ಶತಕ ಸಿಡಿಸಿ ಒಂದೇ ಸಮಯದಲ್ಲಿ ಎರಡು ದಾಖಲೆ ಬರೆದ ರೋಹಿತ್ ಶರ್ಮಾ; ದಿಗ್ಗಜರ ದಾಖಲೆಗಳನ್ನೇ ಸರಿಗಟ್ಟಿದ ನಾಯಕ
- Rohit Sharma: ಭಾರತ ಹಾಗೂ ಇಂಗ್ಲೆಂಡ್ ನಡುವಿನ 5ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೊಸ ದಾಖಲೆ ಬರೆದಿದ್ದು, ಇಬ್ಬರು ದಿಗ್ಗಜ ರೆಕಾರ್ಡ್ಸ್ ಸಮಗೊಳಿಸಿದ್ದಾರೆ.
- Rohit Sharma: ಭಾರತ ಹಾಗೂ ಇಂಗ್ಲೆಂಡ್ ನಡುವಿನ 5ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೊಸ ದಾಖಲೆ ಬರೆದಿದ್ದು, ಇಬ್ಬರು ದಿಗ್ಗಜ ರೆಕಾರ್ಡ್ಸ್ ಸಮಗೊಳಿಸಿದ್ದಾರೆ.
(1 / 6)
ಇಂಗ್ಲೆಂಡ್ ವಿರುದ್ಧದ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಶತಕ ಬಾರಿಸಿ ಎರಡು ದಾಖಲೆ ಬರೆದಿದ್ದಾರೆ. ರೋಹಿತ್ 154 ಎಸೆತಗಳಲ್ಲಿ 13 ಬೌಂಡರಿ ಮತ್ತು 3 ಸಿಕ್ಸರ್ ಸೇರಿದಂತೆ 103 ರನ್ ಗಳಿಸಿದ್ದಾರೆ.
(2 / 6)
8 ತಿಂಗಳ ನಂತರ ಬೌಲಿಂಗ್ ಮಾಡಿದ ಬೆನ್ ಸ್ಟೋಕ್ಸ್ ಅವರು ರೋಹಿತ್ ಅವರನ್ನು ಬೋಲ್ಡ್ ಮಾಡಿ ಪೆವಿಲಿಯನ್ಗೆ ಸೇರಿಸಿದರು. ರೋಹಿತ್ ಈ ಶತಕದೊಂದಿಗೆ ಭಾರತದ ಇಬ್ಬರು ಶ್ರೇಷ್ಠ ಆಟಗಾರರ ದಾಖಲೆಯನ್ನು ಮುಟ್ಟಿದ್ದಾರೆ.
(3 / 6)
ರೋಹಿತ್ ತನ್ನ 12ನೇ ಟೆಸ್ಟ್ ಶತಕದೊಂದಿಗೆ ಅವರು ಕ್ರಿಕೆಟ್ನ ಎಲ್ಲಾ ಅಂತಾರಾಷ್ಟ್ರೀಯ ಮಾದರಿಗಳಲ್ಲಿ ತಮ್ಮ 48ನೇ ಸೆಂಚುರಿಯನ್ನು ಬಾರಿಸಿದಂತಾಯಿತು. (ಟೆಸ್ಟ್ನಲ್ಲಿ12, ಏಕದಿನದಲ್ಲಿ 31 ಮತ್ತು ಟಿ20ಐನಲ್ಲಿ 5 ಶತಕ).
(4 / 6)
ಈ ಮೂಲಕ ರಾಹುಲ್ ದ್ರಾವಿಡ್ ದಾಖಲೆಯನ್ನು ರೋಹಿತ್ ಶರ್ಮಾ ಸರಿಗಟ್ಟಿದ್ದಾರೆ. ದ್ರಾವಿಡ್ 36 ಟೆಸ್ಟ್ ಶತಕ ಮತ್ತು 12 ಏಕದಿನ ಸೆಂಚುರಿ ಸೇರಿ ಒಟ್ಟು 48 ಶತಕಗಳನ್ನು ಸಿಡಿಸಿದ್ದಾರೆ. ಅಲ್ಲದೆ, ರೋಹಿತ್ ಅವರು ಸುನಿಲ್ ಗವಾಸ್ಕರ್ ಅವರ ದಾಖಲೆಯನ್ನೂ ಹಿಂದಿಕ್ಕಿದ್ದಾರೆ.
(5 / 6)
ಸುನಿಲ್ ಗವಾಸ್ಕರ್ ಅವರು ಇಂಗ್ಲೆಂಡ್ ವಿರುದ್ಧ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಭಾರತೀಯ ಆರಂಭಿಕ ಆಟಗಾರ ಎನಿಸಿದ್ದಾರೆ. ಗವಾಸ್ಕರ್, ಇಂಗ್ಲೆಂಡ್ ವಿರುದ್ಧ 38 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ನಾಲ್ಕು ಶತಕ ಬಾರಿಸಿದ್ದಾರೆ. ಇದೀಗ ಈ ದಾಖಲೆಯನ್ನು ರೋಹಿತ್ ಸರಿಗಟ್ಟಿದ್ದಾರೆ, ರೋಹಿತ್ ಸಹ ಇಂಗ್ಲೆಂಡ್ ವಿರುದ್ಧ ಆರಂಭಿಕನಾಗಿ 4 ಸೆಂಚುರಿ ಪೂರ್ಣಗೊಳಿಸಿದ್ದಾರೆ.
ಇತರ ಗ್ಯಾಲರಿಗಳು