ಐಪಿಎಲ್‌ 2024 ಆರಂಭಕ್ಕೂ ಮುನ್ನ ಆರ್‌ಸಿಬಿ ತಂಡದ ಹೆಸರು ಬದಲಾವಣೆ; ರಿಷಬ್‌ ಶೆಟ್ಟಿ ಕೊಟ್ಟ ಸುಳಿವು ಅರ್ಥ ಆಯ್ತಾ?
ಕನ್ನಡ ಸುದ್ದಿ  /  ಕ್ರಿಕೆಟ್  /  ಐಪಿಎಲ್‌ 2024 ಆರಂಭಕ್ಕೂ ಮುನ್ನ ಆರ್‌ಸಿಬಿ ತಂಡದ ಹೆಸರು ಬದಲಾವಣೆ; ರಿಷಬ್‌ ಶೆಟ್ಟಿ ಕೊಟ್ಟ ಸುಳಿವು ಅರ್ಥ ಆಯ್ತಾ?

ಐಪಿಎಲ್‌ 2024 ಆರಂಭಕ್ಕೂ ಮುನ್ನ ಆರ್‌ಸಿಬಿ ತಂಡದ ಹೆಸರು ಬದಲಾವಣೆ; ರಿಷಬ್‌ ಶೆಟ್ಟಿ ಕೊಟ್ಟ ಸುಳಿವು ಅರ್ಥ ಆಯ್ತಾ?

Royal Challengers Bangalore: ತಂಡದ ಹೆಸರು ಬದಲಾವಣೆ ಕುರಿತಂತೆ, ಸೋಷಿಯಲ್‌ ಮೀಡಿಯಾದಲ್ಲಿ ಆರ್‌ಸಿಬಿ ಫ್ರಾಂಚೈಸಿ ವಿಡಿಯೋ ಒಂದನ್ನು ಹಂಚಿಕೊಂಡಿದೆ. ಇದರಲ್ಲಿ ಹೆಸರು ಬದಲಾವಣೆ ಕುರಿತು ಸುಳಿವು ಸಿಕ್ಕಿದೆ. ಈ ಬಗ್ಗೆ ಮಾರ್ಚ್ 19ರಂದು ನಡೆಯಲಿರುವ ಆರ್‌ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮದಲ್ಲಿ ಅಧಿಕೃತವಾಗಿ ಫ್ರಾಂಚೈಸಿ ಮಾಹಿತಿ ನೀಡಲಿದೆ.

ಐಪಿಎಲ್‌ 2024 ಆರಂಭಕ್ಕೂ ಮುನ್ನ ಆರ್‌ಸಿಬಿ ತಂಡದ ಹೆಸರು ಬದಲಾವಣೆ
ಐಪಿಎಲ್‌ 2024 ಆರಂಭಕ್ಕೂ ಮುನ್ನ ಆರ್‌ಸಿಬಿ ತಂಡದ ಹೆಸರು ಬದಲಾವಣೆ (PTI)

ಐಪಿಎಲ್‌ 2024ರ ಆವೃತ್ತಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore, RCB) ಫ್ರಾಂಚೈಸಿಯು ತಂಡದ ಹೆಸರು ಬದಲಾವಣೆಗೆ ಮುಂದಾಗಿರುವಂತಿದೆ. ಇದಕ್ಕೆ ಬೇಕಾದ ಸುಳಿವನ್ನು ಕೂಡಾ ಕೊಟ್ಟಿದೆ. ಐಪಿಎಲ್‌ನಲ್ಲಿ ಅತಿ ದೊಡ್ಡ ಹಾಗೂ ನಿಷ್ಠಾವಂತ ಅಭಿಮಾನಿ ಬಳಗವನ್ನು ಹೊಂದಿರುವ ಆರ್‌ಸಿಬಿ ತಂಡವು, ಇದುವರೆಗೂ ಒಂದೇ ಒಂದು ಟ್ರೋಫಿ ಗೆದ್ದಿಲ್ಲ. ಹೀಗಾಗಿ ಈ ಬಾರಿ, ಹೆಸರು ಬದಲಾವಣೆಗೆ ಫ್ರಾಂಚೈಸಿ ಮುಂದುವರೆದಿದೆ. ಆದರೆ, ಈ ಬಗ್ಗೆ ಫ್ರಾಂಚೈಸಿ ಕಡೆಯಿಂದ ಅಧಿಕೃತ ಮಾಹಿತಿ ಬಂದಿಲ್ಲ.

ಹೆಸರು ಬದಲಾವಣೆ ಕುರಿತಂತೆ, ಸೋಷಿಯಲ್‌ ಮೀಡಿಯಾದಲ್ಲಿ ಫ್ರಾಂಚೈಸಿ ವಿಡಿಯೋ ಒಂದನ್ನು ಹಂಚಿಕೊಂಡಿದೆ. ಇದರಲ್ಲಿ ಹೆಸರು ಬದಲಾವಣೆ ಕುರಿತು ವಿಡಿಯೋ ಮೂಲಕ ಸುಳಿವು ಸಿಕ್ಕಿದೆ. ಈ ಬಗ್ಗೆ ಮಾರ್ಚ್ 19ರ ಮಂಗಳವಾರ ನಡೆಯಲಿರುವ ಆರ್‌ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮದಲ್ಲಿ ಅಧಿಕೃತವಾಗಿ ಫ್ರಾಂಚೈಸಿ ಮಾಹಿತಿ ನೀಡಲಿದೆ.

ಹೆಸರು ಬದಲಾವಣೆ ಕುರಿತ ವಿಡಿಯೋದಲ್ಲಿ, ರಾಜ್ಯದ ಸ್ಟಾರ್‌ ನಟ ಹಾಗೂ ನಿರ್ದೇಶಕ ರಿಷಬ್‌ ಶೆಟ್ಟ ಕಾಣಿಸಿಕೊಂಡಿದ್ದಾರೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹೆಸರಿನಲ್ಲಿ, ಬೆಂಗಳೂರನ್ನು ಹೊರಗಿಡುತ್ತಿರುವಂತೆ ವಿಡಿಯೋದಲ್ಲಿ ತೋರಿಸಲಾಗಿದೆ. ಸದ್ಯ ಆರ್‌ಸಿಬಿ ಹೆಸರಲ್ಲಿ ಇಂಗ್ಲೀಷ್‌ನ ಬೆಂಗಳೂರು (Bangalore) ಪದ ಇದೆ. ಇದನ್ನು ತೆಗೆದುಹಾಕುವ ಸುಳಿವು ರಿಷಬ್‌ ಶೆಟ್ಟಿ ನೀಡಿದ್ದಾರೆ. ಹೀಗಾಗಿ ಇಲ್ಲಿ ಬೆಂಗಳೂರು (Bengaluru) ಎಂಬುದಾಗಿ ಹೆಸರು ಬದಲಿಸುವ ಸಾಧ್ಯತೆ ಇದೆ.

ಇದನ್ನೂ ಓದಿ | ರಚಿನ್ ರವೀಂದ್ರಗೆ ಮತ್ತೊಂದು ಪ್ರಶಸ್ತಿ; ಸರ್ ರಿಚರ್ಡ್ ಹ್ಯಾಡ್ಲಿ ಪದಕ ಪಡೆದ ಅತ್ಯಂತ ಕಿರಿಯ ಆಟಗಾರನೆಂಬ ಹೆಗ್ಗಳಿಕೆ

2014ರ ನವೆಂಬರ್ 1ರಂದು ಬೆಂಗಳೂರು (Bangalore) ನಗರದ ಹೆಸರನ್ನು ಬೆಂಗಳೂರು (Bengaluru) ಎಂದೇ ಬಳಸುವಂತೆ ಅಧಿಕೃತವಾಗಿ ಘೋಷಣೆ ಮಾಡಲಾಗಿತ್ತು. ಆದರೆ, ಆರ್‌ಸಿಬಿ ಫ್ರಾಂಚೈಸಿಯು ತನ್ನ ಹೆಸರನ್ನು ಅಧಿಕೃತವಾಗಿ ಬದಲಾಯಿಸಿರಲಿಲ್ಲ. ಸದ್ಯ ಹೊಸ ಆವೃತ್ತಿಗೂ ಮುನ್ನ ಈ ಬದಲಾವಣೆ ಮಾಡುವ ಸಾಧ್ಯತೆ ಇದೆ.

ಆರ್‌ಸಿಬಿ ತಂಡವು ಈವರೆಗೂ ಐಪಿಎಲ್‌ನ ಟ್ರೋಫಿ ಗೆದ್ದಿಲ್ಲ. ತಂಡವು 2009, 2011, ಮತ್ತು 2016ರಲ್ಲಿ ಫೈನಲ್‌ಗೆ ತಲುಪಿದೆ. ಆದರೆ ಮೂರು ಬಾರಿಯೂ ಸೋತಿದೆ.

ಇದನ್ನೂ ಓದಿ | ವಿದೇಶಿ ಮಂಡಳಿಗಳೊಂದಿಗೆ ನೇರವಾಗಿ ಕ್ರಿಕೆಟ್ ಒಪ್ಪಂದ ಮಾಡಿಕೊಳ್ಳುವಂತಿಲ್ಲ; ರಾಜ್ಯ ಘಟಕಗಳಿಗೆ ಬಿಸಿಸಿಐ ನಿಷೇಧ

ಪ್ರಸಕ್ತ ಆವೃತ್ತಿಯಲ್ಲಿ ಆರ್‌ಸಿಬಿ ತಂಡವು ಉದ್ಘಾಟನಾ ಪಂದ್ಯದಲ್ಲೇ ಕಣಕ್ಕಿಳಿಯಲಿದೆ. ಮಾರ್ಚ್ 22ರ ಶುಕ್ರವಾರ ನಡೆಯಲಿರುವ ಟೂರ್ನಿಯ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಕಣಕ್ಕಿಳಿಯಲಿದೆ. ಚೆನ್ನೈನ ಎಂ ಚಿದಂಬರಂ ಕ್ರೀಡಾಂಗಣದಲ್ಲಿ ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ ತಂಡಗಳು ರೋಚಕ ಹಣಾಹಣಿಯಲ್ಲಿ ಮುಖಾಮುಖಿಯಾಗಲಿವೆ.

ಇದನ್ನೂ ಓದಿ | Explainer: ಆರ್‌ಸಿಬಿ vs ಮುಂಬೈ ಇಂಡಿಯನ್ಸ್‌ ಎಲಿಮನೇಟರ್‌ ಮುಖಾಮುಖಿ ಬಹುತೇಕ ಖಚಿತ; ಹೀಗಿದೆ ಲೆಕ್ಕಾಚಾರ

(This copy first appeared in Hindustan Times Kannada website. To read more like this please logon to kannada.hindustantimes.com)

Whats_app_banner