ಮೊದಲ ಸೂಪರ್ ಓವರ್ ಬ್ಯಾಟಿಂಗ್ ನಡೆಸಿದವರಿಗೆ 2ನೇ ಬಾರಿ ಇಲ್ಲ ಅವಕಾಶ; ಆದರೂ ರೋಹಿತ್​ ಆಡಿದ್ದೇಕೆ; ನಿಯಮ ಹೇಳೋದೇನು?
ಕನ್ನಡ ಸುದ್ದಿ  /  ಕ್ರಿಕೆಟ್  /  ಮೊದಲ ಸೂಪರ್ ಓವರ್ ಬ್ಯಾಟಿಂಗ್ ನಡೆಸಿದವರಿಗೆ 2ನೇ ಬಾರಿ ಇಲ್ಲ ಅವಕಾಶ; ಆದರೂ ರೋಹಿತ್​ ಆಡಿದ್ದೇಕೆ; ನಿಯಮ ಹೇಳೋದೇನು?

ಮೊದಲ ಸೂಪರ್ ಓವರ್ ಬ್ಯಾಟಿಂಗ್ ನಡೆಸಿದವರಿಗೆ 2ನೇ ಬಾರಿ ಇಲ್ಲ ಅವಕಾಶ; ಆದರೂ ರೋಹಿತ್​ ಆಡಿದ್ದೇಕೆ; ನಿಯಮ ಹೇಳೋದೇನು?

Super Over Batsman Rules: ರೋಹಿತ್​ ಶರ್ಮಾಗೆ ಎರಡನೇ ಸೂಪರ್ ಓವರ್​ನಲ್ಲಿ ಬ್ಯಾಟಿಂಗ್ ಮಾಡಲು ಅವಕಾಶ ನೀಡಿದ್ದೇಕೆ? ಮೊದಲ ಸೂಪರ್ ಓವರ್​ನಲ್ಲಿ ಬ್ಯಾಟಿಂಗ್ ನಡೆಸಿದವರಿಗೆ 2ನೇ ಸೂಪರ್ ಓವರ್​ ಆಡಲು ಇಲ್ಲ ಅವಕಾಶ; ಆದರೂ ರೋಹಿತ್​ ಆಡಿದ್ದೇಕೆ? ನಿಯಮಗಳು ಏನು ಹೇಳುತ್ತವೆ? ಇಲ್ಲಿದೆ ವಿವರ

ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ.
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ. (AP)

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಭಾರತ, (India vs Afghanistan) ಭರ್ಜರಿ ಗೆಲುವು ದಾಖಲಿಸಿತು. ಡಬಲ್​ ಸೂಪರ್​ ಓವರ್​​ನಲ್ಲಿ ಗೆದ್ದ ಟೀಮ್ ಇಂಡಿಯಾ, 3-0 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿದೆ. ರೋಹಿತ್​ ಶರ್ಮಾ (Rohit Sharma) ಶತಕ ವೈಭವ ಮತ್ತು ಸೂಪರ್​​ ಓವರ್​​ಗಳಲ್ಲಿ ಬೆಂಕಿ-ಬಿರುಗಾಳಿ ಆಟ ಈಗಲೂ ಕಣ್ಣಿಗೆ ಕಟ್ಟುವಂತಿದೆ. ಆದರೆ ಇದೆಲ್ಲದರ ಹೊರತಾಗಿಯೂ ಪಂದ್ಯ ಒಂದು ಗೊಂದಲ ಉಂಟಾಗಿದೆ.

ಆದರೆ ರೋಚಕ ಪಂದ್ಯದ ನಂತರ 2ನೇ ಸೂಪರ್ ಓವರ್‌ಗೆ ಬ್ಯಾಟಿಂಗ್ ಮಾಡಲು ಬಂದ ಭಾರತದ ನಾಯಕ ಈಗ ವಿವಾದದ ಕೇಂದ್ರ ಬಿಂದು ಆಗಿದ್ದಾರೆ. ಹಾಗಾಗಿ ಒಂದು ಪ್ರಶ್ನೆ ಈಗಲೂ ಕಾಡುತ್ತಿದೆ. ಮೊದಲ ಸೂಪರ್​ ಓವರ್ ಆಡಿದ ಬ್ಯಾಟ್ಸ್​ಮನ್​ ಮತ್ತೊಂದು ಸೂಪರ್​ ಓವರ್​​​ನಲ್ಲಿ ಆಡುವಂತಿಲ್ಲ. ಆದರೂ ರೋಹಿತ್​ ಶರ್ಮಾ ಎರಡನೇ ಸೂಪರ್​​ನಲ್ಲಿ ಆಡಿದ್ದೇಕೆ ಎಂದು ಕ್ರಿಕೆಟ್ ಪ್ರಿಯರು ತಲೆಕೆಡಿಸಿಕೊಂಡಿದ್ದಾರೆ. ಇಲ್ಲಿದೆ ಉತ್ತರ.

ಸೂಪರ್​​ ಓವರ್​​ನಲ್ಲಿ ಏನೆಲ್ಲಾ ಆಯಿತು?

ಅಂತಿಮ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ, 20 ಓವರ್​​​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 212 ರನ್​ ಕಲೆ ಹಾಕಿತು. ಈ ಗುರಿ ಬೆನ್ನಟ್ಟಿದ ಪ್ರವಾಸಿ ತಂಡ, 6 ವಿಕೆಟ್ ನಷ್ಟಕ್ಕೆ ಸ್ಕೋರ್ ಅನ್ನು 212ಕ್ಕೆ ಸಮಗೊಳಿಸಿತು. ಹಾಗಾಗಿ ಸೂಪರ್​ ಓವರ್​ ಮೊರೆ ಹೋಗಬೇಕಾಯಿತು. ಮೊದಲ ಸೂಪರ್ ಓವರ್​​​ನಲ್ಲಿ ಅಫ್ಘನ್ ಗಳಿಸಿದ್ದ 16 ರನ್​ಗಳ ಮೊತ್ತ ಗಳಿಸಿ ಭಾರತ ಸಮ ಮಾಡಿತು. ಇದರಿಂದ ಎರಡನೇ ಸೂಪರ್ ಓವರ್​​ನಲ್ಲಿ ಭಾರತ 2 ವಿಕೆಟ್ ನಷ್ಟಕ್ಕೆ 11 ರನ್ ಗಳಿಸಿತು. ಕೊನೆಗೆ ಎರಡನೇ ಸೂಪರ್ ಓವರ್​​ನಲ್ಲಿ ಟೀಮ್ ಇಂಡಿಯಾ, ಗೆಲುವು ದಾಖಲಿಸಿತು.

ಮೊದಲ ಸೂಪರ್​ನಲ್ಲಿ ಬ್ಯಾಟಿಂಗ್​​ಗಿಳಿದ ರೋಹಿತ್​, ಭರ್ಜರಿ ಎರಡು ಸಿಕ್ಸರ್ ಸಹಿತ 13 ರನ್ ಗಳಿಸಿದರು. ಮತ್ತೆ ಎರಡನೇ ಇನ್ನಿಂಗ್ಸ್​​ನಲ್ಲಿ 11 ರನ್ ಗಳಿಸಿದರು. ಆದರೆ ಮೊದಲ ಸೂಪರ್ ಓವರ್​​ನಲ್ಲಿ ಬ್ಯಾಟಿಂಗ್ ಮಾಡಲು ಜೈಸ್ವಾಲ್ ಜೊತೆಗೂಡಿ ಬಂದರು. ಆದಾಗ್ಯೂ, ಕೊನೆಯ ಎಸೆತಕ್ಕೂ ಮೊದಲು ಭಾರತಕ್ಕೆ ಗೆಲ್ಲಲು ಎರಡು ರನ್ ಅಗತ್ಯವಿದ್ದಾಗ ರಿಂಕು ಸಿಂಗ್ ಅವರನ್ನು ಕ್ರೀಸ್​ಗೆ ಕರೆಸಿದರು. ನಾನ್​​ಸ್ಟ್ರೈಕ್​​ನಲ್ಲಿ ಜಾಗ ಬಿಟ್ಟು ರೋಹಿತ್​ ರಿಟೈರ್ಡ್ ಹರ್ಟ್ ಆಗಿ ಹೊರ ನಡೆದರು. ತದನಂತರ ಎರಡನೇ ಸೂಪರ್​ ಓವರ್​ನಲ್ಲಿ ರಿಂಕು-ರೋಹಿತ್ ಮತ್ತೆ ಬಂದರು.

ಸೂಪರ್ ಓವರ್‌ಗಳಲ್ಲಿ ಬ್ಯಾಟಿಂಗ್ ಬಗ್ಗೆ ನಿಯಮಗಳು ಏನು ಹೇಳುತ್ತವೆ?

ಎಂಸಿಸಿ ಕಾನೂನಿನ ಪ್ರಕಾರ, ಮೊದಲ ಸೂಪರ್ ಓವರ್‌ನಲ್ಲಿ ಔಟಾದ ಬ್ಯಾಟರ್ ಎರಡನೇ ಓವರ್‌ನಲ್ಲಿ ಬ್ಯಾಟ್ ಮಾಡಲು ಸಾಧ್ಯವಿಲ್ಲ. ಸೂಪರ್ ಓವರ್​ಗಳ ಮೊದಲು 2 ತಂಡಗಳು ತಾವು ಆಯ್ಕೆ ಮಾಡಿದ ಬ್ಯಾಟರ್‌ಗಳ ಪಟ್ಟಿಯನ್ನು ಅಂತಿಮಗೊಳಿಸುತ್ತವೆ. ಮೊದಲ ಸೂಪರ್ ಓವರ್‌ಗೆ ಕೊಟ್ಟ ಬ್ಯಾಟರ್​​​ಗಳ ಪಟ್ಟಿಯಲ್ಲಿ ಬ್ಯಾಟ್ಸ್​ಮನ್​ ಬ್ಯಾಟಿಂಗ್ ಮಾಡದಿದ್ದರೆ ಅಥವಾ ಔಟಾಗದಿದ್ದರೆ, ಅವರು ಎರಡನೇ ಸೂಪರ್ ಓವರ್‌ನಲ್ಲಿ ಬ್ಯಾಟಿಂಗ್ ಮಾಡಲು ಅರ್ಹನಾಗಿರುತ್ತಾನೆ.

ಆದರೂ ರೋಹಿತ್ ಏಕೆ ಬ್ಯಾಟ್ ಮಾಡಿದರು ಎಂಬ ಗೊಂದಲ ಇನ್ನೂ ಮುಂದುವರಿದಿದೆ. ರಿಟೈರ್ಡ್ ಆಗಿದ್ದಕ್ಕೂ, ರಿಟೈರ್ಡ್ 'ಔಟ್'ಗೂ ವ್ಯತ್ಯಾಸವಿದೆ. ಬ್ಯಾಟರ್ ಆದರೆ ಅವರು ಮತ್ತೆ ಬ್ಯಾಟಿಂಗ್ ಮಾಡಬಹುದು. ಆದರೆ ರಿಟೈರ್ಡ್ ಔಟಾದರೆ ಮತ್ತೆ ಬ್ಯಾಟಿಂಗ್ ಮಾಡಲು ಸಾಧ್ಯವಿಲ್ಲ. ಅದರಂತೆ ರೋಹಿತ್ ರಿಟೈರ್​ ಆಗಿ ಮತ್ತೆ ಕಣಕ್ಕಿಳಿದರು. ಇದೇ ಕಾರಣಕ್ಕೆ ರೋಹಿತ್​ಗೆ ಮತ್ತೆ ಆಡಲು ಅವಕಾಶ ನೀಡಲಾಗಿದೆ.

ಸೂಪರ್ ಓವರ್‌ಗಳಲ್ಲಿ ಬ್ಯಾಟಿಂಗ್ ಮಾಡುವ ಬಗ್ಗೆ ಎಂಸಿಸಿ ಹೇಳುವುದೇನು?

ಎಂಸಿಸಿಯ 25.4.2 ನಿಯಮದ ಪ್ರಕಾರ ಅನಾರೋಗ್ಯ, ಗಾಯ ಅಥವಾ ಯಾವುದೇ ಇತರ ಅನಿವಾರ್ಯ ಕಾರಣಕ್ಕೆ ಬ್ಯಾಟರ್ ನಿವೃತ್ತರಾದರೆ, ಆ ಬ್ಯಾಟರ್ (ಪುರುಷ/ಮಹಿಳೆ) ಇನ್ನಿಂಗ್ಸ್ ಪುನರಾರಂಭಿಸಲು ಅರ್ಹನಾಗಿರುತ್ತಾರೆ. ಒಂದು ವೇಳೆ ಈ ಘಟನೆಗಳು ಸಂಭವಿಸದಿದ್ದರೆ ಆ ಬ್ಯಾಟರ್ ಅನ್ನು 'ರಿಟೈರ್ಡ್ - ನಾಟ್ ಔಟ್' ಎಂದು ದಾಖಲಿಸಬೇಕು. ಅವರಿಗೆ ಮತ್ತೆ ಆಡಲು ಅವಕಾಶ ನೀಡಲಾಗುತ್ತದೆ.

ಎಂಸಿಸಿಯ ಮತ್ತೊಂದು ನಿಯಮ 25.4.3 - 25.4.2ರಂತೆ ಯಾವುದೇ ಕಾರಣಕ್ಕಾಗಿ ಬ್ಯಾಟರ್ ನಿವೃತ್ತರಾದರೆ ಎದುರಾಳಿ ತಂಡದ ನಾಯಕನ ಒಪ್ಪಿಗೆಯೊಂದಿಗೆ ಮಾತ್ರ ಆ ಬ್ಯಾಟರ್​​ನ ಇನ್ನಿಂಗ್ಸ್ ಪುನರಾರಂಭಿಸಬಹುದು. ಬ್ಯಾಟರ್ (ಪುರುಷ/ಮಹಿಳೆ) ಇನ್ನಿಂಗ್ಸ್ ಪುನರಾರಂಭಿಸದಿದ್ದರೆ, ಅವರನ್ನು 'ರಿಟೈರ್ಡ್ - ಔಟ್' ಎಂದು ದಾಖಲಿಸಬೇಕಾಗುತ್ತದೆ. ಇದು ಔಟ್ ಎಂದು ಅರ್ಥ.

ಎರಡನೇ ಸೂಪರ್ ಓವರ್ ಕೂಡ ಟೈ ಆದರೆ?

2ನೇ ಓವರ್​ ಕೂಡ ಟೈ ಆದರೆ ನಾವು 3ನೇ ಸೂಪರ್ ಓವರ್​ಗೆ ಪ್ರವೇಶಿಸುತ್ತೇವೆ. ಮತ್ತು ಫಲಿತಾಂಶ ನಿರ್ಧರಿಸುವವರೆಗೆ ಇದು ಮುಂದುವರೆಯುತ್ತದೆ. ಕಳೆದ ರಾತ್ರಿಯ ಆಟ ಸೇರಿದಂತೆ ಡಬಲ್ ಸೂಪರ್ ಓವರ್‌ ನಡೆಯಿತು. ಮೊದಲ ಬಾರಿಗೆ ಡಬಲ್ ಸೂಪರ್​ ಓವರ್​​ಗಳು ನಡೆದಿದ್ದು ಐಪಿಎಲ್​ನಲ್ಲಿ. 2020ರಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯಕ್ಕೆ ಈ ಡಬಲ್ ಸೂಪರ್ ಓವರ್ ಸಾಕ್ಷಿಯಾಗಿತ್ತು. ಕ್ರಿಕೆಟ್ ಜಗತ್ತಿನಲ್ಲಿ ಮೂರನೇ ಸೂಪರ್ ಓವರ್ ನಡೆದಿಲ್ಲ. ಅದಕ್ಕಾಗಿ ಕಾಯಬೇಕಿದೆ.

'ಮನೆ-ಮನದಲ್ಲಿ ಶ್ರೀರಾಮ' ಸರಣಿಗೆ ನೀವೂ ಬರೆಯಿರಿ. ಇಮೇಲ್: ht.kannada@htdigital.in

Whats_app_banner