RCB Retention: ಮೂವರನ್ನಷ್ಟೇ ಉಳಿಸಿಕೊಂಡ ಆರ್​ಸಿಬಿ, ವಿರಾಟ್ ಕೊಹ್ಲಿಗೆ 21 ಕೋಟಿ, ಮತ್ತಿಬ್ಬರಿಗೆಷ್ಟು?
ಕನ್ನಡ ಸುದ್ದಿ  /  ಕ್ರಿಕೆಟ್  /  Rcb Retention: ಮೂವರನ್ನಷ್ಟೇ ಉಳಿಸಿಕೊಂಡ ಆರ್​ಸಿಬಿ, ವಿರಾಟ್ ಕೊಹ್ಲಿಗೆ 21 ಕೋಟಿ, ಮತ್ತಿಬ್ಬರಿಗೆಷ್ಟು?

RCB Retention: ಮೂವರನ್ನಷ್ಟೇ ಉಳಿಸಿಕೊಂಡ ಆರ್​ಸಿಬಿ, ವಿರಾಟ್ ಕೊಹ್ಲಿಗೆ 21 ಕೋಟಿ, ಮತ್ತಿಬ್ಬರಿಗೆಷ್ಟು?

RCB 2025 Retention List: ಇಂಡಿಯನ್ ಪ್ರೀಮಿಯರ್ ಲೀಗ್ 2025 ಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಮೆಗಾ ಹರಾಜಿಗೂ ಮುನ್ನ ವಿರಾಟ್ ಕೊಹ್ಲಿ ಸೇರಿದಂತೆ ಮೂವರು ಆಟಗಾರರನ್ನು ಉಳಿಸಿಕೊಂಡಿದೆ.

ಮೂವರನ್ನಷ್ಟೇ ಉಳಿಸಿಕೊಂಡ ಆರ್​ಸಿಬಿ, ವಿರಾಟ್ ಕೊಹ್ಲಿಗೆ 21 ಕೋಟಿ
ಮೂವರನ್ನಷ್ಟೇ ಉಳಿಸಿಕೊಂಡ ಆರ್​ಸಿಬಿ, ವಿರಾಟ್ ಕೊಹ್ಲಿಗೆ 21 ಕೋಟಿ

IPL 2025: ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್​ 2025 ರ ಮೆಗಾ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೇವಲ ಮೂವರನ್ನು ಮಾತ್ರ (RCB 2025 Retention List) ಉಳಿಸಿಕೊಂಡಿದೆ. ನಿರೀಕ್ಷೆಯಂತೆ ವಿರಾಟ್ ಕೊಹ್ಲಿ (Virat Kohli) ಅವರನ್ನು ರಿಟೇನ್ ಮಾಡಿಕೊಂಡ ಆರ್​ಸಿಬಿ, ಮತ್ತಿಬ್ಬರನ್ನು ಅಚ್ಚರಿಯಂತೆ ಉಳಿಸಿಕೊಂಡಿದೆ. ಈ ಪೈಕಿ ರಜತ್ ಪಾಟೀದಾರ್ ಮತ್ತು ಯಶ್ ದಯಾಳ್​ಗೆ ಅವಕಾಶ ನೀಡಲಾಗಿದೆ. ಇದರೊಂದಿಗೆ ಬಹುತೇಕ ನೂತನ ತಂಡವನ್ನು ಕಟ್ಟಲು ಟೀಮ್ ಮ್ಯಾನೇಜ್​ಮೆಂಟ್ ಚಿಂತಿಸಿದೆ. ಮೆಗಾ ಹರಾಜಿನಲ್ಲಿ ಬಲಿಷ್ಠ ತಂಡ ಕಟ್ಟುವ ಕನಸು ಹೊಂದಿರುವ ರೆಡ್ ಆರ್ಮಿ, 18ನೇ ಆವೃತ್ತಿಯಲ್ಲಿ ಚೊಚ್ಚಲ ಟ್ರೋಫಿಗೆ ಮುತ್ತಿಕ್ಕಲು ಭರ್ಜರಿ ಪ್ಲಾನ್ ಮಾಡಿದೆ.

ಆರ್​ಸಿಬಿ ಉಳಿಸಿಕೊಂಡ ಆಟಗಾರರು

ವಿರಾಟ್ ಕೊಹ್ಲಿ - 21 ಕೋಟಿ

ರಜತ್ ಪಾಟೀದಾರ್ - 11 ಕೋಟಿ

ಯಶ್ ದಯಾಳ್ - 5 ಕೋಟಿ

ಉಳಿದ ಪರ್ಸ್ ಮೊತ್ತ - 83 ಕೋಟಿ

ಖರೀದಿಸಬೇಕಾದ ಆಟಗಾರರ ಸಂಖ್ಯೆ - 22

ಆರ್​ಸಿಬಿಯಿಂದ ರಿಲೀಸ್ ಮಾಡಲಾದ ಆಟಗಾರರು

ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಅನುಜ್ ರಾವತ್, ಸುಯೇಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಮಹಿಪಾಲ್ ಲೊಮ್ರೋರ್, ಕರಣ್ ಶರ್ಮಾ, ಮನೋಜ್ ಭಾಂಡಗೆ, ಮಯಾಂಕ್ ಡಾಗರ್, ವಿಜಯ್‌ಕುಮಾರ್ ವೈಶಾಕ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಾಜನ್ ಕುಮಾರ್, ಕ್ಯಾಮರೂನ್ ಗ್ರೀನ್, ಅಲ್ಜಾರಿ ಜೋಸೆಫ್, ಟಾಮ್ ಕರಣ್, ಲಾಕಿ ಫರ್ಗುಸನ್, ಸ್ವಪ್ನಿಲ್ ಸಿಂಗ್, ಸೌರವ್ ಚೌಹಾಣ್.

ಆರ್​ಸಿಬಿಯಿಂದ ಅಚ್ಚರಿ ಬಿಡುಗಡೆ

ಗ್ಲೆನ್ ಮ್ಯಾಕ್ಸ್‌ವೆಲ್

ವಿಲ್ ಜಾಕ್ಸ್

ಮೊಹಮ್ಮದ್ ಸಿರಾಜ್

ಕ್ಯಾಮರೂನ್ ಗ್ರೀನ್

ಹರಾಜಿನಲ್ಲಿ ಆರ್​ಸಿಬಿ ಯಾರನ್ನೆಲ್ಲಾ ಖರೀದಿಸುವ ನಿರೀಕ್ಷೆ ಇದೆ?

ಮೆಗಾ ಹರಾಜಿನಲ್ಲಿ ಪ್ರಮುಖ ಆಟಗಾರರ ಮೇಲೆ ಕಣ್ಣಿಟ್ಟಿದೆ. ವರದಿಗಳ ಪ್ರಕಾರ ವಿರಾಟ್ ಕೊಹ್ಲಿ ಮತ್ತೆ ನಾಯಕನಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಇದು ಸುಳ್ಳಾದರೆ ಭವಿಷ್ಯದ ಕ್ಯಾಪ್ಟನ್​ನನ್ನು ಖರೀದಿಸಲು ಮುಂದಾಗಲಿದೆ. ಈ ಪೈಕಿ ರಿಷಭ್ ಪಂತ್, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್ ಈ ಮೂವರಲ್ಲಿ ಒಬ್ಬರನ್ನು ಖರೀದಿಸಲು ಪ್ಲಾನ್ ಹಾಕಿಕೊಂಡಿದೆ. ಅದೇ ರೀತಿ ಭವಿಷ್ಯದ ತಂಡ ಕಟ್ಟುವ ಗುರಿ ಹೊಂದಿರುವ ಆರ್​ಸಿಬಿ, ಯುವ ಆಟಗಾರರನ್ನು ಖರೀದಿಸಲು ಚಿಂತಿಸಿದೆ. ಕನ್ನಡಿಗರನ್ನು ಈ ಬಾರಿಯೂ ಉಳಿಸಿಕೊಳ್ಳುವಲ್ಲಿ ಆರ್​ಸಿಬಿ ವಿಫಲವಾಗಿದೆ.

ಚೊಚ್ಚಲ ಕನಸಿನ ಬೇಟೆಗೆ ರೆಡ್​ ಆರ್ಮಿ ಸಜ್ಜು

2008ರಿಂದ 2024ರ ಐಪಿಎಲ್​ ತನಕ ಆರ್​ಸಿಬಿ ಒಮ್ಮೆಯೂ ಟ್ರೋಫಿ ಗೆದ್ದಿಲ್ಲ. ಒಟ್ಟು ಮೂರು ಬಾರಿ ಫೈನಲ್ ಪ್ರವೇಶಿಸಿದ್ದರೂ ಪ್ರಶಸ್ತಿಗೆ ಮುತ್ತಿಕ್ಕುವಲ್ಲಿ ವಿಫಲವಾಗಿತ್ತು. 2009, 2011, 2016ರಲ್ಲಿ ಫೈನಲ್ ಆಡಿತ್ತು. ಇದೀಗ 2025ರ ಐಪಿಎಲ್​​ನಲ್ಲಿ ಚಾಂಪಿಯನ್ ಆಗಲೇ ಬೇಕೆಂಬ ಪಣತೊಟ್ಟಿದ್ದು, ಪ್ರಮುಖರನ್ನು ಸೆಳೆಯಲು ಮುಂದಾಗಿದೆ. ಆರಂಭದಿಂದಲೂ ಬೌಲಿಂಗ್​ನಲ್ಲಿ ತುಂಬಾ ವೀಕ್ ಆಗುತ್ತಿದೆ. ಹೀಗಾಗಿ ಸ್ಟಾರ್​ ಬೌಲರ್​ಗಳನ್ನೇ ಖರೀದಿಸುವುದನ್ನು ಗುರಿಯಾಗಿಸಿಕೊಂಡಿದೆ. ಯುಜ್ವೇಂದ್ರ ಚಹಲ್ ಮತ್ತೆ ಹರಾಜಿಗೆ ಬಂದಿದ್ದು, ತನ್ನ ತೆಕ್ಕೆಗೆ ಹಾಕಿಕೊಳ್ಳಲು ಇದೇ ಉತ್ತಮ ಅವಕಾಶ.

 

Whats_app_banner