ಕನ್ನಡ ಸುದ್ದಿ  /  ಕ್ರಿಕೆಟ್  /  ಐಪಿಎಲ್​ ಇತಿಹಾಸದಲ್ಲಿ ಆರ್​ಸಿಬಿ ವಿರುದ್ಧ ಸಿಎಸ್​ಕೆ ತಂಡದ್ದೇ ದರ್ಬಾರ್; ಚಿನ್ನಸ್ವಾಮಿ ಮೈದಾನದಲ್ಲೂ ಅವರದ್ದೇ ಕಾರುಬಾರು

ಐಪಿಎಲ್​ ಇತಿಹಾಸದಲ್ಲಿ ಆರ್​ಸಿಬಿ ವಿರುದ್ಧ ಸಿಎಸ್​ಕೆ ತಂಡದ್ದೇ ದರ್ಬಾರ್; ಚಿನ್ನಸ್ವಾಮಿ ಮೈದಾನದಲ್ಲೂ ಅವರದ್ದೇ ಕಾರುಬಾರು

RCB vs CSK: ಮೇ 18ರಂದು ಕಾದಾಟ ನಡೆಸುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್​ ತಂಡಗಳ ಮುಖಾಮುಖಿ ದಾಖಲೆ, ಚಿನ್ನಸ್ವಾಮಿ ಮೈದಾನದಲ್ಲಿ ದಾಖಲೆ ಹೇಗಿದೆ ಎಂಬುದರ ಸವಿವರ ಇಲ್ಲಿದೆ.

ಐಪಿಎಲ್​ ಇತಿಹಾಸದಲ್ಲಿ ಆರ್​ಸಿಬಿ ವಿರುದ್ಧ ಸಿಎಸ್​ಕೆ ತಂಡದ್ದೇ ದರ್ಬಾರ್; ಚಿನ್ನಸ್ವಾಮಿ ಮೈದಾನದಲ್ಲೂ ಅವರದ್ದೇ ಕಾರುಬಾರು
ಐಪಿಎಲ್​ ಇತಿಹಾಸದಲ್ಲಿ ಆರ್​ಸಿಬಿ ವಿರುದ್ಧ ಸಿಎಸ್​ಕೆ ತಂಡದ್ದೇ ದರ್ಬಾರ್; ಚಿನ್ನಸ್ವಾಮಿ ಮೈದಾನದಲ್ಲೂ ಅವರದ್ದೇ ಕಾರುಬಾರು

17ನೇ ಆವೃತ್ತಿಯ ಐಪಿಎಲ್​​ ರೋಚಕ ಘಟ್ಟಕ್ಕೆ ಬಂದು ನಿಂತಿದೆ. ಎರಡು ತಂಡಗಳು ಪ್ಲೇಆಫ್​ಗೆ, 3 ತಂಡಗಳು ಎಲಿಮಿನೇಟ್ ಆಗಿವೆ. ಉಳಿದ 2 ಸ್ಥಾನಗಳ ಪ್ಲೇಆಫ್​ಗೆ 5 ತಂಡಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದೆ. ಮೇ 18ರಂದು ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಫೈಟ್​ ಕುತೂಹಲ ಹೆಚ್ಚಿಸಿದೆ.

ಟ್ರೆಂಡಿಂಗ್​ ಸುದ್ದಿ

ಪ್ಲೇಆಫ್​ಗೆ ಅರ್ಹತೆ ಪಡೆದುಕೊಳ್ಳಲು ಉಭಯ ತಂಡಗಳು ತಮ್ಮ ಕೊನೆಯ ಲೀಗ್​ ಪಂದ್ಯದಲ್ಲಿ ಗೆಲ್ಲುವುದು ಅನಿವಾರ್ಯ. ಆರ್​ಸಿಬಿ ಗೆಲ್ಲುವುದರ ಜೊತೆಗೆ ರನ್​ರೇಟ್ ಕೂಡ ಹೆಚ್ಚಿಸಿಕೊಳ್ಳಬೇಕು. ಆಗ 14 ಅಂಕಗಳೊಂದಿಗೆ ಪ್ಲೇಆಫ್​​ಗೇರಲಿದೆ. ಇದು ಸಾಧ್ಯವಾಗಲು 18.1 ಓವರ್​​ಗಳ ಒಳಗೆ ಚೇಸ್ ಮಾಡಬೇಕು ಅಥವಾ 18 ರನ್​ಗಳ ಅಂತರದಿಂದ ಗೆಲ್ಲಬೇಕು. ಹೀಗಿದ್ದಾಗ ಆರ್​ಸಿಬಿ ಕಸನು ನನಸಾಗಲಿದೆ. ಹಾಗಾದರೆ ಉಭಯ ತಂಡಗಳ ಮುಖಾಮುಖಿ ದಾಖಲೆ, ಚಿನ್ನಸ್ವಾಮಿ ಮೈದಾನದಲ್ಲಿ ದಾಖಲೆ ಹೇಗಿದೆ? ಇಲ್ಲಿದೆ ವಿವರ.

ಮೊದಲ ಮುಖಾಮುಖಿಯಲ್ಲಿ ಸಿಎಸ್​ಕೆ ಗೆಲುವು

ಪ್ರಸಕ್ತ ಐಪಿಎಲ್​ನಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ಸಿಎಸ್​ಕೆ ಭರ್ಜರಿ ಗೆಲುವು ಸಾಧಿಸಿತ್ತು. ಇದು ಚೆನ್ನೈನ ಚೆಪಾಕ್ ಕ್ರಿಕೆಟ್ ಮೈದಾನದಲ್ಲಿ ನಡೆದಿತ್ತು. ಮೊದಲು ಬ್ಯಾಟಿಂಗ್ ನಡೆಸಿದ್ದ ಫಾಫ್ ಪಡೆ, 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿತ್ತು. ಅನೂಜ್ ರಾವತ್ ಮತ್ತು ದಿನೇಶ್ ಕಾರ್ತಿಕ್ ಸಂಘಟಿತ ಪ್ರದರ್ಶನ ನೀಡಿದ್ದರು. ಈ ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟಿದ್ದ ಸಿಎಸ್​ಕೆ, 18.4 ಓವರ್​​ಗಳಲ್ಲಿ ಗೆದ್ದು ಬೀಗಿತ್ತು. ಈಗ ಆರ್​ಸಿಬಿ ತನ್ನ ತವರಿನ ಅಭಿಮಾನಿಗಳ ಮುಂದೆ ಸೇಡು ತೀರಿಸಿಕೊಳ್ಳಲು ಸಜ್ಜಾಗಿದೆ.

ಸಿಎಸ್​ಕೆ vs ಆರ್​ಸಿಬಿ ಮುಖಾಮುಖಿ ದಾಖಲೆ

ಐಪಿಎಲ್​ ಇತಿಹಾಸದಲ್ಲಿ ಆರ್​ಸಿಬಿ ವಿರುದ್ಧ ಚೆನ್ನೈ ಮೇಲುಗೈ ಸಾಧಿಸಿದೆ. ಉಭಯ ತಂಡಗಳು ಒಟ್ಟು 32 ಬಾರಿಗೆ ಪರಸ್ಫರ ಮುಖಾಮುಖಿಯಾಗಿವೆ. ಆದರೆ ಋತುರಾಜ್ ಗಾಯಕ್ವಾಡ್ ನೇತೃತ್ವದ ತಂಡ ಗೆದ್ದಿರುವುದು 21 ಬಾರಿ. ಆದರೆ ಫಾಫ್ ಪಡೆ ಜಯಿಸಿರುವುದು ಕೇವಲ 10 ಸಲ. ಒಂದು ಪಂದ್ಯ ಫಲಿತಾಂಶ ಕಂಡಿಲ್ಲ.

ಚಿನ್ನಸ್ವಾಮಿಯಲ್ಲಿ ಆರ್​ಸಿಬಿ vs ಸಿಎಸ್​ಕೆ ಮುಖಾಮುಖಿ ದಾಖಲೆ

ಆರ್‌ಸಿಬಿಯ ತವರು ಮೈದಾನ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉಭಯ ತಂಡಗಳು 10 ಸಲ ಮುಖಾಮುಖಿಯಾಗಿವೆ. ಆದರೆ ಆತಿಥೇಯರಿಗಿಂತ ಪ್ರವಾಸಿ ಸಿಎಸ್‌ಕೆ ತಂಡವೇ ಅತ್ಯಧಿಕ ಗೆಲುವು ಸಾಧಿಸಿದೆ. ಎರಡೂ ತಂಡಗಳು 10 ಬಾರಿ ಪರಸ್ಪರ ಎದುರಾಗಿವೆ. ಸಿಎಸ್​ಕೆ 5 ಗೆಲುವು, ಆರ್​ಸಿಬಿ 4 ಗೆಲುವು ಸಾಧಿಸಿದೆ. ಒಂದು ಪಂದ್ಯ ಫಲಿತಾಂಶ ಇಲ್ಲದೆ ಅಂತ್ಯಗೊಂಡಿದೆ.

ಕಳೆದೈದು ಪಂದ್ಯಗಳಲ್ಲಿ ಉಭಯ ತಂಡಗಳ ದಾಖಲೆ

ಕಳೆದ ಐದು ಪಂದ್ಯಗಳ ಮುಖಾಮುಖಿಯಲ್ಲಿ ಚೆನ್ನೈ ತಂಡವೇ ಹೆಚ್ಚು ಮುನ್ನಡೆ ಪಡೆದಿದೆ. 4-1ರಲ್ಲಿ ಸಿಎಸ್​ಕೆ ಮುನ್ನಡೆ ಪಡೆದಿದೆ.

ಐಪಿಎಲ್​ನಲ್ಲಿ ಸಿಎಸ್​ಕೆ vs ಆರ್​ಸಿಬಿ ಫಲಿತಾಂಶಗಳು

2024

- ಚೆನ್ನೈ ಸೂಪರ್ ಕಿಂಗ್ಸ್‌ಗೆ 6 ವಿಕೆಟ್‌ಗಳ ಜಯ (ಮೊದಲ ಮುಖಾಮುಖಿ)

- 2ನೇ ಮುಖಾಮುಖಿ ಮೇ 18 ರಂದು ನಡೆಯಲಿದೆ.

2023

- ಚೆನ್ನೈ ಸೂಪರ್ ಕಿಂಗ್ಸ್‌ಗೆ 8 ರನ್‌ಗಳ ಜಯ

2022

- ಚೆನ್ನೈ ಸೂಪರ್ ಕಿಂಗ್ಸ್ 23 ರನ್ ಜಯ

- ರಾಯಲ್ ಚಾಲೆಂಜರ್ಸ್ ಬೆಂಗಳೂರು 13 ರನ್ ಜಯ

2021

- ಚೆನ್ನೈ ಸೂಪರ್ ಕಿಂಗ್ಸ್ 69 ರನ್ ಜಯ

- ಚೆನ್ನೈ ಸೂಪರ್ ಕಿಂಗ್ಸ್ 6 ವಿಕೆಟ್ ಜಯ

2020

- ರಾಯಲ್ ಚಾಲೆಂಜರ್ಸ್ ಬೆಂಗಳೂರು 37 ರನ್ ಜಯ

- ಚೆನ್ನೈ ಸೂಪರ್ ಕಿಂಗ್ಸ್ 8 ವಿಕೆಟ್ ಜಯ

2019

- ಚೆನ್ನೈ ಸೂಪರ್ ಕಿಂಗ್ಸ್‌ಗೆ 7 ವಿಕೆಟ್‌ಗಳ ಜಯ

- ರಾಯಲ್ ಚಾಲೆಂಜರ್ಸ್ ಬೆಂಗಳೂರು 1 ರನ್‌ಗಳಿಂದ ಜಯಗಳಿಸಿತು

2018

- ಚೆನ್ನೈ ಸೂಪರ್ ಕಿಂಗ್ಸ್ 5 ವಿಕೆಟ್ ಜಯ

- ಚೆನ್ನೈ ಸೂಪರ್ ಕಿಂಗ್ಸ್ 6 ವಿಕೆಟ್ ಜಯ

2015

- ಚೆನ್ನೈ ಸೂಪರ್ ಕಿಂಗ್ಸ್ 27 ರನ್ ಜಯ

- ಚೆನ್ನೈ ಸೂಪರ್ ಕಿಂಗ್ಸ್ 24 ರನ್ ಜಯ

- ಚೆನ್ನೈ ಸೂಪರ್ ಕಿಂಗ್ಸ್ 3 ವಿಕೆಟ್ ಜಯ

2014

- ರಾಯಲ್ ಚಾಲೆಂಜರ್ಸ್ ಬೆಂಗಳೂರು 5 ವಿಕೆಟ್‌ಗಳಿಂದ ಗೆದ್ದಿತು

- ಚೆನ್ನೈ ಸೂಪರ್ ಕಿಂಗ್ಸ್ 8 ವಿಕೆಟ್‌ಗಳಿಂದ ಗೆದ್ದಿತು

2013

- ಚೆನ್ನೈ ಸೂಪರ್ ಕಿಂಗ್ಸ್ 4 ವಿಕೆಟ್‌ಗಳಿಂದ ಗೆದ್ದಿತು

- ರಾಯಲ್ ಚಾಲೆಂಜರ್ಸ್ ಬೆಂಗಳೂರು 24 ರನ್‌ಗಳಿಂದ ಗೆದ್ದಿತು

2012

- ಚೆನ್ನೈ ಸೂಪರ್ ಕಿಂಗ್ಸ್ 5 ವಿಕೆಟ್‌ಗಳಿಂದ ಗೆದ್ದಿತು

- ಟಾಸ್ ಮಾಡಿದ ನಂತರ ಪಂದ್ಯವನ್ನು ಆಟವಿಲ್ಲದೆ ರದ್ದುಗೊಳಿಸಲಾಯಿತು.

2011

- ಚೆನ್ನೈ ಸೂಪರ್ ಕಿಂಗ್ಸ್ 21 ರನ್ ಗೆಲುವು

- ರಾಯಲ್ ಚಾಲೆಂಜರ್ಸ್ ಬೆಂಗಳೂರು 8 ವಿಕೆಟ್ ಗೆಲುವು

- ಚೆನ್ನೈ ಸೂಪರ್ ಕಿಂಗ್ಸ್ 6 ವಿಕೆಟ್ ಗೆಲುವು

- ಚೆನ್ನೈ ಸೂಪರ್ ಕಿಂಗ್ಸ್ 58 ರನ್ ಗೆಲುವು

2010

- ರಾಯಲ್ ಚಾಲೆಂಜರ್ಸ್ ಬೆಂಗಳೂರು 36 ರನ್ ಗೆಲುವು

- ಚೆನ್ನೈ ಸೂಪರ್ ಕಿಂಗ್ಸ್ 5 ವಿಕೆಟ್ ಗೆಲುವು

2009

- ರಾಯಲ್ ಚಾಲೆಂಜರ್ಸ್ ಬೆಂಗಳೂರು 2 ವಿಕೆಟ್ ಗೆಲುವು

- ರಾಯಲ್ ಚಾಲೆಂಜರ್ಸ್ ಬೆಂಗಳೂರು 6 ವಿಕೆಟ್ ಗೆಲುವು

- ಚೆನ್ನೈ ಸೂಪರ್ ಕಿಂಗ್ಸ್ 92 ರನ್ ಗೆಲುವು

2008

- ಚೆನ್ನೈ ಸೂಪರ್ ಕಿಂಗ್ಸ್ 13 ರನ್ ಜಯ

- ರಾಯಲ್ ಚಾಲೆಂಜರ್ಸ್ ಬೆಂಗಳೂರು 14 ರನ್ ಗೆಲುವು

ಅಂಕಿಅಂಶ
ಸಿಎಸ್​ಕೆ
ಆರ್​ಸಿಬಿ
ಮೊದಲು ಬ್ಯಾಟಿಂಗ್ ಗೆದ್ದವರು
10
6
ಚೇಸಿಂಗ್​ನಲ್ಲಿ ಗೆದ್ದವರು
12
4
ಗರಿಷ್ಠ ಸ್ಕೋರ್​
226
218
ಕನಿಷ್ಠ ಸ್ಕೋರ್
112
70
ಅತ್ಯಧಿಕ ಯಶಸ್ವಿ ಚೇಸ್
208
149
ಕಡಿಮೆ ಒಟ್ಟು ಡಿಫೆಂಡೆಡ್
148
126

IPL_Entry_Point