ಕನ್ನಡ ಸುದ್ದಿ  /  ಕ್ರಿಕೆಟ್  /  ಮೊದಲ ಭೇಟಿಯಲ್ಲೇ ಕಿಸ್, ಹಿಟ್​ಮ್ಯಾನ್​ಗಾಗಿ ಬೆತ್ತಲೆ ಪೋಸ್ಟ್; ಮದುವೆಗೂ ಮುನ್ನ ಬ್ರಿಟಿಷ್ ಮಾಡೆಲ್​ ಜತೆ ರೋಹಿತ್​ ಶರ್ಮಾ ರೊಮ್ಯಾನ್ಸ್‌

ಮೊದಲ ಭೇಟಿಯಲ್ಲೇ ಕಿಸ್, ಹಿಟ್​ಮ್ಯಾನ್​ಗಾಗಿ ಬೆತ್ತಲೆ ಪೋಸ್ಟ್; ಮದುವೆಗೂ ಮುನ್ನ ಬ್ರಿಟಿಷ್ ಮಾಡೆಲ್​ ಜತೆ ರೋಹಿತ್​ ಶರ್ಮಾ ರೊಮ್ಯಾನ್ಸ್‌

Rohit Sharma Dating : ಟೀಮ್ ಇಂಡಿಯಾ ನಾಯಕ ರೋಹಿತ್​ ಶರ್ಮಾ ಅವರು ರಿತಿಕಾ ಸಜ್ದೇಹ್ ಅವರನ್ನು ಮದುವೆಯಾಗುವ ಮೊದಲು ಬಾಲಿವುಡ್ ನಟಿ ಕಂ ಬ್ರಿಟಿಷ್ ಮಾಡೆಲ್ ಸೋಫಿಯಾ ಹಯಾತ್ ಅವರೊಂದಿಗೆ ಡೇಟಿಂಗ್ ನಡೆಸಿದ್ದರು. ಸೋಫಿಯಾ ಬಗ್ಗೆ ನಿಮಗೆ ತಿಳಿಯಬೇಕಾದ ಹಲವು ವಿಚಾರ ಇಲ್ಲಿದೆ ನೋಡಿ.

ಮೊದಲ ಭೇಟಿಯಲ್ಲೇ ಕಿಸ್, ಹಲವು ವರ್ಷ ಡೇಟಿಂಗ್; ಬಾಲಿವುಡ್ ನಟಿ ಕಂ ಬ್ರಿಟಿಷ್ ಮಾಡೆಲ್ ಜತೆ ರೋಹಿತ್​ ಶರ್ಮಾ ಡೇಟಿಂಗ್
ಮೊದಲ ಭೇಟಿಯಲ್ಲೇ ಕಿಸ್, ಹಲವು ವರ್ಷ ಡೇಟಿಂಗ್; ಬಾಲಿವುಡ್ ನಟಿ ಕಂ ಬ್ರಿಟಿಷ್ ಮಾಡೆಲ್ ಜತೆ ರೋಹಿತ್​ ಶರ್ಮಾ ಡೇಟಿಂಗ್

ಇತ್ತೀಚೆಗೆ 37ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಟೀಮ್ ಇಂಡಿಯಾ ನಾಯಕ ರೋಹಿತ್​ ಶರ್ಮಾ (Rohit Sharma) ಅವರು ಪ್ರಸ್ತುತ ಐಪಿಎಲ್​ನಲ್ಲಿ ಬ್ಯುಸಿಯಾಗಿದ್ದಾರೆ. ಇದರ ಬೆನ್ನಲ್ಲೇ​ ಬೆನ್ನಲ್ಲೇ ಟಿ20 ವಿಶ್ವಕಪ್​​​ 2024 ಟೂರ್ನಿಗೆ ತಯಾರಿ ನಡೆಸಲಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಹಲವಾರು ವಿಶ್ವದಾಖಲೆ ನಿರ್ಮಿಸಿರುವ ಹಿಟ್​ಮ್ಯಾನ್​, ತಮ್ಮ ವೃತ್ತಿಜೀವನದಲ್ಲಿ ಸಾಕಷ್ಟು ಏರಿಳಿತ ಕಂಡಿದ್ದಾರೆ. ಹಾಗೆಯೇ ಅವರ ವೈಯಕ್ತಿಕ ಜೀವನವೂ ಅನೇಕ ತಿರುವುಗಳನ್ನು ಪಡೆದಿದೆ. ತಾನು ರಿತಿಕಾ ಸಜ್ದೇಹ್ (Ritika Sajdeh) ಅವರನ್ನು ಮದುವೆಯಾಗುವುದಕ್ಕೂ ಮುನ್ನ ಬಾಲಿವುಡ್​ ನಟಿಯೊಬ್ಬರೊಂದಿಗೆ ಡೇಟಿಂಗ್ ನಡೆಸಿದ್ದ ವಿಚಾರ ಬಹುತೇಕ ಮಂದಿಗೆ ಗೊತ್ತೇ ಇಲ್ಲ!

ಟ್ರೆಂಡಿಂಗ್​ ಸುದ್ದಿ

2015ರ ಡಿಸೆಂಬರ್ 13ರಂದು ರೋಹಿತ್​ ಮತ್ತು ರಿತಿಕಾ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇವರದ್ದು ಸಹ ಪ್ರೇಮ ವಿವಾಹ. ಆದರೆ, ರಿತಿಕಾ ಅವರನ್ನು ಮದುವೆಯಾಗುವುದಕ್ಕೂ ಮುನ್ನ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ತನ್ನ ಹೆಸರು ಪ್ರಸಿದ್ಧಿ ಪಡೆಯಲು ಪ್ರಾರಂಭಿಸಿದ ಸಮಯದಲ್ಲಿ ರೋಹಿತ್​, 2013ರಲ್ಲಿ ಬಾಲಿವುಡ್ ನಟಿ ಸೋಫಿಯಾ ಹಯಾತ್ ಅವರೊಂದಿಗೆ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. ಈ ಸ್ಟಾರ್​​ ಜೋಡಿಯ ಪ್ರಣಯದ ಬಗ್ಗೆಯೂ ಚರ್ಚೆ ನಡೆಯುತ್ತಿತ್ತು. ಆದರೆ, ಡೇಟಿಂಗ್ ಸುದ್ದಿಯ ನಡುವೆ ಸೋಫಿಯಾ ಮಾಡಿದ ಟ್ವೀಟ್, ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತು. ಕ್ರಿಕೆಟ್​ ವಲಯದಲ್ಲೂ ಸಂಚಲನ ಸೃಷ್ಟಿಸಿತ್ತು.

ಮೂಲತಃ ಬ್ರಿಟಿಷ್ ಮಾಡೆಲ್​ ಸೋಫಿಯಾ ಹಯಾತ್ ಅವರು ರೋಹಿತ್​ ಶರ್ಮಾ ಅವರೊಂದಿಗೆ ಡೇಟಿಂಗ್​ ನಡೆಸಿದ್ದರ ಕುರಿತು ಟ್ವಿಟರ್​​ನಲ್ಲಿ ಅಧಿಕೃತವಾಗಿ ಪೋಸ್ಟ್ ಮಾಡಿದ್ದರು. ಆದರೆ ರೋಹಿತ್​ ಶರ್ಮಾ ಮಾತ್ರ ಎಂದೂ ಅಧಿಕೃತವಾಗಿ ಹೇಳಿಕೆ ನೀಡಿರಲಿಲ್ಲ. ಉತ್ತಮ ಸಂಬಂಧ ಹೊಂದಿದ್ದ ಜೋಡಿ ದಿಢೀರ್ ಬ್ರೇಕಪ್ ಮಾಡಿಕೊಂಡಿತ್ತು. ಆದರೆ ಕಾರಣ ಬಹಿರಂಗಗೊಳಿಸಿರಲಿಲ್ಲ. ಆದರೆ ಬ್ರೇಕಪ್​ ಆದ ಬೆನ್ನಲ್ಲೇ ಸೋಫಿಯಾ ಈ ಬಗ್ಗೆ ಮಾಹಿತಿ ನೀಡಿದ್ದರು. ಪೋಸ್ಟ್​ ಬಳಿಕ ರೋಹಿತ್​ ಇನ್ನಷ್ಟು ಹೆಚ್ಚು ಸುದ್ದಿಯಾಗಿದ್ದರು. ಆದರೆ ಈ ಪೋಸ್ಟ್​​ಗೂ ಮುನ್ನ ಹಿಟ್​ಮ್ಯಾನ್ ಮತ್ತು ನಟಿಯ ಡೇಟಿಂಗ್​ ಎಂಬುದು ವದಂತಿಯಾಗಿತ್ತು. ಇಷ್ಟಕ್ಕೂ ಟ್ವಿಟರ್​ ಗೋಡೆಯಲ್ಲಿ ಏನು ಬರೆದಿದ್ದರು?

ರೋಹಿತ್​ ಸೋಫಿಯಾ ಬ್ರೇಕಪ್​ಗೆ ಕೊಹ್ಲಿ ಕಾರಣವೇ?

2012ರ ಮಾರ್ಚ್​​ನಲ್ಲಿ ಮೈದಾನದ ಪಿಚ್​ನಲ್ಲಿ ಮತ್ತು ಹೊರಗೆ ವಿರಾಟ್​ ಉತ್ತಮ ಆಟಗಾರನಾದ ಕಾರಣ ನಾನು ರೋಹಿತ್​ನನ್ನು ತಿರಸ್ಕರಿಸಿದ್ದೆ ಎಂದು ಪೋಸ್ಟ್ ಹಾಕಿದ್ದರು. ಆಗ ರೋಹಿತ್​ ಜೊತೆಗೆ ಬ್ರೇಕಪ್ ಆಗಲು ವಿರಾಟ್ ಕೊಹ್ಲಿ ಕಾರಣ ಎಂದು ಸುದ್ದಿಯಾಗಿತ್ತು. ನಂತರ ಅಂದರೆ 2012ರ ಅಕ್ಟೋಬರ್​ನಲ್ಲಿ 'ಸರಿ ವದಂತಿಗಳಿಗೆ ಕೊನೆ ಹಾಕೋಣ. ಹೌದು ನಾನು ರೋಹಿತ್​ ಶರ್ಮಾ ಅವರೊಂದಿಗೆ ಡೇಟಿಂಗ್ ಮಾಡಿದ್ದೇನೆ. ಆದರೀಗ ಇಬ್ಬರ ನಡುವೆ ಬ್ರೇಕಪ್ ಆಗಿದೆ. ನಾನು ಅವರೊಂದಿಗೆ ಮತ್ತೆ ಡೇಟಿಂಗ್ ಮಾಡಲು ಬಯಸುವುದಿಲ್ಲ. ಈ ಬಾರಿ ನಾನು ಸಂಭಾವಿತ ವ್ಯಕ್ತಿಗಾಗಿ ಹುಡುಕಾಟ ನಡೆಸುತ್ತಿದ್ದೇನೆ ಎಂದು ಅಂದು ಸಂಜೆ 5.27ರಲ್ಲಿ ಹಾಕಿದ್ದ ಪೋಸ್ಟ್​ನಲ್ಲಿ ಬರೆದಿದ್ದರು.

ಜುಲೈ 2012ರಲ್ಲಿ ವೋಗ್ ಇಟಾಲಿಯಾದಿಂದ ಹಯಾತ್ ಅನ್ನು ಹೊಸ "ಕರ್ವಿ ಐಕಾನ್" ಎಂದು ಹೆಸರಿಸಲಾಯಿತು. ಸೆಪ್ಟೆಂಬರ್ 2013ರಲ್ಲಿ ಹಯಾತ್ ಅವರು ಎಫ್‌ಹೆಚ್‌ಎಂ ವಿಶ್ವದ ಅತ್ಯಂತ ಸೆಕ್ಸಿಯೆಸ್ಟ್ ಮಹಿಳೆಯರ ಪಟ್ಟಿಯಲ್ಲಿ 81ನೇ ಸ್ಥಾನ ಪಡೆದಿದ್ದರು. ಸೋಫಿಯಾ ಅವರ ಆತ್ಮಚರಿತ್ರೆ ಡಿಸ್​ಹಾನರ್ಡ್ ಅನ್ನು ಪ್ರಕಾಶನ ಸಂಸ್ಥೆ ಬ್ಲೇಕ್ಸ್‌ ಪ್ರಕಟಿಸಿತ್ತು. ಆಕೆ 2 ಆಲ್ಬಂಗಳನ್ನೂ ಬಿಡುಗಡೆ ಮಾಡಿದ್ದಾರೆ. ಬಿಗ್ ಬಾಸ್ ಸೀಸನ್​-7 ರಲ್ಲೂ ಭಾಗವಹಿಸಿದ್ದ ಸೋಫಿಯಾ ಆ ಮೂಲಕ ಹೆಚ್ಚು ಜನಪ್ರಿಯತೆ ಗಳಿಸಿದರು. ವೈಲ್ಡ್ ಕಾರ್ಡ್ ಮೂಲಕ ಪ್ರವೇಶಿಸಿದ ಸೋಫಿಯಾ, 12ನೇ ವಾರದಲ್ಲಿ ಹೊರ ಬಿದ್ದರು.

ರೋಹಿತ್​ಗಾಗಿ ಬೆತ್ತಲೇ ಫೋಟೋ ಹಾಕಿದ್ದ ಸೋಫಿಯಾ

ಸೋಫಿಯಾ ಹಯಾತ್ ಅವರ ಬಳಿಕ ರಿತಿಕಾ ಅವರನ್ನು ಪ್ರೀತಿಸಿದರು. 2014ರಲ್ಲಿ ರೋಹಿತ್ ಶರ್ಮಾ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಶ್ರೀಲಂಕಾ ವಿರುದ್ಧ 264 ರನ್ ಬಾರಿಸಿದ್ದ ಅವಧಿಯಲ್ಲಿ ಆತನ ಮೇಲೆ ಪ್ರೀತಿ ತೋರಿಸಲು ಹಯಾತ್ ತನ್ನ ಬೆತ್ತಲೆಯ ಚಿತ್ರವನ್ನು ಪೋಸ್ಟ್ ಮಾಡಿದ್ದರು. ಈ ಬೆತ್ತಲೆ ಚಿತ್ರ ರೋಹಿತ್​ ಶರ್ಮಾ ಅವರಿಗಾಗಿ. ಏಕೆಂದರೆ ಅವರು ಐತಿಹಾಸಿಕ ಸ್ಕೋರ್ ಮಾಡಿದ್ದಾರೆ. ಈ ಚಿತ್ರ ನಿಮಗಾಗಿ. ಇಡೀ ಭಾರತವೇ ಹೆಮ್ಮೆಪಡುವ ದಿನವೆಂದು ಪೋಸ್ಟ್ ಹಾಕಿದ್ದರು. ಈ ಚಿತ್ರ ಸಾಕಷ್ಟು ವೈರಲ್ ಆಗಿತ್ತು. ರೋಹಿತ್​ರನ್ನು ಬಿಟ್ಟ ನಂತರ ಸನ್ಯಾಸಿನಿಯಾಗಿ ಬದಲಾಗಿದ್ದ ಸೋಫಿಯಾ, ಮಾಡೆಲ್ ವ್ಲಾಡ್ ಸ್ಟಾನೆಕು ಅವರನ್ನು ವಿವಾಹವಾದರು.

ರೋಹಿತ್​ಗಾಗಿ ಬೆತ್ತಲೇ ಫೋಟೋ ಹಾಕಿದ್ದ ಸೋಫಿಯಾ
ರೋಹಿತ್​ಗಾಗಿ ಬೆತ್ತಲೇ ಫೋಟೋ ಹಾಕಿದ್ದ ಸೋಫಿಯಾ

‘ಮೊದಲ ಭೇಟಿಯಲ್ಲಿ ರೋಹಿತ್​ ನನ್ನನ್ನು ಚುಂಬಿಸಿದ್ರು’

ಸ್ಪಾಟ್‌ಬಾಯ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಸೋಫಿಯಾ, ರೋಹಿತ್​ ಶರ್ಮಾ ಕುರಿತು ಮಾತನಾಡಿದ್ದರು. ಲಂಡನ್‌ನ ಕ್ಲಬ್‌ನಲ್ಲಿ ನಡೆದ ಮೊದಲ ಭೇಟಿಯಲ್ಲೇ ರೋಹಿತ್ ತನ್ನನ್ನು ಚುಂಬಿಸಿದ್ದರು ಎಂದು ಹೇಳಿದ್ದರು. ನಾನು ಅವರನ್ನು ಲಂಡನ್‌ನ ಕ್ಲಬ್‌ನಲ್ಲಿ ಭೇಟಿಯಾದೆ. ಅಲ್ಲಿ ನನ್ನ ಸ್ನೇಹಿತರೊಬ್ಬರು ನಮ್ಮನ್ನು ಪರಸ್ಪರ ಪರಿಚಯ ಮಾಡಿಕೊಟ್ಟಿದ್ದರು. ಆಗ ನಾನು ಡ್ಯಾನ್ಸ್ ಮಾಡುತ್ತಿದ್ದೆ. ನನ್ನ ಸ್ನೇಹಿತ ನನಗೆ 'ಇವರು ರೋಹಿತ್ ಶರ್ಮಾ' ಎಂದು ಹೇಳಿದ್ದರು. ಆದರೆ ನಾನು ಕ್ರಿಕೆಟ್ ಹೆಚ್ಚು ನೋಡದ ಕಾರಣ ನನಗೆ ನಿಜವಾಗಿಯೂ ತಿಳಿದಿರಲಿಲ್ಲ. ಆ ಬಳಿಕ ಇಬ್ಬರು ಪರಸ್ಪರ ಮಾತುಕತೆ ನಡೆಸಿದ್ದೆವು. ನಂತರ ಶಾಂತವಾದ ಸ್ಥಳಕ್ಕೆ ತೆರಳಿದ್ದೆವು. ಆಗ ರೋಹಿತ್​ ನನ್ನನ್ನು ಚುಂಬಿಸಿದ್ದರು. ಅದರ ನಂತರ, ನಾವು ಒಟ್ಟಿಗೆ ನೃತ್ಯ ಮಾಡಿದ್ದೆವು ಎಂದು ಸಂದರ್ಶನದಲ್ಲಿ ಹಯಾತ್ ಹೇಳಿದ್ದರು.

ರೋಹಿತ್​ ಜೊತೆಗಿನ ಬ್ರೇಕಪ್​ ಕುರಿತು ಸೋಫಿಯಾ ಹಯಾತ್ ಅವರ ಪೋಸ್ಟ್
ರೋಹಿತ್​ ಜೊತೆಗಿನ ಬ್ರೇಕಪ್​ ಕುರಿತು ಸೋಫಿಯಾ ಹಯಾತ್ ಅವರ ಪೋಸ್ಟ್
IPL_Entry_Point