ಕನ್ನಡ ಸುದ್ದಿ  /  Cricket  /  Rohit Sharma Becomes 1st Captain To Triumph In England Bazball Era India 17th Home Series Win Ind Vs Eng Fourth Test Prs

ಇಂಗ್ಲೆಂಡ್​ ವಿರುದ್ಧ ಸರಣಿ ಗೆದ್ದು ಐತಿಹಾಸಿಕ ದಾಖಲೆ ಬರೆದ ರೋಹಿತ್​ ಶರ್ಮಾ; ಬಜ್​ಬಾಲ್ ಯುಗದಲ್ಲಿ ಈ ಸಾಧನೆಗೈದ ಏಕೈಕ ನಾಯಕ

Captain Rohit Sharma : ಬಜ್​ಬಾಲ್ ಯುಗದಲ್ಲಿ ಇಂಗ್ಲೆಂಡ್ ವಿರುದ್ಧ ಸರಣಿ ಗೆದ್ದ ವಿಶ್ವದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ರೋಹಿತ್ ಶರ್ಮಾ ಪಾತ್ರರಾಗಿದ್ದಾರೆ.

ಇಂಗ್ಲೆಂಡ್​ ವಿರುದ್ಧ ಸರಣಿ ಗೆದ್ದು ಐತಿಹಾಸಿಕ ದಾಖಲೆ ಬರೆದ ರೋಹಿತ್​ ಶರ್ಮಾ.
ಇಂಗ್ಲೆಂಡ್​ ವಿರುದ್ಧ ಸರಣಿ ಗೆದ್ದು ಐತಿಹಾಸಿಕ ದಾಖಲೆ ಬರೆದ ರೋಹಿತ್​ ಶರ್ಮಾ. (PTI)

ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್‌ ಪಂದ್ಯದಲ್ಲಿಯೂ ‌ಟೀಮ್ ಇಂಡಿಯಾ ರೋಚಕ ಜಯ ಸಾಧಿಸಿದೆ. ಇದರೊಂದಿಗೆ ಒಂದು ಪಂದ್ಯ ಬಾಕಿ ಉಳಿದಿರುವಂತೆಯೇ 5 ಪಂದ್ಯಗಳ ಸರಣಿಯನ್ನು 3-1 ಅಂತರದಿಂದ ವಶಪಡಿಸಿಕೊಂಡಿದೆ. ರಾಂಚಿಯ ಜೆಎಸ್‌ಸಿಎ ಅಂತಾರಾಷ್ಟ್ರೀಯ ಸ್ಟೇಡಿಯಂ ಕಾಂಪ್ಲೆಕ್ಸ್‌ನಲ್ಲಿ ನಡೆದ ಪಂದ್ಯದಲ್ಲಿ 192 ರನ್‌​ಗಳ ಸುಲಭ ಗುರಿ ಪಡೆದ ಭಾರತ, 61 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ ಗೆದ್ದು ಬೀಗಿದೆ.

ಒಂದು ಹಂತದಲ್ಲಿ 120 ರನ್‌ ವೇಳೆಗೆ 5 ವಿಕೆಟ್‌ ಕಳೆದುಕೊಂಡಿದ್ದ ಭಾರತ, ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಧ್ರುವ್‌ ಜುರೆಲ್‌ ಹಾಗೂ ಶುಭ್ಮನ್‌ ಗಿಲ್‌ ಪ್ರಬುದ್ಧ ಆಟವಾಡಿದರು. ಅಜೇಯ 72 ರನ್‌ಗಳ ಆಕರ್ಷಕ ಮತ್ತು ಅಗತ್ಯ ಜೊತೆಯಾಟವಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಕೊನೆ ಹಂತದಲ್ಲಿ ಸತತ ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ತಂಡದ ಒತ್ತಡ ಕಡಿಮೆ ಮಾಡಿದ ಗಿಲ್‌, ಅರ್ಧಶತಕ ಸಿಡಿಸಿ ಸಂಭ್ರಮಿಸಿದರು.

ನಾಲ್ಕನೇ ಟೆಸ್ಟ್‌ ಪಂದ್ಯದ ಮೂರನೇ ದಿನದಂತ್ಯಕ್ಕೆ ಭಾರತವು 8 ಓವರ್‌ಗ​ಳಿಗೆ 40 ರನ್ ಗಳಿಸಿತ್ತು. ಅದಕ್ಕೂ ಮುನ್ನ ಅಶ್ವಿನ್‌ ಸೇರಿದಂತೆ ಭಾರತದ ಪ್ರಬಲ ಸ್ಪಿನ್​ ದಾಳಿಗೆ ನಲುಗಿದ್ದ ಇಂಗ್ಲೆಂಡ್​, 2ನೇ ಇನ್ನಿಂಗ್ಸ್‌ನಲ್ಲಿ ಕೇವಲ 145 ರನ್‌​ಗಳಿಗೆ ಇನ್ನಿಂಗ್ಸ್‌ ಮುಗಿಸಿತು. ಹೀಗಾಗಿ ನಾಲ್ಕನೇ ದಿನದಾಟದಲ್ಲಿ ಭಾರತದ ಗೆಲುವಿಗೆ ಕೇವಲ 152 ರನ್‌ಗಳ ಅಗತ್ಯವಿತ್ತು. ಆದರೆ ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ನಾಯಕ ರೋಹಿತ್​ ಶರ್ಮಾ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ.

ಬಜ್​ಬಾಲ್​ ಯುಗದಲ್ಲಿ ಇಂಗ್ಲೆಂಡ್​ಗೆ ಸೋಲುಣಿಸಿದ ಮೊದಲ ಕ್ಯಾಪ್ಟನ್

ಇಂಗ್ಲೆಂಡ್​ ತಂಡದ ನಾಯಕರಾಗಿ ಬೆನ್​ ಸ್ಟೋಕ್ಸ್ ಮತ್ತು ಕೋಚ್​ ಆಗಿ ಬ್ರೆಂಡನ್ ಮೆಕಲಮ್ ನೇಮಕಗೊಂಡ ನಂತರ ಬಜ್​ಬಾಲ್ ಯುಗ ಆರಂಭಗೊಂಡಿತು. ಟೆಸ್ಟ್ ಕ್ರಿಕೆಟ್​ ಉಳುವಿಗೆ ನೂತನ ಪದ್ಧತಿಯನ್ನು ಆರಂಭಿಸಿತು. ಟೆಸ್ಟ್​​ನಲ್ಲಿ ಡ್ರಾ ಸಾಧಿಸುವ ಬದಲಿಗೆ, ಗೆಲ್ಲಬೇಕು ಅಥವಾ ಸೋಲಬೇಕು ಎನ್ನುವ ರೀತಿ ಆಡುವುದನ್ನು ಕಲಿಸಿತು. ಸ್ಟೋಕ್ಸ್ ಮತ್ತು ಮೆಕಲಮ್ ತಂಡದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಹೊಸ ಮನ್ವಂತರ ಸೃಷ್ಟಿಸಿದರು. ಒಂದೇ ಒಂದು ಸರಣಿಯನ್ನೂ ಅವರು ಸೋತಿರಲಿಲ್ಲ.

ಅವರ ಹೊಡಬಡಿ ಆಟದ ಮೂಲಕ ಬೇರೆ ದೇಶಗಳಿಗೆ ನಡುಕ ಹುಟ್ಟಿಸಿದ್ದ ಇಂಗ್ಲೆಂಡ್, ಬಜ್​ಬಾಲ್ ಯುಗದಲ್ಲಿ ಆ್ಯಷಸ್ ಸರಣಿಯನ್ನು ಡ್ರಾ ಸಾಧಿಸಿದ್ದರು. ಆದರೆ ಸೋತಿರಲಿಲ್ಲ. ಇದೀಗ ರೋಹಿತ್​ ನೇತೃತ್ವದ ಯುವ ಆಟಗಾರರ ತಂಡದ ಎದುರು ಭಾರತದ ನೆಲದಲ್ಲಿ ಸೊಲೊಪ್ಪಿಕೊಂಡಿದೆ. ಆ ಮೂಲಕ

ಈ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಭರ್ಜರಿ ಜಯ ಸಾಧಿಸಿತ್ತು. ಆದರೆ ಎರಡನೇ ಟೆಸ್ಟ್​​ನಲ್ಲಿ ಗೆಲುವು ಸಾಧಿಸಲು ವಿಫಲವಾಯಿತು. ಎರಡು ಮತ್ತು ಮೂರನೇ ಟೆಸ್ಟ್​ನಲ್ಲಿ ಸೋಲುವುದರೊಂದಿಗೆ ಹ್ಯಾಟ್ರಿಕ್​ ಪರಾಭವಗೊಂಡಿದೆ. ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ಸೋಲು ಕಂಡಿದೆ. ಅಲ್ಲದೆ ಬಜ್​ಬಾಲ್ ಯುಗದಲ್ಲಿ ಮೊದಲ ಬಾರಿಗೆ ಸರಣಿಯನ್ನು ಕೈಚೆಲ್ಲಿದೆ ಇಂಗ್ಲೆಂಡ್. ಮಾರ್ಚ್​ 7ರಂದು ಐದನೇ ಟೆಸ್ಟ್​​ ನಡೆಯಲಿದ್ದು, ಗೆದ್ದು ಅಭಿಯಾನ ಮುಗಿಸುವ ಲೆಕ್ಕಾಚಾರದಲ್ಲಿದೆ.

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point