ಅಧಿಕೃತವಾಗಿ ಹೊರಬಿದ್ದ ಸ್ಟಾರ್ ವೇಗಿ, ರಿಷಭ್ ಪಂತ್ ವಿರುದ್ಧ ಕಠಿಣ ಕ್ರಮ? ಭಾರತ ತಂಡದ ಪ್ಲೇಯಿಂಗ್ XIಗೆ ಮೇಜರ್ ಸರ್ಜರಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಅಧಿಕೃತವಾಗಿ ಹೊರಬಿದ್ದ ಸ್ಟಾರ್ ವೇಗಿ, ರಿಷಭ್ ಪಂತ್ ವಿರುದ್ಧ ಕಠಿಣ ಕ್ರಮ? ಭಾರತ ತಂಡದ ಪ್ಲೇಯಿಂಗ್ Xiಗೆ ಮೇಜರ್ ಸರ್ಜರಿ

ಅಧಿಕೃತವಾಗಿ ಹೊರಬಿದ್ದ ಸ್ಟಾರ್ ವೇಗಿ, ರಿಷಭ್ ಪಂತ್ ವಿರುದ್ಧ ಕಠಿಣ ಕ್ರಮ? ಭಾರತ ತಂಡದ ಪ್ಲೇಯಿಂಗ್ XIಗೆ ಮೇಜರ್ ಸರ್ಜರಿ

India XI: ಸಿಡ್ನಿ ಟೆಸ್ಟ್ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ವೇಗಿ ಆಕಾಶ್ ದೀಪ್ ಅವರು ತಂಡದಿಂದಲೇ ಹೊರಬಿದ್ದಿದ್ದಾರೆ. ಅನುಭವಿ ಆಟಗಾರ ರಿಷಭ್ ಪಂತ್ ಅವರನ್ನು ಪ್ಲೇಯಿಂಗ್ 11ನಿಂದ ಕೈಬಿಡುವ ಸಾಧ್ಯತೆ ಇದೆ.

ಅಧಿಕೃತವಾಗಿ ಹೊರಬಿದ್ದ ಆಕಾಶ್ ದೀಪ್, ರಿಷಭ್ ಪಂತ್ ವಿರುದ್ಧ ಕಠಿಣ ಕ್ರಮ? ಭಾರತ ತಂಡದ ಪ್ಲೇಯಿಂಗ್ XIಗೆ ಮೇಜರ್ ಸರ್ಜರಿ
ಅಧಿಕೃತವಾಗಿ ಹೊರಬಿದ್ದ ಆಕಾಶ್ ದೀಪ್, ರಿಷಭ್ ಪಂತ್ ವಿರುದ್ಧ ಕಠಿಣ ಕ್ರಮ? ಭಾರತ ತಂಡದ ಪ್ಲೇಯಿಂಗ್ XIಗೆ ಮೇಜರ್ ಸರ್ಜರಿ (HT_PRINT)

ಪ್ರತಿಷ್ಠಿತ ಬಾರ್ಡರ್ ಗವಾಸ್ಕರ್ ಟ್ರೋಫಿ (Border Gavaskar Trophy 2024-25) ಉಳಿಸಿಕೊಳ್ಳುವ ಗುರಿ ಹೊಂದಿರುವ ಟೀಮ್ ಇಂಡಿಯಾಗೆ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ಕೊನೆಯ ಟೆಸ್ಟ್​ಗೂ ಮುನ್ನ ತಂಡದ ಸ್ಟಾರ್​ ವೇಗಿಯೊಬ್ಬರು ಹೊರಬಿದ್ದಿರುವ ಕುರಿತು ಭಾರತ ಹೆಡ್​ಕೋಚ್ ಸ್ಪಷ್ಟಪಡಿಸಿದ್ದಾರೆ. ಇದರೊಂದಿಗೆ 5ನೇ ಟೆಸ್ಟ್​ಗೆ ಪ್ಲೇಯಿಂಗ್ 11ನಲ್ಲಿ ಮೇಜರ್ ಸರ್ಜರಿಯಾಗುವ ಮಾಹಿತಿ ಬಹಿರಂಗಗೊಂಡಿದೆ. ಜನವರಿ 3ರಿಂದ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಹಾಗೂ 5ನೇ ಟೆಸ್ಟ್​ ಪಂದ್ಯಕ್ಕೆ ಭಾರತ ತನ್ನ ಪ್ಲೇಯಿಂಗ್ 11ನಲ್ಲಿ ಒಂದೆರಡು ಬದಲಾವಣೆ ಮಾಡುವ ನಿರೀಕ್ಷೆಯಿದೆ. ವರದಿಗಳ ಪ್ರಕಾರ, ಸ್ಟಾರ್​ ಆಟಗಾರ ರಿಷಭ್ ಪಂತ್ ಆಡುವ 11ರ ಬಳಗದಿಂದ ಸ್ಥಾನ ಕಳೆದುಕೊಳ್ಳಲಿದ್ದಾರಂತೆ.

5ನೇ ಟೆಸ್ಟ್​ಗೂ ಮುನ್ನ ನಾಯಕ ರೋಹಿತ್​ ಶರ್ಮಾ ಬದಲಿಗೆ ಹೆಡ್​ಕೋಚ್ ಗೌತಮ್ ಗಂಭೀರ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಇದರೊಂದಿಗೆ ಅಂತಿಮ ಟೆಸ್ಟ್​ಗೆ ರೋಹಿತ್ ಅಲಭ್ಯತೆ ಬಗ್ಗೆ ಅನುಮಾನ ಉಂಟಾಗಿತ್ತು. ಆದರೆ ಈ ಗೊಂದಲಕ್ಕೆ ಗಂಭೀರ್ ತೆರೆ ಎಳೆಯಲು ವಿಫಲರಾಗಿದ್ದಾರೆ. ಸಿಡ್ನಿ ಟೆಸ್ಟ್‌ಗಾಗಿ ಭಾರತ XI ನಲ್ಲಿ ರೋಹಿತ್ ಆಡುವುದನ್ನು ಗಂಭೀರ್ ನಿರಾಕರಿಸಿದ್ದಾರೆ. ಆದರೆ ಸ್ಟಾರ್ ವೇಗಿ ಆಕಾಶ್ ದೀಪ್ ಅವರು ಕೊನೆ ಪಂದ್ಯಕ್ಕೂ ಮುನ್ನವೇ ಹೊರಬಿದ್ದಿದ್ದಾರೆ ಎಂದು ಗಂಭೀರ್ ಅಧಿಕೃತವಾಗಿ ಸ್ಪಷ್ಟನೆ ನೀಡಿದ್ದಾರೆ. ಬೆನ್ನು ನೋವಿನಿಂದ ಬಳಲುತ್ತಿರುವ ಕಾರಣ ಆಕಾಶ್ ದೀಪ್ ಅವರು ಸರಣಿಯಿಂದ ಹೊರಬಿದ್ದಿದ್ದಾರೆ. ಇದೀಗ ಅವರ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡುತ್ತಾರೆ ಎಂಬ ಗೊಂದಲ ಏರ್ಪಟ್ಟಿದೆ.

ಪಂತ್ ವಿರುದ್ಧ ಕಠಿಣ ಕ್ರಮ

ವರದಿಗಳ ಪ್ರಕಾರ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಅವರ ವಿರುದ್ಧ ಟೀಮ್ ಮ್ಯಾನೇಜ್​ಮೆಂಟ್ ಕಠಿಣ ಕ್ರಮಕ್ಕೆ ಮುಂದಾಗಿದೆಯಂತೆ. ಬಾಂಗ್ಲಾದೇಶ, ನ್ಯೂಜಿಲೆಂಡ್ ವಿರುದ್ಧದ ತವರು ಟೆಸ್ಟ್ ಸರಣಿಗಳಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನದ ಹೊರತಾಗಿ ಪಂತ್ ಅವರನ್ನು ಆಸ್ಟ್ರೇಲಿಯಾ ಪ್ರವಾಸದಲ್ಲಿ ಗೇಮ್ ಚೇಂಜರ್ ಆಗುತ್ತಾರೆ ಎಂದು ಊಹಿಸಲಾಗಿತ್ತು. ಆದರೆ, ಅದಕ್ಕಿಂತ ಕೆಟ್ಟ ಪ್ರದರ್ಶನ ನೀಡಿ ಟೀಕೆಗೆ ಗುರಿಯಾಗಿದ್ದಾರೆ. ಪ್ರಸ್ತುತ ಸರಣಿಯಲ್ಲಿ ಆಡಿರುವ 7 ಇನ್ನಿಂಗ್ಸ್​​ಗಳಲ್ಲಿ ಗಳಿಸಲು 154 ರನ್ ಗಳಿಸಿದ್ದಾರಷ್ಟೆ. ನಿರ್ಣಾಯಕ ಮೆಲ್ಬೋರ್ನ್​ ಟೆಸ್ಟ್​ನಲ್ಲಿ ಬೇಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನದ ಮೂಲಕ ಟೀಕೆಗೆ ಗುರಿಯಾಗಿದ್ದ ಪಂತ್​ರನ್ನು ಕೊನೆಯ ಟೆಸ್ಟ್​ಗೆ ಕೈಬಿಡುವ ನಿರೀಕ್ಷೆ ಇದೆ. ಬದಲಿಗೆ ಧ್ರುವ್ ಜುರೆಲ್ ಅವರಿಗೆ ಅವಕಾಶ ನೀಡಬಹುದು ಎಂದು ವರದಿ ತಿಳಿಸಿದೆ.

ಆಕಾಶ್ ದೀಪ್ ಸ್ಥಾನವನ್ನು ಯಾರು ತುಂಬಲಿದ್ದಾರೆ?

ವೇಗದ ಬೌಲರ್ ಆಕಾಶ್ ದೀಪ್ ಬೆನ್ನುನೋವಿನಿಂದ ಬಳಲುತ್ತಿದ್ದು, ಐದನೇ ಟೆಸ್ಟ್ ಪಂದ್ಯದಿಂದಲೇ ಹೊರಬಿದ್ದಿದ್ದಾರೆ. ಈ ಬಗ್ಗೆ ಗೌತಮ್ ಗಂಭೀರ್ ಸ್ಪಷ್ಟಪಡಿಸಿದ್ದಾರೆ. ಜಸ್ಪ್ರೀತ್ ಬುಮ್ರಾ ಅವರ ಕೆಲಸದ ಹೊರೆಯನ್ನು ಗಮನದಲ್ಲಿಟ್ಟುಕೊಂಡು ಭಾರತ, ಎಸ್​ಸಿಜಿಯಲ್ಲಿ ನಾಲ್ವರು ವೇಗಿಗಳನ್ನು ಕಣಕ್ಕಿಳಿಸುವ ನಿರೀಕ್ಷೆ ಇದೆ. ಆದ್ದರಿಂದ, ಆಕಾಶ್ ಬದಲಿಗೆ ನಿತೀಶ್ ರಾಣಾ ಮತ್ತೆ ಪ್ಲೇಯಿಂಗ್ ಇಲೆವೆನ್​ಗೆ ಸೇರ್ಪಡೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಸುಂದರ್ ಅಥವಾ ಜಡೇಜಾ ಇಬ್ಬರಲ್ಲಿ ವಿಶ್ರಾಂತಿ ನೀಡಿ ಪ್ರಸಿದ್ಧ್ ಕೃಷ್ಣ ಅವರನ್ನು ಪ್ಲೇಯಿಂಗ್ 11ಗೆ ಕರೆ ತರಬಹುದು ಎಂದು ವರದಿ ಹೇಳಿದೆ. ಈ ಸರಣಿ ಉದ್ದಕ್ಕೂ ಸ್ಪಿನ್ನರ್​ಗಳನ್ನು ಷಫಲ್ ಮಾಡುತ್ತಾ ಬರಲಾಗಿದೆ.

ಪರ್ತ್​ ಟೆಸ್ಟ್​ಗೆ ವಾಷಿಂಗ್ಟನ್ ಸುಂದರ್ ಅವರು ಸ್ಥಾನ ಪಡೆದಿದ್ದರು. ಬಳಿಕ ಎರಡನೇ ಟೆಸ್ಟ್​ಗೆ ರವಿಚಂದ್ರನ್ ಅಶ್ವಿನ್ ಪ್ಲೇಯಿಂಗ್ 11ನಲ್ಲಿ ಸ್ಥಾನ ಪಡೆದರು. ಮೂರನೇ ಟೆಸ್ಟ್​ಗೆ ರವೀಂದ್ರ ಜಡೇಜಾ ಅವಕಾಶ ಗಿಟ್ಟಿಸಿಕೊಂಡರು. ನಾಲ್ಕನೇ ಟೆಸ್ಟ್​​ನಲ್ಲಿ ಸುಂದರ್​ ಮತ್ತು ಜಡೇಜಾ ಅವರು ಒಟ್ಟಿಗೆ ಆಡಿದರು. ಇದೀಗ 5ನೇ ಟೆಸ್ಟ್​ಗೆ ಇಬ್ಬರಲ್ಲಿ ಒಬ್ಬರನ್ನು ಕೈ ಬಿಡಲು ಚಿಂತನೆ ನಡೆದಿದೆ. ಕೆಲವೊಂದು ವರದಿಗಳ ಪ್ರಕಾರ ರೋಹಿತ್​ ಶರ್ಮಾ ಅವರನ್ನೇ ಕೈಬಿಡಬಹುದು ಎಂದು ಹೇಳಲಾಗುತ್ತಿದೆ. ಆದರೆ ಪ್ಲೇಯಿಂಗ್ 11ನಲ್ಲಿ ಯಾರಿಗೆ ಅವಕಾಶ ಸಿಗಬಹುದು ಎಂಬುದನ್ನು ಕಾದುನೋಡೋಣ.

Whats_app_banner