ಕನ್ನಡ ಸುದ್ದಿ  /  Cricket  /  Rohit Sharmas Captaincy Contribution Praised In Poem Fan Dedicates Poem Him Wife Ritika Sajdeh Reacts Emotionally Prs

ನೀವೇ ನಮ್ಮ ನಿಜವಾದ ಟ್ರೋಫಿ: ರೋಹಿತ್ ಶರ್ಮಾ ಕುರಿತು ಸ್ವರಚಿತ ಕವಿತೆ ವಾಚಿಸಿದ ಅಭಿಮಾನಿ, ರಿತಿಕಾ ಭಾವುಕ ಪ್ರತಿಕ್ರಿಯೆ

Rohit Sharma : ರೋಹಿತ್ ಶರ್ಮಾ ಅವರ ಅಭಿಮಾನಿಯೊಬ್ಬರು ಅವರಿಗಾಗಿ ಕವಿತೆ ಓದುತ್ತಿರುವ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದೆ. ಈ ವಿಡಿಯೋಗೆ ಹಿಟ್​ಮ್ಯಾನ್ ಪತ್ನಿ ರಿತಿಕಾ ಸಜ್ದೇಹ್ ಪ್ರತಿಕ್ರಿಯಿಸಿದ್ದಾರೆ.

ನೀವೇ ನಮ್ಮ ನಿಜವಾದ ಟ್ರೋಫಿ: ರೋಹಿತ್ ಶರ್ಮಾ ನಾಯಕತ್ವದ ಕುರಿತು ಸ್ವರಚಿತ ಕವಿತೆ ವಾಚಿಸಿದ ಅಭಿಮಾನಿ
ನೀವೇ ನಮ್ಮ ನಿಜವಾದ ಟ್ರೋಫಿ: ರೋಹಿತ್ ಶರ್ಮಾ ನಾಯಕತ್ವದ ಕುರಿತು ಸ್ವರಚಿತ ಕವಿತೆ ವಾಚಿಸಿದ ಅಭಿಮಾನಿ

ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವದಿಂದ ಕೆಳಗಿಳಿಸಿದ ರೋಹಿತ್​ ಶರ್ಮಾ (Rohit Sharma) ಅವರಿಗಾಗಿ ಅಭಿಮಾನಿಯೊಬ್ಬ ಕವಿತೆಯನ್ನು ಅರ್ಪಿಸಿದ್ದಾರೆ. ತುಂಬಾ ಭಾವುಕವಾದ ಈ ಕವಿತೆಗೆ ಹಿಟ್​ಮ್ಯಾನ್ ಪತ್ನಿ ಪ್ರತಿಕ್ರಿಯಿಸಿದ್ದು, ಅವರು ಸಹ ಕಣ್ಣೀರಿನ ಎಮೋಜಿ ಹಾಕಿದ್ದಾರೆ. ಸದ್ಯ ಕವಿತೆಯ ವಿಡಿಯೋ ಮತ್ತು ರಿತಿಕಾ ಸಜ್ದೆಹ್ ಅವರ (Ritika Sajdeh) ಕಾಮೆಂಟ್​ ನೆಟ್ಸ್​ನಲ್ಲಿ ಸಖತ್ ವೈರಲ್ ಆಗುತ್ತಿದೆ. ಸದ್ಯ ರೋಹಿತ್ ಭಾರತ ಮತ್ತು ಇಂಗ್ಲೆಂಡ್ ನಡುವಿನ ಸರಣಿಯಲ್ಲಿ ನಿರತರಾಗಿದ್ದಾರೆ.

ರೋಹಿತ್​ ಶರ್ಮಾಗಾಗಿ ಬರೆದಿರುವ ಕವಿತೆಯನ್ನು ಸ್ವತಃ ಓದುತ್ತಿರುವ ವಿಡಿಯೋವನ್ನು ಅಭಿಮಾನಿ ರೆಕಾರ್ಡ್ ಮಾಡಿದ್ದಾರೆ. ನಿರೀಕ್ಷೆಯಂತೆ, ವಿಡಿಯೋ ಲಕ್ಷಾಂತರ ವೀಕ್ಷಣೆ ಪಡೆದಿದೆ. ಇದು ರೋಹಿತ್​ ಫ್ಯಾನ್ಸ್​ ಅನ್ನು ಭಾವುಕರನ್ನಾಗಿಸಿದೆ. ಕೆಲವು ಅಭಿಮಾನಿಗಳು ಅವರನ್ನು 'ನಿಸ್ವಾರ್ಥ ನಾಯಕ' ಎಂದು ಘೋಷಿಸಿದ್ದಾರೆ. ಈ ಕವಿತೆ ರಿತಿಕಾ ಸಜ್ದೇಹ್ ಅವರ ಗಮನ ಸೆಳೆದಿದ್ದು, ಅವರು ವಿಡಿಯೋಗೆ ತಮ್ಮ ಪ್ರತಿಕ್ರಿಯೆ ಹಂಚಿಕೊಂಡಿದ್ದಾರೆ.

ಕವಿತೆಯ ಸಾರಾಂಶ ಹೀಗಿದೆ…

ಯಶಸ್ವಿ ಜೈಸ್ವಾಲ್ ಸಿಡಿಸಿದ ದ್ವಿಶತಕವನ್ನು ಜನ ಯಾವತ್ತೂ ಮರೆಯುವುದಿಲ್ಲ. ಸರ್ಫರಾಜ್ ಖಾನ್ ಮತ್ತು ಧ್ರುವ್ ಜುರೆಲ್ ಅವರ ಸ್ಪೆಷಲ್ ಡೆಬ್ಯೂ ಅನ್ನು ಯಾರೂ ಮರೆಯಲ್ಲ. ಆದರೆ ರೋಹಿತ್​ ಶರ್ಮಾ ಅನಾನುಭವಿಗಳ ತಂಡ ಕಟ್ಟಿದ್ದನ್ನು, ಮುನ್ನಡೆಸಿದ್ದನ್ನು ಮತ್ತು 33ಕ್ಕೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಶತಕ ಸಿಡಿಸಿ ಗೆಲ್ಲಿಸಿದ್ದನ್ನ ಯಾರೂ ನೆನಪಿಸಿಕೊಳ್ಳುತ್ತಿಲ್ಲ. ಅಂದು ಸೆಂಚುರಿ ಸಿಡಿಸಿ ಸೆಲೆಬ್ರೇಟ್ ಕೂಡ ಮಾಡಿಲ್ಲ. ಅದನ್ನೂ ಸಹ ಜನರು ಬೇಗನೆ ಮರೆತುಬಿಡುತ್ತಾರೆ.

ಜನರು ರೋಹಿತ್​ರನ್ನು ಯಾಕೆ ಮರೆಯುತ್ತಾರೆ ಅಂದರೆ, ಆತನ ನಿಸ್ವಾರ್ಥವಾಗಿ ಆಡುತ್ತಿದ್ದಾರೆ. ಅವರಿಗೆ ವಿಶ್ವಕಪ್ ಸೋಲಿನ ನೋವು ಇನ್ನೂ ಕಾಡುತ್ತಿದೆ. ಈಗಲೂ ಕಾಡುತ್ತಿದೆ. ಹಾಗಾಗಿ ಹಿಟ್​ಮ್ಯಾನ್ ಶತಕ ಬಾರಿಸಿದರೂ ಸಂಭ್ರಮಿಸುತ್ತಿಲ್ಲ. ಅವರು ಗೆಲ್ಲದಿದ್ದರೂ ಪರವಾಗಿಲ್ಲ. ಅವರಿದ್ದರೆ ಸಾಕು, ಅವರು ಆಡಿದರೆ ಸಾಕು, ಅವರೇ ನಮಗೆ ಕಪ್, ಟ್ರೋಫಿ, ಅವರೇ ಎಲ್ಲವೂ ಎಂದು ಅಭಿಮಾನಿಯೊಬ್ಬನ ಕವಿತೆಯ ಸಾರಾಂಶವಾಗಿದೆ.

ಕವಿತೆ ಇಲ್ಲಿದೆ ಕೇಳಿ….

ರೋಹಿತ್ ಪತ್ನಿ ಪ್ರತಿಕ್ರಿಯೆ

ಕವಿತೆಯ ವಿಡಿಯೋಗೆ ಪ್ರತಿಕ್ರಿಯಿಸಿದ ರೋಹಿತ್​ ಪತ್ನಿ, ಅಭಿಮಾನಿಗೆ ಸಮಾಧಾನ ವ್ಯಕ್ತಪಡಿಸುವ ಎಮೋಜಿ ಹಾಕಿದ್ದಾರೆ. ಅಲ್ಲದೆ, ಅದು ಸಂತೋಷ ಮತ್ತು ಕೃತಜ್ಞತೆಯ ಅರ್ಥವನ್ನೂ ಕೊಡುತ್ತದೆ. ಇತ್ತೀಚೆಗಷ್ಟೆ ಮುಂಬೈ ಕೋಚ್ ಮಾರ್ಕ್ ಬೌಚರ್​ ವಿರುದ್ಧ ಸಿಡಿದೆದ್ದಿದ್ದ ರಿತಿಕಾ, ರೋಹಿತ್​ ಕುರಿತು ಮಾತನಾಡಿದ್ದ ಹೇಳಿಕೆಗಳನ್ನು ತಳ್ಳಿಹಾಕಿದ್ದರು. ಮಾರ್ಕ್​ ಬೌಚರ್ ಹೇಳಿದ್ದೆಲ್ಲವೂ ತಪ್ಪು ಎಂದು ಪ್ರತಿಕ್ರಿಯೆ ನೀಡಿದ್ದರು. ಅಭಿಮಾನಿಗಳು ಸಹ ರಿತಿಕಾಗೆ ಸಂಪೂರ್ಣ ಬೆಂಬಲ ನೀಡಿದ್ದರು.

ಮಾರ್ಕ್​ ಬೌಚರ್​ ಹೇಳಿದ್ದೇನು?

ಇದೇ ತಿಂಗಳ ಆರಂಭದಲ್ಲಿ ಮಾರ್ಕ್ ಬೌಚರ್ ಮುಂಬೈ ಕ್ಯಾಪ್ಟನ್ಸಿ ಬದಲಾವಣೆಯ ಹಿಂದಿರುವ ಅಸಲಿ ಕಾರಣವನ್ನು ವಿವರಿಸಿದ್ದರು. ರೋಹಿತ್ ಕೆಲಸದ ಹೊರೆಯನ್ನು ತಗ್ಗಿಸುವ ಸಲುವಾಗಿ ಈ ನಿರ್ಧಾರಕ್ಕೆ ಬರಲಾಗಿದೆ. ಇದು ಸಂಪೂರ್ಣವಾಗಿ ಕ್ರಿಕೆಟ್‌ಗೆ ಸಂಬಂಧಿಸಿದ ನಿರ್ಧಾರ ಎಂದು ನಾನು ಭಾವಿಸುತ್ತೇನೆ. ಭಾರತದಲ್ಲಿ ಬಹಳಷ್ಟು ಜನರಿಗೆ ಇದು ಅರ್ಥವಾಗುವುದಿಲ್ಲ. ಇಲ್ಲಿನ ಜನರು ಸಾಕಷ್ಟು ಭಾವುಕರಾಗುತ್ತಾರೆ. ಆದರೆ ಕ್ರಿಕೆಟ್‌ನಲ್ಲಿ ಭಾವನೆಗಳ ಹೊರತಾಗಿ ಯೋಚಿಸಬೇಕು ಎಂದು ಹೇಳಿದ್ದರು.

ರಿತಿಕಾ ಪ್ರತಿಕ್ರಿಯೆ ಏನು?

ಇನ್‌ಸ್ಟಾಗ್ರಾಮ್‌ನಲ್ಲಿ ಸ್ಮಾಶ್ ಸ್ಪೋರ್ಟ್ಸ್ ಪೋಡ್‌ಕಾಸ್ಟ್‌ ಪೋಸ್ಟ್‌ ಮಾಡಿದ ವಿಡಿಯೋಗೆ ರಿತಿಕಾ ಪ್ರತಿಕ್ರಿಯೆ ನೀಡಿದ್ದರು. ಕಾಮೆಂಟ್ ವಿಭಾಗದಲ್ಲಿ ಬರೆದಿದ್ದ ರೋಹಿತ್‌ ಪತ್ನಿ, “ಇದರಲ್ಲಿ ಅನೇಕ ವಿಷಯಗಳು ತಪ್ಪಾಗಿವೆ” (So many things wrong with this) ಎಂದು ಕಾಮೆಂಟ್‌ ಮಾಡಿದ್ದರು. ಆ ಮೂಲಕ ರೋಹಿತ್‌ ಅವರನ್ನು ನಾಯಕತ್ವದಿಂದ ಕೆಳಗಿಳಿಸುವಲ್ಲಿ ಅಸಲಿ ಕಾರಣ ಬೇರೆಯೇ ಇದೆ ಎಂಬ ಅಸಮಾಧಾನ ಹೊರಹಾಕಿದ್ದಾರೆ.

IPL_Entry_Point