ರೋಹಿತ್​ರನ್ನು ಕೆಳಗಿಳಿಸಿ ಹಾರ್ದಿಕ್​ಗೆ ನಾಯಕತ್ವ: ಲಕ್ಷ, ಲಕ್ಷ‌ ಫಾಲೋವರ್ಸ್ ಕಳೆದುಕೊಂಡ ಮುಂಬೈ
ಕನ್ನಡ ಸುದ್ದಿ  /  ಕ್ರಿಕೆಟ್  /  ರೋಹಿತ್​ರನ್ನು ಕೆಳಗಿಳಿಸಿ ಹಾರ್ದಿಕ್​ಗೆ ನಾಯಕತ್ವ: ಲಕ್ಷ, ಲಕ್ಷ‌ ಫಾಲೋವರ್ಸ್ ಕಳೆದುಕೊಂಡ ಮುಂಬೈ

ರೋಹಿತ್​ರನ್ನು ಕೆಳಗಿಳಿಸಿ ಹಾರ್ದಿಕ್​ಗೆ ನಾಯಕತ್ವ: ಲಕ್ಷ, ಲಕ್ಷ‌ ಫಾಲೋವರ್ಸ್ ಕಳೆದುಕೊಂಡ ಮುಂಬೈ

Rohit Sharma Effect: ನಾಯಕತ್ವದಿಂದ ರೋಹಿತ್​ ಶರ್ಮಾ ಅವರನ್ನು ಕೆಳಗಿಳಿಸಿದ ನಂತರ ಮುಂಬೈ ಇಂಡಿಯನ್ಸ್ ತಂಡದ ಸಾಮಾಜಿಕ ಜಾಲತಾಣಗಳ ಪೇಜ್​ಗಳನ್ನು ಅಭಿಮಾನಿಗಳು ಅನ್​ಫಾಲೋ ಮಾಡುತ್ತಿದ್ದಾರೆ.

ರೋಹಿತ್ ಶರ್ಮಾ.
ರೋಹಿತ್ ಶರ್ಮಾ.

ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್‌ (IPL 2024) ಆರಂಭಕ್ಕೂ ‌ಮುನ್ನ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ (Mumbai Indians) ತಂಡಕ್ಕೆ ನೂತನ ನಾಯಕನ ಘೋಷಣೆ ಮಾಡಲಾಗಿದೆ. ರೋಹಿತ್ ಶರ್ಮಾ (Rohit Sharma) ಬದಲಿಗೆ ಹಾರ್ದಿಕ್ ಪಾಂಡ್ಯ (Hardik Pandya) ನಾಯಕತ್ವದ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ ಎಂದು ಮುಂಬೈ ಅಧಿಕೃತ ಪ್ರಕಟಣೆ ಹೊರಡಿಸಿದೆ. ತಂಡಕ್ಕಾಗಿ 5 ಟ್ರೋಫಿ ಗೆದ್ದು ಕೊಟ್ಟ ಹಿಟ್​ಮ್ಯಾನ್ ಅತ್ಯಂತ ಯಶಸ್ವಿ ನಾಯಕ ಎನಿಸಿಕೊಂಡಿದ್ದಾರೆ.

ಇದೀಗ ಅವರ ಐಪಿಎಲ್ ನಾಯಕತ್ವ ಯುಗಾಂತ್ಯ ಕಂಡಿದೆ. ದಿಢೀರ್ ಮತ್ತು ಅಚ್ಚರಿಯ ನಿರ್ಧಾರದಿಂದ ಮುಂಬೈ ಮತ್ತು ರೋಹಿತ್ ಫ್ಯಾನ್ಸ್, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹತಾಶೆ, ನೋವು ವ್ಯಕ್ತಪಡಿಸಿದ್ದಾರೆ. ಮುಂಬೈ ತೆಗದುಕೊಂಡ ಈ ನಿರ್ಧಾರ ಅಸಮಮಾಧಾನ, ಆಕ್ರೋಶ ಭುಗಿಲೇಳಲು ಕಾರಣವಾಗಿದೆ. ರೋಹಿತ್​ಗೆ ಬೆಂಬಲ ನೀಡುವ ಸಲುವಾಗಿ ಅಭಿಮಾನಿಗಳು ಮುಂಬೈ ತಂಡ ಇನ್​ಸ್ಟಾಗ್ರಾಂ ಪೇಜ್ ಅನ್ನು ಅನ್ ಫಾಲೋ ಮಾಡುತ್ತಿದ್ದಾರೆ. ಇದರಿಂದ ಫಾಲೋವರ್ಸ್ ಸಂಖ್ಯೆ ದಿಢೀರ್ ಕುಸಿತ ಕಂಡಿದೆ.

3 ಲಕ್ಷ ಮಂದಿ ಅನ್​ಫಾಲೋ

ಇದರೊಂದಿಗೆ ಅಂಬಾನಿ ಬ್ರಿಗೇಡ್​ ಲಕ್ಷ ಲಕ್ಷ ಫಾಲೋವರ್ಸ್ ಕಳೆದುಕೊಳ್ಳುತ್ತಿದೆ. ಸದ್ಯ ತಿಳಿದು ಬಂದಿರುವ ಮಾಹಿತಿ ಪ್ರಕಾರ ಸರಿ‌ ಸುಮಾರು‌ 3 ಲಕ್ಷಕ್ಕೂ ಅಧಿಕ ಮಂದಿ ಮುಂಬೈ ಇಂಡಿಯನ್ಸ್ ಇನ್​ಸ್ಟಾ ಪೇಜ್ ಅನ್ನು ಅನ್ ಫಾಲೋ ಮಾಡಿದ್ದಾರೆ. ಕೇವಲ ಒಂದು ಗಂಟೆಯ ಅವಧಿಯಲ್ಲಿ ಇಷ್ಟೊಂದು ಅನುಯಾಯಿಗಳನ್ನು ಕಳೆದುಕೊಂಡಿದೆ. ಅದರ ಇನ್ನೂ ಮುಂದುವರೆಯುತ್ತಿದೆ. ಅಂಬಾನಿ‌ ಮಾಲೀಕತ್ವದ ಫ್ರಾಂಚೈಸ್ ವಿರುದ್ಧ ಅಭಿಮಾನಿಗಳು ಭಾರಿ ಬೇಸರ ವ್ಯಕ್ತಪಡಿಸಿ ಟ್ರೋಲ್ ಮಾಡುತ್ತಿದ್ದಾರೆ.

ಎಕ್ಸ್ ಖಾತೆಯಲ್ಲಿ 4 ಲಕ್ಷ ಅನ್ ಫಾಲೋ

ರೋಹಿತ್ ಖದರ್ ಏನಂತ ಮುಂಬೈಗೆ ಈಗ ಗೊತ್ತಾಗಿದೆ. ಇನ್​ಸ್ಟಾಗ್ರಾಂನಲ್ಲಿ 3 ಲಕ್ಷ ಅನ್​ಫಾಲೋ ಮಾಡಿದರೆ, ಎಕ್ಸ್ ಖಾತೆಯಲ್ಲಿ (ಈ ಹಿಂದಿನ ಟ್ವಿಟರ್) ಒಂದು ಗಂಟೆಯಲ್ಲಿ 4 ಲಕ್ಷ ಫಾಲೋವರ್ಸ್ ಅನ್ನು ಕಳೆದುಕೊಂಡಿದೆ. ಹಾರ್ದಿಕ್ ಕ್ಯಾಪ್ಟನ್ ಆಗುವುದಕ್ಕೂ ಮೊದಲು 8.6 ಮಿಲಿಯನ್ ಫಾಲೋವರ್ಸ್ ಇದ್ದರು. ಮಹತ್ವದ ಘೋಷಣೆಯ ಬಳಿಕ 8.2 ಮಿಲಿಯನ್ ಫಾಲೋವರ್ಸ್ ಅಂದರೆ ನಾಲ್ಕು ಲಕ್ಷ ಫಾಲೋವರ್ಸ್ ಇಳಿಕೆ ಕಂಡಿದೆ.

10 ವರ್ಷಗಳ ನಾಯಕತ್ವ ಯುಗಾಂತ್ಯ

ರೋಹಿತ್ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ನ ಅವಿಭಾಜ್ಯ ಅಂಗವಾಗಿದ್ದಾರೆ. ಈಗ ನಿಷ್ಕ್ರಿಯವಾಗಿರುವ ಡೆಕ್ಕನ್ ಚಾರ್ಜರ್ಸ್‌ ತಂಡದ ಪರ ಮೂರು ವರ್ಷ ಆಡಿದ ನಂತರ, ಬಲಗೈ ಆಟಗಾರ 2011ರಲ್ಲಿ ಮುಂಬೈ ಇಂಡಿಯನ್ಸ್‌ಗೆ ಸೇರಿದರು. 2013ರಲ್ಲಿ ತಂಡದ ನಾಯಕತ್ವ ಪಡೆದ ರೋಹಿತ್, ಅದೇ ವರ್ಷವೇ ಮುಂಬೈ ತಂಡವನ್ನು ಚಾಂಪಿಯನ್ ಮಾಡಿದರು. 2013ರ ಬಳಿಕ 2015, 2017, 2019 ಮತ್ತು 2020ರಲ್ಲಿ ತಂಡಕ್ಕೆ ಟ್ರೋಫಿ ಗೆದ್ದು ಕೊಟ್ಟಿದ್ದರು. ಇದೀಗ ಅವರ ಹತ್ತು ವರ್ಷಗಳ ಕ್ಯಾಪ್ಟನ್ಸಿ ಯುಗಾಂತ್ಯ ಕಂಡಿದೆ.

ಮುಂಬೈ ಇಂಡಿಯನ್ಸ್ ತಂಡ

ಹಾರ್ದಿಕ್ ಪಾಂಡ್ಯ (ನಾಯಕ), ರೋಹಿತ್ ಶರ್ಮಾ, ಡೆವಾಲ್ಡ್ ಬ್ರೆವಿಸ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಎನ್ ತಿಲಕ್ ವರ್ಮಾ, ಟಿಮ್ ಡೇವಿಡ್, ವಿಷ್ಣು ವಿನೋದ್, ಅರ್ಜುನ್ ತೆಂಡೂಲ್ಕರ್, ಶಾಮ್ಸ್ ಮುಲಾನಿ, ನೆಹಾಲ್ ವಧೇರಾ, ಜಸ್ಪ್ರೀತ್ ಬುಮ್ರಾ, ಕುಮಾರ್ ಕಾರ್ತಿಕೇಯ, ಪಿಯೂಷ್ ಚಾವ್ಲಾ, ಆಕಾಶ್ ಮಧ್ವಲ್, ಜೇಸನ್ ಬೆಹ್ರೆಂಡಾರ್ಫ್, ರೊಮಾರಿಯೊ ಶೆಫರ್ಡ್.

Whats_app_banner