ಕನ್ನಡ ಸುದ್ದಿ  /  ಕ್ರಿಕೆಟ್  /  ಹೊಸ ಅಧ್ಯಾಯ ಆರಂಭ, ರೋಚಕ ಹಣಾಹಣಿಯಲ್ಲಿ ಗೆದ್ದು ಪ್ಲೇಆಫ್​ ಪ್ರವೇಶಿಸಿದ ಆರ್​ಸಿಬಿ; ಸೋತು ಹೊರಬಿದ್ದ ಸಿಎಸ್​ಕೆ

ಹೊಸ ಅಧ್ಯಾಯ ಆರಂಭ, ರೋಚಕ ಹಣಾಹಣಿಯಲ್ಲಿ ಗೆದ್ದು ಪ್ಲೇಆಫ್​ ಪ್ರವೇಶಿಸಿದ ಆರ್​ಸಿಬಿ; ಸೋತು ಹೊರಬಿದ್ದ ಸಿಎಸ್​ಕೆ

RCB vs CSK Highlights: 17ನೇ ಆವೃತ್ತಿಯ ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಅಮೋಘ ಗೆಲುವು ಪ್ಲೇಆಫ್​ ಗೆಲುವು ಲಗ್ಗೆಯಿಟ್ಟಿದೆ. 27 ರನ್​ಗಳಿಂದ ಗೆದ್ದು ಅಗ್ರ-4ರಲ್ಲಿ ಸ್ಥಾನ ಪಡೆದಿದೆ.

ರೋಚಕ ಹಣಾಹಣಿಯಲ್ಲಿ ಗೆದ್ದು ಪ್ಲೇಆಫ್​ ಪ್ರವೇಶಿಸಿದ ಆರ್​ಸಿಬಿ; ಸೋತು ಹೊರಬಿದ್ದ ಸಿಎಸ್​ಕೆ
ರೋಚಕ ಹಣಾಹಣಿಯಲ್ಲಿ ಗೆದ್ದು ಪ್ಲೇಆಫ್​ ಪ್ರವೇಶಿಸಿದ ಆರ್​ಸಿಬಿ; ಸೋತು ಹೊರಬಿದ್ದ ಸಿಎಸ್​ಕೆ (PTI)

ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಸಾಧ್ಯವಾದದ್ದನ್ನು ಸಾಧಿಸಿ ತೋರಿಸಿದೆ. ಪ್ಲೇಆಫ್​ ಪ್ರವೇಶಿಸುವುದೇ ಅನುಮಾನ ಎಂದು ಹೇಳಲಾಗುತ್ತಿದ್ದ ತಂಡವು ಇದೀಗ ಅಗ್ರ-4ರಲ್ಲಿ ಸ್ಥಾನ ಪಡೆದುಕೊಂಡಿದೆ. ನಿರ್ಣಾಯಕ ಹಾಗೂ ಪ್ಲೇಆಫ್​ ಡಿಸೈಡರ್ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡವನ್ನು 27 ರನ್​ಗಳಿಂದ ಮಣಿಸಿ ಆರ್​ಸಿಬಿ 9ನೇ ಬಾರಿಗೆ ಪ್ಲೇಆಫ್​​ಗೆ ಲಗ್ಗೆ ಇಟ್ಟಿದೆ. ಆರಂಭಿಕ 8 ಪಂದ್ಯಗಳಲ್ಲಿ 7 ಸೋಲು ಕಂಡಿದ್ದ ಬೆಂಗಳೂರು ​ಇದೀಗ ಸತತ 6 ಗೆಲುವುಗಳೊಂದಿಗೆ ಅಗ್ರ-4ರಲ್ಲಿ ಸ್ಥಾನ ಪಡೆದುಕೊಂಡಿದೆ.

ಟ್ರೆಂಡಿಂಗ್​ ಸುದ್ದಿ

ರೋಚಕ ಹಣಾಹಣಿಯಲ್ಲಿ ಸಿಎಸ್​ಕೆ ತಂಡವನ್ನು 18 ರನ್​ಗಳಿಂದ ಸೋಲಿಸಬೇಕಿತ್ತು. ಅದಕ್ಕಾಗಿ ಆರ್​ಸಿಬಿ ಗಳಿಸಿದ್ದ 218 ರನ್​ಗಳ ಪೈಕಿ ಎದುರಾಳಿಯನ್ನು 200 ರನ್​ ಒಳಗೆ ಕಟ್ಟಿ ಹಾಕಬೇಕಿತ್ತು. ಸಿಎಸ್​ಕೆ ಇನ್ನು 10 ರನ್ ಗಳಿಸಿದ್ದರೆ ಆರ್​ಸಿಬಿ ನಾಕ್​ಔಟ್ ಆಗುತ್ತಿತ್ತು. ಆದರೆ, ಹಾಗಾದಂತೆ ಬೌಲರ್ಸ್ ನೋಡಿಕೊಂಡರು. ಋತುರಾಜ್ ಪಡೆಯನ್ನು 191 ರನ್​​​ಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು. ತವರಿನಲ್ಲಿ ಸಿಎಸ್​ಕೆ ವಿರುದ್ಧ ಸೇಡು ತೀರಿಸಿಕೊಂಡ ರೆಡ್ ಆರ್ಮಿ, ಟೂರ್ನಿಯಿಂದಲೇ ಹೊರಬೀಳುವಂತೆ ಮಾಡಿತು.

ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಈ ನಿರ್ಣಾಯಕ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆರ್​ಸಿಬಿ, ಭರ್ಜರಿ ಬ್ಯಾಟಿಂಗ್ ನಡೆಸಿತು. 20 ಓವರ್​​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 218 ರನ್​ಗಳ ಬೃಹತ್ ಮೊತ್ತ ಪೇರಿಸಿತು. ಫಾಫ್ ಡು ಪ್ಲೆಸಿಸ್ 54, ವಿರಾಟ್ ಕೊಹ್ಲಿ 47, ರಜತ್ ಪಾಟೀದಾರ್ 41, ಕ್ಯಾಮರೂನ್ ಗ್ರೀನ್ 38 ರನ್ ಗಳಿಸಿದರು. ಶಾರ್ದೂಲ್ ಠಾಕೂರ್ 2 ವಿಕೆಟ್ ಪಡೆದರು. 219 ರನ್​​ಗಳ ಗುರಿ ಬೆನ್ನಟ್ಟಿದ ಸಿಎಸ್​ಕೆ 20 ಓವರ್​​ಗಳಲ್ಲಿ 7 ವಿಕೆಟ್ ಕಳೆದುಕೊಂಡು 191 ರನ್ ಗಳಿಸಿತು. ಯಶ್ ದಯಾಳ್ 2 ವಿಕೆಟ್ ಪಡೆದರು. ರಚಿನ್ ರವೀಂದ್ರ 61 ರನ್ ಗಳಿಸಿದರು.

ಆರ್​ಸಿಬಿ ದಾಖಲೆ

ಫಸ್ಟ್​ ಹಾಫ್​​ನ 7 ಪಂದ್ಯಗಳಲ್ಲಿ 1 ಗೆಲುವು ಸಾಧಿಸಿದ್ದ ಆರ್​ಸಿಬಿ ಇದೀಗ ಪ್ಲೇಆಫ್​ ಪ್ರವೇಶಿಸುವ ಮೂಲಕ ಹೊಸ ದಾಖಲೆ ಬರೆದಿದೆ. ಯಾವುದೇ ತಂಡ ಮೊದಲಾರ್ಧದಲ್ಲಿ 7ಕ್ಕೆ 1 ಗೆಲುವು ಸಾಧಿಸಿದ್ದ ಯಾವುದೇ ತಂಡವು ಪ್ಲೇಆಫ್​ ಪ್ರವೇಶಿಸಿದ ಇತಿಹಾಸವೇ ಇಲ್ಲ.

ಆರ್‌ಸಿಬಿಗೆ (ಐಪಿಎಲ್) ಸತತ ಅತಿ ಹೆಚ್ಚು ಗೆಲುವು

2011ರಲ್ಲಿ ಸತತ 7 ಗೆಲುವು

2024ರಲ್ಲಿ ಸತತ 7 ಗೆಲುವು

2009ರಲ್ಲಿ ಸತತ 5ನೇ ಗೆಲುವು

2016ರಲ್ಲಿ ಸತತ 5ನೇ ಗೆಲುವು

ಪ್ರತಿ ವರ್ಷ ಆರ್​ಸಿಬಿ ಸಾಧನೆ

2008 - ಗುಂಪು ಹಂತ

2009 - ರನ್ನರ್​ಅಪ್

2010 - ಪ್ಲೇಆಫ್

2011 - ರನ್ನರ್​ಅಪ್​

2012 - ಗುಂಪು ಹಂತ

2013 - ಗುಂಪು ಹಂತ

2014 - ಗುಂಪು ಹಂತ

2015 - ಪ್ಲೇಆಫ್​

2016 - ರನ್ನರ್​​ಅಪ್​

2017 - ಗುಂಪು ಹಂತ

2018 - ಗುಂಪು ಹಂತ

2019 - ಗುಂಪು ಹಂತ

2020 - ಪ್ಲೇಆಫ್​​

2021 - ಪ್ಲೇಆಫ್​​

2022 - ಪ್ಲೇಆಫ್​​

2023 - ಗುಂಪು ಹಂತ

2024 - ಪ್ಲೇಆಫ್​​

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024

ಕ್ರಿಕೆಟ್‌ಗೆ ಸಂಬಂಧಿಸಿದ ಎಲ್ಲ ಸುದ್ದಿ, T20 ವಿಶ್ವಕಪ್, T20 ವಿಶ್ವಕಪ್ ವೇಳಾಪಟ್ಟಿ, T20 ವಿಶ್ವಕಪ್ ಅತ್ಯಧಿಕ ರನ್‌ಗಳು, T20 ವಿಶ್ವಕಪ್ ಪಾಯಿಂಟ್ಸ್ ಟೇಬಲ್, T20 ವಿಶ್ವಕಪ್ ಲೈವ್ ಸ್ಕೋರ್, T20 ವಿಶ್ವಕಪ್ ಅಂಕಿಅಂಶಗಳು.. ಕ್ರಿಕೆಟ್‌ಗೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ HT ಕನ್ನಡ ವೆಬ್‌ಸೈಟ್ ನೋಡಿ