Rishabh Pant: ಐಪಿಎಲ್‌ಗೂ ಮುನ್ನ ಮೊದಲ ಪೂರ್ಣ ಪಂದ್ಯ ಆಡಿದ ರಿಷಭ್ ಪಂತ್; ಟಿ20 ವಿಶ್ವಕಪ್ ಆಯ್ಕೆಗೆ ಸಿದ್ಧ
Rishabh Pant: ಅಪಘಾತದಿಂದ ಗಾಯಗೊಂಡು ವಿಶ್ರಾಂತಿಯಲ್ಲಿದ್ದ ರಿಷಬ್ ಪಂತ್, ದೀರ್ಘಕಾಲದ ನಂತರ ಮೊದಲ ಪಂದ್ಯ ಆಡಿದ್ದಾರೆ. ಹೀಗಾಗಿ ಮುಂಬರುವ ಐಪಿಎಲ್ ಪಂದ್ಯಾವಳಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುವ ಸಾಧ್ಯತೆ ಹೆಚ್ಚಿದೆ. ಅಲ್ಲದೆ ಟಿ20 ವಿಶ್ವಕಪ್‌ನಲ್ಲಿಯೂ ಸ್ಥಾನ ಗಿಟ್ಟಿಸಿಕೊಳ್ಳುವತ್ತ ಅವರು ಚಿತ್ತ ಹರಿಸಲಿದ್ದಾರೆ.
ಐಪಿಎಲ್ 2024ರ ಆವೃತ್ತಿಗೆ ಅದ್ಧೂರಿಯಾಗಿ ಪುನರಾಗಮನ ಮಾಡಲು ಭಾರತದ ಪ್ರಮುಖ ವಿಕೆಟ್ ಕೀಪರ್ ಹಾಗೂ ಬ್ಯಾಟರ್ ರಿಷಭ್ ಪಂತ್ (Rishabh Pant) ಸಜ್ಜಾಗಿದ್ದಾರೆ. ಬೆಂಗಳೂರು ಬಳಿಯ ಆಲೂರಿನಲ್ಲಿ ನಡೆದ ಅಭ್ಯಾಸ ಪಂದ್ಯದಲ್ಲಿ ಪಂತ್ ಆಡಿದ್ದಾರೆ. ಭೀಕರ ಅಪಘಾತದಲ್ಲಿ ಗಾಯಗೊಂಡ ಬಳಿಕ, ಇದೇ ಮೊದಲ ಬಾರಿಗೆ ಪಂತ್ ಮೈದಾನಕ್ಕಿಳಿದು ಆಡುತ್ತಿದ್ದಾರೆ. ಹಲವು ತಿಂಗಳುಗಳ ಬಳಿಕ ಪಂತ್ ಅವರ ಮೊದಲ ಪಂದ್ಯವಾಗಿದ್ದು, ಸಕಾರಾತ್ಮಕ ಮನೋಭಾವ ತೋರಿದ್ದಾರೆ.
ಸದ್ಯ ಬಹುನಿರೀಕ್ಷಿತ ಐಪಿಎಲ್ ಪಂದ್ಯಾವಳಿಗೂ ಮುನ್ನ, ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ತನ್ನ ವಿಶ್ವಾಸ ಹೆಚ್ಚಿಸಿಕೊಂಡಿದೆ. ಕ್ರಿಕ್‌ಬಜ್ ವರದಿ ಪ್ರಕಾರ, ಪಂತ್ ಪೂರ್ಣ ಪ್ರಮಾಣದ ಪಂದ್ಯದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದರು. ಹೀಗಾಗಿ ಮುಂದಿನ ತಿಂಗಳು ಆರಂಭವಾಗಲಿರುವ ಐಪಿಎಲ್‌ನಲ್ಲಿ ಡೆಲ್ಲಿ ತಂಡವನ್ನು ಮುನ್ನಡೆಸಲು ಪಂತ್ ಸಜ್ಜಾಗಿದ್ದಾರೆ ಎಂದು ಬಿಸಿಸಿಐ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮೂಲಗಳು ಮಾಧ್ಯಮಕ್ಕೆ ತಿಳಿಸಿವೆ. ಪ್ರಸ್ತುತ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (NCA)ಪಂತ್ ಪುನಶ್ಚೇತನದಲ್ಲಿದ್ದಾರೆ.
ಇದನ್ನೂ ಓದಿ | ಭಾರತದಲ್ಲಿ ರೈಲು, ಆಟೋ ಹಿಡಿಯಲು ಕೂಡಾ ಚಿಕ್ಕ ವಯಸ್ಸಿನಲ್ಲೇ ಕಷ್ಟಪಡಬೇಕು; ಯಶಸ್ವಿ ಜೈಸ್ವಾಲ್ ಪ್ರಬುದ್ಧ ಮಾತು
ಕಳೆದ ವರ್ಷದ ಐಪಿಎಲ್ ಆವೃತ್ತಿಯಲ್ಲಿ, ಪಂತ್ ಬದಲಿಗೆ ಆಸ್ಟ್ರೇಲಿಯಾ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಡೆಲ್ಲಿ ತಂಡವನ್ನು ಮುನ್ನಡೆಸಿದ್ದರು. ಈ ಬಾರಿ ವಾರ್ನರ್ ಬ್ಯಾಟರ್ ಆಗಿ ತಂಡದಲ್ಲಿ ಮುಂದುವರೆಯವ ಸಾಧ್ಯತೆ ಇದೆ.
ಹಳೆಯ ಚುರುಕುತನ
ಮೈದಾನದಲ್ಲಿ ಪಂತ್ ಅವರ ಚಲನೆಯು ಇನ್ನೂ ಹಾಗೆಯೇ ಇದೆ. ಅಪಘಾತಕ್ಕೂ ಮುನ್ನ ಅವರು ಅವರು ಮೈದಾನದಲ್ಲಿ ಓಡಾಡುತ್ತಿದ್ದಂತೆಯೇ ಈಗಲೂ ಇದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಟಿ20 ವಿಶ್ವಕಪ್‌ಗೆ ಪಂತ್?
2022ರ ಡಿಸೆಂಬರ್‌ನಲ್ಲಿ ನಡೆದ ಭೀಕರ ಕಾರು ಅಪಘಾತದಲ್ಲಿ ಪಂತ್ ಗಂಭೀರ ಗಾಯಕ್ಕೊಳಗಾದರು. ಇದೀಗ ಅಪಘಾತ ನಡೆದ 15 ತಿಂಗಳ ನಂತರ ಅವರು ಮೈದಾನಕ್ಕೆ ಇಳಿದಿದ್ದಾರೆ. ಒಂದು ವೇಳೆ ಪಂತ್ ಸಂಪೂರ್ಣ ಫಿಟ್ ಆದರೆ, ಅವರನ್ನು ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡುವ ಸಾಧ್ಯತೆ ಕುರಿತ ಚರ್ಚೆಗಳು ಖಂಡಿತಾ ಹುಟ್ಟುಪಡೆಯುತ್ತದೆ. ಒಂದು ವೇಳೆ ಪಂತ್ ಆಡಲು ಫಿಟ್ ಆದರೆ, ಅವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡಲು ಪರಿಗಣಿಸಬೇಕು ಎಂದು ಸುನಿಲ್ ಗವಾಸ್ಕರ್ ಈಗಾಗಲೇ ಹೇಳಿದ್ದಾರೆ.
ಇದನ್ನೂ ಓದಿ | ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದಿಂದ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ; ಕೆಎಲ್ ರಾಹುಲ್ ಔಟ್
ಐಪಿಎಲ್ 2024ರ ಆವೃತ್ತಿಯಯಲ್ಲಿ ಪಂತ್ ಕೇವಲ ಬ್ಯಾಟರ್ ಆಗಿ ಕಾಣಿಸಿಕೊಳ್ಳುವ ಸಾಧ್ಯತೆಯೂ ಇದೆ. ಪಂದ್ಯಾವಳಿಯಲ್ಲಿ ಪ್ರಭಾವಶಾಲಿ ಪ್ರದರ್ಶನ ನೀಡಿದರೂ, ಆಯ್ಕೆದಾರರು ಅವರನ್ನು ವಿಕೆಟ್ ಕೀಪಿಂಗ್ ಪಾತ್ರಕ್ಕೆ ಆಯ್ಕೆ ಮಾಡುವ ಅಪಾಯ ತೆಗೆದುಕೊಳ್ಳುವ ಸಾಧ್ಯತೆ ಇಲ್ಲ. ಸದ್ಯ ಭಾರತ ತಂಡದಲ್ಲಿ ವಿಕೆಟ್ ಕೀಪಿಂಗ್ ಪಾತ್ರಕ್ಕೆ ಭಾರಿ ಪೈಪೋಟಿ ಇದೆ. ಕೆಎಲ್ ರಾಹುಲ್, ಧ್ರುವ್ ಜುರೆಲ್, ಇಶಾನ್ ಕಿಶನ್, ಸಂಜು ಸ್ಯಾಮ್ಸನ್ ಮತ್ತು ಜಿತೇಶ್ ಶರ್ಮಾ ಪ್ರಮುಖ ಐವರು ಆಟಗಾರರು. ಹೀಗಾಗಿ ಭಾರತ ತಂಡದಲ್ಲಿ ಪಂತ್ ಮಧ್ಯಮ ಕ್ರಮಾಂಕದಲ್ಲಿ ಅವಕಾಶ ಪಡೆಯಬಹುದು. ಆದರೆ, ಇಲ್ಲೂ ಅವರಿಗೆ ಸ್ಪರ್ಧಿಗಳಿದ್ದಾರೆ. ತಿಲಕ್ ವರ್ಮಾ, ರಿಂಕು ಸಿಂಗ್ ಇವರಲ್ಲಿ ಪ್ರಮುಖರು. ಸದ್ಯ ಪಂತ್ ಫಿಟ್‌ನೆಸ್ ಸಾಬೀತಾಗುತ್ತಿದ್ದಂತೆಯೇ ಆಯ್ಕೆ ಗೊಂದಲ ಕೂಡಾ ಶುರುವಾಗಲಿದೆ.
ಇದನ್ನೂ ಓದಿ | Akaay: ವಿರುಷ್ಕಾ ಪುತ್ರನ ಹೆಸರಿನ ಅರ್ಥವೇನು; ಅಕಾಯ್ ಪದದಲ್ಲಿದೆ ಅನುಷ್ಕಾ, ಕೊಹ್ಲಿ ಹೆಸರಲ್ಲಿರುವ ಅಕ್ಷರ
(This copy first appeared in Hindustan Times Kannada website. To read more like this please logon to kannada.hindustantimes.com)