ಎಲ್‌ಎಸ್‌ಜಿ ರಿಟೆನ್ಷನ್ ಆಫರ್ ತಿರಸ್ಕರಿಸ್ತಾರಾ ಕೆಎಲ್ ರಾಹುಲ್; ಐಪಿಎಲ್ ಹರಾಜಿಗೂ ಮುನ್ನ ಟ್ವಿಸ್ಟ್‌, ಆರ್‌ಸಿಬಿ ಫ್ಯಾನ್ಸ್ ಖುಷ್
ಕನ್ನಡ ಸುದ್ದಿ  /  ಕ್ರಿಕೆಟ್  /  ಎಲ್‌ಎಸ್‌ಜಿ ರಿಟೆನ್ಷನ್ ಆಫರ್ ತಿರಸ್ಕರಿಸ್ತಾರಾ ಕೆಎಲ್ ರಾಹುಲ್; ಐಪಿಎಲ್ ಹರಾಜಿಗೂ ಮುನ್ನ ಟ್ವಿಸ್ಟ್‌, ಆರ್‌ಸಿಬಿ ಫ್ಯಾನ್ಸ್ ಖುಷ್

ಎಲ್‌ಎಸ್‌ಜಿ ರಿಟೆನ್ಷನ್ ಆಫರ್ ತಿರಸ್ಕರಿಸ್ತಾರಾ ಕೆಎಲ್ ರಾಹುಲ್; ಐಪಿಎಲ್ ಹರಾಜಿಗೂ ಮುನ್ನ ಟ್ವಿಸ್ಟ್‌, ಆರ್‌ಸಿಬಿ ಫ್ಯಾನ್ಸ್ ಖುಷ್

ಆರ್‌ಸಿಬಿ ಅಭಿಮಾನಿಗಳು ಮತ್ತಷ್ಟು ಖುಷಿ ಪಡುವಂಥಾ ವರದಿಯೊಂದು ಹೊರಬಿದ್ದಿದೆ. ಕನ್ನಡಿಗ ಕೆಎಲ್‌ ರಾಹುಲ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಸೇರಿಕೊಳ್ಳುತ್ತಾರೆ ಎಂಬ ವರದಿಗೆ ಪುಷ್ಠಿ ಸಿಕ್ಕಿದೆ. ಎಲ್‌ಎಸ್‌ಜಿ ರಿಟೆನ್ಷನ್‌ ಆಫರ್‌ಗೆ ರಾಹುಲ್‌ ಇನ್ನೂ ಸಮ್ಮತಿ ಸೂಚಿಸಿಲ್ಲ.

LSG ರಿಟೆನ್ಷನ್ ಆಫರ್ ತಿರಸ್ಕರಿಸ್ತಾರಾ ಕೆಎಲ್ ರಾಹುಲ್; ಐಪಿಎಲ್ ಹರಾಜಿಗೂ ಮುನ್ನ ಟ್ವಿಸ್ಟ್
LSG ರಿಟೆನ್ಷನ್ ಆಫರ್ ತಿರಸ್ಕರಿಸ್ತಾರಾ ಕೆಎಲ್ ರಾಹುಲ್; ಐಪಿಎಲ್ ಹರಾಜಿಗೂ ಮುನ್ನ ಟ್ವಿಸ್ಟ್ (‌PTI)

ಐಪಿಎಲ್‌ 2025ರ ಆವೃತ್ತಿಗೂ ಮುನ್ನ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಅದಕ್ಕೂ ಮುನ್ನ ಆಟಗಾರರ ರಿಟೆನ್ಷನ್‌ ಹಾಗೂ ಟ್ರೇಡಿಂಗ್‌ ಮೇಲೆ ಅಭಿಮಾನಿಗಳ ಕುತೂಹಲ ಹೆಚ್ಚುತ್ತಿದೆ. ಇನ್ನೂ ಯಾವ ತಂಡಗಳು ಕೂಡಾ ಯಾರನ್ನೆಲ್ಲಾ ರಿಟೈನ್‌ ಮಾಡಲಿದೆ ಎಂಬುದರ ಬಗ್ಗೆ ಅಧಿಕೃತವಾಗಿ ತಿಳಿಸಿಲ್ಲ. ಆದರೆ, ಕೆಲವೊಂದು ವರದಿಗಳು ಸಂಭಾವ್ಯ ಸುಳಿವು ನೀಡುತ್ತಿದ್ದು, ಅದರಂತೆಯೇ ಫ್ರಾಂಚೈಸಿಗಳು ಉಳಿಸಿಕೊಳ್ಳಬಲ್ಲ ಆಟಗಾರರ ಬಗ್ಗೆ ಫ್ಯಾನ್ಸ್‌ ನಿರೀಕ್ಷೆಯೂ ಹೆಚ್ಚಾಗುತ್ತದೆ. ಈ ನಡುವೆ, ಲಕ್ನೋ ಸೂಪರ್ ಜೈಂಟ್ಸ್ (LSG) ತಂಡದ ನಾಯಕ ಕೆಎಲ್ ರಾಹುಲ್, ತಂಡದ ರಿಟೆನ್ಷನ್ ಆಫರ್ ಸ್ವೀಕರಿಸುವುದೇ ಅನುಮಾನ ಎನ್ನಲಾಗುತ್ತಿದೆ. ಹೀಗಾಗಿ ಕನ್ನಡಿಗ ಆರ್‌ಸಿಬಿ ತಂಡದ ಪಾಲಾಗುವ ನಿರೀಕ್ಷೆಗಳು ಅಭಿಮಾನಿಗಳಲ್ಲಿ ಹೆಚ್ಚಾಗುತ್ತದೆ.

ಹೊಸ ಆವೃತ್ತಿಗೂ ಮುನ್ನ, ಕನ್ನಡಿಗ ರಾಹುಲ್‌ ಆರ್‌ಸಿಬಿ ತಂಡ ಸೇರಿಕೊಳ್ಳಬೇಕು ಎಂಬುವುದು ಅಭಿಮಾನಿಗಳ ಬಯಕೆ. ರಾಯಲ್‌ ಚಾಲೆಂಜರ್ಸ್‌ ತಂಡಕ್ಕೂ ಒಬ್ಬ ನಾಯಕ ಹಾಗೂ ಸಮರ್ಥ ಆರಂಭಿಕ ಆಟಗಾರನ ಅಗತ್ಯವಿದೆ. ಹೀಗಾಗಿ ರಾಹುಲ್‌ ಅವರನ್ನು ತಂಡ ಸೇರಿಸಿಕೊಳ್ಳಲು ತೆರೆಮರೆಯಲ್ಲಿ ಎಲ್ಲಾ ಯತ್ನಗಳು ನಡೆಯುತ್ತಿದೆ ಎಂಬ ವರದಿಗಳಿವೆ.

ಎಲ್‌ಎಸ್‌ಜಿ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಮತ್ತು ಮೆಂಟರ್ ಜಹೀರ್ ಖಾನ್ ಅವರ ಜಂಟಿ ನಿರ್ಧಾರದ ಪ್ರಕಾರ, ಫ್ರಾಂಚೈಸಿಯ ಧಾರಣ ಪಟ್ಟಿಯಿಂದ ಕೆಎಲ್ ರಾಹುಲ್ ಅವರನ್ನು ತೆಗೆದುಹಾಕಲು ನಿರ್ಧರಿಸಿದೆ ಎಂದು ವರದಿಯಾಗಿತ್ತು. ಇದೀಗ ಇದಕ್ಕೆ ವ್ಯತಿರಿಕ್ತ ವರದಿಯೊಂದು ಹೊರಬಿದ್ದಿದೆ. ಇಎಸ್‌ಪಿಎನ್‌ ಕ್ರಿಕ್‌ಇನ್‌ಫೋ ವರದಿಯ ಪ್ರಕಾರ, ಇತ್ತೀಚೆಗೆ ನಡೆದ ಸಭೆಯಲ್ಲಿ ಕೆಎಲ್ ರಾಹುಲ್ ಅವರು ಎಲ್‌ಎಸ್‌ಜಿ ಮಾಲೀಕರೊಂದಿಗೆ ನಡೆದ ಸಭೆಯಲ್ಲಿ ಭಾಗಿಯಾಗಿದ್ದಾರೆ. ಆದರೆ, ರಾಹುಲ್ ಅವರನ್ನು ಫ್ರಾಂಚೈಸಿ ಉಳಿಸಿಕೊಳ್ಳಲು ನಿರ್ಧರಿಸಿದರೆ ಅದನ್ನು ಒಪ್ಪಿಕೊಳ್ಳುವ ಬಗ್ಗೆ ರಾಹುಲ್ ಇನ್ನೂ ನಿರ್ಧರಿಸಿಲ್ಲ. ರಿಟೆನ್ಷನ್‌ ಲಿಸ್ಟ್ ಪ್ರಕಟಿಸಲು ಇನ್ನು ಒಂದು ವಾರವೂ ಇಲ್ಲ. ಅದಕ್ಕೂ ಮುನ್ನ ರಾಹುಲ್‌ ಮತ್ತು ಫ್ರಾಂಚೈಸ್‌ ಅಂತಿಮ ನಿರ್ಧಾರಕ್ಕೆ ಬರಬೇಕಿದೆ.

ಯಾರನ್ನು ಉಳಿಸಿಕೊಳ್ಳುತ್ತೆ‌ ಲಕ್ನೋ?

ಲಕ್ನೋ ಫ್ರಾಂಚೈಸಿಯು ವೇಗದ ಸೆನ್ಸೇಷನ್ ಮಯಾಂಕ್ ಯಾದವ್ ಅವರನ್ನು ಅಗ್ರ 3 ಆಟಗಾರರಲ್ಲಿ ಒಬ್ಬರಾಗಿ ಉಳಿಸಿಕೊಳ್ಳಲಿದೆ ಎಂದು ವರದಿಯಾಗಿದೆ. ಇದೇ ವೇಳೆ ವೆಸ್ಟ್ ಇಂಡೀಸ್ ಬ್ಯಾಟರ್ ನಿಕೋಲಸ್ ಪೂರನ್ ಅವರನ್ನು ಕೂಡಾ ಉಳಿಸಿಕೊಳ್ಳಬಹುದು. ಅನ್‌ಕ್ಯಾಪ್ಡ್ ಆಟಗಾರರಾದ ಆಯುಷ್ ಬದೋನಿ ಅಥವಾ ಮೊಹ್ಸಿನ್ ಖಾನ್ ಅವರಿಗೂ ಮಣೆ ಹಾಕುವ ಸಾಧ್ಯತೆ ಇದೆ.

ಈ ಹಿಂದೆ, ಸುದ್ದಿಸಂಸ್ಥೆ ಟೈಮ್ಸ್ ಆಫ್ ಇಂಡಿಯಾ ಮಾಡಿದ್ದ ವರದಿಯ ಪ್ರಕಾರ, ಕೆಎಲ್ ರಾಹುಲ್‌ ಅವರನ್ನು ತಂಡದಿಂದ ಕೈಬಿಡುವ ನಿರ್ಧಾರಕ್ಕೆ ಫ್ರಾಂಚೈಸ್‌ ಬಂದಿತ್ತು. ಲ್ಯಾಂಗರ್ ಮತ್ತು ಜಹೀರ್ ಪ್ರಕಾರ, ರಾಹುಲ್ ಕ್ರೀಸ್‌ನಲ್ಲಿ ಹೆಚ್ಚು ಕಾಲ ಉಳಿಯುವುದರಿಂದ ಎಲ್‌ಎಸ್‌ಜಿ ತಂಡದ ಗೆಲುವಿನ ಸಾಧ್ಯತೆ ಕಡಿಮೆಯಾಗಿದೆ. ಹೀಗಾಗಿ ರಾಹುಲ್ ಅವರನ್ನು ಲಕ್ನೋ ತಂಡ ಉಳಿಸಿಕೊಳ್ಳುವುದಿಲ್ಲ ಎಂದು ವರದಿ ಹೇಳಿತ್ತು.

ರಾಹುಲ್ ಅವರ ಸ್ಟ್ರೈಕ್ ರೇಟ್ ಹಲವು ಆವೃತ್ತಿಗಳಿಂದ ಚರ್ಚೆಯ ವಿಷಯವಾಗಿದೆ. 2019ರ ಐಪಿಎಲ್ ಸೀಸನ್‌ನಿಂದ ರಾಹುಲ್‌ ಸ್ಟ್ರೈಕ್‌ ರೇಟ್‌ 140 ದಾಟಿಲ್ಲ. 2023ರಲ್ಲಿ ಕೇವಲ 113ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್‌ ಬೀಸಿದ್ದರು.

Whats_app_banner