ಮುಂಬೈ ಇಂಡಿಯನ್ಸ್ ಫೋಟೋಶೂಟ್​ನಲ್ಲಿ ರೋಹಿತ್​ ಶರ್ಮಾ-ಇಶಾನ್ ಕಿಶನ್ ಬ್ರೊಮ್ಯಾನ್ಸ್; ಹಾರ್ದಿಕ್ ಪಾಂಡ್ಯ-ಹಿಟ್​ಮ್ಯಾನ್ ದೂರ ದೂರ
ಕನ್ನಡ ಸುದ್ದಿ  /  ಕ್ರಿಕೆಟ್  /  ಮುಂಬೈ ಇಂಡಿಯನ್ಸ್ ಫೋಟೋಶೂಟ್​ನಲ್ಲಿ ರೋಹಿತ್​ ಶರ್ಮಾ-ಇಶಾನ್ ಕಿಶನ್ ಬ್ರೊಮ್ಯಾನ್ಸ್; ಹಾರ್ದಿಕ್ ಪಾಂಡ್ಯ-ಹಿಟ್​ಮ್ಯಾನ್ ದೂರ ದೂರ

ಮುಂಬೈ ಇಂಡಿಯನ್ಸ್ ಫೋಟೋಶೂಟ್​ನಲ್ಲಿ ರೋಹಿತ್​ ಶರ್ಮಾ-ಇಶಾನ್ ಕಿಶನ್ ಬ್ರೊಮ್ಯಾನ್ಸ್; ಹಾರ್ದಿಕ್ ಪಾಂಡ್ಯ-ಹಿಟ್​ಮ್ಯಾನ್ ದೂರ ದೂರ

Rohit Sharma : ಫೋಟೋಶೂಟ್​ ಚಿತ್ರೀಕರಣದ ವಿಡಿಯೋವನ್ನು ಮುಂಬೈ ಇಂಡಿಯನ್ಸ್ ಹಂಚಿಕೊಂಡಿದೆ. ನೂತನ ನಾಯಕ ಹಾರ್ದಿಕ್ ಪಾಂಡ್ಯ, ಮಾಜಿ ನಾಯಕ ರೋಹಿತ್ ಶರ್ಮಾ, ಉಪನಾಯಕ ಜಸ್ಪ್ರೀತ್ ಬುಮ್ರಾ, ತಿಲಕ್ ವರ್ಮಾ ಮತ್ತು ಇಶಾನ್ ಕಿಶನ್ ಅವರೆಲ್ಲರೂ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

ಮುಂಬೈ ಇಂಡಿಯನ್ಸ್ ಫೋಟೋಶೂಟ್​ನಲ್ಲಿ ರೋಹಿತ್​ ಶರ್ಮಾ-ಇಶಾನ್ ಕಿಶನ್ ಬ್ರೊಮ್ಯಾನ್ಸ್
ಮುಂಬೈ ಇಂಡಿಯನ್ಸ್ ಫೋಟೋಶೂಟ್​ನಲ್ಲಿ ರೋಹಿತ್​ ಶರ್ಮಾ-ಇಶಾನ್ ಕಿಶನ್ ಬ್ರೊಮ್ಯಾನ್ಸ್

ಮುಂಬರುವ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ಗೆ (Indian Premier League 2024) ​ಮುಂಬೈ ಇಂಡಿಯನ್ಸ್ ಭರ್ಜರಿ ಸಿದ್ಧತೆ ನಡೆಸುತ್ತಿದೆ. ಹೊಸ ನಾಯಕ ಮತ್ತು ಹೊಸ ತಂಡದೊಂದಿಗೆ ಕಣಕ್ಕಿಳಿಯಲು ಸಜ್ಜಾಗಿರುವ ಮುಂಬೈ ದಾಖಲೆಯ 6ನೇ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಟೂರ್ನಿಗೂ ಮುನ್ನವೇ ಸಾಕಷ್ಟು ವಿವಾದದೊಂದಿಗೆ ಸದ್ದು ಮಾಡಿರುವ ಫ್ರಾಂಚೈಸಿ, ಒಂದು ವಿಡಿಯೋ ಹಂಚಿಕೊಳ್ಳುವ ಮೂಲಕ ವಿವಾದಗಳಿಗೆ ತೆರೆ ಎಳೆಯಲು ಮುಂದಾಗಿದೆ.

2024ರ ಶ್ರೀಮಂತ ಲೀಗ್​ ಆರಂಭಕ್ಕೆ ಮುಂಚಿತವಾಗಿ ಮುಂಬೈ ತಂಡಕ್ಕೆ ಐದು ಟ್ರೋಫಿ ಗೆದ್ದುಕೊಟ್ಟ ರೋಹಿತ್​ ಶರ್ಮಾ (Rohit Sharma) ಅವರಿಂದ ಕ್ಯಾಪ್ಟನ್ಸಿ ಕಿತ್ತುಕೊಂಡು ಹಾರ್ದಿಕ್ ಪಾಂಡ್ಯ ಅವರಿಗೆ ನೀಡಲಾಗಿತ್ತು. ಫ್ರಾಂಚೈಸಿ ತೆಗೆದುಕೊಂಡ ಈ ನಿರ್ಧಾರಕ್ಕೆ ಹಿಟ್​ಮ್ಯಾನ್​ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಫಾಲೋವರ್ಸ್​ ಲಕ್ಷಗಳಲ್ಲಿ ಕುಸಿದರು. ಆದರೆ ತಂಡದಲ್ಲಿ ಯಾರಿಗೂ ಮುನಿಸಿಲ್ಲ ಎನ್ನುವುದನ್ನು ಬಿಂಬಿಸಲು ವಿಡಿಯೋ ಹಂಚಿಕೊಂಡಿದೆ.

ಅದರಂತೆ ಫೋಟೋಶೂಟ್​ ಚಿತ್ರೀಕರಣದ ವಿಡಿಯೋವನ್ನು ಮುಂಬೈ ಫ್ರಾಂಚೈಸಿ ಹಂಚಿಕೊಂಡಿದೆ. ನೂತನ ನಾಯಕ ಹಾರ್ದಿಕ್ ಪಾಂಡ್ಯ, ಮಾಜಿ ನಾಯಕ ರೋಹಿತ್ ಶರ್ಮಾ, ಉಪನಾಯಕ ಜಸ್ಪ್ರೀತ್ ಬುಮ್ರಾ, ತಿಲಕ್ ವರ್ಮಾ ಮತ್ತು ಇಶಾನ್ ಕಿಶನ್ ಅವರೆಲ್ಲರೂ ಒಟ್ಟಿಗೆ ಫೋಟೋಶೂಟ್​​ನಲ್ಲಿ ಕಾಣಿಸಿಕೊಂಡಿದ್ದು, ಫುಲ್ ಎಂಜಾಯ್ ಮಾಡಿದ್ದಾರೆ. ಆಟಗಾರರು ಫೋಟೋಶೂಟ್‌ನೊಂದಿಗೆ ನೂತನ ಜೆರ್ಸಿಯ ಅನಾವರಣವನ್ನು ವಿಶೇಷವಾಗಿಸಲಾಯಿತು.

ಮುಂಬೈ ಹಂಚಿಕೊಂಡ ವಿಡಿಯೋದಲ್ಲಿ ಏನಿದೆ?

ರೋಹಿತ್​ ಶರ್ಮಾ ಅವರಿಂದ ನಾಯಕತ್ವ ಕಿತ್ತುಕೊಂಡ ಹಾರ್ದಿಕ್ ಪಾಂಡ್ಯ ಮತ್ತು ಮಾನಸಿಕ ಆಯಾಸವೆಂದು ಸುಳ್ಳು ಹೇಳಿ ಭಾರತ ತಂಡದಿಂದ ಹಿಂದೆ ಸರಿಯುವುದರ ಜೊತೆಗೆ ರಣಜಿ ಆಡುವಂತೆ ಸೂಚಿಸಿದ್ದ ಬಿಸಿಸಿಐ ನಿರ್ಧಾರವನ್ನು ಧಿಕ್ಕರಿಸಿದ್ದ ಇಶಾನ್ ವಿಡಿಯೋದಲ್ಲಿ ಮಿಂಚಿದ್ದಾರೆ. ಅದರಲ್ಲೂ ರೋಹಿತ್​-ಇಶಾನ್-ಹಾರ್ದಿಕ್ ಅವರು ಸಖತ್ ಎಂಜಾಯ್ ಮಾಡಿದ್ದು ವಿಶೇಷವಾಗಿತ್ತು. ಎಲ್ಲಾ ಆಟಗಾರರು ಡ್ಯಾನ್ಸ್ ಮಾಡುವುದರೊಂದಿಗೆ ಗಮನ ಸೆಳೆದಿದೆ.

ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ

ಫ್ರಾಂಚೈಸಿ ಹಂಚಿಕೊಂಡ ವಿಡಿಯೋಗೆ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಹಾರ್ದಿಕ್ ಪಾಂಡ್ಯರಿಂದ ದೂರ ಇರುವಂತೆ ರೋಹಿತ್​ಗೆ ಸಲಹೆ ನೀಡಿದ್ದಾರೆ. ಎಲ್ಲರೂ ಹೀಗೆ ಖುಷಿ ಆಗಿರಿ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ. ವಿಡಿಯೋದಲ್ಲಿ ರೋಹಿತ್​ ಮತ್ತು ಹಾರ್ದಿಕ್ ಒಟ್ಟಿಗೆ ಕಾಣಿಸಿಕೊಂಡಿಲ್ಲ ಎಂಬುದನ್ನು ಪ್ರಶ್ನೆ ಕೇಳಿದ್ದಾರೆ. ಹಾಗಾಗಿ ಇಬ್ಬರ ನಡುವೆ ಮುನಿಸಿದೆ ಎಂಬ ಅನುಮಾನ ಇದೆ ಎಂದು ಕಾಮೆಂಟ್​ಗಳ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಮುಂಬೈ ಇಂಡಿಯನ್ಸ್‌ ತಂಡ

ಹಾರ್ದಿಕ್ ಪಾಂಡ್ಯ (ನಾಯಕ), ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ತಿಲಕ್ ವರ್ಮಾ, ವಿಷ್ಣು ವಿನೋದ್, ಅರ್ಜುನ್ ತೆಂಡೂಲ್ಕರ್, ಜಸ್ಪ್ರೀತ್ ಬುಮ್ರಾ, ಶಾಮ್ಸ್ ಮುಲಾನಿ, ಡೆವಾಲ್ಡ್ ಬ್ರೆವಿಸ್, ನೆಹಾಲ್ ವಧೇರಾ, ಜೇಸನ್ ಬೆಹ್ರೆಂಡಾರ್ಫ್, ಕುಮಾರ್ ಕಾರ್ತಿಕೇಯ, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಪಿಯೂಷ್ ಚಾವ್ಲಾ, ರೊಮಾರಿಯೋ ಶೆಫರ್ಡ್, ಜೆರಾಲ್ಡ್ ಕೊಯೆಟ್ಜಿ, ನುವಾನ್ ತುಷಾರ, ಮೊಹಮ್ಮದ್ ನಬಿ, ಶಿವಾಲಿಕ್ ಶರ್ಮಾ, ಆಕಾಶ್ ಮಧ್ವಾಲ್, ಅಂಶುಲ್ ಕಾಂಬೋಜ್, ಶ್ರೇಯಸ್ ಗೋಪಾಲ್, ದಿಲ್ಶನ್ ಮಧುಶಂಕ, ನಮನ್ ಧೀರ್.

ಮುಂಬೈ ಇಂಡಿಯನ್ಸ್​ ವೇಳಾಪಟ್ಟಿ

ಮಾರ್ಚ್ 24: ಗುಜರಾತ್ ಟೈಟಾನ್ಸ್ vs ಮುಂಬೈ ಇಂಡಿಯನ್ಸ್ (ಅಹ್ಮದಾಬಾದ್)

ಮಾರ್ಚ್ 27: ಸನ್​ರೈಸರ್ಸ್ ಹೈದರಾಬಾದ್ vs ಮುಂಬೈ ಇಂಡಿಯನ್ಸ್ (ಹೈದರಾಬಾದ್)

ಏಪ್ರಿಲ್ 1: ಮುಂಬೈ ಇಂಡಿಯನ್ಸ್ vs ರಾಜಸ್ಥಾನ ರಾಯಲ್ಸ್ (ಮುಂಬೈ)

ಏಪ್ರಿಲ್ 7: ಮುಂಬೈ ಇಂಡಿಯನ್ಸ್ vs ದೆಹಲಿ ಕ್ಯಾಪಿಟಲ್ಸ್ (ಮುಂಬೈ)

Whats_app_banner