ರೋಹಿತ್​ ಶರ್ಮಾ, ಶಾಹಿದ್ ಅಫ್ರಿದಿ ಇನ್, ಎಂಎಸ್ ಧೋನಿ ನಾಯಕ; ಸಾರ್ವಕಾಲಿಕ ಟಿ20 ವಿಶ್ವಕಪ್ ಪ್ಲೇಯಿಂಗ್ 11 ಕಟ್ಟಿದ ಚಾಟ್​ಜಿಪಿಟಿ
ಕನ್ನಡ ಸುದ್ದಿ  /  ಕ್ರಿಕೆಟ್  /  ರೋಹಿತ್​ ಶರ್ಮಾ, ಶಾಹಿದ್ ಅಫ್ರಿದಿ ಇನ್, ಎಂಎಸ್ ಧೋನಿ ನಾಯಕ; ಸಾರ್ವಕಾಲಿಕ ಟಿ20 ವಿಶ್ವಕಪ್ ಪ್ಲೇಯಿಂಗ್ 11 ಕಟ್ಟಿದ ಚಾಟ್​ಜಿಪಿಟಿ

ರೋಹಿತ್​ ಶರ್ಮಾ, ಶಾಹಿದ್ ಅಫ್ರಿದಿ ಇನ್, ಎಂಎಸ್ ಧೋನಿ ನಾಯಕ; ಸಾರ್ವಕಾಲಿಕ ಟಿ20 ವಿಶ್ವಕಪ್ ಪ್ಲೇಯಿಂಗ್ 11 ಕಟ್ಟಿದ ಚಾಟ್​ಜಿಪಿಟಿ

Best All Time T20 World Cup XI: ಟಿ20 ವಿಶ್ವಕಪ್ ಇತಿಹಾಸದಲ್ಲಿ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಅಬ್ಬರಿಸಿ ಬೊಬ್ಬಿರಿದ ಆಟಗಾರರ ಅತ್ಯುತ್ತಮ ಪ್ಲೇಯಿಂಗ್ XI ಅನ್ನು ಎಐ ಟೂಲ್ ಚಾಟ್​ ಜಿಟಿಪಿ ನಿರ್ಮಿಸಿದೆ.

ರೋಹಿತ್​ ಶರ್ಮಾ, ಶಾಹಿದ್ ಅಫ್ರಿದಿ ಇನ್, ಎಂಎಸ್ ಧೋನಿ ನಾಯಕ; ಸಾರ್ವಕಾಲಿಕ ಟಿ20 ವಿಶ್ವಕಪ್ ಪ್ಲೇಯಿಂಗ್ 11 ಕಟ್ಟಿದ ಚಾಟ್​ಜಿಟಿಪಿ
ರೋಹಿತ್​ ಶರ್ಮಾ, ಶಾಹಿದ್ ಅಫ್ರಿದಿ ಇನ್, ಎಂಎಸ್ ಧೋನಿ ನಾಯಕ; ಸಾರ್ವಕಾಲಿಕ ಟಿ20 ವಿಶ್ವಕಪ್ ಪ್ಲೇಯಿಂಗ್ 11 ಕಟ್ಟಿದ ಚಾಟ್​ಜಿಟಿಪಿ

Best All Time T20 World Cup XI: ಟಿ20 ವಿಶ್ವಕಪ್ 2024 ಜೂನ್ 1ರಂದು ಪ್ರಾರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಅತಿಥೇಯ ಯುನೈಟೆಡ್ ಸ್ಟೇಟ್ಸ್ ಅಮೆರಿಕ ಮತ್ತು ಕೆನಡಾ ತಂಡಗಳು ಸೆಣಸಾಟ ನಡೆಸಲಿವೆ. ಭಾರತ ತನ್ನ ಮೊದಲ ಪಂದ್ಯವನ್ನು ಜೂನ್ 5 ರಂದು ಐರ್ಲೆಂಡ್ ವಿರುದ್ಧ, ಜೂನ್ 9ರಂದು ನ್ಯೂಯಾರ್ಕ್‌ನಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಪಂದ್ಯಾವಳಿಯಲ್ಲಿ 20 ತಂಡಗಳ ನಡುವೆ ಪೈಪೋಟಿ ನಡೆಯಲಿದ್ದು, 5 ತಂಡಗಳಂತೆ 4 ಗುಂಪುಗಳಾಗಿ ವಿಂಗಡಣೆ ಮಾಡಲಾಗಿದೆ. ಪ್ರತಿ ಗುಂಪಿನಿಂದ ಅಗ್ರ 2 ತಂಡಗಳು ಸೂಪರ್ 8 ಗೆ ಅರ್ಹತೆ ಪಡೆಯುತ್ತವೆ.

ಟಿ20 ವಿಶ್ವಕಪ್ 2024 ಅತ್ಯಂತ ಪ್ರತಿಷ್ಠಿತ ಟೂರ್ನಿಗಳಲ್ಲಿ ಒಂದಾಗಿದೆ. 2007ರಲ್ಲಿ ನಡೆದಿದ್ದ ಮೊದಲ ಆವೃತ್ತಿಯಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ಭಾರತ ತಂಡಕ್ಕೆ ಚೊಚ್ಚಲ ಟ್ರೋಫಿ ಗೆದ್ದುಕೊಟ್ಟರು. 2009ರಲ್ಲಿ ಪಾಕಿಸ್ತಾನ 2ನೇ ಆವೃತ್ತಿಯನ್ನು ಗೆದ್ದುಕೊಂಡಿತು. ಹಿಂದಿನ ಆವೃತ್ತಿ 2022ರಲ್ಲಿ ಇಂಗ್ಲೆಂಡ್ ಟ್ರೋಫಿಗೆ ಮುತ್ತಿಕ್ಕಿತ್ತು. ಇಲ್ಲಿಯವರೆಗೆ, ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ 2 ಬಾರಿ ಟೂರ್ನಿ ಗೆದ್ದ ತಂಡಗಳು ಎನಿಸಿವೆ. ಭಾರತ, ಪಾಕಿಸ್ತಾನ, ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ತಲಾ ಒಂದೊಂದು ಸಲ ಚಾಂಪಿಯನ್ ಆಗಿವೆ.ಪ್ರತಿ ಎರಡು ವರ್ಷಗಳಿಗೊಮ್ಮೆ ಜರುಗುವ ಈ ಟೂರ್ನಿಯು 18 ವರ್ಷಗಳ (2007-2024) ಇತಿಹಾಸ ಹೊಂದಿದೆ.

ಈ ಅವಧಿಯಲ್ಲಿ ಘಟಾನುಘಟಿ ಆಟಗಾರರೇ ಕಣಕ್ಕಿಳಿದಿದ್ದು, ಹಲವು ನೆನಪುಗಳನ್ನು ಉಳಿಸಿ ಹೋಗಿದ್ದಾರೆ. ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಅಬ್ಬರಿಸಿ ಬೊಬ್ಬಿರಿದ ಆಟಗಾರರ ಅತ್ಯುತ್ತಮ ಪ್ಲೇಯಿಂಗ್ XI ಅನ್ನು ಎಐ ಟೂಲ್ ಚಾಟ್​ ಜಿಟಿಪಿ ನಿರ್ಮಿಸಿದೆ. ಆದರೆ ಈ ಸಾರ್ವಕಾಲಿಕ ಪಟ್ಟಿಯಲ್ಲಿ ಪ್ರಮುಖ ಆಟಗಾರರನ್ನೇ ಹೊರಗಿಡಲಾಗಿದೆ. ಈ ತಂಡಕ್ಕೆ ಮಹೇಂದ್ರ ಸಿಂಗ್ ಧೋನಿ ಅವರು ನಾಯಕನಾಗಿದ್ದಾರೆ. ಆದರೆ 6 ಎಸೆತಗಳಲ್ಲಿ 6 ಸಿಕ್ಸರ್​ ಸಿಡಿಸಿದ ಯುವರಾಜ್​ ಸಿಂಗ್ ಅವರನ್ನು ಕೈಬಿಡಲಾಗಿದೆ. ಯಾರಿಗೆಲ್ಲಾ ಸಿಕ್ಕಿದೆ ನೋಡಿ ಅವಕಾಶ.

ಆರಂಭಿಕರಾಗಿ ರೋಹಿತ್​-ಗೇಲ್ ಕಣಕ್ಕೆ

ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ವೆಸ್ಟ್​ ಇಂಡೀಸ್ ಸ್ಫೋಟಕ ಆಟಗಾರ ಕ್ರಿಸ್ ​ಗೇಲ್ ಆರಂಭಿಕರಾಗಿ ಆಯ್ಕೆಯಾಗಿದ್ದಾರೆ. ಭಾರತದ ನಾಯಕ ರೋಹಿತ್ ಶರ್ಮಾ ಎಲ್ಲಾ T20 ವಿಶ್ವಕಪ್ ಆವೃತ್ತಿಗಳಲ್ಲಿ ಆಡಿದ ಶಕೀಬ್ ಅಲ್ ಹಸನ್ ಅವರೊಂದಿಗೆ ಜಂಟಿ ಸ್ಥಾನ ಪಡೆದಿದ್ದಾರೆ. ಏತನ್ಮಧ್ಯೆ, ಆಕ್ರಮಣಕಾರಿ ಬ್ಯಾಟಿಂಗ್ ನಡೆಸುವ ಕ್ರಿಸ್​ಗೇಲ್, ಅತ್ಯುತ್ತಮ ಟಿ20 ಬ್ಯಾಟರ್​​ಗಳಲ್ಲಿ ಒಬ್ಬರು. ಟಿ20 ಕ್ರಿಕೆಟ್​ನಲ್ಲಿ ಸಿಕ್ಸರ್​ ಕಿಂಗ್ ಎನಿಸಿಕೊಂಡಿದ್ದಾರೆ.

ಮಧ್ಯಮ ಕ್ರಮಾಂಕದಲ್ಲಿ ಸೂಪರ್​ಸ್ಟಾರ್ ಬ್ಯಾಟರ್ಸ್

ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತ್ಯಧಿಕ ರನ್ ಗಳಿಸಿ ಅಗ್ರಸ್ಥಾನ ಪಡೆದಿರುವ ಭಾರತ ತಂಡದ ಬ್ಯಾಟಿಂಗ್ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ. ಟೂರ್ನಿಯಲ್ಲಿ 1000ಕ್ಕೂ ಹೆಚ್ಚು ರನ್ ಗಳಿಸಿದ ಏಕೈಕ ಆಟಗಾರ. ಎಬಿಡಿ ವಿಲಿಯರ್ಸ್ ಮತ್ತು ಕೆವಿನ್ ಪೀಟರ್ಸನ್​ ಕೂಡ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇಬ್ಬರು ವಿಶ್ವದ ಸ್ಫೋಟಕ ಆಟಗಾರರು. ಅಸಾಧ್ಯವನ್ನೂ ಸಾಧ್ಯವಾಗಿಸುವ ಸಾಮಥ್ಯವನ್ನು ಇಬ್ಬರೂ ಹೊಂದಿದ್ದಾರೆ.

ನಾಯಕ ಎಂಎಸ್ ಧೋನಿ, ಆಲ್​ರೌಂಡರ್ಸ್ ಯಾರು?

2007ರ ವಿಶ್ವಕಪ್ ವಿಜೇತ ನಾಯಕ ಎಂಎಸ್ ಧೋನಿ ಅವರು ನಾಯಕರಾಗಿ ಆಯ್ಕೆಯಾಗಿದ್ದಾರೆ. ಧೋನಿಯ ನಾಯಕತ್ವದ ಸಾಮರ್ಥ್ಯ ಮತ್ತು ಚಾಣಾಕ್ಷತೆಯಿಂದ ಅತ್ಯುತ್ತಮ ನಾಯಕರ ಲೀಗ್‌ಗೆ ಸೇರಿಸಲಾಗಿದೆ. ಎಲ್ಲಾ ಮೂರು ಐಸಿಸಿ ಟ್ರೋಫಿಗಳನ್ನು ಗೆದ್ದ ಏಕೈಕ ನಾಯಕರಾಗಿದ್ದಾರೆ. 2007 ಟಿ20 ವಿಶ್ವಕಪ್‌ನಲ್ಲಿ ಭಾರತದ ಗೆಲುವಿಗೆ ಮತ್ತು 2014 ಟಿ20 ವಿಶ್ವಕಪ್‌ ಫೈನಲ್‌ಗೆ ಮುನ್ನಡೆಸಿದ್ದಾರೆ. ಅವರೇ ವಿಕೆಟ್ ಕೀಪರ್ ಜವಾಬ್ದಾರಿಯನ್ನೂ ವಹಿಸಲಿದ್ದಾರೆ.

ಶಾಹಿದ್ ಅಫ್ರಿದಿ, ಸುನಿಲ್ ನರೈನ್ ಮತ್ತು ಡ್ವೇನ್ ಬ್ರಾವೋ ತಂಡದ ಆಲ್​ರೌಂಡರ್‌ಗಳಾಗಿದ್ದಾರೆ. ಅಫ್ರಿದಿ ಟೂರ್ನಿಯಲ್ಲಿ 546 ರನ್ ಹಾಗೂ 39 ವಿಕೆಟ್ ಪಡೆದಿದ್ದಾರೆ. ಲಸಿತ್ ಮಾಲಿಂಗ ಮತ್ತು ಉಮರ್ ಗುಲ್ ಇಬ್ಬರು ವೇಗಿಗಳಾಗಿದ್ದರು. ಯಾವುದೇ ಕ್ಷಣದಲ್ಲಾದರೂ ಪಂದ್ಯಕ್ಕೆ ತಿರುವು ನೀಡುವ ಸಾಮರ್ಥ್ಯ ಹೊಂದಿದ್ದಾರೆ.

ಚಾಟ್ ಜಿಪಿಟಿಯ ಅತ್ಯುತ್ತಮ ಸಾರ್ವಕಾಲಿಕ ಟಿ20 ವಿಶ್ವಕಪ್ ಪ್ಲೇಯಿಂಗ್ XI: ರೋಹಿತ್ ಶರ್ಮಾ, ಕ್ರಿಸ್ ಗೇಲ್, ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಕೆವಿನ್ ಪೀಟರ್ಸನ್, ಎಂಎಸ್ ಧೋನಿ (ನಾಯಕ), ಶಾಹಿದ್ ಅಫ್ರಿದಿ, ಡ್ವೇನ್ ಬ್ರಾವೋ, ಉಮರ್ ಗುಲ್, ಲಸಿತ್ ಮಾಲಿಂಗ, ಸುನಿಲ್ ನರೈನ್.

 

 

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner