ಅಮೀರ್ ಖಾನ್ ತಿರಸ್ಕರಿಸಿ ರಣಬೀರ್ ಜೊತೆ ಫೋಟೋ ಬೇಕೆಂದ ರಿಷಭ್ ಪಂತ್; ಕುಹಕ ನಗೆ ಬೀರಿದ ರೋಹಿತ್ ಶರ್ಮಾ, ವಿಡಿಯೋ ವೈರಲ್
ಡ್ರೀಮ್ 11 ಜಾಹೀರಾತಿನಲ್ಲಿ ರೋಹಿತ್ ಶರ್ಮಾ, ರಿಷಭ್ ಪಂತ್ ಮತ್ತು ಇತರ ಭಾರತೀಯ ಕ್ರಿಕೆಟಿಗರು ಬಾಲಿವುಡ್ ಸೂಪರ್ಸ್ಟಾರ್ಗಳಾದ ಅಮೀರ್ ಖಾನ್, ರಣಬೀರ್ ಕಪೂರ್ ಜೊತೆ ನಟಿಸಿದ್ದಾರೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಅದ್ಧೂರಿ ತೆರೆ ಬಿದ್ದಿತು. ಇದೀಗ ಬಹುನಿರೀಕ್ಷಿತ 18ನೇ ಆವೃತ್ತಿಯ ಐಪಿಎಲ್ ಆರಂಭಕ್ಕೆ ದಿನಗಣಣೆ ಶುರುವಾಗಿದೆ. ಮಾರ್ಚ್ 22ರಿಂದ ಮೇ 25ರ ತನಕ ನಾನ್ಸ್ಟಾಪ್ 2 ತಿಂಗಳ ಕಾಲ ಭರ್ಜರಿ ಮನರಂಜನೆ ರಸದೌತಣ ಉಣಬಡಿಸಲಿದೆ. ಈಗಾಗಲೇ ಬಹುತೇಕ ಆಟಗಾರರು ಆಯಾ ತಂಡಗಳನ್ನು ಕೂಡಿಕೊಂಡಿದ್ದು, ಅಭ್ಯಾಸ ಆರಂಭಿಸಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಗೆದ್ದ ಆಟಗಾರರೂ ತಮ್ಮಮ್ಮ ಫ್ರಾಂಚೈಸಿಗಳತ್ತ ತೆರಳುತ್ತಿದ್ದಾರೆ. ಮತ್ತೊಂದೆಡೆ ಕೆಲ ಸ್ಟಾರ್ ಆಟಗಾರರು ಜಾಹೀರಾತುಗಳ ನಟನೆಯಲ್ಲಿ ತೊಡಗಿದ್ದಾರೆ. ಅದರ ಒಂದು ವಿಡಿಯೋ ಈಗ ನೆಟ್ನಲ್ಲಿ ಧೂಳೆಬ್ಬಿಸುತ್ತಿದೆ.
ಬಾಲಿವುಡ್ ಸೂಪರ್ಸ್ಟಾರ್ಗಳಾದ ಅಮೀರ್ ಖಾನ್ ಮತ್ತು ರಣಬೀರ್ ಕಪೂರ್ ಒಟ್ಟಿಗೆ ಅಭಿನಯಿಸಿರುವ ಬ್ರಾಂಡ್ ಜಾಹೀರಾತಿಗಾಗಿ ಭಾರತ ತಂಡದ ಸ್ಟಾರ್ ಆಟಗಾರರು ಆಫ್ ಫೀಲ್ಡ್ನಲ್ಲಿ ಮತ್ತೆ ಒಂದಾಗಿದ್ದಾರೆ. ಫ್ಯಾಂಟಸಿ ಸ್ಪೋರ್ಟ್ಸ್ ವೆಬ್ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್ ಡ್ರೀಮ್ 11 ಐಪಿಎಲ್ 2025ಕ್ಕೂ ಮುನ್ನ ಕ್ರಿಕೆಟ್ ಮತ್ತು ಬಾಲಿವುಡ್ ಜಗತ್ತನ್ನು ಒಂದೇ ಸೂರಿನಡಿ ತರುವ ಪ್ರಯತ್ನ ನಡೆಸಿದೆ. ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್ ಮತ್ತು ಜಸ್ಪ್ರೀತ್ ಬುಮ್ರಾ ಈ ಡ್ರಿಮ್ 11 ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ.
ಕುಹಕ ನಗೆ ಬೀರಿದ್ದೇಕೆ ರೋಹಿತ್?
ಈ ಜಾಹೀರಾತು ಪ್ರಾರಂಭವಾಗುವುದು ರೋಹಿತ್ ಮತ್ತು ಅಮೀರ್ ಖಾನ್ ಚಾಟ್ನೊಂದಿಗೆ. ಬಳಿಕ ಪಂತ್ ಎಂಟ್ರಿಯಾಗುತ್ತದೆ. ಬಾಲಿವುಡ್ ಸೂಪರ್ಸ್ಟಾರ್ ಫೋಟೋ ಕೇಳುವ ಮೂಲಕ ಅಮೀರ್-ರೋಹಿತ್ ಮಾತಿನ ಮಧ್ಯೆಗೆ ಪಂತ್ ಮಧ್ಯ ಪ್ರವೇಶಿಸಿದರು. ಆದಾಗ್ಯೂ, ರಣಬೀರ್ ಅವರೊಂದಿಗೆ ಫೋಟೋ ಬೇಕು. ತಾನು ರಣಬೀರ್ ದೊಡ್ಡ ಅಭಿಮಾನಿ ಎಂದು ಎಂದು ಪಂತ್ ಅಮೀರ್ಗೆ ಹೇಳಿದಾಗ, ಅಮೀರ್ಗೂ ಅಚ್ಚರಿ ಆಗುತ್ತದೆ. ಪಂತ್ ಹೀಗೆ ಹೇಳಿದಾಗ ಪಕ್ಕದಲ್ಲೇ ಕುಹಕ ನಗೆ ಬೀರಿದರು. ಬಳಿಕ ರಣಬೀರ್ ಬಳಿಗೆ ಪಂತ್ನನ್ನು ಕರೆದುಕೊಂಡ ಅಮೀರ್, ನಿಮ್ಮ ಜನರೇಷನ್ಗೆ ದೊಡ್ಡ ಸ್ಟಾರ್ ಎಂದು ಹೇಳುತ್ತಾರೆ. ಆದರೆ ಇಲ್ಲೊಂದು ಟ್ವಿಸ್ಟ್ ಎದುರಾಗುತ್ತದೆ.
ಆಗ ರಣಬೀರ್ ಕಪೂರ್ ಎನ್ನುವ ಬದಲಿಗೆ ರಣಬೀರ್ ಸಿಂಗ್ ಎಂದು ಅಮೀರ್ ಹೇಳುತ್ತಾರೆ. ಹಿಂದೆ ಇದ್ದ ರೋಹಿತ್ ಸಿಂಗ್ ಅಲ್ಲ, ಕಪೂರ್ ಎಂದು ಅಮೀರ್ ತಪ್ಪು ತಿದ್ದುವ ಪ್ರಯತ್ನ ನಡೆಸುತ್ತಾರೆ. ಆದರೆ ಇದು ರಣಬೀರ್ ಕೋಪಗೊಂಡು ಅಲ್ಲಿಂದ ಹೊರಟು ಹೋಗುತ್ತಾರೆ. ಅಲ್ಲಿಂದ ನಾಟಕ ಪ್ರಾರಂಭವಾಗುತ್ತದೆ. ಇದು ಜಾಹೀರಾತು ಆಗಿದ್ದರೂ ತುಂಬಾ ಫನ್ನಿಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಏತನ್ಮಧ್ಯೆ, ಮಾರ್ಚ್ 22 ರಿಂದ ಪ್ರಾರಂಭವಾಗುವ ಐಪಿಎಲ್ಗೆ ಭಾರತೀಯ ಆಟಗಾರರು ಶೀಘ್ರದಲ್ಲೇ ಮರಳಲಿದ್ದಾರೆ. ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದ ನಂತರ, ಭಾರತೀಯ ತಾರೆಯರು ಹೆಚ್ಚಿನ ಆತ್ಮವಿಶ್ವಾಸದ ಮೇಲೆ ಸವಾರಿ ಮಾಡಲಿದ್ದಾರೆ. ನಗದು ಸಮೃದ್ಧ ಲೀಗ್ನಲ್ಲಿ ಹೆಚ್ಚಿನ ಒತ್ತಡವಿಲ್ಲದೆ ಆಡಲಿದ್ದಾರೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತಕ್ಕೆ ಭರ್ಜರಿ ಗೆಲುವು
ಭಾನುವಾರ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿದ ಭಾರತ ಮೂರನೇ ಬಾರಿಗೆ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡಿತು. ನಾಯಕ ರೋಹಿತ್ ಶರ್ಮಾ ಅವರ ತ್ವರಿತ ಅರ್ಧಶತಕ ಮತ್ತು ಸ್ಪಿನ್ನರ್ಗಳ ಅಬ್ಬರದಿಂದ, ವಿಶೇಷವಾಗಿ ವರುಣ್ ಚಕ್ರವರ್ತಿ ಮತ್ತು ಕುಲ್ದೀಪ್ ಯಾದವ್ ಅವರ ಉತ್ತಮ ಸ್ಪೆಲ್ಗಳು ಭಾರತಕ್ಕೆ ಮೂರನೇ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಯನ್ನು ಗೆಲ್ಲಲು ಸಹಾಯ ಮಾಡಿದವು. ರೋಹಿತ್ ಫೈನಲ್ನಲ್ಲಿ 83 ಎಸೆತಗಳಲ್ಲಿ 76 ರನ್ ಗಳಿಸಿದರು. ಇದರಲ್ಲಿ 7 ಬೌಂಡರಿಗಳು ಮತ್ತು 3 ಸಿಕ್ಸರ್ಗಳಿವೆ.
