ಕನ್ನಡ ಸುದ್ದಿ  /  Cricket  /  Rcb Unbox Event 2024 Start Delayed As Franchise Fails To Send No Live Streaming Link M Chinnaswamy Stadium Ipl 2024 Jra

ಆರ್‌ಸಿಬಿ ಅನ್‌ಬಾಕ್ಸ್:‌ ಲೈವ್‌ ಸ್ಟ್ರೀಮಿಂಗ್‌ ಲಿಂಕ್‌ ಸಿಗದೆ ಅಭಿಮಾನಿಗಳ ಆಕ್ರೋಶ; ಕಾರ್ಯಕ್ರಮ ತಡವಾಗಿ ಆರಂಭ

RCB Unbox event 2024: ಲೈವ್ ಸ್ಟ್ರೀಮಿಂಗ್ ಲಿಂಕ್ ಬರದಿದ್ದರೂ, ಬೆಂಗಳೂರಿನ ಚಿನ್ನಸ್ವಾಮಿ ಮೈದಾನ ಭರ್ತಿಯಾಗಿದೆ. ಕಾರ್ಯಕ್ರಮ ಆರಂಭಕ್ಕೂ ಮುನ್ನವೇ ಸ್ಟ್ಯಾಂಡ್‌ಗಳು ಭರ್ತಿಯಾಗಿವೆ. ಆರ್‌ಸಿಬಿ ಆಟಗಾರರು ಮೈದಾನ ಪ್ರವೇಶಿಸಿದ್ದಾರೆ. ಕಾರ್ಯಕ್ರಮ ತಡವಾಗಿ ಆರಂಭವಾಗಿದೆ.

ಆರ್‌ಸಿಬಿ ಅನ್‌ಬಾಕ್ಸ್: ಲೈವ್‌ ಸ್ಟ್ರೀಮಿಂಗ್‌ ಲಿಂಕ್‌ ಸಿಗದೆ ಅಭಿಮಾನಿಗಳ ಆಕ್ರೋಶ
ಆರ್‌ಸಿಬಿ ಅನ್‌ಬಾಕ್ಸ್: ಲೈವ್‌ ಸ್ಟ್ರೀಮಿಂಗ್‌ ಲಿಂಕ್‌ ಸಿಗದೆ ಅಭಿಮಾನಿಗಳ ಆಕ್ರೋಶ

ಅಭಿಮಾನಿಗಳು ಬಹುನಿರೀಕ್ಷೆಯಿಂದ ಕಾಯುತ್ತಿದ್ದ ಆರ್‌ಸಿಬಿ ಅನ್‌ಬಾಕ್ಸ್‌ ಈವೆಂಟ್‌ ಆರಂಭ ತಡವಾಗಿದೆ. ಕಾರ್ಯಕ್ರಮವು ಸಂಜೆ 4 ಗಂಟೆಗೆ ಆರಂಭವಾಗಬೇಕಿತ್ತು. ಆದರೆ ಲೈವ್ ಸ್ಟ್ರೀಮ್‌ ವೀಕ್ಷಣೆಗೆ 5 ಗಂಟೆಯಾದರೂ ಫ್ರ್ಯಾಂಚೈಸ್ ಲಿಂಕ್ ಹಾಕಿಲ್ಲ. ಹೀಗಾಗಿ ಆನ್‌ಲೈನ್ ಮೂಲಕ ಲೈವ್‌ ಸ್ಟ್ರೀಮಿಂಗ್‌ ವೀಕ್ಷಣೆ ಸಾಧ್ಯವಾಗಿಲ್ಲ.‌ ಇದರಿಂದ ಕಾರ್ಯಕ್ರಮ ಆರಂಭ ತಡವಾಗಿದೆ.

ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಇದರ ಲೈವ್‌ ಸ್ಟ್ರೀಮಿಂಗ್‌ ಆರ್‌ಸಿಬಿ ಮೊಬೈಲ್‌ ಅಪ್ಲಿಕೇಶನ್‌ ಮತ್ತು ವೆಬ್‌ಸೈಟ್‌ನಲ್ಲಿ ಮಾಡುವುದಾಗಿ ಫ್ರಾಂಚೈಸ್‌ ಹೇಳಿತ್ತು. ಆದರೆ, ಅದರ ಲಿಂಕ್‌ ಶೇರ್‌ ಮಾಡುವುದು ಸಾಧ್ಯವಾಗಿಲ್ಲ ಲೈವ್‌ ವೀಕ್ಷಣೆಗೆ ಸಾಧ್ಯವಾಗದ್ದಕ್ಕೆ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಲೈ ಸ್ಟ್ರೀಮ್ ವೀಕ್ಷಣೆಗೆ 99 ರೂಪಾಯಿ ಪಾವತಿಸಬೇಕಿತ್ತು. ಈ ಶುಲ್ಕ ಪಾವತಿಗೂ ವೆಬ್‌ಸೈಟ್‌ ಮತ್ತು ಆರ್‌ಸಿಬಿ ಅಪ್ಲಿಕೇಶನ್‌ಗೆ ಲಾಗಿನ್‌ ಆಗಲು ಎರರ್‌ ಬಂದಿತ್ತು. ಹಾಗೋ ಹೀಗೋ ಶುಲ್ಕ ಪಾವತಿಸಿದ ಅಭಿಮಾನಿಗಳಿಗೆ ಇಮೇಲ್‌ ಮೂಲಕ ಲಿಂಕ್‌ ಬಂದಿಲ್ಲ. ಕಾರ್ಯಕ್ರಮ ಸಮಯಕ್ಕೆ ಸರಿಯಾಗಿ ಆರಂಭವಾಗಿದೆ ಎಂದು ಭಾವಿಸಿದ ಅಭಿಮಾನಿಗಳು ಸೋಷಿಯಲ್‌ ಮೀಡಿಯಾದಲ್ಲಿ ಆಕ್ರೋಶ ಹೊರಹಾಕಿದ್ದಾರೆ.

ಅತ್ತ ಹಣ ಪಾವತಿಸಿದ ಅಭಿಮಾನಿಗಳಿಗೆ ಸಮಯಕ್ಕೆ ಸರಿಯಾಗಿ ಲಿಂಕ್‌ ಕಳುಹಿಸಲು ಸಾಧ್ಯವಾಗದೆ ಫ್ರಾಂಚೈಸ್‌ ಕೂಡಾ ಇಕ್ಕಟ್ಟಿಗೆ ಸಿಲುಕಿದೆ. ಹೀಗಾಗಿ ಕಾರ್ಯಕ್ರಮ ಆರಂಭ ಕೂಡಾ ತಡಮಾಡಿದೆ. ಐದು ಗಂಟೆಯಾದರೂ ಲಿಂಕ್‌ ಅಭಿಮಾನಿಗಳಿಗೆ ಸಿಕ್ಕಿಲ್ಲ.

ಇದನ್ನೂ ಓದಿ | ವೀಕ್ಷಕವಿವರಣೆಗೆ ಮರಳಿದ ನವಜೋತ್ ಸಿಂಗ್ ಸಿಧು; ಈ ಬಾರಿಯ ಐಪಿಎಲ್‌ನಲ್ಲಿ ಖಡಕ್‌ ಮಾತಿನ ಸಿಧು ಕಾಮೆಂಟರಿ

ಲೈವ್ ಸ್ಟ್ರೀಮಿಂಗ್ ಲಿಂಕ್ ಬರದಿದ್ದರೂ, ಚಿನ್ನಸ್ವಾಮಿ ಮೈದಾನ ಭರ್ತಿಯಾಗಿದೆ. ಕಾರ್ಯಕ್ರಮ ಆರಂಭಕ್ಕೂ ಮುನ್ನವೇ ಸ್ಟ್ಯಾಂಡ್‌ಗಳು ಭರ್ತಿಯಾಗಿವೆ. ಆರ್‌ಸಿಬಿ ಆಟಗಾರರು ಮೈದಾನ ಪ್ರವೇಶಿಸಿದ್ದಾರೆ. ಈ ನಡುವೆ ವಿರಾಟ್ ಕೊಹ್ಲಿ ಮತ್ತು ಫ್ಯಾಫ್ ಡು ಪ್ಲೆಸಿಸ್ ಮಾತನಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿವೆ. ಇವರಿಬ್ಬರು ಆರ್‌ಸಿಬಿಯ ಹೊಸ ಜೆರ್ಸಿ ಧರಿಸಿರುವಂತಿದೆ.

ಅನ್‌ಬಾಕ್ಸ್‌ ಕಾರ್ಯಕ್ರಮದಲ್ಲಿ ಫ್ರಾಂಚೈಸ್ ಹೊಸ ಜೆರ್ಸಿ ಅನಾವರಣಗೊಳಿಸಲಿದೆ. ‌ಇದೇ ವೇಳೆ, ಅಭಿಮಾನಿಗಳ ನಿರೀಕ್ಷೆಯಂತೆ ತಂಡದ ಹೆಸರು ಬದಲಾವಣೆಯಾಗಲಿದೆ. ಇಂಗ್ಲೀಷ್‌ ಪದ ಬ್ಯಾಂಗಲೂರ್‌ ಬದಲಿಗೆ ಕನ್ನಡದ ಬೆಂಗಳೂರು ಎಂಬುದಾಗಿ ಹೊಸ ಹೆಸರಿಡುವ ಸಾಧ್ಯತೆ ಇದೆ.

ಕಾರ್ಯಕ್ರಮದಲ್ಲಿ ಅಲನ್ ವಾಕರ್, ರಘು ದೀಕ್ಷಿತ್, ನೀತಿ ಮೋಹನ್ ಬ್ರೋಧಾ, ವಿ ಜೋರ್ಡಾನ್, ಬರ್ಫಿ ಕಚೇರಿ ಭಾಗವಹಿಸುತ್ತಿದ್ದಾರೆ. ಇದೇ ವೇಳೆ ಆರ್‌ಸಿಬಿ ಪುರುಷ ಹಾಗೂ ವನಿತೆಯರ ತಂಡ ಕೂಡಾ ಹಾಜರಾಗಲಿದೆ.

ಆರ್‌ಸಿಬಿ ತಂಡವು ತನ್ನ ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಮಾಡುವ ಬದಲಿಗೆ, ಯೂಟ್ಯೂಬ್‌ನಲಿ ಮುಂದುವರೆಸುವ ಸಾಧ್ಯತೆ ಇದೆ. ಕಳೆದ ಬಾರಿಯೂ ಯುಟ್ಯೂಬ್ ಚಾನೆಲ್‌ನಲ್ಲಿ ಈವೆಂಟ್ ಅನ್ನು ಸ್ಟ್ರೀಮ್ ಮಾಡಿತ್ತು.

IPL_Entry_Point