುಬಂದಿದೆ. ಕೆಲವೆಡೆ ಇದರ ಬೆಲೆ ಲೀಟರ್‌ಗೆ 4000 ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸ್ಪಷ್ಟನೆ ಇಲ್ಲ. ಇದು ಸೋಷಿಯಲ್‌ ಮೀಡಿಯಾದಲ್ಲಿ ಹಬ್ಬಿರುವ ಸುಳ್ಳು ಮಾಹಿತಿ ಎಂಬುದು ಸ್ಪಷ್ಟವಾಗುತ್ತಿದೆ. ಕೆಲವು ಆನ್‌ಲೈನ್‌ ತಾಣಗಳಲ್ಲಿ 1000 ಬೆಲೆ ಎಂದಿದೆ. 600 ರೂ.ಗಳಂತೆ ಒಬ್ಬ ವ್ಯಕ್ತಿ ದಿನಕ್ಕೆ 4 ಲೀಟರ್‌ ನೀರು ಕುಡಿದರೆ, ಒಬ್ಬರಿಗೆ 2500 ರೂ ವೆಚ್ಚವಾದಂತಾಗುತ್ತದೆ. ಹೀಗಾಗೊ ವಿರಾಟ್‌ ಅವರ ನೀರಿನ ವೆಚ್ಚವೆ ದಿನಕ್ಕೆ ಸಾವಿರಾರು ರೂ. ಆಗುತ್ತದೆ.

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.