ರೋಹಿತ್​, ಕೊಹ್ಲಿಯಿಂದ ಶಮಿವರೆಗೆ; ಏಕದಿನದಲ್ಲಿ ಆಸೀಸ್ ವಿರುದ್ಧ ಭಾರತದ 15 ಆಟಗಾರರ ಪ್ರದರ್ಶನ ಹೇಗಿದೆ?
ಕನ್ನಡ ಸುದ್ದಿ  /  ಕ್ರಿಕೆಟ್  /  ರೋಹಿತ್​, ಕೊಹ್ಲಿಯಿಂದ ಶಮಿವರೆಗೆ; ಏಕದಿನದಲ್ಲಿ ಆಸೀಸ್ ವಿರುದ್ಧ ಭಾರತದ 15 ಆಟಗಾರರ ಪ್ರದರ್ಶನ ಹೇಗಿದೆ?

ರೋಹಿತ್​, ಕೊಹ್ಲಿಯಿಂದ ಶಮಿವರೆಗೆ; ಏಕದಿನದಲ್ಲಿ ಆಸೀಸ್ ವಿರುದ್ಧ ಭಾರತದ 15 ಆಟಗಾರರ ಪ್ರದರ್ಶನ ಹೇಗಿದೆ?

India vs Australia ODIs: ವಿಶ್ವಕಪ್​ 2023ರ ಫೈನಲ್‌ಗೂ ಮುನ್ನ ಏಕದಿನ ಕ್ರಿಕೆಟ್​ನಲ್ಲಿ ಭಾರತ ತಂಡದ ಆಟಗಾರರು, ಆಸ್ಟ್ರೇಲಿಯಾ ವಿರುದ್ಧ ಹೇಗೆ ಪ್ರದರ್ಶನ ನೀಡಿದ್ದಾರೆ ಎಂಬುದನ್ನು ಇಲ್ಲಿ ನೋಡೋಣ.

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ.
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ.

ಭಾರತ-ಆಸ್ಟ್ರೇಲಿಯಾ ನಡುವಿನ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. 1.30 ಲಕ್ಷ ಪ್ರೇಕ್ಷಕರ ಸಾಮರ್ಥ್ಯ ಹೊಂದಿರುವ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ಹೈವೋಲ್ಟೇಜ್ ಕದನ ನಡೆಯಲಿದೆ. ಭಾರತ ಟೂರ್ನಿಯಲ್ಲಿ ಆಡಿದ 10 ಪಂದ್ಯಗಳನ್ನೂ ಗೆದ್ದು ಫೈನಲ್ ಗೆದ್ದು ಫೈನಲ್ ಪ್ರವೇಶಿಸಿದೆ.

ಭಾರತ ಮತ್ತು ಆಸ್ಟ್ರೇಲಿಯ ನಡುವೆ ಜಿದ್ದಾಜಿದ್ದಿನ ಪೈಪೋಟಿಯನ್ನು ನಿರೀಕ್ಷಿಸಲಾಗಿದೆ. ಉಭಯ ತಂಡಗಳಲ್ಲೂ ಘಟಾನುಘಟಿ ಆಟಗಾರರ ದಂಡೇ ಇದ್ದು, ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಲಿದ್ದಾರೆ. ವಿಶ್ವಕಪ್​ 2023ರ ಫೈನಲ್‌ಗೂ ಮುನ್ನ ಏಕದಿನ ಕ್ರಿಕೆಟ್​ನಲ್ಲಿ ಭಾರತ ತಂಡದ ಆಟಗಾರರು, ಆಸ್ಟ್ರೇಲಿಯಾ ವಿರುದ್ಧ ಹೇಗೆ ಪ್ರದರ್ಶನ ನೀಡಿದ್ದಾರೆ ಎಂಬುದನ್ನು ಇಲ್ಲಿ ನೋಡೋಣ.

ರೋಹಿತ್ ಶರ್ಮಾ: 2332 ರನ್ ಮತ್ತು 2 ವಿಕೆಟ್

ಭಾರತ ತಂಡದ ನಾಯಕ ರೋಹಿತ್ ಶರ್ಮಾ ತಮ್ಮ ವೃತ್ತಿಜೀವನದಲ್ಲಿ ಈವರೆಗೆ ಆಸ್ಟ್ರೇಲಿಯಾ ವಿರುದ್ಧ 44 ಏಕದಿನಗಳಲ್ಲಿ ಕಣಕ್ಕಿಳಿದಿದ್ದಾರೆ. 58.30ರ ಬ್ಯಾಟಿಂಗ್ ಸರಾಸರಿಯಲ್ಲಿ 2332 ರನ್ ಗಳಿಸಿರುವ ರೋಹಿತ್, 8 ಶತಕ, 9 ಅರ್ಧಶತಕಗಳನ್ನೂ ಬಾರಿಸಿದ್ದಾರೆ. ಎರಡು ದ್ವಿಶತಕಗಳನ್ನು ಸಿಡಿಸಿದ್ದು ಆಸ್ಟ್ರೇಲಿಯಾ ವಿರುದ್ಧವೇ ಎಂಬುದು ವಿಶೇಷ. ಅಲ್ಲದೆ ಬೌಲಿಂಗ್​​ನಲ್ಲೂ 2 ವಿಕೆಟ್ ಪಡೆದಿದ್ದಾರೆ.

ಶುಭಮನ್ ಗಿಲ್: 268 ರನ್

ಆಸ್ಟ್ರೇಲಿಯಾ ವಿರುದ್ಧ ಆಡಿರುವ 6 ಏಕದಿನ ಪಂದ್ಯಗಳಲ್ಲಿ ಶುಭ್ಮನ್ ಗಿಲ್, 268 ರನ್ ಗಳಿಸಿದ್ದಾರೆ. ಇದೇ ವರ್ಷ ಸೆಪ್ಟೆಂಬರ್ 24 ರಂದು ಇಂದೋರ್‌ನಲ್ಲಿ ಆಸೀಸ್ ವಿರುದ್ಧ ಆಡಿದ ಕೊನೆಯ ಏಕದಿನ ಪಂದ್ಯದಲ್ಲಿ ಗಿಲ್ ಶತಕ ಸಿಡಿಸಿದ್ದರು. ಈ ವಿಶ್ವಕಪ್​ನ ಲೀಗ್​ ಪಂದ್ಯಕ್ಕೆ ಗಿಲ್ ಅಲಭ್ಯರಾಗಿದ್ದರು. ಅವರಿಗೆ ಡೆಂಗ್ಯೂ ಬಂದಿತ್ತು.

ವಿರಾಟ್ ಕೊಹ್ಲಿ: 2313 ರನ್

ಕಾಂಗರೂ ಪಡೆಯ ವಿರುದ್ಧ ಬ್ಯಾಟಿಂಗ್ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಈವರೆಗೆ 48 ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. 8 ಶತಕ ಮತ್ತು 13 ಅರ್ಧಶತಕಗಳ ಸಹಾಯದಿಂದ 2313 ರನ್ ಗಳಿಸಿದ್ದಾರೆ. ಬ್ಯಾಟಿಂಗ್ ಸರಾಸರಿ 53.79.

ಶ್ರೇಯಸ್ ಅಯ್ಯರ್: 270 ರನ್

10 ಭಾರತ-ಆಸ್ಟ್ರೇಲಿಯಾ ಏಕದಿನ ಪಂದ್ಯಗಳಲ್ಲಿ ಶ್ರೇಯಸ್ ಅಯ್ಯರ್ 270 ರನ್ ಗಳಿಸಿದ್ದಾರೆ. ಬ್ಯಾಟಿಂಗ್ ಸರಾಸರಿ 30 ಇದೆ.

ಕೆಎಲ್ ರಾಹುಲ್: 625 ರನ್

ಯಲ್ಲೋ ಆರ್ಮಿಯ ವಿರುದ್ಧ ಕೆಎಲ್ ರಾಹುಲ್, 15 ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 625 ರನ್ ಗಳಿಸಿದ್ದಾರೆ. ಲೀಗ್​ನಲ್ಲಿ ನಡೆದ ಪಂದ್ಯದಲ್ಲಿ ರಾಹುಲ್ ಅಜೇಯ 97 ರನ್ ಸಿಡಿಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. 56.81ರ ಬ್ಯಾಟಿಂಗ್ ಸರಾಸರಿ ಹೊಂದಿದ್ದಾರೆ.

ಸೂರ್ಯಕುಮಾರ್: 130 ರನ್

ಸೂರ್ಯಕುಮಾರ್ ಆಸ್ಟ್ರೇಲಿಯಾ ವಿರುದ್ಧದ 6 ಏಕದಿನಗಳಲ್ಲಿ 130 ರನ್ ಗಳಿಸಿದ್ದಾರೆ. ಇದರಲ್ಲಿ ಮೂರು ಬ್ಯಾಕ್ ಟು ಬ್ಯಾಕ್ ಡಕೌಟ್​​ಗಳಿವೆ. ಸೆಪ್ಟೆಂಬರ್​​​ನಲ್ಲಿ ನಡೆದ 3 ಏಕದಿನಗಳಲ್ಲಿ 2 ಅರ್ಧಶತಕ ಸಿಡಿಸಿದರು.

ರವೀಂದ್ರ ಜಡೇಜಾ: 566 ರನ್ ಮತ್ತು 37 ವಿಕೆಟ್

ರವೀಂದ್ರ ಜಡೇಜಾ ಅವರು ಆಸ್ಟ್ರೇಲಿಯಾ ವಿರುದ್ಧ 43 ಏಕದಿನ ಪಂದ್ಯಗಳಲ್ಲಿ 566 ರನ್ ಮತ್ತು 37 ವಿಕೆಟ್ ಪಡೆದಿದ್ದಾರೆ.

ಕುಲ್ದೀಪ್ ಯಾದವ್: 31 ವಿಕೆಟ್

ಆಸ್ಟ್ರೇಲಿಯಾ ಎದುರು 21 ಏಕದಿನ ಪಂದ್ಯಗಳನ್ನಾಡಿರುವ ಕುಲ್ದೀಪ್ ಯಾದವ್ 31 ವಿಕೆಟ್​ ಪಡೆದಿದ್ದಾರೆ. 11 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ನಡೆಸಿದ್ದು, 54 ರನ್ ಗಳಿದ್ದಾರೆ.

ಜಸ್ಪ್ರೀತ್ ಬುಮ್ರಾ: 28 ವಿಕೆಟ್

ಆಸ್ಟ್ರೇಲಿಯಾ ವಿರುದ್ಧ ಆಡಿರುವ 20 ಏಕದಿನ ಪಂದ್ಯಗಳಲ್ಲಿ ಜಸ್ಪ್ರೀತ್ ಬುಮ್ರಾ 28 ಆಸ್ಟ್ರೇಲಿಯನ್ ಬ್ಯಾಟರ್‌ಗಳನ್ನು ಔಟ್ ಮಾಡಿದ್ದಾರೆ.

ಮೊಹಮ್ಮದ್ ಶಮಿ: 38 ವಿಕೆಟ್

ಏಕದಿನದಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೊಹಮ್ಮದ್ ಶಮಿ, 24 ಪಂದ್ಯಗಳಲ್ಲಿ 38 ಆಟಗಾರರ ಬಲಿ ಪಡೆದಿದ್ದಾರೆ.

ಮೊಹಮ್ಮದ್ ಸಿರಾಜ್: 7 ವಿಕೆಟ್

ಆಸ್ಟ್ರೇಲಿಯಾ ಎದುರಿನ 6 ಏಕದಿನ ಪಂದ್ಯಗಳಲ್ಲಿ ಮೊಹಮ್ಮದ್ ಸಿರಾಜ್ ಏಳು ವಿಕೆಟ್​​​ಗಳನ್ನು ಪಡೆದಿದ್ದಾರೆ.

ಇಶಾನ್ ಕಿಶನ್: 52 ರನ್

ಆಸ್ಟ್ರೇಲಿಯಾ ವಿರುದ್ಧದ 4 ಏಕದಿನ ಪಂದ್ಯಗಳಲ್ಲಿ ಭಾರತದ ಬ್ಯಾಕ್‌ ಅಪ್ ವಿಕೆಟ್‌ ಕೀಪರ್ ಬ್ಯಾಟರ್ ಇಶಾನ್ ಕಿಶನ್ 54 ರನ್ ಗಳಿಸಿದ್ದಾರೆ.

ಶಾರ್ದೂಲ್ ಠಾಕೂರ್: 3 ವಿಕೆಟ್ ಮತ್ತು 13 ರನ್

ಐದು ಭಾರತ-ಆಸ್ಟ್ರೇಲಿಯಾ ಏಕದಿನ ಪಂದ್ಯಗಳಲ್ಲಿ ಶಾರ್ದೂಲ್ ಠಾಕೂರ್ 13 ರನ್ ಗಳಿಸಿ 3 ಬ್ಯಾಟರ್‌ಗಳನ್ನು ಔಟಾದಿದ್ದಾರೆ.

ರವಿಚಂದ್ರನ್ ಅಶ್ವಿನ್: 21 ವಿಕೆಟ್ ಮತ್ತು 85 ರನ್

ಆರ್.ಅಶ್ವಿನ್ ಆಸ್ಟ್ರೇಲಿಯಾ ವಿರುದ್ಧ 18 ಏಕದಿನ ಪಂದ್ಯಗಳಲ್ಲಿ 21 ವಿಕೆಟ್ ಹಾಗೂ 85 ರನ್ ಗಳಿಸಿದ್ದಾರೆ.

ಪ್ರಸಿದ್ಧ್ ಕೃಷ್ಣ: 3 ವಿಕೆಟ್

ಹಾರ್ದಿಕ್ ಪಾಂಡ್ಯ ಬದಲಿಗೆ ಭಾರತದ ಏಕದಿನ ವಿಶ್ವಕಪ್​​ ತಂಡವನ್ನು ಸೇರಿಕೊಂಡ ಪ್ರಸಿದ್ಧ್ ಕೃಷ್ಣ, ಆಸ್ಟ್ರೇಲಿಯಾ ವಿರುದ್ಧ 2 ಏಕದಿನಗಳಲ್ಲಿ ಆಡಿದ್ದಾರೆ ಮತ್ತು ಮೂರು ವಿಕೆಟ್​​ಗಳನ್ನು ಪಡೆದಿದ್ದಾರೆ.

Whats_app_banner