ಕನ್ನಡ ಸುದ್ದಿ  /  Cricket  /  Rishabh Pant Will Captain Delhi Capitals In Ipl 2024 Dc Owner Gives Huge Update On Injured Wicket Keeper Pant Prs

ಡೆಲ್ಲಿ ಕ್ಯಾಪಿಟಲ್ಸ್​ ಫ್ಯಾನ್ಸ್​​ಗೆ ಗುಡ್​ನ್ಯೂಸ್: ರಿಷಭ್ ಪಂತ್ ಐಪಿಎಲ್​ ಆಡುವುದು ಖಚಿತ, ಆದರೆ ಷರತ್ತುಗಳು ಅನ್ವಯ

Rishabh Pant : ಭಾರತೀಯ ಕ್ರಿಕೆಟ್, ಡೆಲ್ಲಿ ಕ್ಯಾಪಿಟಲ್ಸ್​ ತಂಡ ಮತ್ತು ಕ್ರಿಕೆಟ್​ ಅಭಿಮಾನಿಗಳಿಗೆ ಗುಡ್​ನ್ಯೂಸ್​ ಸಿಕ್ಕಿದೆ. ರಿಷಭ್ ಪಂತ್ ಐಪಿಎಲ್​ನಲ್ಲಿ ಆಡಲಿದ್ದಾರೆ ಎಂದು ತಂಡದ ಮಾಲೀಕರು ಖಚಿತಪಡಿಸಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್​ ಫ್ಯಾನ್ಸ್​​ಗೆ ಗುಡ್​ನ್ಯೂಸ್: ರಿಷಭ್ ಪಂತ್ ಐಪಿಎಲ್​ ಆಡುವುದು ಖಚಿತ
ಡೆಲ್ಲಿ ಕ್ಯಾಪಿಟಲ್ಸ್​ ಫ್ಯಾನ್ಸ್​​ಗೆ ಗುಡ್​ನ್ಯೂಸ್: ರಿಷಭ್ ಪಂತ್ ಐಪಿಎಲ್​ ಆಡುವುದು ಖಚಿತ

17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಟೂರ್ನಿಗೆ ವೇಳಾಪಟ್ಟಿ ಪ್ರಕಟಿಸಿದೆ. ಮಾರ್ಚ್​ 22ರಿಂದ ಉದ್ಘಾಟನಾ ಲೀಗ್​ ಆರಂಭವಾಗಲಿದ್ದು, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು (CSK vs RCB) ಸೆಣಸಾಟ ನಡೆಸಲಿವೆ. ಈ ಪಂದ್ಯಕ್ಕೆ ಚೆನ್ನೈನ ಚೆಪಾಕ್ ಸ್ಟೇಡಿಯಂ ಆತಿಥ್ಯ ವಹಿಸಲಿದೆ. ಇದರ ನಡುವೆ ಭಾರತೀಯ ಕ್ರಿಕೆಟ್, ಡೆಲ್ಲಿ ಕ್ಯಾಪಿಟಲ್ಸ್​ ತಂಡ ಮತ್ತು ಕ್ರಿಕೆಟ್​ ಅಭಿಮಾನಿಗಳಿಗೆ ಗುಡ್​ನ್ಯೂಸ್​ ಸಿಕ್ಕಿದೆ.

ಈ ಸಲ ಲೋಕಸಭಾ ಚುನಾವಣೆಯ ಕಾರಣ 21 ದಿನಗಳ ವೇಳಾಪಟ್ಟಿ ಮಾತ್ರ ಪ್ರಕಟಿಸಿದೆ. ಈ ಬಾರಿಯ ಐಪಿಎಲ್​​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ರಿಷಭ್ ಪಂತ್ (Rishabh Pant) ಅವರೇ ಮುನ್ನಡೆಸಲಿದ್ದಾರೆ ಎಂದು ಫ್ರಾಂಚೈಸ್‌ನ ಸಹ-ಮಾಲೀಕರು ಖಚಿತಪಡಿಸಿದ್ದಾರೆ. ಈ ಬಗ್ಗೆ ಪಾರ್ಥ ಜಿಂದಾಲ್ ಇಎಸ್​ಪಿಎನ್​ ಕ್ರಿಕ್​​ಇನ್ಫೋಗೆ ಮಾಹಿತಿ ನೀಡಿದ್ದಾರೆ. ಹಾಗೆಯೇ ಗಾಯಗೊಂಡಿದ್ದ ದಕ್ಷಿಣ ಆಫ್ರಿಕಾದ ಆನ್ರಿಚ್ ನೊಕಿಯಾ ಕೂಡ ಕಂಬ್ಯಾಕ್ ಮಾಡಲಿದ್ದಾರೆ ಎಂದು ಸಹ ಖಚಿತಪಡಿಸಿದ್ದಾರೆ.

ನಾಯಕನಾಗಿ ಬ್ಯಾಟರ್​ ಆಗಿ ಪಂತ್​ ಕಣಕ್ಕೆ

ಇಎಸ್​ಪಿಎನ್ ಜೊತೆಗಿನ ಸಂವಾದದಲ್ಲಿ ಪಾರ್ಥ ಜಿಂದಾಲ್ ಅವರು ರಿಷಭ್​ ಪಂತ್ ಮೊದಲ ಪಂದ್ಯದಿಂದಲೇ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಮುನ್ನಡೆಸಲಿದ್ದಾರೆ ಎಂದು ಹೇಳಿದರು. ಆದಾಗ್ಯೂ, ಮೊದಲ ಏಳು ಪಂದ್ಯಗಳಲ್ಲಿ ನಾಯಕನಾಗಿ ಮತ್ತುs ಬ್ಯಾಟರ್ ಆಗಿ ಮಾತ್ರ ಆಡುತ್ತಾರೆ. ಅವರ ದೇಹವು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದರ ಆಧಾರದ ಮೇಲೆ, ಐಪಿಎಲ್‌ನ ಉಳಿದ ಪಂದ್ಯಗಳಲ್ಲಿ ವಿಕೆಟ್ ಕೀಪಿಂಗ್ ಮಾಡುತ್ತಾರೆ ಎಂದು ಹೇಳಿದ್ದಾರೆ.. ಐಪಿಎಲ್ 2024ರ ಸಂಪೂರ್ಣ ಪಂದ್ಯಕ್ಕೆ ಪಂತ್ ಸಂಪೂರ್ಣ ಫಿಟ್ ಆಗಿರುತ್ತಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಸದ್ಯ ರಿಷಭ್ ಬ್ಯಾಟಿಂಗ್ ಮಾಡುತ್ತಿದ್ದಾರೆ, ಓಡುತ್ತಿದ್ದಾರೆ. ವಿಕೆಟ್ ಕೀಪಿಂಗ್ ಪ್ರಾರಂಭಿಸಿದ್ದಾರೆ. ಐಪಿಎಲ್‌ಗೆ ಸಂಪೂರ್ಣವಾಗಿ ಫಿಟ್ ಆಗುವ ಸಾಧ್ಯತೆಯಿದೆ. ಮೊದಲ ಪಂದ್ಯದಿಂದ ಮುನ್ನಡೆಸುತ್ತಾರೆ. ಮೊದಲ ಏಳು ಪಂದ್ಯಗಳಲ್ಲಿ ಬ್ಯಾಟರ್ ಆಗಿ ಕಣಕ್ಕಿಳಿಯಲಿದ್ದಾರೆ. ಅವರ ದೇಹವು ಹೇಗೆ ಸ್ಪಂದಿಸುತ್ತದೆ ಎಂಬುದರ ಮೇಲೆ ಉಳಿದ ಪಂದ್ಯಗಳಿಗೆ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿರ್ವಹಿಸಲಿದ್ದಾರೆ ಎಂದು ಜಿಂದಾಲ್ ಹೇಳಿದ್ದಾರೆ.

ಪಂತ್​ ಕ್ರಿಕೆಟ್​ಗೆ ಮರಳಿ ಒಂದು ವರ್ಷದ ಮೇಲಾಯ್ತು

2022ರ ಡಿಸೆಂಬರ್ 30ರ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ ಮರಳಲೇ ಇಲ್ಲ. ಐಪಿಎಲ್ 2023 ಮತ್ತು ಒಡಿಐ ವಿಶ್ವಕಪ್ ಸೇರಿದಂತೆ ಕಳೆದ ವರ್ಷ ಸಂಪೂರ್ಣ ಕ್ರಿಕೆಟ್​​ನಿಂದ ದೂರ ಉಳಿದಿದ್ದರು. ದಕ್ಷಿಣ ಆಫ್ರಿಕಾದ ವೇಗಿ ಆನ್ರಿಚ್ ನೋಕಿಯಾ ಅವರು ಐಪಿಎಲ್ 2024 ರಲ್ಲಿ ಗಾಯದಿಂದ ಪುನರಾಗಮನ ಮಾಡಲಿದ್ದಾರೆ. ಅವರು ಬೌಲಿಂಗ್ ಮಾಡುತ್ತಿದ್ದಾರೆ ಎಂದು ಜಿಂದಾಲ್ ಹೇಳಿದ್ದಾರೆ. ಇನ್ನೂ ತಿಂಗಳು ಸಮಯ ಇದ್ದು, ಅಷ್ಟರೊಳಗೆ ಸಂಪೂರ್ಣ ಫಿಟ್​ ಆಗುತ್ತಾರೆ ಎಂದು ಹೇಳಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡ

ರಿಷಭ್ ಪಂತ್, ಪ್ರವೀಣ್ ದುಬೆ, ಡೇವಿಡ್ ವಾರ್ನರ್, ವಿಕ್ಕಿ ಓಸ್ತ್ವಾಲ್, ಪೃಥ್ವಿ ಶಾ, ಅನ್ರಿಚ್ ನೋಕಿಯಾ, ಅಭಿಷೇಕ್ ಪೊರೆಲ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಲುಂಗಿ ಎನ್‌ಗಿಡಿ, ಲಲಿತ್ ಯಾದವ್, ಖಲೀಲ್ ಅಹ್ಮದ್, ಮಿಚೆಲ್ ಮಾರ್ಷ್, ಇಶಾಂತ್ ಶರ್ಮಾ, ಯಶ್ ಧುಲ್, ಮುಖೇಶ್ ಕುಮಾರ್, ಹ್ಯಾರಿ ಬ್ರೂಕ್, ಟ್ರಿಸ್ಟಾನ್ ಸ್ಟಬ್ಸ್, ರಿಕಿ ಭುಯಿ, ಕುಮಾರ್ ಕುಶಾಗ್ರಾ, ರಸಿಖ್ ದಾರ್, ಝೈ ರಿಚರ್ಡ್ಸನ್, ಸುಮಿತ್ ಕುಮಾರ್, ಶಾಯ್ ಹೋಪ್, ಸ್ವಸ್ತಿಕ್ ಚಿಕಾರಾ.