ಕನ್ನಡ ಸುದ್ದಿ  /  ಕ್ರಿಕೆಟ್  /  ಮುಂಬೈ ಇಂಡಿಯನ್ಸ್ ನಾಯಕತ್ವ ಬದಲಾವಣೆ ಕೂಗಿನ ಮಧ್ಯೆ ಹೊಸ ಟ್ವಿಸ್ಟ್ ಕೊಟ್ಟ ಶ್ರೀಶಾಂತ್; ಮತ್ತೆ ಕ್ಯಾಪ್ಟನ್ ಆಗ್ತಾರಾ ರೋಹಿತ್ ಶರ್ಮಾ?

ಮುಂಬೈ ಇಂಡಿಯನ್ಸ್ ನಾಯಕತ್ವ ಬದಲಾವಣೆ ಕೂಗಿನ ಮಧ್ಯೆ ಹೊಸ ಟ್ವಿಸ್ಟ್ ಕೊಟ್ಟ ಶ್ರೀಶಾಂತ್; ಮತ್ತೆ ಕ್ಯಾಪ್ಟನ್ ಆಗ್ತಾರಾ ರೋಹಿತ್ ಶರ್ಮಾ?

S Sreesanth on Rohit Sharma: ಮುಂಬೈ ಇಂಡಿಯನ್ಸ್ ಮಾಜಿ ನಾಯಕ ರೋಹಿತ್​ ಶರ್ಮಾ ಅವರನ್ನು ಭಾರತದ ಮಾಜಿ ವೇಗಿ ಎಸ್ ಶ್ರೀಶಾಂತ್ ಬೆಂಬಲಿಸಿದ್ದು, ಈ ಆವೃತ್ತಿಯಲ್ಲಿ ಆರೆಂಜ್ ಕ್ಯಾಪ್ ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮುಂಬೈ ಇಂಡಿಯನ್ಸ್ ನಾಯಕತ್ವ ಬದಲಾವಣೆ ಕೂಗಿನ ಮಧ್ಯೆ ಶ್ರೀಶಾಂತ್ ಹೊಸ ಟ್ವಿಸ್ಟ್
ಮುಂಬೈ ಇಂಡಿಯನ್ಸ್ ನಾಯಕತ್ವ ಬದಲಾವಣೆ ಕೂಗಿನ ಮಧ್ಯೆ ಶ್ರೀಶಾಂತ್ ಹೊಸ ಟ್ವಿಸ್ಟ್

ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ರೋಹಿತ್ ಶರ್ಮಾ ಅವರ ಉತ್ತರಾಧಿಕಾರಿ ಸ್ಥಾನಕ್ಕೆ ಹಾರ್ದಿಕ್ ಪಾಂಡ್ಯ (Hardik Pandya) ಮುಂಬೈ ಇಂಡಿಯನ್ಸ್ (Mumbai Indians) ನಾಯಕನಾಗಿ ನೇಮಕಗೊಂಡರು. ಆದರೆ, ಹೊಸ ಋತುವಿನಲ್ಲಿ ಆಲ್​ರೌಂಡರ್ ಹಾರ್ದಿಕ್ ಅಭಿಮಾನಿಗಳ ಕೋಪ ಎದುರಿಸುತ್ತಿದ್ದಾರೆ. ಅದರಲ್ಲೂ ರೋಹಿತ್ ಅಭಿಮಾನಿಗಳ ಆಕ್ರೋಶ ಹೆಚ್ಚಾಗಿದೆ.

ಟ್ರೆಂಡಿಂಗ್​ ಸುದ್ದಿ

ಐಪಿಎಲ್ 2024ರ ಮೊದಲ ತವರು ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಎಂಐ ಬೆಂಬಲಿಗರಿಂದ ಹಾರ್ದಿಕ್​ಗೆ ಪ್ರತಿಕೂಲ ಸ್ವಾಗತ ಸಿಕ್ಕಿದ್ದು ಮಾತ್ರವಲ್ಲ, ಅಭಿಮಾನಿಗಳು ವಾಂಖೆಡೆ ಕ್ರೀಡಾಂಗಣದಾದ್ಯಂತ 'ರೋಹಿತ್-ರೋಹಿತ್' ಘೋಷಣೆ ಕೂಗಿ ನಾಯಕತ್ವ ಬದಲಾವಣೆ ಕುರಿತು ಒತ್ತಾಯಿಸಿದ್ದರು. ಮುಂಬೈ ನಾಯಕತ್ವದ ಬಗ್ಗೆ ಕೂಗು ಸಹ ಜೋರಾಗಿದೆ.

ಇದೀಗ ಈ ಬಗ್ಗೆ 2007ರ ಟಿ20 ವಿಶ್ವಕಪ್ - 2011ರ ಏಕದಿನ ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯನಾಗಿದ್ದ ಮಾಜಿ ವೇಗಿ ಎಸ್​ ಶ್ರೀಶಾಂತ್ (S Sreesanth) ಅವರು ಪಾಂಡ್ಯ ನಾಯಕತ್ವದಲ್ಲಿ ಮುಕ್ತವಾಗಿ ಆಡಲು ರೋಹಿತ್ ಇಷ್ಟಪಡುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಸಚಿನ್ ತೆಂಡೂಲ್ಕರ್ ಅವರು ಮಾಹಿ ಭಾಯ್ (ಎಂಎಸ್ ಧೋನಿ) ಅಡಿಯಲ್ಲಿ ಆಡುವುದನ್ನು ನಾವು ನೋಡಿದ್ದೇವೆ. ನಾವು ವಿಶ್ವಕಪ್ ಗೆದ್ದಿದ್ದೇವೆ. ಅದೇ ರೀತಿ ರೋಹಿತ್, ಹಾರ್ದಿಕ್ ಅಡಿಯಲ್ಲಿ ಆಡುವ ಬಗ್ಗೆ ಸಾಕಷ್ಟು ಕಥೆಗಳನ್ನು ಹೇಳಲಾಗುತ್ತಿದೆ. ಆದರೆ ರೋಹಿತ್ ಮುಕ್ತವಾಗಿ ಆಡಲು ಇಷ್ಟಪಡುತ್ತಾರೆ ಎಂದಿದ್ದಾರೆ.

'ರೋಹಿತ್ ಮುಂಬೈ ತಂಡವನ್ನು ಮುನ್ನಡೆಸಲಿದ್ದಾರೆ..'

ರೋಹಿತ್ ಈ ಸೀಸನ್​ನಲ್ಲಿ ಆರೆಂಜ್ ಕ್ಯಾಪ್ ಗೆಲ್ಲಲಿದ್ದಾರೆ. ಟಿ20 ವಿಶ್ವಕಪ್​ ಟೂರ್ನಿಗೂ ಮುನ್ನ ಈ ಐಪಿಎಲ್​ನಲ್ಲಿ ರನ್ ಮಳೆ ಸುರಿಸಬೇಕು ಎಂದು ರಾಜಸ್ಥಾನ್ ರಾಯಲ್ಸ್ ಮಾಜಿ ಬೌಲರ್ ರೋಹಿತ್ ಅವರನ್ನು ಬೆಂಬಲಿಸಿದ್ದಾರೆ. 'ನನಗೆ ತಿಳಿದ ಮಟ್ಟಿಗೆ, ರೋಹಿತ್ ನಾಯಕತ್ವದ ಹೊರೆಯಿಲ್ಲದೆ ಮುಕ್ತವಾಗಿ ಬ್ಯಾಟಿಂಗ್ ಮಾಡಲು ನೋಡುತ್ತಿದ್ದಾರೆ. ಹಾಗಾಗಿ ಅಬ್ಬರದ ಬ್ಯಾಟಿಂಗ್ ನಡೆಸಿದ ಆರೆಂಜ್ ಕ್ಯಾಪ್ ಕೂಡ ತೆಗೆದುಕೊಳ್ಳಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

2024ರ ಐಪಿಎಲ್​ ರೋಹಿತ್​ ಪಾಲಿಗೆ ಅದ್ಭುತವಾಗಲಿದೆ. ಮುಂಬೈ ತಂಡವನ್ನು ಅತ್ಯಂತ ಮುಂಚೂಣಿಯಿಂದ ಮುನ್ನಡೆಸಿದ ಹಿಟ್​ಮ್ಯಾನ್, ನಾಯಕನಲ್ಲದಿದ್ದರೂ ತಂಡಕ್ಕೆ ಬೆನ್ನೆಲುಬಾಗಲಿದ್ದಾರೆ. ಹಾರ್ದಿಕ್​ ನಾಯಕನಾದರೂ ಅವರ ಹಿಂದೆ ನಿಂತು ಮುಂಬೈ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ನನಗೆ ಖಾತ್ರಿಯಿದೆ. ಬ್ಯಾಟ್ಸ್​ಮನ್​ ಆಗಿ ಮುಂಬೈನ ಮಾಜಿ ನಾಯಕನ ವಿಧಾನ ಬದಲಾಗುವುದಿಲ್ಲ ಎಂದು ಹೇಳಿದ್ದಾರೆ.

ಕೇವಲ 23.00ರ ಸರಾಸರಿಯಲ್ಲಿ ರೋಹಿತ್ ಮೊದಲ ಮೂರು ಪಂದ್ಯಗಳಲ್ಲಿ 69 ರನ್ ಗಳಿಸಿದ್ದಾರೆ. ಮುಂಬೈ ಪರ 164.28ರ ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟಿಂಗ್ ಮಾಡಿದ 36ರ ಹರೆಯದ ಹಿಟ್​ಮ್ಯಾನ್, ವಾಂಖೆಡೆ ಮೈದಾನದಲ್ಲಿ ಡಕೌಟ್ ಆಗುವ ಮೂಲಕ ಕೆಟ್ಟ ದಾಖಲೆ ಬರೆದಿದ್ದಾರೆ. ಅತಿ ಹೆಚ್ಚು ಡಕ್​​ಔಟ್ ಆದ ದಿನೇಶ್ ಕಾರ್ತಿಕ್ (17) ಅವರ ಅನಗತ್ಯ ಸಾಧನೆಯನ್ನು ಟೀಮ್ ಇಂಡಿಯಾ ನಾಯಕ ಸರಿಗಟ್ಟಿದರು.

'ಬದಲಾವಣೆಗೆ ಸಿದ್ಧರಾಗೋಣ': ರೋಹಿತ್ ಭವಿಷ್ಯದ ಬಗ್ಗೆ ಶ್ರೀಶಾಂತ್

ರೋಹಿತ್​ ಶರ್ಮಾ ಭವಿಷ್ಯದ ಕುರಿತು ಮಾತನಾಡಿದ ಶ್ರೀಶಾಂತ್, ಬದಲಾವಣೆಗೆ ಸಿದ್ಧರಾಗೋಣ ಮತ್ತು ಬದಲಾವಣೆಯನ್ನು ಸ್ವೀಕರಿಸೋಣ ಎಂದು ನಾನು ಹೇಳುತ್ತೇನೆ. ಅವರು ಯಾವುದೇ ಫ್ರಾಂಚೈಸಿಯಲ್ಲಿ ಆಡಲಿ, ರೋಹಿತ್ ಒಂದೇ ಆಗಿರಲಿದ್ದಾರೆ. ಅವರು ವೈಯಕ್ತಿಕವಾಗಿ ಕಷ್ಟದ ಸಮಯಗಳನ್ನು ಎದುರಿಸುತ್ತಿದ್ದಾರೆ ಎಂದು ನನಗೆ ಖಾತ್ರಿಯಿದೆ. ಆದರೆ ಅವರು ಇದೆಲ್ಲವನ್ನೂ ಎದುರಿಸಿ ಚಾಂಪಿಯನ್ ಆಗಿ ಹೊರ ಬರುತ್ತಾರೆ ಎಂದು ನನಗೆ ತುಂಬಾ ವಿಶ್ವಾಸವಿದೆ. ರೋಹಿತ್ ಈ ಋತುವಿನಲ್ಲಿ ಭಾರಿ ಸ್ಕೋರ್ ಮಾಡಲಿದ್ದಾರೆ ಎಂದು ಶ್ರೀಶಾಂತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಐಪಿಎಲ್‌ 2024ರ ಸಮಗ್ರ ಲೇಖನಗಳಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

IPL_Entry_Point