World Cup: 2023ರ ಏಕದಿನ ವಿಶ್ವಕಪ್‌ನಲ್ಲಿ ಈವರೆಗಿನ ದಾಖಲೆಗಳಿವು; ನಿಮ್ಮೆಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ
ಕನ್ನಡ ಸುದ್ದಿ  /  ಕ್ರಿಕೆಟ್  /  World Cup: 2023ರ ಏಕದಿನ ವಿಶ್ವಕಪ್‌ನಲ್ಲಿ ಈವರೆಗಿನ ದಾಖಲೆಗಳಿವು; ನಿಮ್ಮೆಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

World Cup: 2023ರ ಏಕದಿನ ವಿಶ್ವಕಪ್‌ನಲ್ಲಿ ಈವರೆಗಿನ ದಾಖಲೆಗಳಿವು; ನಿಮ್ಮೆಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

ICC ODI World Cup 2023 : ಪ್ರಸಕ್ತ ಆವೃತ್ತಿಯ ಏಕದಿನ ವಿಶ್ವಕಪ್‌ನಲ್ಲಿ ಇದುವರೆಗಿನ ಅಂಕಿ-ಅಂಶಗಳು ಇಲ್ಲಿವೆ. ಅತಿ ಹೆಚ್ಚು ರನ್‌ನಿಂದ ಹಿಡಿದು, ಹೆಚ್ಚು ಡಾಟ್‌ ಬಾಲ್‌ ಎಸೆದ ಆಟಗಾರರವರೆಗಿನ ಎಲ್ಲಾ ಮಾಹಿತಿ ಇಲ್ಲಿ ನೋಡಿ.

2023ರ ವಿಶ್ವಕಪ್‌ನಲ್ಲಿ ಈವರೆಗಿನ ಅಂಕಿ ಅಂಶಗಳು
2023ರ ವಿಶ್ವಕಪ್‌ನಲ್ಲಿ ಈವರೆಗಿನ ಅಂಕಿ ಅಂಶಗಳು (AFP)

ಭಾರತದಲ್ಲಿ ನಡೆಯುತ್ತಿರುವ 2023ರ ವಿಶ್ವಕಪ್‌ನಲ್ಲಿ ಈವರೆಗೆ ಹಲವು ದಾಖಲೆಗಳು ನಿರ್ಮಾಣವಾಗಿವೆ. ಅಕ್ಟೋಬರ್‌ 24ರ ಮಂಗಳವಾರ ನಡೆದ ವಿಶ್ವಕಪ್‌ನ 23ನೇ ಪಂದ್ಯದವರೆಗೆ (ದಕ್ಷಿಣ ಆಫ್ರಿಕಾ vs ಬಾಂಗ್ಲಾದೇಶ) ಆದ ದಾಖಲೆಗಳ ಪ್ರಕಾರ, ಈವರೆಗಿನ ದಾಖಲೆಗಳು ಪ್ರಶ್ನೋತ್ತರ ರೂಪದಲ್ಲಿ ಹೀಗಿವೆ.

1) 2023ರ ಏಕದಿನ ವಿಶ್ವಕಪ್‌ನಲ್ಲಿ ಈವರೆಗೆ ಅತಿಹೆಚ್ಚು ರನ್ ಗಳಿಸಿದವರು ಯಾರು?

ಕ್ವಿಂಟನ್‌ ಡಿಕಾಕ್. ವಿಶ್ವಕಪ್‌ನಲ್ಲಿ ಈವರೆಗೆ ಅತಿ ಹೆಚ್ಚು ರನ್‌ ಗಳಿಸಿದವರು ದಕ್ಷಿಣ ಆಫ್ರಿಕಾದ ಆರಂಭಿಕ ಬ್ಯಾಟರ್‌ ಡಿಕಾಕ್.‌ 5 ಇನ್ನಿಂಗ್ಸ್‌ಗಳಲ್ಲಿ 407 ರನ್‌ ಕಲೆ ಹಾಕಿದ್ದಾರೆ.

2) ಅತಿಹೆಚ್ಚು ವಿಕೆಟ್ ಗಳಿಸಿದವರು ಯಾರು?

ಮಿಚೆಲ್‌ ಸ್ಯಾಂಟ್ನರ್.‌ ವಿಶ್ವಕಪ್‌ನಲ್ಲಿ ಈವರೆಗೆ ಅತಿ ಹೆಚ್ಚು ಗಳಿಸಿದವರು ಮಿಚೆಲ್‌ ಸ್ಯಾಂಟ್ನರ್.‌ ನ್ಯೂಜಿಲ್ಯಾಂಡ್‌ ತಂಡದ ಸ್ಪಿನ್ನರ್‌ 5 ಪಂದ್ಯಗಳಲ್ಲಿ 12 ವಿಕೆಟ್‌ ಪಡೆದಿದ್ದಾರೆ.‌

3) ಅತಿಹೆಚ್ಚು ಸಿಕ್ಸ್ ಹೊಡೆದವರು ಯಾರು?

ರೋಹಿತ್‌ ಶರ್ಮಾ. ವಿಶ್ವಕಪ್‌ನಲ್ಲಿ ಈವರೆಗೆ ಅತಿ ಹೆಚ್ಚು ಸಿಕ್ಸರ್‌ ಸಿಡಿಸಿದವರು ರೋಹಿತ್‌ ಶರ್ಮಾ. ಭಾರತದ ನಾಯಕ 5 ಪಂದ್ಯಗಳಲ್ಲಿ 17 ಸಿಕ್ಸರ್‌ ಬಾರಿಸಿದ್ದಾರೆ.

4) ಅತಿಹೆಚ್ಚು ಫೋರ್ ಹೊಡೆದವರು ಯಾರು?

ರೋಹಿತ್‌ ಶರ್ಮಾ. ವಿಶ್ವಕಪ್‌ನಲ್ಲಿ ಈವರೆಗೆ ಅತಿ ಹೆಚ್ಚು ಫೋರ್‌ ಹೊಡೆದವರು ರೋಹಿತ್‌ ಶರ್ಮಾ. ಭಾರತದ ನಾಯಕ 5 ಪಂದ್ಯಗಳಲ್ಲಿ 33 ಬೌಂಡರಿ ಗಳಿಸಿದ್ದಾರೆ.

5) ಹೈಯೆಸ್ಟ್ ಆವರೇಜ್ ರನ್ ಯಾರದ್ದು?

‌ಕೆಎಲ್‌ ರಾಹುಲ್‌. ವಿಶ್ವಕಪ್‌ನಲ್ಲಿ ಈವರೆಗೆ ಉತ್ತಮ ಬ್ಯಾಟಿಂಗ್‌ ಆವರೇಜ್ ಕೆಎಲ್‌ ರಾಹುಲ್‌ ಕಾಯ್ದುಕೊಂಡಿದ್ದಾರೆ. ಭಾರತದ ವಿಕೆಟ್‌ ಕೀಪರ್‌ 177.00 ಬ್ಯಾಟಿಂಗ್ ಸರಾಸರಿ ಹೊಂದಿದ್ದಾರೆ.

6) ಅತಿಕಡಿಮೆ ರನ್ ಕೊಟ್ಟ ಬೌಲರ್ ಯಾರು? ಅಥವಾ ಬೆಸ್ಟ್‌ ಎಕಾನಮಿ ಕಾಯ್ದುಕೊಂಡ ಬೌಲರ್‌ ಯಾರು (ಕನಿಷ್ಠ 30 ಓವರ್‌ ಬೌಲಿಂಗ್‌ ಮಾಡಿರಬೇಕು)‌

ಜಸ್ಪ್ರೀತ್‌ ಬುಮ್ರಾ. 5 ಪಂದ್ಯಗಳಲ್ಲಿ 47 ಓವರ್‌ ಬೌಲಿಂಗ್‌ ಮಾಡಿ 3.81ರ ಎಕಾನಮಿ ಕಾಯ್ದುಕೊಂಡಿದ್ದಾರೆ.

7) ಹೆಚ್ಚು ಸಲ ಡಕ್‌ಔಟ್ ಆದವರು ಯಾರು?

ನಜ್ಮುಲ್‌ ಹೊಸೈನ್‌ ಶಾಂಟೊ, ಮಹೀಶ್‌ ತೀಕ್ಷಣ ಹಾಗೂ ನವೀನ್‌ ಉಲ್‌ ಹಕ್‌ (ತಲಾ 2 ಬಾರಿ ಡಕೌಟ್‌ ಆಗಿದ್ದಾರೆ)

8) ಹೆಚ್ಚು ಫಿಫ್ಟಿ ಯಾರದು? (ಹೆಚ್ಚು ಅರ್ಧಶತಕ ಗಳಿಸಿದವರು ಯಾರು)

ಭಾರತದ ವಿರಾಟ್‌ ಕೊಹ್ಲಿ ಮತ್ತು ಶ್ರೀಲಂಕಾದ ಪಾತುಮ್‌ ನಿಸ್ಸಂಕಾ ಈವರೆಗೆ ತಲಾ 3 ಅರ್ಧಶತಕ ಸಿಡಿಸಿದ್ದಾರೆ.

9) ಹೆಚ್ಚು ಸೆಂಚುರಿ ಯಾರದು?

ಕ್ವಿಂಟನ್‌ ಡಿಕಾಕ್‌. ದಕ್ಷಿಣ ಆಫ್ರಿಕಾ ಆರಂಭಿಕ ಆಟಗಾರ ಆಡಿದ 5 ಪಂದ್ಯಗಳಲ್ಲಿ 3 ಭರ್ಜರಿ ಶತಕ ಸಿಡಿಸಿದ್ದಾರೆ.

10) ಅತಿಹೆಚ್ಚು ಕ್ಯಾಚ್ ಹಿಡಿದವರು ಯಾರು?

ವಿರಾಟ್‌ ಕೊಹ್ಲಿ, ಡೆವಿಡ್‌ ವಾರ್ನರ್‌, ಡಿವೋನ್‌ ಕಾನ್ವೆ,ಮ್ಯಾಟ್‌ ಹೆನ್ರಿ ಹಾಗೂ ಡೇರಿಲ್‌ ಮಿಚೆಲ್‌ (ತಲಾ 5 ಕ್ಯಾಚ್).

11) ಬೆಸ್ಟ್ ಕ್ಯಾಚ್ ಯಾವುದು ಮತ್ತು ಏಕೆ?

ಶ್ರೇಯಸ್‌ ಅಯ್ಯರ್.

ನ್ಯೂಜಿಲ್ಯಾಂಡ್‌ ವಿರುದ್ಧದ ಪಂದ್ಯದಲ್ಲಿ ಕಾನ್ವೇ ಹೊಡೆತವನ್ನು ಸ್ಕ್ವೇರ್ ಲೆಗ್‌ ಬಳಿ ನೆಲದ ಮಟ್ಟಕ್ಕೆ ಹಾರಿ ಅಯ್ಯರ್ ಕ್ಯಾಚ್‌ ಹಿಡಿದಿದ್ದರು. ಇದು ಕಷ್ಟಕರ ಕ್ಯಾಚ್‌ ಆಗಿತ್ತು. ಕ್ಷಣಮಾತ್ರದಲ್ಲಿ ಹದ್ದಿನ ಕಣ್ಣಿಟ್ಟು‌ ಅಯ್ಯರ್ ಕ್ಯಾಚ್‌ ಹಿಡಿದಿದ್ದಾರೆ.

12) ಲಾಂಗೆಸ್ಟ್ ಸಿಕ್ಸ್ ಯಾವುದು? ಎಷ್ಟು ದೂರ ಹೋಗಿತ್ತು?

ಶ್ರೇಯಸ್‌ ಅಯ್ಯರ್‌ (101 ಮೀಟರ್‌ ದೂರ).

13) ಅತಿ ಹೆಚ್ಚು ಡಾಟ್‌ ಬಾಲ್‌ ಎಸೆದವರು ಯಾರು?

ಜಸ್ಪ್ರೀತ್‌ ಬುಮ್ರಾ (188)

(ಈ ಮೇಲಿನ ಎಲ್ಲಾ ಅಂಕಿ ಅಂಶಗಳು 2023ರ ಏಕದಿನ ವಿಶ್ವಕಪ್‌ನಲ್ಲಿ ಅಕ್ಟೋಬರ್‌ 24ರ ಪಂದ್ಯದವರೆಗಿನ ದಾಖಲೆಗಳಾಗಿವೆ.)

Whats_app_banner