ಅಬ್ಬರದಾಟ ಆರಂಭಿಸಿ 28 ರನ್‌ಗಳಿಗೆ ಔಟಾದ ರೋಹಿತ್ ಶರ್ಮಾ; ಎರಡನೇ ಇನ್ನಿಂಗ್ಸ್‌ನಲ್ಲೂ ರಣಜಿ ಟ್ರೋಫಿ ಕಂಬ್ಯಾಕ್ ಪ್ರಯತ್ನ ವಿಫಲ
ಮುಂಬೈ ಮತ್ತು ಜಮ್ಮು ಮತ್ತು ಕಾಶ್ಮೀರ ತಂಡಗಳ ನಡುವಿನ ರಣಜಿ ಟ್ರೋಫಿ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ರೋಹಿತ್ ಶರ್ಮಾ ವಿಫಲರಾಗಿದ್ದಾರೆ. 35 ಎಸೆತಗಳಲ್ಲಿ 28 ರನ್ ಗಳಿಸಿದ ಹಿಟ್‌ಮ್ಯಾನ್, ಅಭಿಮಾನಿಗಳಿಗೆ ನಿರಾಶೆ ಮೂಡಿಸಿದರು.

ಟೀಮ್ ಇಂಡಿಯಾದಲ್ಲಿ ಮೇಲಿಂದ ಮೇಲೆ ವೈಫಲ್ಯ ಅನುಭವಿಸಿ ರಣಜಿ ಟ್ರೋಫಿ ಪಂದ್ಯ ಆಡುತ್ತಿರುವ ರೋಹಿತ್ ಶರ್ಮಾ (Rohit Sharma), ಇಲ್ಲೂ ಮತ್ತೆ ವೈಫಲ್ಯ ಅನುಭವಿಸುತ್ತಿದ್ದಾರೆ. ಮುಂಬೈನ ಬಿಕೆಸಿಯಲ್ಲಿ ನಡೆಯುತ್ತಿರುವ ಮುಂಬೈ ಹಾಗೂ ಜಮ್ಮು ಮತ್ತು ಕಾಶ್ಮೀರ ತಂಡಗಳ ನಡುವಿನ ರಣಜಿ ಟ್ರೋಫಿ ಗ್ರೂಪ್ ಎ ಪಂದ್ಯದಲ್ಲಿ, ಭಾರತ ತಂಡದ ನಾಯಕ ರೋಹಿತ್ ಶರ್ಮಾ ಎರಡೂ ಇನ್ನಿಂಗ್ಸ್‌ಗಳಲ್ಲಿ ಅಲ್ಪ ಮೊತ್ತಕ್ಕೆ ಔಟಾಗಿದ್ದಾರೆ. ಸುಮಾರು 10 ವರ್ಷಗಳ ನಂತರ ರಣಜಿ ಟ್ರೋಫಿ ಪಂದ್ಯವನ್ನು ಆಡುತ್ತಿರುವ ರೋಹಿತ್, ನಿರ್ಣಾಯಕ ಪಂದ್ಯದ ಮೊದಲ ದಿನದಂದು 19 ಎಸೆತಗಳಲ್ಲಿ 3 ರನ್ ಗಳಿಸಿ ಔಟಾದರು. ಬಲಗೈ ಆರಂಭಿಕ ಬ್ಯಾಟರ್ 2ನೇ ದಿನ ಕೂಡಾ ಕ್ರೀಸ್‌ಕಚ್ಚಿ ಆಡಲು ಸಾಧ್ಯವಾಗಲಿಲ್ಲ.
ಎರಡನೇ ಇನ್ನಿಂಗ್ಸ್‌ನಲ್ಲಿ ಪಿಚ್‌ಗೆ ಬಂದ ಹಿಟ್‌ಮ್ಯಾನ್, ತಕ್ಷಣ ಯಶಸ್ಸು ಪಡೆದರು. ಆಗ ವೇಗದ ಆಟವಾಡಲು ಮುಂದಾದ ಅವರು ಅದ್ಭುತ ಸಿಕ್ಸರ್ ಮೂಲಕ ವೇಗವಾಗಿ ರನ್ ಗಳಿಸುವ ಲೆಕ್ಕ ಹಾಕಿದರು. ಎರಡನೇ ಇನ್ನಿಂಗ್ಸ್‌ನಲ್ಲಿ ಒಟ್ಟು 28 ರನ್ ಗಳಿಸಿದ ರೋಹಿತ್, ಕೆಲವು ಅವಕಾಶಗಳನ್ನು ಕೈಚೆಲ್ಲಿದರು. ಈ ನಡುವೆ ಸಿಕ್ಸರ್-ಬೌಂಡರಿಗಳನ್ನು ಬಾರಿಸಿ ಗಮನ ಸೆಳೆದರು. ಆಗ ಬಿಕೆಸಿ ಮೈದಾನದಲ್ಲಿ ನೆರೆದಿದ್ದ ಜನರು "ಮುಂಬೈ ಛಾ ರಾಜಾ, ರೋಹಿತ್ ಶರ್ಮಾ" ಎಂಬ ಘೋಷಣೆಗಳನ್ನು ಕೂಗಿದರು. ಹಿಟ್‌ಮ್ಯಾನ್ ಹಾರ್ಡ್ ಹಿಟ್ಟಿಂಗ್ ನೋಡಿ ಖುಷಿಯಾದರು.
ರೋಹಿತ್ ಕೇವಲ 11 ಎಸೆತಗಳಲ್ಲಿ 21 ರನ್ ಗಳಿಸಿದರು. ಅಭಿಮಾನಿಗಳಿಗೆ ಹಿಟ್‌ಮ್ಯಾನ್ ಕಮ್‌ಬ್ಯಾಕ್ ಸುಳಿವು ಸಿಕ್ಕಿತು. ಆ ನಂತರ ಗೇರ್ ಬದಲಾಯಿಸಿದ ಅವರು, ಮುಂದಿನ 20 ಎಸೆತಗಳಲ್ಲಿ ಗಳಿಸಿದ್ದು ಕೇವಲ 1 ರನ್ ಮಾತ್ರ. ಯುಧ್ವೀರ್ ಸಿಂಗ್ ಮತ್ತು ಔಕಿಬ್ ನಬಿ ಬಿಗಿ ದಾಳಿ ನಡೆಸಿ ಹಿಟ್‌ಮ್ಯಾನ್ ಕಟ್ಟಿ ಹಾಕಿದರು. ಮೊದಲ ಇನ್ನಿಂಗ್ಸ್‌ಗೆ ಹೋಲಿಸಿದರೆ ರೋಹಿತ್ ಈ ಬಾರಿ ಸಂಪೂರ್ಣ ನಿಯಂತ್ರಣದಲ್ಲಿರುವಂತೆ ಕಂಡರು. ರಕ್ಷಣಾತ್ಮಕ ಆಟವಾಡಿದರು.
ರೋಹಿತ್ ಹಾಗೈ ಫ್ಯಾನ್ಸ್ ಲೆಕ್ಕಾಚಾರ ತಲೆಕೆಳಗೆ
ಯುಧ್ವೀರ್ ಅವರ ಎಸೆತಕ್ಕೆ ಮೈದಾನದ ಹೊರಕ್ಕೆ ಸಿಕ್ಸರ್ ಬಾರಿಸಿ ಮತ್ತೆ ತಮ್ಮ ಫಾರ್ಮ್ ತೋರಿಸಿದರು. ರೋಹಿತ್ ಶರ್ಮಾ ದೊಡ್ಡ ಹೊಡೆತಕ್ಕೆ, ಅಬ್ಬರಕ್ಕೆ ಸಜ್ಜಾಗಿದ್ದಾರೆ ಎಂದೇ ಅಭಿಮಾನಿಗಳು ಲೆಕ್ಕ ಹಾಕಿದರು. ಅಷ್ಟರಲ್ಲಿ ಲೆಕ್ಕಾಚಾರವೆಲ್ಲಾ ಉಲ್ಟಾ ಹೊಡೆಯಿತು.
ಮತ್ತೊಂದು ದೊಡ್ಡ ಹೊಡೆತಕ್ಕೆ ಮುಂದಾದ ರೋಹಿತ್ ಆ ಕ್ಷಣಕ್ಕೆ ಎಡವಿದರು. ಯುಧ್ವೀರ್ ಅವರ ವೇಗದ ಸೂಕ್ಷ್ಮ ಬದಲಾವಣೆಯನ್ನು ಗಮನಿಸದೆ ಹೊಡೆದರು. ಮಿಡ್ ವಿಕೆಟ್ ಪ್ರದೇಶದ ಕಡೆ ಹೋದ ಚೆಂಡು ಅಬಿದ್ ಮುಷ್ತಾಕ್ ಕೈಸೇರಿತು. ಕ್ಯಾಚ್ ಔಟ್ ಆದ ರೋಹಿತ್, 35 ಎಸೆತಗಳಲ್ಲಿ 28 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು.
