ಎಂಎಸ್ ಧೋನಿ ನಿವೃತ್ತಿಯಾದರೆ ರೋಹಿತ್ ಶರ್ಮಾ ಸಿಎಸ್‌ಕೆ ಕ್ಯಾಪ್ಟನ್ ಆಗಬಹುದು: ಅಂಬಾಟಿ ರಾಯುಡು ಅಚ್ಚರಿ ಹೇಳಿಕೆ-rohit sharma can captain csk if ms dhoni retires former chennai super kings star ambati rayudu gives massive update prs ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಎಂಎಸ್ ಧೋನಿ ನಿವೃತ್ತಿಯಾದರೆ ರೋಹಿತ್ ಶರ್ಮಾ ಸಿಎಸ್‌ಕೆ ಕ್ಯಾಪ್ಟನ್ ಆಗಬಹುದು: ಅಂಬಾಟಿ ರಾಯುಡು ಅಚ್ಚರಿ ಹೇಳಿಕೆ

ಎಂಎಸ್ ಧೋನಿ ನಿವೃತ್ತಿಯಾದರೆ ರೋಹಿತ್ ಶರ್ಮಾ ಸಿಎಸ್‌ಕೆ ಕ್ಯಾಪ್ಟನ್ ಆಗಬಹುದು: ಅಂಬಾಟಿ ರಾಯುಡು ಅಚ್ಚರಿ ಹೇಳಿಕೆ

Ambati Rayudu on Rohit Sharma : ರೋಹಿತ್ ಶರ್ಮಾ ಅವರನ್ನು ಸಿಎಸ್‌ಕೆಯಲ್ಲಿ ನೋಡಲು ಬಯಸುತ್ತೇನೆ. ಅವರು ಮುಂಬೈ ಇಂಡಿಯನ್ಸ್‌ ಪರ ಸಾಕಷ್ಟು ಆಡಿದ್ದಾರೆ ಮತ್ತು ಗೆದ್ದಿದ್ದಾರೆ. ಸಿಎಸ್‌ಕೆಯಲ್ಲೂ ಪ್ರಶಸ್ತಿ ಗೆಲ್ಲುವುದನ್ನು ನೋಡಲು ಸಂತೋಷವಾಗುತ್ತದೆ ಎಂದು ಅಂಬಾಟಿ ರಾಯುಡು ಹೇಳಿದ್ದಾರೆ.

ಎಂಎಸ್ ಧೋನಿ ನಿವೃತ್ತಿಯಾದರೆ ರೋಹಿತ್ ಶರ್ಮಾ ಸಿಎಸ್‌ಕೆ ಕ್ಯಾಪ್ಟನ್ ಆಗಬಹುದು: ಅಂಬಾಟಿ ರಾಯುಡು ಅಚ್ಚರಿ ಹೇಳಿಕೆ
ಎಂಎಸ್ ಧೋನಿ ನಿವೃತ್ತಿಯಾದರೆ ರೋಹಿತ್ ಶರ್ಮಾ ಸಿಎಸ್‌ಕೆ ಕ್ಯಾಪ್ಟನ್ ಆಗಬಹುದು: ಅಂಬಾಟಿ ರಾಯುಡು ಅಚ್ಚರಿ ಹೇಳಿಕೆ

ಮಾರ್ಚ್ 22ರಿಂದ ಬಹುನಿರೀಕ್ಷಿತ 17ನೇ ಆವೃತ್ತಿಯ ಐಪಿಎಲ್ (IPL 2024)​ ಆರಂಭಗೊಳ್ಳಲಿದೆ. ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು (CSK vs RCB) ಸೆಣಸಾಟ ನಡೆಸಲಿವೆ. ಇದರ ನಡುವೆ ಭಾರತ ಮಾಜಿ ಆಟಗಾರ ಅಂಬಾಟಿ ರಾಯುಡು (Ambati Rayudu) ಅವರು, ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ರೋಹಿತ್​ ಶರ್ಮಾ (Rohit Sharm) ಆಡಬೇಕೆಂಬ ಬಯಕೆಯನ್ನು ಹೊರಹಾಕಿದ್ದಾರೆ. ಆ ತಂಡದ ನಾಯಕನಾಗಲೂ ಬಯಸಿದ್ದಾರೆ.

ನೂತನ ಆವೃತ್ತಿಯ ಐಪಿಎಲ್​ಗೂ ಮುನ್ನ ರೋಹಿತ್​ ಶರ್ಮಾ ಅವರನ್ನು ಮುಂಬೈ ಇಂಡಿಯನ್ಸ್ ಸಾರಥ್ಯದಿಂದ ಕೆಳಗಿಳಿಸಲಾಯಿತು. ಐದು ಟ್ರೋಫಿ ಗೆದ್ದುಕೊಟ್ಟ ರೋಹಿತ್​ ಬದಲಿಗೆ ಹಾರ್ದಿಕ್ ಪಾಂಡ್ಯಗೆ ನೂತನ ನಾಯಕನನ್ನಾಗಿ ಮುಂಬೈ ನೇಮಿಸಿದೆ. ಟ್ರೇಡ್ ಪದ್ದತಿಯಿಂದ ಗುಜರಾತ್ ಟೈಟಾನ್ಸ್ ತಂಡದಿಂದ 15 ಕೋಟಿ ನೀಡಿ ಅವರನ್ನು ಮುಂಬೈಗೆ ಕರೆಸಿಕೊಂಡಿದೆ. ಹಾರ್ದಿಕ್ ನಾಯಕತ್ವದಲ್ಲಿ ಗುಜರಾತ್ ಒಂದು ಸಲ ಚಾಂಪಿಯನ್, ಮತ್ತೊಮ್ಮೆ ರನ್ನರ್​ಅಪ್ ಆಗಿದೆ.

ಐಪಿಎಲ್​ನಲ್ಲಿ ಹಾರ್ದಿಕ್ ಪಾಂಡ್ಯ ಬೆಳೆದಿದ್ದು ರೋಹಿತ್​ ಶರ್ಮಾ ನಾಯಕತ್ವದಲ್ಲಿ. ಇದೀಗ ಹಾರ್ದಿಕ್ ಕ್ಯಾಪ್ಟನ್ಸಿಯಲ್ಲಿ ರೋಹಿತ್​ ಆಡಲು ಸಜ್ಜಾಗಿದ್ದಾರೆ. ಆದರೆ 2025ರ ಶ್ರೀಮಂತ ಕ್ರಿಕೆಟ್​ ಲೀಗ್​ಗೆ ಹಿಟ್​ಮ್ಯಾನ್ ನಡೆ ಏನಿರಲಿದೆ ಎಂಬುದು ಕುತೂಹಲ ಮೂಡಿಸಿದೆ. ಇದರ ನಡುವೆ ಅಂಬಟಿ ರಾಯುಡು ಅಚ್ಚರಿ ಹೇಳಿಕೆಯೊಂದನ್ನು ನೀಡಿದ್ದಾರೆ. ಧೋನಿ ನಿವೃತ್ತಿಯಾದರೆ ಚೆನ್ನೈಗೆ ರೋಹಿತ್​ ನಾಯಕನಾಗಲಿ ಎಂದು ಆಶಿಸಿದ್ದಾರೆ. ಈ ಹೇಳಿಕೆ ನೀಡುವ ಮೂಲಕ ಸಿಎಸ್​ಕೆ ಫ್ರಾಂಚೈಸಿಯಲ್ಲಿ ಭವಿಷ್ಯದ ನಾಯಕತ್ವದ ಬಗ್ಗೆ ಚರ್ಚೆಗಳನ್ನು ಹುಟ್ಟುಹಾಕಿದ್ದಾರೆ.

ಅಂಬಾಟಿ ರಾಯುಡು ಹೇಳಿದ್ದೇನು?

ರಾಯುಡು, ಇತ್ತೀಚಿನ ಟಾಕ್ ಶೋನಲ್ಲಿ ಇತ್ತೀಚೆಗೆ ಮುಂಬೈ ಇಂಡಿಯನ್ಸ್ ನಾಯಕತ್ವದಿಂದ ಕೆಳಗಿಳಿದ ರೋಹಿತ್ ಶರ್ಮಾ, ಎಂಎಸ್ ಧೋನಿ ನಿವೃತ್ತಿ ನಿರ್ಧರಿಸಿದರೆ ಸಿಎಸ್​ಕೆ ತಂಡವನ್ನು ಮುನ್ನಡೆಸಲು ಪ್ರಬಲ ಸ್ಪರ್ಧಿಯಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ನ್ಯೂಸ್ 24 ಸ್ಪೋರ್ಟ್ಸ್‌ನೊಂದಿಗೆ ಮಾತನಾಡಿದ ರಾಯುಡು, ರೋಹಿತ್ ಶರ್ಮಾ ಐಪಿಎಲ್‌ನಲ್ಲಿ ಇನ್ನೂ ಐದು ವರ್ಷಗಳ ಕಾಲ ಆಡಬಹುದು ಎಂದು ಹೇಳಿದ್ದಾರೆ.

ನಾನು ಅವರನ್ನು ಸಿಎಸ್‌ಕೆಯಲ್ಲಿ ನೋಡಲು ಬಯಸುತ್ತೇನೆ. ಅವರು ಮುಂಬೈ ಇಂಡಿಯನ್ಸ್‌ಗಾಗಿ ಸಾಕಷ್ಟು ಆಡಿದ್ದಾರೆ ಮತ್ತು ಗೆದ್ದಿದ್ದಾರೆ. ಅವರು ಸಿಎಸ್‌ಕೆಯಲ್ಲಿಯೂ ಪ್ರಶಸ್ತಿ ಗೆಲ್ಲುವುದನ್ನು ನೋಡಲು ಸಂತೋಷವಾಗುತ್ತದೆ. ನಾಯಕರಾಗಬೇಕೋ ಬೇಡವೋ ಎಂಬುದು ಅವರಿಗೆ ಬಿಟ್ಟದ್ದು ಎಂದು ರಾಯುಡು ಹೇಳಿದ್ದಾರೆ. 2025ರ ಐಪಿಎಲ್​ ಮೆಗಾ ಹರಾಜು ನಡೆಯಲಿದ್ದು, ರೋಹಿತ್​ ಶರ್ಮಾ ಮುಂಬೈ ತಂಡವನ್ನು ತೊರೆದರೂ ಅಚ್ಚರಿ ಇಲ್ಲ.

ಸದ್ಯ ರಾಯುಡು ಅವರ ಹೇಳಿಕೆ ಕ್ರಿಕೆಟ್ ಅಭಿಮಾನಿಗಳಲ್ಲಿ ಆಸಕ್ತಿ ಹುಟ್ಟುಹಾಕಿದೆ. ಏಕೆಂದರೆ, ಐಪಿಎಲ್‌ನಲ್ಲಿ ಎಂಎಸ್ ಧೋನಿ ಭವಿಷ್ಯ ಅನಿಶ್ಚಿತವಾಗಿದೆ. 5 ಐಪಿಎಲ್ ಪ್ರಶಸ್ತಿಗಳಿಗೆ ತಂಡವನ್ನು ಮುನ್ನಡೆಸಿರುವ ಐಕಾನಿಕ್ ಸಿಎಸ್‌ಕೆ ನಾಯಕ ಧೋನಿ, ಇನ್ನೂ ತಮ್ಮ ನಿವೃತ್ತಿಯ ಯೋಜನೆಯನ್ನು ಅಧಿಕೃತವಾಗಿ ಘೋಷಿಸಿಲ್ಲ. ಒಂದು ಈ ವರ್ಷದ ನಂತರ ಧೋನಿ ನಿವೃತ್ತಿ ಘೋಷಿಸಿದರೆ ರೋಹಿತ್​ ಮುಂಬೈ ತೊರೆದು ಚೆನ್ನೈ ತಂಡದಲ್ಲಿ ನಾಯಕನಾದರೂ ಅಚ್ಚರಿ ಇಲ್ಲ.