ರೋಹಿತ್​ ಶರ್ಮಾ ಪುತ್ರನಿಗೆ ಅಹಾನ್ ಎಂದು ನಾಮಕರಣ, ಮಗನ ಹೆಸರು ಬಹಿರಂಗಪಡಿಸಿದ ರಿತಿಕಾ ಸಜ್ದೇಹ್; ಈ ಹೆಸರಿನ ಅರ್ಥವೇನು?
ಕನ್ನಡ ಸುದ್ದಿ  /  ಕ್ರಿಕೆಟ್  /  ರೋಹಿತ್​ ಶರ್ಮಾ ಪುತ್ರನಿಗೆ ಅಹಾನ್ ಎಂದು ನಾಮಕರಣ, ಮಗನ ಹೆಸರು ಬಹಿರಂಗಪಡಿಸಿದ ರಿತಿಕಾ ಸಜ್ದೇಹ್; ಈ ಹೆಸರಿನ ಅರ್ಥವೇನು?

ರೋಹಿತ್​ ಶರ್ಮಾ ಪುತ್ರನಿಗೆ ಅಹಾನ್ ಎಂದು ನಾಮಕರಣ, ಮಗನ ಹೆಸರು ಬಹಿರಂಗಪಡಿಸಿದ ರಿತಿಕಾ ಸಜ್ದೇಹ್; ಈ ಹೆಸರಿನ ಅರ್ಥವೇನು?

ಟೀಮ್ ಇಂಡಿಯಾ ನಾಯಕ ರೋಹಿತ್​ ಶರ್ಮಾ ಅವರ ಮಗನ ಹೆಸರು ಬಹಿರಂಗಗೊಂಡಿದೆ. ರೋಹಿತ್​ ಪತ್ನಿ ರಿತಿಕಾ ಸಜ್ದೇಹ್ ಅವರು ಮಗನ ಹೆಸರನ್ನು ಅಹಾನ್ ಎಂದು ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಹಾಕುವ ಮೂಲಕ ಹೆಸರು ಖಚಿತಪಡಿಸಿದ್ದಾರೆ.

ರೋಹಿತ್​ ಶರ್ಮಾ ಪುತ್ರನಿಗೆ ಅಹಾನ್ ಎಂದು ನಾಮಕರಣ, ಮಗನ ಹೆಸರು ಬಹಿರಂಗಪಡಿಸಿದ ರಿತಿಕಾ ಸಜ್ದೇಹ್
ರೋಹಿತ್​ ಶರ್ಮಾ ಪುತ್ರನಿಗೆ ಅಹಾನ್ ಎಂದು ನಾಮಕರಣ, ಮಗನ ಹೆಸರು ಬಹಿರಂಗಪಡಿಸಿದ ರಿತಿಕಾ ಸಜ್ದೇಹ್

ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರ ಮಗನ ಹೆಸರೇನು? ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಖಾಸಗಿ ಆಸ್ಪ್ರತ್ರೆಯೊಂದರಲ್ಲಿ ನವೆಂಬರ್​ 15ರಂದು ಗಂಡು ಮಗುವಿಗೆ ಜನ್ಮ ನೀಡಿದ್ದ ರೋಹಿತ್​ ಪತ್ನಿ ರಿತಿಕಾ ಸಜ್ದೇಹ್, ವಿಶೇಷ ಫೋಟೋ ಪೋಸ್ಟ್ ಮಾಡುವ ಮೂಲಕ 15 ದಿನಗಳ ನಂತರ ಹೆಸರನ್ನು ರಿವೀಲ್ ಮಾಡಿದ್ದಾರೆ. ಇನ್‌ಸ್ಟಾಗ್ರಾಂನ ಸ್ಟೋರಿಯಲ್ಲಿ ರಿತಿಕಾ ಅವರು ಕ್ರಿಸ್ಮಸ್ ಥೀಮ್ ಮೂಲಕ ತಮ್ಮ ಮಗನ ಹೆಸರು ಅಹಾನ್  ಶರ್ಮಾ ಎಂದು ಹೇಳಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. 

ನವೆಂಬರ್ 15ರಂದು ಎರಡನೇ ಬಾರಿಗೆ ತಂದೆಯಾದ ಕುರಿತು ರೋಹಿತ್​ ಶರ್ಮಾ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಗಂಡು ಮಗು ಜನಿಸಿದ ಒಂದು ದಿನದ ನಂತರ ರೋಹಿತ್ ಅಪ್ಡೇಟ್ ನೀಡಿದ್ದರು. ನಮ್ಮ ಕುಟುಂಬ ಸದಸ್ಯರ ಸಂಖ್ಯೆ ನಾಲ್ಕಕ್ಕೆ ಏರಿದೆ. ಆದರೆ ಹೆಸರು ರಿವೀಲ್ ಮಾಡಿರಲಿಲ್ಲ. ಈಗ ಡಿಸೆಂಬರ್ 1, 2024 ರಂದು, ರೋಹಿತ್ ಶರ್ಮಾ ಅವರ ಮಗನ ಹೆಸರು ಅಹಾನ್ ಎಂದು ಈ ಮಾಹಿತಿಯು ಬೆಳಕಿಗೆ ಬಂದಿದೆ. ಈ ವಿಷಯವನ್ನು ಸ್ವತಃ ರಿತಿಕಾ ತಮ್ಮ ಇನ್‌ಸ್ಟಾ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಇನ್​ಸ್ಟಾ ಪೋಸ್ಟ್​​ನಲ್ಲಿ ರಿವೀಲ್

ಸ್ಟೋರಿಯಲ್ಲಿ ನಾಲ್ಕು ಕ್ರಿಸ್​ಮಸ್ ಬೊಂಬೆಗಳಿಗೆ ಒಂದೊಂದಕ್ಕೂ ಒಂದು ಹೆಸರಿಡಲಾಗಿದೆ. ರಿಟ್ಸ್ ಅಂದರೆ ರಿತಿಕಾ, ರೋ ಅಂದರೆ ರೋಹಿತ್ ಶರ್ಮಾ, ಸಮ್ಮಿ ಅಂದರೆ ಸಮೈರಾ ಮತ್ತು ಮತ್ತೊಂದು ಬೊಂಬೆಯ ಮೇಲೆ ಅಹಾನ್ ಎಂದು ಬರೆಯಲಾಗಿದೆ. ಈ ಪೋಸ್ಟ್ ವೈರಲ್ ಆಗುತ್ತಿದೆ. ರೋಹಿತ್ ಪ್ರಸ್ತುತ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದಾರೆ. ಗಂಡು ಜನನ ಒಂದು ವಾರದ ನಂತರ ಭಾರತ ತಂಡವನ್ನು ಕೂಡಿಕೊಂಡರು. ಹೀಗಾಗಿ ಮೊದಲ ಟೆಸ್ಟ್ ಪಂದ್ಯವನ್ನು ಕಳೆದುಕೊಂಡರು. ರೋಹಿತ್ ಕ್ಯಾನ್​ಬೆರಾದಲ್ಲಿ  ಆಸ್ಟ್ರೇಲಿಯಾದ ಪ್ರೈಮ್​​ ಮಿನಿಸ್ಟರ್ ಪ್ಲೇಯಿಂಗ್ XI ವಿರುದ್ಧ ಭಾರತ ತಂಡದ ಅಭ್ಯಾಸ ಪಂದ್ಯದಲ್ಲಿ ಕಣಕ್ಕಿಳಿದಿದ್ದರು.

ಈ ಪಂದ್ಯದಲ್ಲಿ ಕೆಂಪು ಚೆಂಡಿನೊಂದಿಗೆ ಆಡುವ ಬದಲಿಗೆ ಪಿಂಕ್ ಬಾಲ್​ನಲ್ಲಿ ಆಡಲಾಯಿತು. ಏಕೆಂದರೆ ಟೀಮ್ ಇಂಡಿಯಾ ಅಡಿಲೇಡ್‌ನಲ್ಲಿ ಪಿಂಕ್ ಬಾಲ್‌ನೊಂದಿಗೆ ಎರಡನೇ ಟೆಸ್ಟ್ ಪಂದ್ಯವನ್ನು ಆಡಲಿದೆ. ಈ ಪಂದ್ಯಕ್ಕೆ ಸಿದ್ಧತೆಯ ಭಾಗವಾಗಿ ಭಾರತ ಪಿಂಕ್​ಬಾಲ್​ನಲ್ಲಿ ಆಡಿದೆ. ರೋಹಿತ್ ಪರ್ತ್ ಟೆಸ್ಟ್ ಪಂದ್ಯದಲ್ಲಿ ಆಡದ ಕಾರಣ ಈ ಪಂದ್ಯದಲ್ಲಿ ಕಣಕ್ಕಿಳಿದರು. ಆದರೆ 3 ರನ್​ಗಳಿಸಿ ನಿರಾಸೆ ಮೂಡಿಸಿದರು. ಹೀಗಾಗಿ ಪರಿಸ್ಥಿತಿಗೆ ಹೊಂದಿಕೊಳ್ಳಲು ಪ್ರಾಕ್ಟೀಸ್ ಪಂದ್ಯದಲ್ಲಿ ಆಡಿದರು. ಆದರೆ ಅಭ್ಯಾಸ ಪಂದ್ಯದ ನಂತರವೂ ಸಂಜೆ ರೋಹಿತ್ ಅಭ್ಯಾಸ ಮಾಡುತ್ತಿರುವುದು ಕಂಡು ಬಂತು.

ಅಹಾನ್ ಹೆಸರಿನ ಅರ್ಥವೇನು?

ಆಹಾನ್ ಎಂಬ ಹೆಸರಿನ ಅರ್ಥ ಜಾಗೃತಿ, ಪ್ರಜ್ಞೆ, ಅರಿವು, ಪುನರ್ಜನ್ಮ ಅಥವಾ ಹೊಸ ಆರಂಭ. ಇದು ಹಿಂದೂ ಹೆಸರು ಮತ್ತು ಇದು ಭಾರತದಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ಇದು ಭಗವಾನ್ ವಿಷ್ಣುವಿಗೆ ಸಂಬಂಧಿಸಿದೆ ಎಂದು ಪರಿಗಣಿಸಲಾಗಿದೆ. ಈ ಹೆಸರು ಸಂಸ್ಕೃತ ಪದ 'ಆಹ್' ನಿಂದ ಬಂದಿದೆ, ಇದರರ್ಥ 'ಎಚ್ಚರಗೊಳಿಸು'. ಅಹಾನ್ ಎಂಬ ಹೆಸರನ್ನು ಹೊಂದಿರುವವರು ಯಾವಾಗಲೂ ಹೊಸ ಆರಂಭವನ್ನು ಮಾಡುತ್ತಾರೆ ಮತ್ತು ಹೊಸ ಅವಕಾಶಗಳನ್ನು ಹುಡುಕುತ್ತಾರೆ ಎಂದು ನಂಬಲಾಗಿದೆ.

ಹೆಚ್ಚಿನ ಕ್ರಿಕೆಟ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Whats_app_banner