ಬೇಗ ಬೇಗ ಬಸ್ ಹತ್ತಿ; ಬ್ಯಾಟ್ ಬಿಟ್ಟು ಡ್ರೈವರ್​ ಆದ ರೋಹಿತ್​ ಶರ್ಮಾ; ಕಿಚಾಯಿಸಿದ ಸಹ ಆಟಗಾರರು, ವಿಡಿಯೋ ವೈರಲ್
ಕನ್ನಡ ಸುದ್ದಿ  /  ಕ್ರಿಕೆಟ್  /  ಬೇಗ ಬೇಗ ಬಸ್ ಹತ್ತಿ; ಬ್ಯಾಟ್ ಬಿಟ್ಟು ಡ್ರೈವರ್​ ಆದ ರೋಹಿತ್​ ಶರ್ಮಾ; ಕಿಚಾಯಿಸಿದ ಸಹ ಆಟಗಾರರು, ವಿಡಿಯೋ ವೈರಲ್

ಬೇಗ ಬೇಗ ಬಸ್ ಹತ್ತಿ; ಬ್ಯಾಟ್ ಬಿಟ್ಟು ಡ್ರೈವರ್​ ಆದ ರೋಹಿತ್​ ಶರ್ಮಾ; ಕಿಚಾಯಿಸಿದ ಸಹ ಆಟಗಾರರು, ವಿಡಿಯೋ ವೈರಲ್

Rohit Sharma Driver: ಮುಂಬೈನ ಐಕಾನಿಕ್ ವಾಂಖೆಡೆ ಮೈದಾನದಲ್ಲಿ ನಡೆಯುವ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ಮಾಜಿ ನಾಯಕ ರೋಹಿತ್ ಶರ್ಮಾ ತಂಡದ ಬಸ್​ ಡ್ರೈವರ್​ ಆಗಿ ಮಾರ್ಪಟ್ಟಿದ್ದಾರೆ.

ಬ್ಯಾಟ್ ಬಿಟ್ಟು ಡ್ರೈವರ್​ ಆದ ರೋಹಿತ್​ ಶರ್ಮಾ
ಬ್ಯಾಟ್ ಬಿಟ್ಟು ಡ್ರೈವರ್​ ಆದ ರೋಹಿತ್​ ಶರ್ಮಾ

ಆರಂಭಿಕ ಮೂರು ಪಂದ್ಯಗಳ ಪರಾಜಯದ ನಂತರ ಸತತ 2 ಗೆಲುವು ದಾಖಲಿಸಿರುವ ಮುಂಬೈ ಇಂಡಿಯನ್ಸ್ (Mumbai Indians), ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದೆ. ನಾಯಕತ್ವ ಕಳೆದುಕೊಂಡು ಬಳಿಕ ಅಸಮಾಧಾನಕ್ಕೆ ಒಳಗಾಗಿದ್ದರೋಹಿತ್​ ಶರ್ಮಾ (Rohit Sharma)​, ಪ್ರಸ್ತುತ ತನ್ನ ಸಹ ಆಟಗಾರರೊಂದಿಗೆ ಮಜಾ ಮಾಡುತ್ತಿದ್ದಾರೆ. ಕಾಲೆಳೆಯುತ್ತಾ ಎಂಜಾಯ್ ಮಾಡುತ್ತಿದ್ದಾರೆ. ಇದೀಗ ಮುಂಬೈನ ಐಕಾನಿಕ್ ವಾಂಖೆಡೆ ಮೈದಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ವಿರುದ್ಧ ಏಪ್ರಿಲ್ 14ರ ಸೆಣಸಾಟಕ್ಕೂ ಮುನ್ನ ಎಂಐ ಮಾಜಿ ನಾಯಕ ಬಸ್​ ಡ್ರೈವರ್​ ಆಗಿ ಮಾರ್ಪಟ್ಟಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡದ ಬಸ್​ ಡ್ರೈವರ್​ ಸೀಟ್​​ನಲ್ಲಿ ಕೂತ ಹಿಟ್​ಮ್ಯಾನ್, ಸಹ ಆಟಗಾರರನ್ನು ಹತ್ತಿಸಿಕೊಂಡು ಹೊರಟಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಚಾಲಕ ಕರ್ತವ್ಯವನ್ನು ನಿರ್ವಹಿಸಿದ ದೃಶ್ಯವನ್ನು ರೋಹಿತ್ ಫ್ಯಾನ್ಸ್​ ಕಣ್ತುಂಬಿಕೊಂಡರು. ಅಪರೂಪದ ದೃಶ್ಯವನ್ನು ಮೊಬೈಲ್​ನಲ್ಲಿ ಸೆರೆ ಹಿಡಿದ ಅಭಿಮಾನಿಗಳು ಹುಚ್ಚೆದ್ದು ಕುಣಿದು ಕುಪ್ಪಳಿಸಿದ್ದಾರೆ. ರೋಹಿತ್​ರ ಹೊಸ ಪಾತ್ರವನ್ನು ನೋಡಿ ಫುಲ್ ಖುಷ್ ಆಗಿದ್ದಾರೆ. ಮತ್ತೊಂದೆಡೆ ಸಹ ಆಟಗಾರರು ನಗುತ್ತಿದ್ದು, ರೋಹಿತ್​ಗೆ ಕಿಚಾಯಿಸಿದ್ದಾರೆ.

ರೋಹಿತ್​ ಕೂಡ ವಿಡಿಯೋ ಮಾಡಿದ್ರು!

ರೋಹಿತ್​ರನ್ನು ಡ್ರೈವರ್ ಸೀಟ್​ನಲ್ಲಿ ನೋಡುತ್ತಿದ್ದಂತೆ ಫ್ಯಾನ್ಸ್​​ ಬಸ್ ಮುಂಭಾಗಕ್ಕೆ ಆಗಮಿಸಿದರು. ಬಸ್ ಮುಂಭಾಗ ನೆರೆದಿದ್ದ ಅಭಿಮಾನಿಗಳನ್ನು ರೋಹಿತ್​ ಕೂಡ ವಿಡಿಯೋ ಮಾಡುವ ಗಮನ ಸೆಳೆದರು. ಆಗ ಅಭಿಮಾನಿಗಳು ಜೋರಾಗಿ ಕಿರುಚ ತೊಡಗಿದರು. ಪ್ರಾಕ್ಟೀಸ್ ಸೆಷನ್​ ಮುಗಿಸಿ ಹೋಟೆಲ್​ಗೆ ಮರಳುವಾಗ ಈ ಘಟನೆ ಸಂಭವಿಸಿದೆ. ಉಳಿದವರಿಗಿಂತ ಮೊದಲು ಬಸ್ ಹತ್ತಿದ ಆರಂಭಿಕ ಆಟಗಾರ, ಸಹ ಆಟಗಾರರನ್ನು ಬೇಗ ಬೇಗ ಬಸ್ ಹತ್ತಿ ಎಂದು ಸೂಚಿಸಿದ್ದಾರೆ. ರೋಹಿತ್​ರನ್ನು ಕಂಡ ಕೆಲ ಆಟಗಾರರು ನಗುತ್ತಲೇ ಬಸ್ ಹತ್ತಿದ್ದರೆ, ಕೆಲವರು ಕಿಚಾಯಿಸಿದ್ದಾರೆ. ನೆಟ್​​ನಲ್ಲಿ ಈ ವಿಡಿಯೋ ಸಂಚಲನ ಮೂಡಿಸುತ್ತಿದೆ.

ಇದಕ್ಕೂ ಮೊದಲು ತಂಡದ ಬಸ್ ಹತ್ತದೆ ರೋಹಿತ್ ತಮ್ಮ ರೇಂಜ್ ರೋವರ್‌ನಲ್ಲಿ ವಾಂಖೆಡೆ ಸ್ಟೇಡಿಯಂಗೆ ಬಂದಿದ್ದರು. ಐಷಾರಾಮಿ ಕಾರಿನ ನಂಬರ್ ಪ್ಲೇಟ್ ಎಲ್ಲರನ್ನೂ ಆಕರ್ಷಿಸಿತ್ತು. ಇದು 0264 ಎಂದು ಇತ್ತು. ಕೋಲ್ಕತ್ತಾದ ಈಡನ್ ಗಾರ್ಡನ್ ಸ್ಟೇಡಿಯಂನಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಕ್ರಿಕೆಟ್​ನಲ್ಲಿ ರೋಹಿತ್ ದ್ವಿಶತಕ ಸಿಡಿಸಿದ್ದರು. ಅಂದು 264 ರನ್ ಬಾರಿಸಿದ್ದ ರೋಹಿತ್​, ದಾಖಲೆ ಬರೆದಿದ್ದರು. ಇದು ಏಕದಿನ ಕ್ರಿಕೆಟ್‌ನಲ್ಲಿ ಇದುವರೆಗಿನ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ. ಅದೇ ಸಂಖ್ಯೆಯನ್ನೇ ಕಾರಿನ ನಂಬರ್​​ ಪ್ಲೇಟ್ ಮಾಡಿಕೊಂಡಿದ್ದಾರೆ.

ಎಂಐ ಫ್ರಾಂಚೈಸಿಯ ಸಹ-ಮಾಲೀಕರಾದ ಆಕಾಶ್ ಅಂಬಾನಿ ಅವರ ಜತೆಗೆ ಐಷಾರಾಮಿ ಕಾರಿನಲ್ಲಿ ರೋಹಿತ್​ ಶರ್ಮಾ ಕಾಣಿಸಿಕೊಂಡಿದ್ದರು. ಇಬ್ಬರೂ ಮುಂಬೈನ ಬೀದಿಗಳಲ್ಲಿ ತಿರುಗುತ್ತಿದ್ದರು. ಆಕಾಶ್ ಕಾರು ಓಡಿಸುತ್ತಿದ್ದರೆ, ರೋಹಿತ್ ಪಕ್ಕದಲ್ಲಿ ಕೂತಿದ್ದರು. ಇದರ ವಿಡಿಯೋಗಳು ಕೂಡ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು. ಏಪ್ರಿಲ್ 14ರ ಇಂದು ಎರಡು ಯಶಸ್ವಿ ತಂಡಗಳು ವಾಂಖೆಡೆಗೆ ಮೈದಾನದಲ್ಲಿ ಕಾದಾಟ ನಡೆಸಲು ಸಜ್ಜಾಗಿದ್ದು, ರೋಹಿತ್​ ಮತ್ತೊಮ್ಮೆ ಬ್ಯಾಟಿಂಗ್ ವೈಭವ ನೀಡಲು ಮುಂದಾಗಿದ್ದಾರೆ. ಚೆನ್ನೈ ಮತ್ತು ಮುಂಬೈ ತಲಾ ಐದು ಬಾರಿ ಐಪಿಎಲ್ ಟ್ರೋಫಿಗಳನ್ನು ಗೆದ್ದುಕೊಂಡಿವೆ.

Whats_app_banner