ಕೊಹ್ಲಿ, ರೋಹಿತ್ ಔಟ್, ಬುಮ್ರಾ ನಾಯಕ; 2024ರ ಅತ್ಯುತ್ತಮ ಟೆಸ್ಟ್ ಪ್ಲೇಯಿಂಗ್ 11 ಪ್ರಕಟಿಸಿದ ಹರ್ಷಾ ಭೋಗ್ಲೆ
ಕನ್ನಡ ಸುದ್ದಿ  /  ಕ್ರಿಕೆಟ್  /  ಕೊಹ್ಲಿ, ರೋಹಿತ್ ಔಟ್, ಬುಮ್ರಾ ನಾಯಕ; 2024ರ ಅತ್ಯುತ್ತಮ ಟೆಸ್ಟ್ ಪ್ಲೇಯಿಂಗ್ 11 ಪ್ರಕಟಿಸಿದ ಹರ್ಷಾ ಭೋಗ್ಲೆ

ಕೊಹ್ಲಿ, ರೋಹಿತ್ ಔಟ್, ಬುಮ್ರಾ ನಾಯಕ; 2024ರ ಅತ್ಯುತ್ತಮ ಟೆಸ್ಟ್ ಪ್ಲೇಯಿಂಗ್ 11 ಪ್ರಕಟಿಸಿದ ಹರ್ಷಾ ಭೋಗ್ಲೆ

Harsha Bhogle Playing 11: ಕಾಮೆಂಟೇಟರ್​ ಹರ್ಷಾ ಭೋಗ್ಲೆ ಅವರು 2024ರ ಕ್ಯಾಲೆಂಡರ್ ವರ್ಷದಲ್ಲಿ ಅದ್ಬುತ ಪ್ರದರ್ಶನ ನೀಡಿದ ಟೆಸ್ಟ್​​ ಆಟಗಾರರ ಪ್ಲೇಯಿಂಗ್ 11 ಅನ್ನು ಪ್ರಕಟಿಸಿದ್ದಾರೆ. ಇದರಲ್ಲಿ ಜಸ್ಪ್ರೀತ್ ಬುಮ್ರಾಗೆ ನಾಯಕನ ಪಟ್ಟ ನೀಡಲಾಗಿದೆ.

ಕೊಹ್ಲಿ, ರೋಹಿತ್ ಔಟ್, ಬುಮ್ರಾ ನಾಯಕ; 2024ರ ಅತ್ಯುತ್ತಮ ಟೆಸ್ಟ್ ಪ್ಲೇಯಿಂಗ್ 11 ಪ್ರಕಟಿಸಿದ ಹರ್ಷಾ ಭೋಗ್ಲೆ
ಕೊಹ್ಲಿ, ರೋಹಿತ್ ಔಟ್, ಬುಮ್ರಾ ನಾಯಕ; 2024ರ ಅತ್ಯುತ್ತಮ ಟೆಸ್ಟ್ ಪ್ಲೇಯಿಂಗ್ 11 ಪ್ರಕಟಿಸಿದ ಹರ್ಷಾ ಭೋಗ್ಲೆ

ಬಾರ್ಡರ್ ಗವಾಸ್ಕರ್ ಟ್ರೋಫಿ ಮಹತ್ವದ ಘಟ್ಟ ತಲುಪಿರುವುದರ ನಡುವೆಯೇ ಕಾಮೆಂಟೇಟರ್​ ಹರ್ಷಾ ಭೋಗ್ಲೆ ಅವರು 2024ರ ಕ್ಯಾಲೆಂಡರ್ ವರ್ಷದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಆಟಗಾರರ ಬೆಸ್ಟ್ ಪ್ಲೇಯಿಂಗ್ ಇಲೆವೆನ್ ಘೋಷಿಸಿದ್ದಾರೆ. ಕ್ರಿಕೆಟ್ ಪ್ರೇಮಿಗಳ ನೆಚ್ಚಿನ ನಿರೂಪಕ ಮತ್ತು ಕ್ರೀಡಾ ವಿಶ್ಲೇಷಕನಾಗಿರುವ ಹರ್ಷಾ ಅವರು ಪ್ರಕಟಿಸಿದ ತಂಡದಲ್ಲಿ ಕೆಲವೊಂದಿಷ್ಟು ಅಚ್ಚರಿಯ ಹೆಸರುಗಳೂ ಸೇರ್ಪಡೆಯಾಗಿವೆ. ಭಾರತದ ಮೂವರಿಗೆ ಸ್ಥಾನ ನೀಡಿರುವ ಅವರು, ತಾನು ಕಟ್ಟಿದ 2024ರ ಟೆಸ್ಟ್ ತಂಡಕ್ಕೆ ಭಾರತೀಯನೇ ನಾಯಕ ಎಂದಿದ್ದಾರೆ.

ಆದರೆ, ಅತ್ಯಂತ ಕಳಪೆ ಪ್ರದರ್ಶನ ನೀಡಿದ‌ ಸ್ಟಾರ್ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರಿಷಭ್ ಪಂತ್ ಅವಕಾಶ ಪಡೆಯುವಲ್ಲಿ ವಿಫಲರಾಗಿದ್ದಾರೆ. ಹರ್ಷಾ ಭೋಗ್ಲೆ ಈ ಬಾರಿ ತಮ್ಮ‌ ತಂಡದಲ್ಲಿ ಮೂವರು ಭಾರತೀಯರು, ಇಂಗ್ಲೆಂಡ್​ನ ನಾಲ್ವರು, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಪಾಕಿಸ್ತಾನ, ಶ್ರೀಲಂಕಾದ ತಲಾ ಒಬ್ಬರಿಗೆ ಅವಕಾಶ ನೀಡಿದ್ದಾರೆ. ಹಾಗಾದರೆ ಯಾರಿಗೆಲ್ಲಾ ಅವಕಾಶ ಸಿಕ್ಕಿದೆ, ಯಾರು ಯಾವ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ ಎಂಬುದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ.

ಆರಂಭಿಕ‌ ಸ್ಥಾನಕ್ಕೆ‌ ಜೈಸ್ವಾಲ್-ಡಕೆಟ್

ನಿರೀಕ್ಷೆಯಂತೆ ಆರಂಭಿಕ ಸ್ಥಾನಕ್ಕೆ ಯಶಸ್ವಿ ಜೈಸ್ವಾಲ್ ಅವರನ್ನು ಆಯ್ಕೆ ಮಾಡಿರುವ ಭೋಗ್ಲೆ, ಇನ್ನಿಂಗ್ಸ್ ಆರಂಭಿಸುವ ಮತ್ತೊಬ್ಬ ಆಟಗಾರನಾಗಿ ಇಂಗ್ಲೆಂಡ್ ತಂಡದ‌ ಬೆನ್ ಡಕೆಟ್​ಗೆ ಮಣೆ ಹಾಕಿದ್ದಾರೆ. ಜೈಸ್ವಾಲ್ ಈ ವರ್ಷ 27 ಇನ್ನಿಂಗ್ಸ್‌ಗಳಲ್ಲಿ 52ಕ್ಕಿಂತ ಹೆಚ್ಚು ಸರಾಸರಿಯಲ್ಲಿ 7 ಅರ್ಧಶತಕ, 3 ಶತಕ ಸಹಿತ 1300+ ರನ್ ಗಳಿಸಿದ್ದಾರೆ. ಡಕೆಟ್ ಅವರು ರಾಜ್‌ಕೋಟ್ ಮತ್ತು ಮುಲ್ತಾನ್‌ನಲ್ಲಿ ಶತಕ, 5 ಅರ್ಧಶತಕ ಸೇರಿ 1,100ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.

ವಿಲಿಯಮ್ಸನ್ ಮತ್ತು ರೂಟ್​ಗೆ ಅವಕಾಶ

3ನೇ ಕ್ರಮಾಂಕಕ್ಕೆ ಆಯ್ಕೆಯಾಗಿರುವ ನ್ಯೂಜಿಲೆಂಡ್ ಲೆಜೆಂಡ್ ಕೇನ್​ ವಿಲಿಯಮ್ಸನ್, 9 ಪಂದ್ಯಗಳ 18 ಇನ್ನಿಂಗ್ಸ್​​​ಗಳಲ್ಲಿ 59.58ರ ಬ್ಯಾಟಿಂಗ್ ಸರಾಸರಿಯಲ್ಲಿ 4 ಶತಕ, 4 ಅರ್ಧಶತಕ ಸಹಿತ 1013 ರನ್ ಗಳಿಸಿದ್ದಾರೆ. 4ನೇ ಸ್ಥಾನಕ್ಕೆ ಜೋ ರೂಟ್ ಅವರನ್ನು ಆಯ್ಕೆ ಮಾಡಲಾಗಿದೆ. ಅವರು 2024ರಲ್ಲಿ ಇಂಗ್ಲೆಂಡ್‌ ಪರ 5 ಅರ್ಧಶತಕ, 6 ಶತಕ ಸಿಡಿಸಿದ್ದು, 55 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 31 ಇನ್ನಿಂಗ್ಸ್‌ಗಳಲ್ಲಿ 1556 ರನ್ ಗಳಿಸಿದ್ದಾರೆ.

ಬ್ರೂಕ್, ಕಮಿಂದು, ರಿಜ್ವಾನ್​ಗೆ ಮಣೆ

5ನೇ ಕ್ರಮಾಂಕಕ್ಕೆ ಹ್ಯಾರಿ ಬ್ರೂಕ್‌ ಅವರನ್ನು ಆಯ್ಕೆ ಮಾಡಿರುವ ಹರ್ಷಾ, ಇವರನ್ನು ವಿಶೇಷ ಆಟಗಾರ ಎಂದು ಬಣ್ಣಿಸಿದ್ದಾರೆ. ಪಾಕಿಸ್ತಾನ ಮತ್ತು ನ್ಯೂಜಿಲೆಂಡ್‌ನಲ್ಲಿ ಅತ್ಯುತ್ತಮ ರನ್ ಗಳಿಸಿದ ಬ್ರೂಕ್, ಈ ವರ್ಷ 4 ಶತಕ, 3 ಅರ್ಧಶತಕ ಬಾರಿಸಿದ್ದಾರೆ. 55ರ ಬ್ಯಾಟಿಂಗ್ ಸರಾಸರಿಯಲ್ಲಿ 1100 ರನ್ ಸಿಡಿಸಿದ್ದಾರೆ. ಶ್ರೀಲಂಕಾ​ ಆಟಗಾರ ಕಮಿಂದು ಮೆಂಡೀಸ್ ಅವರನ್ನು 5ನೇ ಸ್ಥಾನಕ್ಕೆ ಆಯ್ಕೆ ಮಾಡಲಾಗಿದ್ದು, 5 ಶತಕ ಸಹಿತ 75 ಸರಾಸರಿಯಲ್ಲಿ 1,049 ರನ್ ಗಳಿಸಿದ್ದಾರೆ. ವಿಕೆಟ್ ಕೀಪರ್ ಬ್ಯಾಟರ್ ಸ್ಥಾನಕ್ಕೆ ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್​ಗೆ ಮಣೆ ಹಾಕಲಾಗಿದೆ. ಅವರು 536 ರನ್ ಜೊತೆಗೆ ವಿಕೆಟ್ ಹಿಂದೆ ನಿಂತು 12 ಬಲಿ ಪಡೆದಿದ್ದಾರೆ.

ಒಬ್ಬ ಆಲ್​ರೌಂಡರ್​, ಮೂವರು ವೇಗಿಗಳು

ಆಲ್​ರೌಂಡರ್​ ಸ್ಥಾನಕ್ಕೆ ಭಾರತದ ರವೀಂದ್ರ ಜಡೇಜಾಗೆ ಮಾತ್ರ ಸ್ಥಾನ ನೀಡಲಾಗಿದೆ. ಅವರು 12 ಪಂದ್ಯಗಳಲ್ಲಿ 508 ರನ್ ಬಾರಿಸಿದ್ದಾರೆ. ಅವರ ಆಟದಲ್ಲಿ 1 ಶತಕ, 3 ಅರ್ಧಶತಕಗಳಿವೆ. ಇನ್ನು ಬೌಲಿಂಗ್​​ನಲ್ಲಿ 47 ವಿಕೆಟ್ ಕಿತ್ತಿದ್ದಾರೆ. ವೇಗದ ಬೌಲಿಂಗ್ ವಿಭಾಗದಲ್ಲಿ ಮೂವರಿಗೆ ಸ್ಥಾನ ನೀಡಲಾಗಿದೆ. ಇಂಗ್ಲೆಂಡ್​ನ ಗಸ್ ಆಟ್ಕಿನ್ಸನ್, ಕಗಿಸೋ ರಬಾಡ ಮತ್ತು ಜಸ್ಪ್ರೀತ್ ಬುಮ್ರಾ ಅವರಿಗೆ ಅವಕಾಶ ನೀಡಲಾಗಿದೆ. ಆಟ್ಕಿನ್ಸನ್ 11 ಪಂದ್ಯಗಳಲ್ಲಿ 52 ವಿಕೆಟ್, ರಬಾಡ 32 ವಿಕೆಟ್ ಉರುಳಿಸಿದ್ದಾರೆ. ಮತ್ತೊಂದೆಡೆ ತಂಡದ ನಾಯಕತ್ವ ಪಡೆದಿರುವ ಬುಮ್ರಾ, ಈ ವರ್ಷ 13 ಪಂದ್ಯಗಳಲ್ಲಿ 66 ವಿಕೆಟ್ ಕಿತ್ತಿದ್ದಾರೆ.

ಹರ್ಷಾ ಭೋಗ್ಲೆ ಅವರ 2024ರ ವರ್ಷದ ಟೆಸ್ಟ್ ತಂಡ ಇಲ್ಲಿದೆ

ಯಶಸ್ವಿ ಜೈಸ್ವಾಲ್, ಬೆನ್ ಡಕೆಟ್, ಕೇನ್ ವಿಲಿಯಮ್ಸನ್, ಜೋ ರೂಟ್, ಹ್ಯಾರಿ ಬ್ರೂಕ್, ಕಮಿಂದು ಮೆಂಡಿಸ್, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಗಸ್ ಅಟ್ಕಿನ್ಸನ್, ಕಗಿಸೊ ರಬಾಡ, ಜಸ್ಪ್ರೀತ್ ಬುಮ್ರಾ (ನಾಯಕ).

Whats_app_banner