ಕನ್ನಡ ಸುದ್ದಿ  /  Cricket  /  Rishabh Pant To Get Clearance From Nca On This Date Wicket Keeper Batter To Return Before Ipl 2024 Delhi Capitals Prs

Rishabh Pant: ರಿಷಭ್​ ಪಂತ್​ ಐಪಿಎಲ್​ ಆಡಬೇಕೇ ಬೇಡವೇ ಎನ್ನುವುದನ್ನು ನಿರ್ಧರಿಸುತ್ತದೆ ಈ ದಿನ!

Rishabh Pant: ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿಕೆಟ್ ಕೀಪರ್ ರಿಷಭ್ ಪಂತ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್​ ಆಡಬೇಕೆ ಬೇಡವೇ ಎನ್ನುವುದನ್ನು ಈ ದಿನಾಂಕ ನಿರ್ಧರಿಸುತ್ತದೆ.

ರಿಷಭ್​ ಪಂತ್​ ಐಪಿಎಲ್​ ಆಡಬೇಕೇ ಬೇಡವೇ ಎನ್ನುವುದನ್ನು ನಿರ್ಧರಿಸುತ್ತದೆ ಈ ದಿನ
ರಿಷಭ್​ ಪಂತ್​ ಐಪಿಎಲ್​ ಆಡಬೇಕೇ ಬೇಡವೇ ಎನ್ನುವುದನ್ನು ನಿರ್ಧರಿಸುತ್ತದೆ ಈ ದಿನ

2022ರ ಡಿಸೆಂಬರ್ 30ರಂದು ಭೀಕರ ಅಪಘಾತಕ್ಕೆ ಒಳಗಾದ ಬಳಿಕ ಕ್ರಿಕೆಟ್ ಸೇವೆಯಿಂದ ದೂರ ಉಳಿದಿರುವ ಟೀಮ್ ಇಂಡಿಯಾ ವಿಕೆಟ್ ಕೀಪರ್ ರಿಷಭ್ ಪಂತ್​ (Rishabh Pant) ಇದೀಗ ಐಪಿಎಲ್​ಗೆ (IPL 2024) ಮರಳಲು ಸಜ್ಜಾಗಿದ್ದಾರೆ. ಆದರೆ ಅವರು ಇಂಡಿಯನ್ ಪ್ರೀಮಿಯರ್ ಲೀಗ್​ ಆಡಬೇಕೆ ಬೇಡವೇ ಎನ್ನುವುದನ್ನು ಈ ದಿನಾಂಕ ನಿರ್ಧರಿಸುತ್ತದೆ.

ರಿಷಭ್​ ಪಂತ್ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳುವುದನ್ನು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಸದ್ಯ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (NCA) ನಲ್ಲಿ ಚೇತರಿಸಿಕೊಳ್ಳುತ್ತಿರುವ ವಿಕೆಟ್ ಕೀಪರ್​, ಐಪಿಎಲ್​ಗೆ ಮರಳಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. 2022ರ ಡಿಸೆಂಬರ್​​​ನಲ್ಲಿ ಬಾಂಗ್ಲಾದೇಶ ವಿರುದ್ಧ ಕೊನೆಯದಾಗಿ ಟೆಸ್ಟ್ ಆಡಿದ್ದರು. ಆ ಬಳಿಕ ಯಾವುದೇ ಕ್ರಿಕೆಟ್ ಪಂದ್ಯವನ್ನಾಡಿಲ್ಲ.

ಮಾರ್ಚ್ 5ರಂದು ಕ್ಲಿಯರೆನ್ಸ್ ಪತ್ರ

ಪಂತ್2022 ರ ಡಿಸೆಂಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಮಿರ್‌ಪುರದಲ್ಲಿ ಟೆಸ್ಟ್‌ನಲ್ಲಿ ಭಾರತಕ್ಕಾಗಿ ಕೊನೆಯ ಪಂದ್ಯವನ್ನು ಆಡಿದ್ದರು. ಈಗ ಸಂಪೂರ್ಣ ಚೇತರಿಸಿಕೊಳ್ಳುವ ಸಮೀಪದಲ್ಲಿದ್ದಾರೆ. ಶೀಘ್ರದಲ್ಲೇ ಮತ್ತೆ ಕ್ರಿಕೆಟ್ ಮೈದಾನಕ್ಕೆ ಮರಳುವ ನಿರೀಕ್ಷೆ ಇದೆ. ಐಪಿಎಲ್​ ಆರಂಭಕ್ಕೆ ಎರಡು ವಾರಗಳ ಮುಂಚಿತವಾಗಿ ವಿಕೆಟ್‌ ಕೀಪರ್​​ಗೆ ಮಾರ್ಚ್ 5 ರಂದು ಎನ್​ಸಿಎಯಿಂದ ಕ್ಲಿಯರೆನ್ಸ್ ನೀಡಲಾಗುವುದು ಎನ್ನುತ್ತಿವೆ ವರದಿಗಳು.

2023ರಲ್ಲಿ ಸಂಪೂರ್ಣ ಕ್ರಿಕೆಟ್ ಕ್ರಿಯೆಯನ್ನು ತಪ್ಪಿಸಿಕೊಂಡ 26 ವರ್ಷದ ಪಂತ್ ಅನುಪಸ್ಥಿತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್​​ ತಂಡದಲ್ಲಿ ಡೇವಿಡ್ ವಾರ್ನರ್ ಅವರಿಗೆ ನಾಯಕತ್ವ ನೀಡಲಾಗಿತ್ತು. ಪಂತ್ ಈಗ ಹಿಂತಿರುಗಿ ಮುಂಬರುವ ಆವೃತ್ತಿಗೆ ಡೆಲ್ಲಿ ತಂಡವನ್ನು ಮುನ್ನಡೆಸಲು ರೆಡಿಯಾಗಿದ್ದಾರೆ. ಡೆಲ್ಲಿ ಕ್ರಿಕೆಟ್ ನಿರ್ದೇಶಕ ಸೌರವ್ ಗಂಗೂಲಿ ಅವರು ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾಗೆ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಸೌರವ್ ಗಂಗೂಲಿ ಹೇಳಿದ್ದೇನು?

ಪಂತ್​ ಫಿಟ್ ಆಗಲು ಎಲ್ಲವನ್ನೂ ಮಾಡಿದ್ದಾರೆ ಮತ್ತು ಅದಕ್ಕಾಗಿಯೇ ಎನ್​ಸಿಎ ಅವರನ್ನು ತೆರವುಗೊಳಿಸುತ್ತದೆ. ರಿಷಭ್ ಅವರನ್ನು ಮಾರ್ಚ್ 5 ರಂದು ತೆರವುಗೊಳಿಸಿದ ನಂತರ ನಾವು ನಾಯಕತ್ವದ ಬ್ಯಾಕಪ್ ಬಗ್ಗೆ ಮಾತನಾಡುತ್ತೇವೆ. ಎಚ್ಚರಿಕೆಯ ವಿಧಾನದ ಕುರಿತು ತಿಳಿಸುತ್ತೇವೆ. ಏಕೆಂದರೆ ಅವರಿಗೆ ದೀರ್ಘವಾದ ವೃತ್ತಿಜೀವನ ಇದೆ. ಅವರ ಉತ್ಸಾಹ ಕುಸಿಯದಂತೆ ನೋಡಿಕೊಳ್ಳುತ್ತೇವೆ ಎಂದಿದ್ದಾರೆ.

ರಿಷಭ್ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ನಾವು ನೋಡುತ್ತೇವೆ. ಎನ್​ಸಿಎ ಅವರಿಗೆ ಅನುಮತಿ ನೀಡಿದ ನಂತರ ಅವರು ಶಿಬಿರವನ್ನು ಸೇರಿಕೊಳ್ಳುತ್ತಾರೆ. ನಾವು ಪಂದ್ಯದಿಂದ ಪಂದ್ಯವನ್ನು ಪರಿಶೀಲಿಸುತ್ತೇವೆ. ವಿಕೆಟ್ ಕೀಪಿಂಗ್ ಆಯ್ಕೆಗಳಿಗೆ ಸಂಬಂಧಿಸಿದಂತೆ ಕುಮಾರ್ ಕುಶಾಗ್ರಾ, ರಿಕಿ ಭುಯಿ ಇದ್ದಾರೆ. ಶೈಯ್ ಹೋಪ್ - ಟ್ರಿಸ್ಟಾನ್ ಸ್ಟಬ್ಸ್ ಕೂಡ ಇದ್ದಾರೆ. ಹಾಗಾಗಿ ಹೆಚ್ಚು ಗೊಂದಲ ತೆಗೆದುಕೊಳ್ಳುವ ಅಗತ್ಯ ಇಲ್ಲ ಎಂದು ಹೇಳಿದ್ದಾರೆ.