IPL: ಉದ್ಘಾಟನಾ ಪಂದ್ಯದಲ್ಲೇ ಟಾಸ್ ಗೆದ್ದ ಆರ್​ಸಿಬಿ, ಚೇಸಿಂಗ್ ಆಯ್ಕೆ; ಇಲ್ಲಿದೆ ಉಭಯ ತಂಡಗಳ ಬಲಿಷ್ಠ ಪ್ಲೇಯಿಂಗ್ 11
ಕನ್ನಡ ಸುದ್ದಿ  /  ಕ್ರಿಕೆಟ್  /  Ipl: ಉದ್ಘಾಟನಾ ಪಂದ್ಯದಲ್ಲೇ ಟಾಸ್ ಗೆದ್ದ ಆರ್​ಸಿಬಿ, ಚೇಸಿಂಗ್ ಆಯ್ಕೆ; ಇಲ್ಲಿದೆ ಉಭಯ ತಂಡಗಳ ಬಲಿಷ್ಠ ಪ್ಲೇಯಿಂಗ್ 11

IPL: ಉದ್ಘಾಟನಾ ಪಂದ್ಯದಲ್ಲೇ ಟಾಸ್ ಗೆದ್ದ ಆರ್​ಸಿಬಿ, ಚೇಸಿಂಗ್ ಆಯ್ಕೆ; ಇಲ್ಲಿದೆ ಉಭಯ ತಂಡಗಳ ಬಲಿಷ್ಠ ಪ್ಲೇಯಿಂಗ್ 11

Indian Premier League 2025: ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಟಾಸ್ ಗೆದ್ದ ಆರ್​ಸಿಬಿ ಚೇಸಿಂಗ್ ಆಯ್ಕೆ ಮಾಡಿಕೊಂಡಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್​​ನಲ್ಲಿ ಪಂದ್ಯ ನಡೆಯುತ್ತಿದೆ.

ಉದ್ಘಾಟನಾ ಪಂದ್ಯದಲ್ಲೇ ಟಾಸ್ ಗೆದ್ದ ಆರ್​ಸಿಬಿ, ಚೇಸಿಂಗ್ ಆಯ್ಕೆ; ಇಲ್ಲಿದೆ ಉಭಯ ತಂಡಗಳ ಬಲಿಷ್ಠ ಪ್ಲೇಯಿಂಗ್ 11
ಉದ್ಘಾಟನಾ ಪಂದ್ಯದಲ್ಲೇ ಟಾಸ್ ಗೆದ್ದ ಆರ್​ಸಿಬಿ, ಚೇಸಿಂಗ್ ಆಯ್ಕೆ; ಇಲ್ಲಿದೆ ಉಭಯ ತಂಡಗಳ ಬಲಿಷ್ಠ ಪ್ಲೇಯಿಂಗ್ 11

18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ಗೆ ಅದ್ಧೂರಿ ಚಾಲನೆ ಸಿಕ್ಕಿತು. ಗಾಯಕಿ ಶ್ರೇಯಾ ಘೋಷಾಲ್ ತಮ್ಮ ಸುಮಧುರ ಗೀತೆಗಳ ರಂಜಿಸಿದರೆ, ನಟಿ ದಿಶಾ ಪಟಾನಿ ಕಿಕ್ಕೇರಿಸುವ ಡ್ಯಾನ್ಸ್​ ಮೂಲಕ ಗಮನ ಸೆಳೆದರು. ಮತ್ತೊಂದೆಡೆ ಶಾರೂಖ್ ಖಾನ್ ತಮ್ಮ ಅದ್ಭುತ ನಿರೂಪಣೆಯೊಂದಿಗೆ ಆಕರ್ಷಿಸಿದರು. ವರ್ಣರಂಜಿತ ಅದ್ಧೂರಿ ಕಾರ್ಯಕ್ರಮದ ನಂತರ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಟಾಸ್​ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್​​ ಈ ಪಂದ್ಯಕ್ಕೆ ಆತಿಥ್ಯ ವಹಿಸುತ್ತಿದೆ.

ನೂತನ ಐಪಿಎಲ್ ಸೀಸನ್​ನಲ್ಲಿ ಉಭಯ ತಂಡಗಳಿಗೂ ಹೊಸ ನಾಯಕರು ನೇಮಕಗೊಂಡಿದ್ದಾರೆ. ಕಳೆದ ಸೀಸನ್​ನಲ್ಲಿ ಆರ್​ಸಿಬಿ ತಂಡವನ್ನು ಫಾಫ್ ಡು ಪ್ಲೆಸಿಸ್ ಮುನ್ನಡೆಸಿದ್ದರು. ಅವರನ್ನು ಮೆಗಾ ಹರಾಜಿಗೂ ಮುನ್ನ ಕೈಬಿಡಲಾಗಿತ್ತು. ಇದೀಗ ಅವರ ಸ್ಥಾನವನ್ನು ರಜತ್ ಪಾಟೀದಾರ್​ ತುಂಬಿದ್ದಾರೆ. ಇನ್ನು ಕೆಕೆಆರ್​ಗೆ ಟ್ರೋಫಿ ಗೆದ್ದುಕೊಟ್ಟಿದ್ದ ಶ್ರೇಯಸ್ ಅಯ್ಯರ್ ಸ್ಥಾನವನ್ನು ಅಜಿಂಕ್ಯ ರಹಾನೆ ತುಂಬಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್ XI

ವಿರಾಟ್ ಕೊಹ್ಲಿ, ಫಿಲಿಪ್ ಸಾಲ್ಟ್ (ವಿಕೆಟ್ ಕೀಪರ್), ರಜತ್ ಪಾಟೀದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ, ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ರಸಿಖ್ ದಾರ್ ಸಲಾಂ, ಸುಯಾಶ್ ಶರ್ಮಾ, ಜೋಶ್ ಹೇಜಲ್‌ವುಡ್, ಯಶ್ ದಯಾಳ್

ಆರ್​ಸಿಬಿ ಇಂಪ್ಯಾಕ್ಟ್ ಪ್ಲೇಯರ್ಸ್: ದೇವದತ್ ಪಡಿಕ್ಕಲ್, ಅಭಿನಂದನ್ ಸಿಂಗ್, ಮನೋಜ್ ಭಾಂಡಗೆ, ರೊಮಾರಿಯೋ ಶೆಫರ್ಡ್, ಸ್ವಪ್ನಿಲ್ ಸಿಂಗ್

ಕೋಲ್ಕತ್ತಾ ನೈಟ್ ರೈಡರ್ಸ್ ಪ್ಲೇಯಿಂಗ್ XI

ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ವೆಂಕಟೇಶ್ ಅಯ್ಯರ್, ಅಜಿಂಕ್ಯ ರಹಾನೆ (ನಾಯಕ), ರಿಂಕು ಸಿಂಗ್, ಆಂಗ್ಕ್ರಿಶ್ ರಘುವಂಶಿ, ಸುನಿಲ್ ನರೈನ್, ಆಂಡ್ರೆ ರಸೆಲ್, ರಮಣದೀಪ್ ಸಿಂಗ್, ಸ್ಪೆನ್ಸರ್ ಜಾನ್ಸನ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.

ಕೆಕೆಆರ್​ ಇಂಪ್ಯಾಕ್ಟ್ ಪ್ಲೇಯರ್ಸ್: ಅನ್ರಿಚ್ ನೋಕಿಯಾ, ಮನೀಶ್ ಪಾಂಡೆ, ವೈಭವ್ ಅರೋರಾ, ಅನುಕುಲ್ ರಾಯ್, ಲುವ್ನಿತ್ ಸಿಸೋಡಿಯಾ.

ಕೆಕೆಆರ್​ vs ಆರ್​ಸಿಬಿ ಮುಖಾಮುಖಿ ದಾಖಲೆ

ಒಟ್ಟು ಪಂದ್ಯಗಳು - 34

ಕೆಕೆಆರ್ ಗೆಲುವು - 20

ಆರ್​ಸಿಬಿ ಗೆಲುವು - 14

ಈಡನ್ ಗಾರ್ಡನ್ಸ್ ಐಪಿಎಲ್ ಅಂಕಿ-ಅಂಶಗಳು

ಒಟ್ಟು ಐಪಿಎಲ್ ಪಂದ್ಯಗಳು - 93

ಮೊದಲು ಬ್ಯಾಟಿಂಗ್ ಮಾಡಿ ಗೆದ್ದ ಪಂದ್ಯಗಳು - 38 (40.86%)

ಚೇಸಿಂಗ್‌ನಲ್ಲಿ ಗೆದ್ದ ಪಂದ್ಯಗಳು - 55 (59.14%)

ಟಾಸ್ ಗೆದ್ದ ನಂತರ ಜಯಿಸಿದ ಪಂದ್ಯಗಳು – 49 (52.69%)

ಟಾಸ್ ಸೋತ ನಂತರ ಗೆದ್ದ ಪಂದ್ಯಗಳು – 44 (47.31%)

ಅತ್ಯಧಿಕ ಸ್ಕೋರ್ - 262/2

ಕಡಿಮೆ ಸ್ಕೋರ್ - 49

ಚೇಸಿಂಗ್‌ನಲ್ಲಿ ಅತ್ಯಧಿಕ ಸ್ಕೋರ್ - 262/2

ಮೊದಲು ಬ್ಯಾಟಿಂಗ್ ಮಾಡಿದಾಗ ಸರಾಸರಿ ಸ್ಕೋರ್- 163

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner