ರಿಷಭ್ ಪಂತ್ ಇನ್, ಡೇವಿಡ್ ವಾರ್ನರ್ ಔಟ್; ಪಂಜಾಬ್ ವಿರುದ್ಧದ ಪಂದ್ಯಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ XI
Delhi Capitals Playing XI : ಪಂಜಾಬ್ ಕಿಂಗ್ಸ್ ವಿರುದ್ಧದ ಮೊದಲ ಪಂದ್ಯಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಅಚ್ಚರಿಯ ಬದಲಾವಣೆಗೆ ಮುಂದಾಗಿದೆ. ಉತ್ತಮ ಫಾರ್ಮ್ನಲ್ಲಿರುವ ಡೇವಿಡ್ ವಾರ್ನರ್ ಅವರನ್ನು ಕೈಬಿಡಲು ಚಿಂತಿಸಿದೆ. ಹೀಗಿದೆ ನೋಡಿ ಡೆಲ್ಲಿ ಪ್ಲೇಯಿಂಗ್ XI.
ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್ಗೆ (IPL 2024) ಅದ್ಧೂರಿಯಾಗಿ ಚಾಲನೆ ಸಿಕ್ಕಿದೆ. ಮಾರ್ಚ್ 23ರಂದು 2 ಪಂದ್ಯಗಳು ನಡೆಯಲಿದ್ದು, ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ (Punjab Kings vs Delhi Capitals) ನಡುವೆ ಸೆಣಸಾಟ ನಡೆಯಲಿದ್ದು, ಗೆಲುವಿನೊಂದಿಗೆ ಅಭಿಯಾನ ಆರಂಭಿಸಲು ಭರ್ಜರಿ ತಯಾರಿ ನಡೆಸಿವೆ. ಮಧ್ಯಾಹ್ನ 3ಕ್ಕೆ ಆರಂಭವಾಗುವ ಈ ಹೈವೋಲ್ಟೇಜ್ ಪಂದ್ಯಕ್ಕೆ ಚಂಡಿಗಢದ ಮಹಾರಾಜ ಯಾದವಿಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನವು ಆತಿಥ್ಯ ವಹಿಸಲಿದೆ.
ಉಭಯ ತಂಡಗಳು ತಮ್ಮ ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲುವ ಗುರಿಯನ್ನು ಹೊಂದಿದ್ದು, ಬಲವಾದ ಆರಂಭವನ್ನು ನಿರೀಕ್ಷಿಸುತ್ತಿವೆ. ಪಂಜಾಬ್ ಕಿಂಗ್ಸ್ ತಂಡವನ್ನು ಭಾರತದ ಅನುಭವಿ ಆರಂಭಿಕ ಆಟಗಾರ ಶಿಖರ್ ಧವನ್ ಮುನ್ನಡೆಸಲಿದ್ದಾರೆ. ರಿಷಭ್ ಪಂತ್ 14 ತಿಂಗಳ ಸುದೀರ್ಘ ಗಾಯದ ನಂತರ ಡೆಲ್ಲಿ ಕ್ಯಾಪಿಟಲ್ಸ್ ನಾಯಕನಾಗಿ ಜವಾಬ್ದಾರಿ ವಹಿಸಿಕೊಳ್ಳಲು ಮರಳಿದ್ದಾರೆ. ಹಾಗಾದರೆ ಡೆಲ್ಲಿ ತಂಡದ ಸಂಭಾವ್ಯ ತಂಡ ಹೇಗಿರಲಿದೆ ನೋಡೋಣ ಬನ್ನಿ.
ಡೇವಿಡ್ ವಾರ್ನರ್ ಡ್ರಾಪ್
ಪಂಜಾಬ್ ಕಿಂಗ್ಸ್ ವಿರುದ್ಧದ ಮೊದಲ ಪಂದ್ಯಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ ಇಲೆವೆನ್ನಲ್ಲಿ ಅಚ್ಚರಿ ಬದಲಾವಣೆಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ. ಉತ್ತಮ ಫಾರ್ಮ್‌ನಲ್ಲಿರದ ಡೇವಿಡ್ ವಾರ್ನರ್‌ರನ್ನು ಕೈಬಿಡುವ ನಿರ್ಧಾರಕ್ಕೆ ಫ್ರಾಂಚೈಸಿ ಬಂದಿದೆ. ಆಡುವ 11ರ ಬಗಳದಲ್ಲಿ ವಾರ್ನರ್ ಬದಲಿಗೆ ಮತ್ತೊಬ್ಬ ಆಸೀಸ್ ಆಟಗಾರ ಜೇಕ್ ಫ್ರೇಸರ್-ಮ್ಯಾಕ್‌ಗುರ್ಕ್, ಪೃಥ್ವಿ ಶಾ ಜತೆ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ವಾರ್ನರ್ ಬೆಂಚ್ ಕಾಯಬೇಕಾಗುತ್ತದೆ ಎಂದು ಹೇಳಲಾಗಿದೆ.
ಸ್ಫೋಟಕ ಆರಂಭಿಕರ ಬಳಿಕ ಮಿಚೆಲ್ ಮಾರ್ಷ್ 3ನೇ ಸ್ಥಾನದಲ್ಲಿ ಬ್ಯಾಟ್ ಬೀಸುವುದು ಖಚಿತವಾಗಿದೆ. ನಂತರ ರಿಷಭ್ ಪಂತ್ ಆಡಲಿದ್ದಾರೆ. ಆದರೆ ಟ್ರಿಸ್ಟಾನ್ ಸ್ಟಬ್ಸ್ ಮತ್ತು ಶಾಯ್ ಹೋಪ್ ನಡುವೆ 5ನೇ ಸ್ಲಾಟ್‌ಗಾಗಿ ಪೈಪೋಟಿ ನಡೆಯುತ್ತಿದೆ. ಆದರೆ ಶಾಯ್ ಹೋಪ್ಗೆ ಅವಕಾಶ ನೀಡುವ ಬಗ್ಗೆ ಚರ್ಚೆ ನಡೆದಿದೆ. ಲಲಿತ್ ಯಾದವ್ ತಮ್ಮ ಸ್ಥಾನ ಉಳಿಸಿಕೊಳ್ಳಲು ಸಜ್ಜಾಗಿದ್ದಾರೆ. ಅಕ್ಷರ್ ಪಟೇಲ್ 7ನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ.
ಕುಲ್ದೀಪ್ ಯಾದವ್ ಡೆಲ್ಲಿ ತಂಡದ ಪ್ರಮುಖ ಸ್ಪಿನ್ನರ್ ಆಗಿದ್ದಾರೆ. ಆನ್ರಿಚ್ ನೋಕಿಯಾ ತಂಡದ ಪ್ರಮುಖ ವೇಗದ ಬೌಲರ್ ಆಗಿದ್ದಾರೆ. ಮೂರನೇ ಸೀಮರ್ ಪಾತ್ರಕ್ಕಾಗಿ ಇಶಾಂತ್ ಶರ್ಮಾ ಮತ್ತು ಮುಕೇಶ್ ಕುಮಾರ್ ನಡುವೆ ಪೈಪೋಟಿ ನಡೆಯುತ್ತಿದೆ. ಈ ಇಬ್ಬರಲ್ಲಿ ಮುಕೇಶ್ ಕುಮಾರ್ ಮೊದಲ ಆಯ್ಕೆಯ ಬೌಲರ್ ಆಗಿದ್ದಾರೆ. ಖಲೀಲ್ ಅಹ್ಮದ್ ಆಡುವ 11ರಲ್ಲಿ ಸ್ಥಾನ ಪಡೆಯುವುದು ಬಹುತೇಕ ಖಚಿತವಾಗಿದೆ.
ಡೆಲ್ಲಿ ಕ್ಯಾಪಿಟಲ್ಸ್ ಸಂಭಾವ್ಯ ತಂಡ
ಜೇಕ್ ಫ್ರೇಸರ್-ಮ್ಯಾಕ್‌ಗುರ್ಕ್, ಪೃಥ್ವಿ ಶಾ, ಮಿಚೆಲ್ ಮಾರ್ಷ್, ರಿಷಭ್ ಪಂತ್ (ನಾಯಜ, ವಿಕೆಟ್ ಕೀಪರ್), ಶಾಯ್ ಹೋಪ್, ಲಲಿತ್ ಯಾದವ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಖಲೀಲ್ ಅಹ್ಮದ್, ಮುಕೇಶ್ ಕುಮಾರ್, ಅನ್ರಿಚ್ ನೋಕಿಯಾ.
ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ ಇಲೆವೆನ್
ಶಿಖರ್ ಧವನ್ (ನಾಯಕ), ಪ್ರಭಾಸಿಮ್ರಾನ್ ಸಿಂಗ್, ಲಿಯಾಮ್ ಲಿವಿಂಗ್‌ಸ್ಟೋನ್, ಸಿಕಂದರ್ ರಜಾ, ಅಶುತೋಷ್ ಶರ್ಮಾ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಹರ್ಷಲ್ ಪಟೇಲ್, ಹರ್‌ಪ್ರೀತ್ ಬ್ರಾರ್, ಕಗಿಸೊ ರಬಾಡ, ನಾಥನ್ ಎಲ್ಲಿಸ್, ಅರ್ಶ್‌ದೀಪ್ ಸಿಂಗ್.