ಶಿವಂ ದುಬೆಗೆ ರೋಹಿತ್ ಶರ್ಮಾ ಬೌಲಿಂಗ್ ಪಾಠ; ನೆಟ್ಸ್​ನಲ್ಲಿ ರಿಂಕು ಸಿಂಗ್ ಭರ್ಜರಿ ಪ್ರಾಕ್ಟೀಸ್, VIDEO
ಕನ್ನಡ ಸುದ್ದಿ  /  ಕ್ರಿಕೆಟ್  /  ಶಿವಂ ದುಬೆಗೆ ರೋಹಿತ್ ಶರ್ಮಾ ಬೌಲಿಂಗ್ ಪಾಠ; ನೆಟ್ಸ್​ನಲ್ಲಿ ರಿಂಕು ಸಿಂಗ್ ಭರ್ಜರಿ ಪ್ರಾಕ್ಟೀಸ್, Video

ಶಿವಂ ದುಬೆಗೆ ರೋಹಿತ್ ಶರ್ಮಾ ಬೌಲಿಂಗ್ ಪಾಠ; ನೆಟ್ಸ್​ನಲ್ಲಿ ರಿಂಕು ಸಿಂಗ್ ಭರ್ಜರಿ ಪ್ರಾಕ್ಟೀಸ್, VIDEO

T20 World Cup 2024: ಟಿ20 ವಿಶ್ವಕಪ್​ನಲ್ಲಿ ಬಾಂಗ್ಲಾದೇಶ ವಿರುದ್ಧದ ಅಭ್ಯಾಸ ಪಂದ್ಯಕ್ಕೂ ಮುನ್ನ ನಾಯಕ ರೋಹಿತ್​ ಶರ್ಮಾ ಅವರು ಶಿವಂ ದುಬೆ ಅವರಿಗೆ ಬೌಲಿಂಗ್ ಪಾಠ ಮಾಡಿದ್ದಾರೆ. ಮತ್ತೊಂದೆಡೆ ರಿಂಕು ಸಿಂಗ್​​ಗೆ ಭರ್ಜರಿ ಪ್ರಾಕ್ಟೀಸ್ ಮಾಡಿದ್ದಾರೆ.

ಶಿವಂ ದುಬೆಗೆ ರೋಹಿತ್ ಶರ್ಮಾ ಬೌಲಿಂಗ್ ಪಾಠ; ನೆಟ್ಸ್​ನಲ್ಲಿ ರಿಂಕು ಸಿಂಗ್ ಭರ್ಜರಿ ಪ್ರಾಕ್ಟೀಸ್
ಶಿವಂ ದುಬೆಗೆ ರೋಹಿತ್ ಶರ್ಮಾ ಬೌಲಿಂಗ್ ಪಾಠ; ನೆಟ್ಸ್​ನಲ್ಲಿ ರಿಂಕು ಸಿಂಗ್ ಭರ್ಜರಿ ಪ್ರಾಕ್ಟೀಸ್

Rohit Sharma: 2024ರ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಆರಂಭಿಕ ಪಂದ್ಯಕ್ಕೂ ಮುನ್ನ ಭಾರತ ತಂಡವು ಜೂನ್ 1ರ ಶನಿವಾರ ನ್ಯೂಯಾರ್ಕ್​​ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ. ಪಂದ್ಯಕ್ಕೆ ಮುಂಚಿತವಾಗಿ, ಟೀಮ್ ಇಂಡಿಯಾ ತನ್ನ ಅಂತಿಮ ಅಭ್ಯಾಸ ಅವಧಿಯಲ್ಲಿ ಕಣಕ್ಕಿಳಿಯಲಿದ್ದು, ಮಾಜಿ ನಾಯಕ ವಿರಾಟ್ ಕೊಹ್ಲಿ ಇನ್ನೂ ಗೈರು ಹಾಜರಾಗಲಿದ್ದಾರೆ. ಆದರೆ ಪ್ರಾಕ್ಟೀಸ್ ಮ್ಯಾಚ್​ಗೂ ಮುನ್ನ ನಾಯಕ ರೋಹಿತ್​ ಶರ್ಮಾ ಶಿವಂ ದುಬೆಗೆ ಬೌಲಿಂಗ್ ತರಬೇತಿ ನೀಡಿದ್ದಾರೆ.

ಗುರುವಾರದಂತೆಯೇ (ಮೇ 30) ಭಾರತ ತಂಡ ಶುಕ್ರವಾರ (ಮೇ 31) ಬೆಳಿಗ್ಗೆಯೂ 3 ಗಂಟೆಗಳ ಸುದೀರ್ಘ ಅಭ್ಯಾಸ ನಡೆಸಿತು. 35ರ ಹರೆಯದ ಕೊಹ್ಲಿ, ನ್ಯೂಯಾರ್ಕ್​​ನಲ್ಲಿ ಭಾರತ ತಂಡವನ್ನು ಸೇರಿಕೊಂಡಿದ್ದಾರೆ.​​​​ ಐಪಿಎಲ್-2024 ಅಭಿಯಾನದ ಅಂತ್ಯದ ನಂತರ ಕೊಹ್ಲಿ ತಮ್ಮ ವಿರಾಮದ ಅವಧಿಯನ್ನು ವಿಸ್ತರಿಸಿದ್ದರು. ಹಾಗಾಗಿ ವಿಶ್ವಕಪ್​​ಗೆ ತೆರಳಿದ ಮೊದಲ ಬ್ಯಾಚ್ ಆಟಗಾರರ ಭಾಗವಾಗಿರಲಿಲ್ಲ. ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಅವರ ಕಣ್ಗಾವಲಿನಲ್ಲಿ ಭಾರತ ಫೀಲ್ಡಿಂಗ್ ತರಬೇತಿ ಪಡೆದುಕೊಂಡಿತು.

ನಂತರ ಆಟಗಾರರು ನೆಟ್ಸ್​​ನಲ್ಲಿ ಬ್ಯಾಟಿಂಗ್ ಪ್ರಾಕ್ಟೀಸ್ ನಡೆಸಿದರು. ಸೂರ್ಯಕುಮಾರ್ ಯಾದವ್ ಅವರು ಥ್ರೋಡೌನ್​​ಗಳನ್ನು ಎದುರಿಸಲು ಸಾಕಷ್ಟು ಸಮಯ ಕಳೆದರು. ಮತ್ತೊಂದೆಡೆ ಖಲೀಲ್ ಅಹ್ಮದ್, ದುಬೆ, ಕುಲ್ದೀಪ್ ಯಾದವ್, ಅವೇಶ್ ಖಾನ್ ಮತ್ತು ರವೀಂದ್ರ ಜಡೇಜಾ ಅವರಂತಹ ಬೌಲರ್​​​ಗಳ ವಿರುದ್ಧ ಅಭ್ಯಾಸ ನಡೆಸಿದ ರೋಹಿತ್, ಸ್ಪಿನ್ನರ್​​ಗಳ ವಿರುದ್ಧ ರಿವರ್ಸ್ ಸ್ವೀಪ್ ಅಭ್ಯಾಸ ಮಾಡಿ ಗಮನ ಸೆಳೆದರು. ಇದೇ ವೇಳೆ ದುಬೆ ಅವರಿಗೆ ಬೌಲಿಂಗ್​ ತರಬೇತಿಯನ್ನೂ ನೀಡಿದರು.

ಶಿವಂ ದುಬೆಗೆ ರೋಹಿತ್​ ಶರ್ಮಾ ಬೌಲಿಂಗ್ ಪಾಠ

ನ್ಯೂಯಾರ್ಕ್​ನಲ್ಲಿರುವ ಈ ಪಿಚ್​​ ಡ್ರಾಪ್-ಇನ್ ಪಿಚ್ ಆಗಿರುವ ಕಾರಣ ಹೇಗೆ ಬೌಲಿಂಗ್ ಮಾಡಬೇಕು, ಸ್ವಿಂಗ್, ಬೌನ್ಸ್ ಎಸೆಯಬೇಕು ಎಂಬುದರ ಕುರಿತು ದುಬೆ ಅವರೊಂದಿಗೆ ರೋಹಿತ್​ ಶರ್ಮಾ ಸುದೀರ್ಘ ಚಾಟ್ ಮಾಡುತ್ತಿರುವುದು ಕಂಡುಬಂತು. ಸ್ಟಾರ್ ಸ್ಪೋರ್ಟ್ಸ್ ಬಿಡುಗಡೆ ಮಾಡಿದ ವಿಡಿಯೋದ ಪ್ರಕಾರ, ರೋಹಿತ್ ದುಬೆಗೆ ಲೆಂಗ್ತ್ ಮತ್ತು ಬ್ಯಾಟರ್​ಗಳು ಪ್ರಯತ್ನಿಸಬಹುದಾದ ಶಾಟ್​​ಗಳ ಪ್ರಕಾರದ ಬಗ್ಗೆ ವಿವರಿಸಿದ್ದಾರೆ.

ಐಪಿಎಲ್ 2024ರಲ್ಲಿ ಹೆಚ್ಚು ಬೌಲಿಂಗ್ ಮಾಡದಿದ್ದರೂ ದುಬೆ ಅವರನ್ನು ಭಾರತೀಯ ತಂಡದಲ್ಲಿ ಆಲ್​ರೌಂಡರ್​ ಆಗಿಯೇ ಪರಿಗಣಿಸಿ ಆಯ್ಕೆ ಮಾಡಲಾಗಿದೆ. ಜನವರಿಯಲ್ಲಿ ಅಫ್ಘಾನಿಸ್ತಾನ ವಿರುದ್ಧದ ತವರು ಸರಣಿಯಲ್ಲಿ ಬೌಲಿಂಗ್ ಮಾಡಿದ ನಂತರ, ದುಬೆ ಐಪಿಎಲ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಕೇವಲ ಒಂದು ಓವರ್​​ ಮಾಡಿದ್ದರು. ಅದರಲ್ಲಿ ಒಂದು ವಿಕೆಟ್ ಕೂಡ ಕಿತ್ತಿದ್ದರು. ಆದರೆ ಮತ್ತೆ ಬೌಲಿಂಗ್ ಮಾಡಲು ಸಾಧ್ಯವಾಗಲಿಲ್ಲ.

ಮತ್ತೊಂದೆಡೆ ಯಶಸ್ವಿ ಜೈಸ್ವಾಲ್ ಸಹ ಉತ್ತಮ ತರಬೇತಿ ಪಡೆದರು. ಭಾರತದ ಆರಂಭಿಕ ತಮ್ಮ ಕವರ್ ಡ್ರೈವ್ ಮತ್ತು ಶಾಟ್​​ಗಳನ್ನೇ ಹೆಚ್ಚಾಗಿ ಪ್ರಾಕ್ಟೀಸ್ ಮಾಡಿದರು. ಆದರೆ, ಹಾರ್ದಿಕ್ ಪಾಂಡ್ಯ ಮತ್ತೊಮ್ಮೆ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಅವರೊಂದಿಗೆ ನಿಯಮಿತವಾಗಿ ಸಂಭಾಷಣೆ ನಡೆಸಿ ಸುದೀರ್ಘ ಬ್ಯಾಟಿಂಗ್ ಅಭ್ಯಾಸ ನಡೆಸಿದರು. ರಾಥೋರ್ ತನ್ನ ತಲೆಯ ಸ್ಥಾನ, ನಿಲುವು ಮತ್ತು ಫುಟ್ವರ್ಕ್ ಬಗ್ಗೆ ಹಾರ್ದಿಕ್​ಗೆ ಅತ್ಯದ್ಭುತವಾಗಿ ವಿವರಿಸಿದ್ದು ಕಂಡು ಬಂತು.

ನೆಟ್ಸ್​ನಲ್ಲಿ ರಿಂಕು ಸಿಂಗ್ ಭರ್ಜರಿ ಪ್ರಾಕ್ಟೀಸ್

ಕೋಲ್ಕತಾ ನೈಟ್ ರೈಡರ್ಸ್ ಬ್ಯಾಟ್ಸ್​ಮನ್​ ರಿಂಕು ಸಿಂಗ್ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯದೇ ಇರಬಹುದು. ಆದರೂ ಮೀಸಲು ಸ್ಥಾನದಲ್ಲಿರುವ ರಿಂಕು ನೆಟ್ಸ್​​ನಲ್ಲಿ ಸತತ ಬ್ಯಾಟಿಂಗ್​ ಪ್ರಾಕ್ಟೀಸ್​ನಲ್ಲಿ ಮುಳುಗಿದ್ದಾರೆ. ಪತ್ರಕರ್ತ ವಿಮಲ್ ಕುಮಾರ್ ಅವರ ಪ್ರಕಾರ, ರಿಂಕು ನೆಟ್ಸ್​​​ನಲ್ಲಿ ಅದ್ಭುತವಾಗಿ ತರಬೇತಿ ಪಡೆಯುತ್ತಿದ್ದಾರೆ. ಇದು ಹಾರ್ದಿಕ್ ಪಾಂಡ್ಯ ಗಾಯಗೊಂಡ ಕಾರಣ, ರಿಂಕು ಪ್ರಮುಖ ತಂಡದಲ್ಲಿ ಸ್ಥಾನ ಪಡೆಯಬಹುದು ಎಂಬ ವರದಿಗಳಿಗೆ ಪುಷ್ಠಿ ನೀಡುವಂತಿದೆ. ಕೊಹ್ಲಿ ಬಾಂಗ್ಲಾದೇಶ ವಿರುದ್ಧದ ಅಭ್ಯಾಸ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆಯಿದೆ.

Whats_app_banner