ಇದೇನು ವಿಚಿತ್ರ ಎಲ್ಲವೂ ಕಾಕತಾಳೀಯ; ಅದೇ ದಿನ, ದಿನಾಂಕ, ವಾರ, ಪಂದ್ಯ, ಮೈದಾನ; ಆರ್​ಸಿಬಿಗೆ ಸಿಗುತ್ತಾ ಆ ದಿನದ ಅದೃಷ್ಟ?
ಕನ್ನಡ ಸುದ್ದಿ  /  ಕ್ರಿಕೆಟ್  /  ಇದೇನು ವಿಚಿತ್ರ ಎಲ್ಲವೂ ಕಾಕತಾಳೀಯ; ಅದೇ ದಿನ, ದಿನಾಂಕ, ವಾರ, ಪಂದ್ಯ, ಮೈದಾನ; ಆರ್​ಸಿಬಿಗೆ ಸಿಗುತ್ತಾ ಆ ದಿನದ ಅದೃಷ್ಟ?

ಇದೇನು ವಿಚಿತ್ರ ಎಲ್ಲವೂ ಕಾಕತಾಳೀಯ; ಅದೇ ದಿನ, ದಿನಾಂಕ, ವಾರ, ಪಂದ್ಯ, ಮೈದಾನ; ಆರ್​ಸಿಬಿಗೆ ಸಿಗುತ್ತಾ ಆ ದಿನದ ಅದೃಷ್ಟ?

RCB vs CSK : ಐಪಿಎಲ್​ನಲ್ಲಿ 11 ವರ್ಷಗಳ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಕಾಕತಾಳೀಯ ಎನ್ನುವಂತೆ ಅದೇ ದಿನ, ಅದೇ ವಾರ, ಅದೇ ಮೈದಾನದಲ್ಲಿ ಸೆಣಸಾಟಕ್ಕೆ ಸಜ್ಜಾಗಿದೆ.

ಇದೇನು ವಿಚಿತ್ರ ಎಲ್ಲವೂ ಕಾಕತಾಳೀಯ; ಅದೇ ದಿನ, ದಿನಾಂಕ, ವಾರ, ಪಂದ್ಯ, ಮೈದಾನ; ಆರ್​ಸಿಬಿಗೆ ಸಿಗುತ್ತಾ ಆ ದಿನದ ಅದೃಷ್ಟ?
ಇದೇನು ವಿಚಿತ್ರ ಎಲ್ಲವೂ ಕಾಕತಾಳೀಯ; ಅದೇ ದಿನ, ದಿನಾಂಕ, ವಾರ, ಪಂದ್ಯ, ಮೈದಾನ; ಆರ್​ಸಿಬಿಗೆ ಸಿಗುತ್ತಾ ಆ ದಿನದ ಅದೃಷ್ಟ?

ಬಹು ನಿರೀಕ್ಷಿತ ಐಪಿಎಲ್-2024 (IPL 2024) ಪಂದ್ಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್​ ತಂಡಗಳು (CSK vs RCB) ಸಜ್ಜಾಗಿವೆ. ಪ್ರಸಕ್ತ ಆವೃತ್ತಿಯಲ್ಲಿ 2ನೇ ಬಾರಿಗೆ ಮುಖಾಮುಖಿಯಾಗುತ್ತಿರುವ ಉಭಯ ತಂಡಗಳ ಕದನಕ್ಕೆ ಇಡೀ ವಿಶ್ವವೇ ಕಾಯುತ್ತಿದೆ. ಇದು ಕೇವಲ ಲೀಗ್ ಪಂದ್ಯವಾದರೂ ಫೈನಲ್​ನಂತೆ ಭಾಸವಾಗುತ್ತಿದೆ. ಅದಕ್ಕೆ ಕಾರಣ ಎರಡೂ ತಂಡಗಳಿಗೂ ಮಾಡು ಇಲ್ಲವೇ ಮಡಿ ಪಂದ್ಯ. ಗೆದ್ದ ತಂಡವು ಪ್ಲೇಆಫ್​ ಟಿಕೆಟ್ ಖಚಿತಪಡಿಸಿಕೊಳ್ಳುವ ಕಾರಣ ಅತಿ ಹೆಚ್ಚು ಮಹತ್ವ ಪಡೆದುಕೊಂಡಿದ್ದು, ಚಿನ್ನಸ್ವಾಮಿ ಮೈದಾನ ಸಿದ್ಧಗೊಂಡಿದೆ.

ನಿರ್ಣಾಯಕ ಪಂದ್ಯಕ್ಕೆ ಮಳೆ ಅಡಚಣೆ ಉಂಟು ಮಾಡುವ ನಿರೀಕ್ಷೆ ಮಾಡಲಾಗಿದೆ. ಹವಾಮಾನ ಇಲಾಖೆ ಪ್ರಕಾರ ಶೇ 80 ರಿಂದ 90ರಷ್ಟು ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಈ ಪಂದ್ಯಕ್ಕೂ ಮುನ್ನ ಕಾಕತಾಳೀಯ ಘಟನೆಯೊಂದು ನಡೆಯುತ್ತಿದೆ. ಹೌದು. ಅದೇ ದಿನ, ಅದೇ ದಿನಾಂಕ, ಅದೇ ವಾರ, ಅದೇ ಮೈದಾನ, ಅದೇ ಸಂದರ್ಭ, ಅದೇ ಪಂದ್ಯ.. ಹೀಗೆ ಎಲ್ಲವೂ ಕಾಕತಾಳೀಯ ಎನ್ನುವಂತಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಪಂದ್ಯ. ಈ ಕಾಕತಾಳೀಯ ಲೆಕ್ಕಾಚಾರದಂತೆ ಆರ್​ಸಿಬಿ ಗೆದ್ದೇ ಗೆಲ್ಲುತ್ತದೆ ಎಂದು ಭವಿಷ್ಯ ನುಡಿಯುತ್ತಿದ್ದಾರೆ ಅಭಿಮಾನಿಗಳು.

ನಿಜ, 2013ರಲ್ಲಿ ಬೆಂಗಳೂರು ಮತ್ತು ಚೆನ್ನೈ ತಂಡಗಳು ಇಂತಹದ್ದೇ ಸಂದರ್ಭವನ್ನು ಎದುರಿಸಿದ್ದವು. ಅವತ್ತು, ಇವತ್ತು ಸಹ ಉಭಯ ತಂಡಗಳಿಗೂ ಇದು ಕೊನೆಯ ಲೀಗ್​ ಪಂದ್ಯ. ಆ ಪಂದ್ಯವು ಮೇ 18 ರಂದೇ ನಡೆದಿತ್ತು. ಅವತ್ತು ಸಹ ಶನಿವಾರವೇ ಆಗಿತ್ತು. ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲೇ ಪಂದ್ಯ ಜರುಗಿತ್ತು. ಹವಾಮಾನ ಇಲಾಖೆ ನೀಡಿದ ಎಚ್ಚರಿಕೆಯಂತೆ ಅಂದಿನ ಪಂದ್ಯಕ್ಕೆ ಮಳೆ ಅಡಚಣೆ ಉಂಟು ಮಾಡಿತ್ತು. ಕೊನೆಗೆ ಡಿಎಲ್​ಎಸ್​ ನಿಯಮದಡಿ ಎಂಟು ಓವರ್​​ಗಳಿಗೆ ಕಡಿತಗೊಳಿಸಲಾಗಿತ್ತು. ಆರ್​ಸಿಬಿ 24 ರನ್​ಗಳಿಂದ ಗೆದ್ದು ಬೀಗಿತ್ತು.

ಇದೀಗ ಎಲ್ಲವೂ ಕಾಕತಾಳೀಯ ಎನ್ನುವಂತೆ ಈ ಪಂದ್ಯಕ್ಕೂ ಮಳೆ ಭೀತಿ ಎದುರಾಗಿದೆ. 11 ವರ್ಷಗಳ ಹಿಂದೆ ಜರುಗಿದ್ದ ಪಂದ್ಯಕ್ಕೂ 2024ರಲ್ಲಿ ಮೇ 18ರಂದು (ನಾಳೆ) ನಡೆಯುವ ಪಂದ್ಯಕ್ಕೂ ದಿನಾಂಕ, ದಿನ, ಮೈದಾನ, ತಂಡಗಳು ಮತ್ತು ಮಳೆ ಎಲ್ಲವೂ ತಾಳೆಯಾಗುತ್ತಿದೆ. ಇದರ ಆಧಾರದಲ್ಲಿ ಗೆದ್ದೇ ಗೆಲ್ಲುತ್ತದೆ ಆರ್​ಸಿಬಿ ಪ್ಲೇಆಫ್​ಗೆ ಹೋಗುತ್ತದೆ ಎಂದು ರೆಡ್​ ಆರ್ಮಿ ಫ್ಯಾನ್ಸ್​ ಭವಿಷ್ಯ ನುಡಿಯಲಾರಂಭಿಸಿದ್ದಾರೆ. ಅದೇ ಅದೃಷ್ಟ ಆರ್​ಸಿಬಿಗೆ ಸಿಗಲಿ ಎಂದು ಕೋಟ್ಯಂತರ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಏನಾಗಬಹುದೆಂಬ ಕುತೂಹಲ ಹೆಚ್ಚಿಸಿದೆ.

ಮಳೆಯಿಂದ ಪಂದ್ಯ ರದ್ದಾದರೆ ಸಿಎಸ್​ಕೆ ಪ್ಲೇಆಫ್​ಗೆ!

ಶೇ 80 ರಿಂದ 90 ರಷ್ಟು ಮಳೆ ಇದೆ ಎಂದು ಹವಾಮಾನ ಇಲಾಖೆ ನೀಡಿರುವ ಮಾಹಿತಿ ನೀಡಿದೆ. ಮೇ 19ರವರೆಗೂ ಮಳೆ ಇದೆ ಎಂದು ಒಂದು ವಾರದ ಹಿಂದೆಯೇ ಎಚ್ಚರಿಕೆ ನೀಡಿತ್ತು. ಮೇ 17ರ ಶುಕ್ರವಾರ (ಇಂದು) ಬೆಳ್ಳಂಬೆಳಗ್ಗೆ ಹಲವೆಡೆ ಜೋರು ಮಳೆಯಾಗಿದೆ. ಹೀಗಾಗಿ ಪಂದ್ಯದ ದಿನವಾದ ಶನಿವಾರವೂ ಮಳೆಯಾಗುವ ನಿರೀಕ್ಷೆ ಹೆಚ್ಚಿದೆ. ಒಂದು ವೇಳೆ ಮಳೆಯಿಂದ ಪಂದ್ಯ ರದ್ದುಗೊಂಡರೆ ಆರ್​ಸಿಬಿ ಪ್ಲೇಆಫ್ ಕನಸು ಭಗ್ನವಾಗಲಿದೆ. ಸಿಎಸ್​ಕೆ ಅಧಿಕೃತ ಪ್ಲೇಆಫ್ ಪ್ರವೇಶಿಸಲಿದೆ. ಕೆಕೆಆರ್, ಆರ್​ಆರ್, ಎಸ್​ಆರ್​ಹೆಚ್ ಪ್ಲೇಆಫ್​ಗೆ ಲಗ್ಗೆಯಿಟ್ಟಿವೆ.

ಆರ್​ಸಿಬಿ ಮುಂದಿರುವ ದಾರಿ ಏನು?

ಮಳೆಯಿಂದ ಓವರ್​ಗಳು ಕಡಿತಗೊಂಡರೂ ಅಥವಾ ಸಂಪೂರ್ಣ ಪಂದ್ಯ ನಡೆದರೂ ಒಂದೇ ಷರತ್ತು ಇರಲಿದೆ. ಒಂದು 11 ಎಸೆತಗಳನ್ನು ಉಳಿಸಿ ಚೇಸಿಂಗ್ ಮಾಡಬೇಕು ಅಥವಾ 18 ರನ್​ಗಳ ಅಂತರದಿಂದ ಗೆದ್ದು ಬೀಗಬೇಕು. ಒಂದು ವೇಳೆ ಇದಕ್ಕಿಂತ ಕಡಿಮೆ ಅಂತರದಲ್ಲಿ ಗೆದ್ದರೂ ಸಿಎಸ್​ಕೆ ಪ್ಲೇಆಫ್​ಗೆ ಲಗ್ಗೆ ಇಡಲಿದೆ. ಹಾಗಾಗಿ ಚೇಸಿಂಗ್ ನಡೆಸಿದಾಗ ಪ್ರತಿಯೊಂದು ಎಸೆತದಲ್ಲೂ ರನ್ ಗಳಿಸಬೇಕು. ಆಕ್ರಮಣಕಾರಿ ಬ್ಯಾಟಿಂಗ್ ನಡೆಸಬೇಕು. ಮೊದಲು ಬ್ಯಾಟಿಂಗ್ ನಡೆಸಿದರೆ 250+ ರನ್​​ಗಳ ಬೃಹತ್​ ಮೊತ್ತ ಪೇರಿಸಿ, ಸಿಎಸ್​ಕೆ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಬೇಕು.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner