ಕನ್ನಡ ಸುದ್ದಿ  /  ಕ್ರಿಕೆಟ್  /  Rr Vs Rcb Highlights Ipl 2024: ರೋವ್ಮನ್ ಪೊವೆಲ್ ಫಿನಿಶಿಂಗ್; ಆರ್‌ಸಿಬಿ ಮಣಿಸಿ ಕ್ವಾಲಿಫೈಯರ್‌ಗೆ ಲಗ್ಗೆ ಇಟ್ಟ ರಾಜಸ್ಥಾನ್‌ ರಾಯಲ್ಸ್

ರೋವ್ಮನ್ ಪೊವೆಲ್ ಫಿನಿಶಿಂಗ್; ಆರ್‌ಸಿಬಿ ಮಣಿಸಿ ಕ್ವಾಲಿಫೈಯರ್‌ಗೆ ಲಗ್ಗೆ ಇಟ್ಟ ರಾಜಸ್ಥಾನ್‌ ರಾಯಲ್ಸ್(AP)

RR vs RCB Highlights IPL 2024: ರೋವ್ಮನ್ ಪೊವೆಲ್ ಫಿನಿಶಿಂಗ್; ಆರ್‌ಸಿಬಿ ಮಣಿಸಿ ಕ್ವಾಲಿಫೈಯರ್‌ಗೆ ಲಗ್ಗೆ ಇಟ್ಟ ರಾಜಸ್ಥಾನ್‌ ರಾಯಲ್ಸ್

06:10 PM ISTMay 22, 2024 11:38 PM Jayaraj
  • twitter
  • Share on Facebook
06:10 PM IST

RR vs RCB Highlights: ಐಪಿಎಲ್ 2024ರ ಎಲಿಮಿನೇಟರ್​ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಗಳು ಮುಖಾಮುಖಿಯಾದವು. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಹೈಲೈಟ್ಸ್‌ ಇಲ್ಲಿದೆ.

Wed, 22 May 202406:08 PM IST

ಕ್ವಾಲಿಫೈಯರ್‌ 2ಕ್ಕೆ ರಾಯಲ್‌ ಎಂಟ್ರಿ

ರಾಜಸ್ಥಾನ್‌ ರಾಯಲ್ಸ್‌ ಮತ್ತು ಸನ್‌ರೈಸರ್ಸ್‌ ಹೈದರಾಬಾದ್‌ ತಂಡಗಳ ನಡುವಿನ ಕ್ವಾಲಿಫೈಯರ್‌ ಪಂದ್ಯ ಮೇ 24ರಂದು ಚೆನ್ನೈನಲ್ಲಿ ನಡೆಯಲಿದೆ. ಅಲ್ಲಿ ಗೆದ್ದ ತಂಡವು ಫೈನಲ್‌ ಪಂದ್ಯ ಆಡಲಿದೆ.

Wed, 22 May 202406:06 PM IST

ಅಭಿಮಾನಿಗಳಿಗೆ ಮತ್ತೆ ನಿರಾಶೆ

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಕಿಕ್ಕಿರಿದು ಸೇರಿದ್ದ 87 ಸಾವಿರಕ್ಕೂ ಅಧಿಕ ಅಭಿಮಾನಿಗಳಿಗೆ ನಿರಾಶೆಯಾಯ್ತು. ತವರಿನಲ್ಲಿ ಪಂದ್ಯ ಆಡುತ್ತಿಲ್ಲವಾದರೂ, ಅಹಮದಾಬಾದ್‌ನಲ್ಲಿ ಆರ್‌ಸಿಬಿ ಅಭಿಮಾನಿಗಳೇ ಕಾಣಿಸಿಕೊಂಡರು. ರಾಜಸ್ಥಾನ್‌ ಗೆಲುವಿನ ವೇಳೆ ಮೈದಾನವಿಡೀ ನಿಶ್ಯಬ್ದ ಆವರಿಸಿತ್ತು. ಇದು ಆರ್‌ಸಿಬಿ ಅಭಿಮಾನಿಗಳ ಮೌನವನ್ನು ಸೂಚಿಸಿತು. ಮತ್ತೊಂದು ಆವೃತ್ತಿಯಲ್ಲಿ ಆರ್‌ಸಿಬಿ ಕಪ್‌ ರಹಿತವಾಗಿ ಹೊರಬಿದ್ದಿದೆ. ತಂಡದ ಕಪ್‌ ಬರ ಮುಂದುವರೆದಿದೆ. ಸೋತರೂ, ಆರ್‌ಸಿಬಿ ತಂಡವು ಟೂರ್ನಿಯ ದ್ವಿತಿಯಾರ್ಧದಲ್ಲಿ ತೋರಿದ ಪ್ರದರ್ಶನ ಅಭಿಮಾನಿಗಳಿಗೆ ಹಿಡಿಸಿದೆ. ಅದರಲ್ಲೂ ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ಸಿಎಸ್‌ಕೆ ವಿರುದ್ಧದ ಗೆಲುವು ಆರ್‌ಸಿಬಿ ಫ್ಯಾನ್‌ಗಳು ಇನ್ನೂ ನೆನಪಿಸಿಕೊಳ್ಳುತ್ತಿದ್ದಾರೆ.

Wed, 22 May 202406:04 PM IST

ಈ ಸಲ ಕಪ್‌ ನಮ್ದಲ್ಲ

ಆರ್‌ಸಿಬಿ ತಂಡದ ಸತತ 6 ಪಂದ್ಯಗಳ ಗೆಲುವಿನ ನಾಗಾಲೋಟಕ್ಕೆ ರಾಜಸ್ಥಾನ್‌ ರಾಯಲ್ಸ್ ಬ್ರೇಕ್‌ ಹಾಕಿದೆ. ಸೋಲಿನ ಸುಳಿಗೆ ಸಿಲುಕಿದ್ದ ರಾಯಲ್ಸ್‌, ನಿರ್ಣಾಯಕ ಎಲಿಮನೇಟರ್‌ ಪಂದ್ಯದಲ್ಲಿ ಗೆದ್ದು ಪ್ಲೇಆಫ್‌ಗೆ ಲಗ್ಗೆ ಹಾಕಿದೆ. ಆರ್‌ಸಿಬಿ ಟೂರ್ನಿಯಿಂದ ನಿರ್ಗಮಿಸಿದೆ. ಈ ಸಲ ಕಪ್‌ ನಮ್ಮದಾಗಲಿಲ್ಲ. ಕಾರಣ ಆರ್‌ಸಿಬಿಯು ಬ್ಯಾಟಿಂಗ್‌ನಲ್ಲಿ ಹೇಳಿಕೊಳ್ಳುವಂಥಾ ಪ್ರದರ್ಶನ ನೀಡಲು ವಿಫಲವಾಯ್ತು. ಗ್ಲೆನ್‌ ಮ್ಯಾಕ್ಸ್‌ವೆಲ್‌ ಗೋಲ್ಡನ್‌ ಡಕ್‌ ಆಗಿದ್ದು ಮಾತ್ರವಲ್ಲದೆ, ಫೀಲ್ಡಿಂಗ್‌ನಲ್ಲಿ ಪ್ರಮುಖ ಕ್ಯಾಚ್‌ ಕೈಚೆಲ್ಲಿದರು. ರಾಜಸ್ಥಾನ್‌ ರಾಯಲ್ಸ್‌ ಸುಲಭವಾಗಿ ಚೇಸಿಂಗ್‌ ಪೂರ್ಣಗೊಳಿಸಿತು. ಇನ್‌ಫಾರ್ಮ್‌ ಬ್ಯಾಟರ್‌ ರಿಯಾನ್‌ ಪರಾಗ್‌ ಮತ್ತೆ ತಂಡದ ರಕ್ಷಣೆಗೆ ನಿಂತರು. ಡೆತ್‌ ಓವರ್‌ಗಳಲ್ಲಿ ಮೊಹಮ್ಮದ್‌ ಸಿರಾಜ್‌ ಒಂದೇ ಓವರ್‌ನಲ್ಲಿ ಪರಾಗ್‌ ಹಾಗೂ ಹೆಟ್ಮಯರ್‌ ವಿಕೆಟ್‌ ಕಬಳಿಸಿದರು. ಆದರೆ, ರೋವ್ಮನ್‌ ಪೊವೆಲ್ ಸತತ ಎರಡು ಬೌಂಡರಿ ಹಾಗೂ ಕೊನೆಗೆ ಸಿಕ್ಸರ್‌ ಬಾರಿಸಿ ತಂಡದ ಗೆಲುವು ಸುಲಭವಾಗಿಸಿದರು. ಇನ್ನೂ ಒಂದು ಓವರ್‌ ಉಳಿಸಿ ತಂಡ ಗೆಲುವಿನ ನಗೆ ಬೀರಿತು.

Wed, 22 May 202405:58 PM IST

ರಾಜಸ್ಥಾನ್‌ ರಾಯಲ್ಸ್‌ಗೆ 4 ವಿಕೆಟ್‌ ಗೆಲುವು

ರೋವ್ಮನ್ ಪೊವೆಲ್ ಪಂದ್ಯಕ್ಕೆ ಪರ್ಫೆಕ್ಟ್‌ ಫಿನಿಶಿಂಗ್ ಕೊಟ್ಟಿದ್ದಾರೆ. ಇನ್ನೂ ಒಂದು ಓವರ್‌ ಉಳಿಸಿ ತಂಡವು ಗೆಲುವಿನ ನಗೆ ಬೀರಿದೆ. 19ನೇ ಓವರ್‌ನಲ್ಲಿ ರೋವ್ಮನ್‌ ಪೊವೆಲ್‌ ಎರಡು ಬೌಂಡರಿ ಹಾಗೂ ಒಂದು ಸಿಕ್ಸರ್‌ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ದಾರೆ. ಆರ್‌ಸಿಬಿ ತಂಡವು ಐಪಿಎಲ್‌ 2024ರಿಂದ ನಿರ್ಗಮಿಸಿದೆ. ಅತ್ತ ರಾಯಲ್ಸ್‌ ತಂಡವು ಕ್ವಾಲಿಫೈಯರ್‌ಗೆ ಲಗ್ಗೆ ಇಟ್ಟಿದೆ.

Wed, 22 May 202405:51 PM IST

ಹೆಟ್ಮಯರ್‌ ಔಟ್;‌ ರಾಜಸ್ಥಾನ್‌ ರಾಯಲ್ಸ್‌ 160/6 (18)

ರಾಜಸ್ಥಾನ್‌ ರಾಯಲ್ಸ್‌ 6 ವಿಕೆಟ್‌ ಕಳೆದುಕೊಂಡಿದೆ. ಮೊಹಮ್ಮದ್‌ ಸಿರಾಜ್‌ ಒಂದೇ ಓವರ್‌ನಲ್ಲಿ 2 ನಿರ್ಣಾಯಕ ವಿಕೆಟ್‌ ಕಬಳಿಸಿದ್ದಾರೆ. ಆದರೂ, ರಾಜಸ್ಥಾನಕ್ಕೆ ಮುಂದಿನ 2 ಓವರ್‌ಗಳಲ್ಲಿ ಕೇವಲ 13 ರನ್‌ ಮಾತ್ರ ಬೇಕಿದೆ. ಪೊವೆಲ್‌ ಮತ್ತು ಆರ್‌ ಅಶ್ವಿನ್‌ ಮೈದಾನಕ್ಕಿಳಿದಿದ್ದಾರೆ.

Wed, 22 May 202405:46 PM IST

ರಿಯಾನ್‌ ಪರಾಗ್‌ ಔಟ್

ರಾಜಸ್ಥಾನ್‌ ರಾಯಲ್ಸ್‌ ಗೆಲುವಿನ ಸಮೀಪ ಬಂದಿದೆ. ಈ ನಡುವೆ ಭರವಸೆಯ ಬ್ಯಾಟರ್‌ ರಿಯಾನ್‌ ಪರಾಗ್‌ ಗೆಲುವಿನ ಸಮೀಪ ಎಡವಿದ್ದಾರೆ. ಮೊಹಮ್ಮದ್‌ ಸಿರಾಜ್‌ ಮ್ಯಾಜಿಕಲ್‌ ಎಸೆತದಲ್ಲಿ‌ 36 ರನ್‌ ಗಳಿಸಿದ್ದಾಗ ಕ್ಲೀನ್‌ ಬೋಲ್ಡ್‌ ಆಗಿದ್ದಾರೆ.

Wed, 22 May 202405:36 PM IST

ಗೆಲುವಿನತ್ತ ಸಮೀಪಿಸಿದ ರಾಜಸ್ಥಾನ್‌ ರಾಯಲ್ಸ್

ಕ್ಯಾಮರೂನ್‌ ಗ್ರೀನ್‌ 17 ರನ್‌ ಬಿಟ್ಟುಕೊಟ್ಟು ದುಬಾರಿಯಾಗಿದ್ದಾರೆ. ರಾಜಸ್ಥಾನ್‌ ರಾಯಲ್ಸ್‌ ಗೆಲುವಿನತ್ತ ಮುನ್ನಡೆಯುತ್ತಿದೆ. ಮುಂದಿನ 24 ಎಸೆತಗಳಲ್ಲಿ ತಂಡಕ್ಕೆ 30 ರನ್‌ ಮಾತ್ರ ಬೇಕಿದೆ.

Wed, 22 May 202405:31 PM IST

ರಾಜಸ್ಥಾನ್‌ ರಾಯಲ್ಸ್:‌ 126/4 (15)

ರಾಜಸ್ಥಾನ್‌ ಗೆಲುವಿಗೆ ಕೊನೆಯ 5 ಓವರ್‌ಗಳಲ್ಲಿ 47 ರನ್‌ಗಳ ಅಗತ್ಯವಿದೆ. 15 ಓವರ್‌ ಬಳಿಕ ತಂಡವು 126 ರನ್‌ ವೇಳೆಗೆ 4 ವಿಕೆಟ್‌ ಕಳೆದುಕೊಂಡಿದೆ.

Wed, 22 May 202405:23 PM IST

ರಾಜಸ್ಥಾನ್‌ ರಾಯಲ್ಸ್: 115/4 (14)

ಆರ್‌ಸಿಬಿ ತಂಡ ನಿಧಾನವಾಗಿ ಪಂದ್ಯದಲ್ಲಿ ಹಿಡಿತ ಸಾಧಿಸುತ್ತಿದೆ. ಕೊನೆಯ 5 ಓವರ್‌ಗಳಲ್ಲಿ 35 ರನ್‌ ಬಿಟ್ಟುಕೊಟ್ಟು 3 ವಿಕೆಟ್‌ ಕಬಳಿಸಿದೆ. ಮುಂದಿನ 6 ಓವರ್‌ಗಳಲ್ಲಿ ರಾಜಸ್ಥಾನದ ಗೆಲುವಿಗೆ 58 ರನ್‌ ಬೇಕಿದೆ. ತಂಡದ ಬಳಿ ಇನ್ನೂ 6 ವಿಕೆಟ್‌ಗಳು ಉಳಿದಿವೆ. ಸದ್ಯ ರಿಯಾನ್‌ ಪರಾಗ್‌ ಜೊತೆಗೆ ಸ್ಫೋಟಕ ಬ್ಯಾಟರ್‌ ಶಿಮ್ರಾನ್‌ ಹೆಟ್ಮಯರ್‌ ಸೇರಿಕೊಂಡಿದ್ದಾರೆ. ಕೊನೆಯ 6 ಓವರ್‌ಗಳಲ್ಲಿ ಏನಾಗುತ್ತೆ ನೋಡೋಣ.

Wed, 22 May 202405:18 PM IST

ಧ್ರುವ್‌ ಜುರೆಲ್‌ ರನೌಟ್; ರಾಜಸ್ಥಾನ್‌ -112/4 (13.1)

ರಾಜಸ್ಥಾನದ ನಾಲ್ಕನೇ ವಿಕೆಟ್‌ ಪತನವಾಗಿದೆ. ಧ್ರುವ್‌ ಜುರೆಲ್‌ ರನೌಟ್ ಆಗಿದ್ದಾರೆ. ವಿರಾಟ್‌ ಕೊಹ್ಲಿ ಕೊಟ್ಟ ಅತ್ಯದ್ಭುತ ಥ್ರೋನಿಂದಾಗಿ ಜುರೆಲ್‌ ವಿಕೆಟ್‌ ಕಳೆದುಕೊಂಡಿದ್ದಾರೆ. ರಾಜಸ್ಥಾನ ತಂಡವು 13.1 ಓವರ್‌ಗಳಲ್ಲಿ 112 ರನ್‌ ವೇಳೆಗೆ 4 ವಿಕೆಟ್‌ ಕಳೆದುಕೊಂಡಿದೆ.

Wed, 22 May 202405:07 PM IST

ರಾಜಸ್ಥಾನ್‌ ರಾಯಲ್ಸ್‌: 100/3 (12)

12 ಓವರ್‌ ಬಳಕ ರಾಜಸ್ಥಾನ್‌ ರಾಯಲ್ಸ್‌ 3 ವಿಕೆಟ್‌ ನಷ್ಟಕ್ಕೆ 100 ರನ್‌ ಗಳಿಸಿದೆ. ರಿಯಾನ್‌ ಪರಾಗ್‌ ಮತ್ತು ಧ್ರುವ್‌ ಜುರೆಲ್‌ ಬ್ಯಾಟ್‌ ಬೀಸುತ್ತಿದ್ದಾರೆ.

Wed, 22 May 202404:59 PM IST

ಸಂಜು ಸ್ಯಾಮ್ಸನ್‌ ಔಟ್; ರಾಜಸ್ಥಾನ್‌ 86/3

ಜೈಸ್ವಾಲ್‌ ಬೆನ್ನಲ್ಲೇ ಸ್ಯಾಮ್ಸನ್ ಔಟಾಗಿದ್ದಾರೆ. ಕರ್ಣ ಶರ್ಮಾ ಎಸೆತದಲ್ಲಿ ರಾಜಸ್ಥಾನ್‌ ನಾಯಕ ಸ್ಟಂಪ್‌ ಔಟ್‌ ಆಗಿದ್ದಾರೆ. 86 ರನ್‌ ವೇಳೆಗೆ ಆರ್‌ಆರ್‌ 3 ವಿಕಟ್‌ ಕಳೆದುಕೊಂಡಿದೆ.

Wed, 22 May 202404:55 PM IST

10 ಓವರ್‌ ಬಳಿಕ RR 85/2 (10)

45(30) ರನ್‌ ಗಳಿಸಿ ಯಶಶ್ವಿ ಜೈಸ್ವಾಲ್‌ ಔಟಾಗಿದ್ದಾರೆ. ಕ್ಯಾಮರೂನ್‌ ಗ್ರೀನ್‌ ಓವರ್‌ನಲ್ಲಿ ವಿಕೆಟ್‌ ಕೀಪರ್‌ ಕ್ಯಾಚ್‌ ನೀಡಿ ಯಶಸ್ವಿ ಔಟಾಗಿದ್ದಾರೆ. ಇನ್ನಿಂಗ್ಸ್‌ ವೇಳೆ ಅವರು ಸುಸ್ತಾದಂತೆ ಕಾಣಿಸಿಕೊಂಡರು. 10 ಓವರ್‌ ಬಳಿಕ ರಾಜಸ್ಥಾನ್‌ 85 ರನ್‌ ವೇಳೆ 2 ವಿಕೆಟ್‌ ಕಳೆದುಕೊಂಡಿದೆ. ರಿಯಾನ್‌ ಪರಾಗ್‌ ಮೈದಾನಕ್ಕೆ ಇಳಿದಿದ್ದಾರೆ.

Wed, 22 May 202404:44 PM IST

8 ಓವರ್‌ ಬಳಿಕ ರಾಜಸ್ಥಾನ್‌ ರಾಯಲ್ಸ್ RR 74/1

8 ಓವರ್‌ ಬಳಿಕ ರಾಜಸ್ಥಾನ 1 ವಿಕೆಟ್‌ ಮಾತ್ರ ಕಳೆದುಕೊಂಡು 74 ರನ್‌ ಗಳಿಸಿದೆ. ತಂಡ ನಿರ್ಭೀತಿಯಿಂದ ಬ್ಯಾಟ್‌ ಬೀಸುತ್ತಿದೆ.

ಯಶಸ್ವಿ ಜೈಸ್ವಾಲ್42(26)

ಸಂಜು ಸ್ಯಾಮ್ಸನ್11(7)

Wed, 22 May 202404:38 PM IST

7 ಓವರ್‌ ಬಳಿಕ ರಾಜಸ್ಥಾನ್:‌ 64/1

ಏಳನೇ ಓವರ್‌ನಲ್ಲಿ ಸ್ವಪ್ನಿಲ್‌ ಸಿಂಗ್‌ 17 ರನ್‌ ಬಿಟ್ಟುಕೊಟ್ಟು ದುಬಾರಿಯಾದರು. ರಾಜಸ್ಥಾನ ಇನ್ನಿಂಗ್ಸ್‌ನಲ್ಲಿ ವೇಗವಾಗಿ ಮುನ್ನುಗ್ಗುತ್ತಿದೆ.ಯಶಸ್ವಿ ಜೈಸ್ವಾಲ್‌ ಲಯ ಕಂಡುಕೊಂಡು ನಿರ್ಭಿತಿಯಿಂದ ಬ್ಯಾಟ್‌ ಬೀಸುತ್ತಿದ್ದಾರೆ.

Wed, 22 May 202404:32 PM IST

ಟಾಮ್ ಕೊಹ್ಲರ್ ಕ್ಲೀನ್‌ ಬೋಲ್ಡ್; ಆರ್‌ಆರ್‌ - 47/1 (6)

ಲಾಕಿ ಫರ್ಗುಸನ್‌ ಎಸೆತದಲ್ಲಿ ಟಾಮ್ ಕೊಹ್ಲರ್ ಕ್ಲೀನ್‌ ಬೋಲ್ಡ್ ಆಗಿದ್ದಾರೆ. ರಾಜಸ್ಥಾನ್‌ ರಾಯಲ್ಸ್‌ ಮೊದಲ ವಿಕೆಟ್‌ ಕಳೆದುಕೊಂಡಿದೆ. ಇದು ಪಂದ್ಯದ ತಿರುವಿಗೆ ಕಾರಣವಾಗುತ್ತಾ? ಆರ್‌ಸಿಬಿ ಭರವಸೆ ಉಳಿಸಿಕೊಂಡಿದೆ. 6 ಓವರ್‌ಗಳ ಪವರ್‌ಪ್ಲೇ ಬಳಿಕ ರಾಜಸ್ಥಾನ 47 ರನ್‌ಗಳಿಗೆ 1 ವಿಕೆಟ್‌ ಕಳೆದುಕೊಂಡಿದೆ.

Wed, 22 May 202404:27 PM IST

ಸುಲಭ ಕ್ಯಾಚ್‌ ಕೈಬಿಟ್ಟ ಮ್ಯಾಕ್ಸ್‌ವೆಲ್

ಗ್ಲೆನ್‌ ಮ್ಯಾಕ್ಸ್‌ವೆಲ್‌ ಸುಲಭ ಕ್ಯಾಚ್‌ ಕೈಚೆಲ್ಲಿದ್ದಾರೆ. ಯಶ್‌ ದಯಾಳ್‌ ಎಸೆತದಲ್ಲಿ ಟಾಮ್ ಕೊಹ್ಲರ್-ಕಾಡ್ಮೋರ್ ಹೊಡೆದ ಚೆಂಡನ್ನು ಮ್ಯಾಕ್ಸಿ ಕೈಚೆಲ್ಲಿದ್ದಾರೆ.

Wed, 22 May 202404:23 PM IST

4 ಓವರ್‌ ಬಳಿಕ RR 35/0

ಇನ್ನಿಂಗ್ಸ್‌ನ ನಾಲ್ಕನೇ ಓವರ್‌ ಎಸೆದ ಸಿರಾಜ್‌ 13 ರನ್‌ ಬಿಟ್ಟುಕೊಟ್ಟಿದ್ದಾರೆ. ರಾಜಸ್ಥಾನ್‌ 35 ರನ್‌ ಗಳಿಸಿ ಸುಸ್ಥಿತಿಯಲ್ಲಿದೆ.

Wed, 22 May 202404:18 PM IST

ಮೂರನೇ ಓವರ್‌ನಲ್ಲಿ 16 ರನ್‌

ಯಶ್‌ ದಯಾಳ್‌ ಎಸೆದ ಮೂರನೇ ಓವರ್‌ನಲ್ಲಿ 16 ರನ್‌ ಹರಿದು ಬಂದಿದೆ. ಯಶಸ್ವಿ ಜೈಸ್ವಾಲ್‌ ನಾಲ್ಕು ಬೌಂಡರಿ ಬಾರಿಸಿದ್ದಾರೆ.

Wed, 22 May 202404:12 PM IST

ಎರಡು ಓವರ್‌ ಬಳಿಕ RR 6/0 (2)

ಮೊಹಮ್ಮದ್‌ ಸಿರಾಜ್‌ ಇನ್ನಿಂಗ್ಸ್‌ನ ಎರಡನೇ ಓವರ್‌ನಲ್ಲಿ ಕೇವಲ 4 ರನ್‌ ಮಾತ್ರ ಬಿಟ್ಟುಕೊಟ್ಟಿದ್ದಾರೆ. ಆರ್‌ಸಿಬಿ ಉತ್ತಮ ಆರಂಭ ಪಡೆದಿದೆ.

Wed, 22 May 202404:08 PM IST

ಮೊದಲ ಓವರ್‌ ಬಳಿಕ RR 2/0 (1)

ಮೊದಲ ಓವರ್‌ನಲ್ಲಿ ರಾಜಸ್ಥಾನ್‌ 2 ರನ್‌ ಮಾತ್ರ ಗಳಿಸಿದೆ. ಇಬ್ಬರು ಆರಂಭಿಕರು ತಲಾ 1 ರನ್‌ ಗಳಿಸಿ ಆಡುತ್ತಿದ್ದಾರೆ.

Wed, 22 May 202404:05 PM IST

ಚೇಸಿಂಗ್‌ ಆರಂಭಿಸಿದ ರಾಜಸ್ಥಾನ್

ರಾಜಸ್ಥಾನ್‌ ರಾಯಲ್ಸ್‌ ಚೇಸಿಂಗ್‌ ಆರಂಭಿಸಿದೆ. ಆರ್‌ಸಿಬಿ ಲಕ್ಕೀ ಚಾರ್ಮ್‌ ಸ್ವಪ್ನಿಲ್‌ ಸಿಂಗ್‌ ಮೊದಲ ಓವರ್‌ ಎಸೆಯುತ್ತಿದ್ದಾರೆ. ಯಶಸ್ವಿ ಜೈಸ್ವಾಲ್‌ ಹಾಗೂ ಟಾಮ್ ಕೊಹ್ಲರ್-ಕಾಡ್ಮೋರ್ ಇನ್ನಿಂಗ್ಸ್‌ ಆರಂಭಿಸಿದ್ದಾರೆ.

Wed, 22 May 202403:58 PM IST

ಆರ್‌ಸಿಬಿ ಸ್ಪರ್ಧಾತ್ಮಕ ಮೊತ್ತ. ಕುತೂಹಲ ಮೂಡಿಸಿದ ಚೇಸಿಂಗ್

ಬಲಿಷ್ಠ ಬ್ಯಾಟಿಂಗ್‌ ಲೈನಪ್‌ ಹೊಂದಿರುವ ಆರ್‌ಸಿಬಿಯನ್ನು ರಾಜಸ್ಥಾನ್‌ ರಾಯಲ್ಸ್‌ 172 ರನ್‌ಗಳಿಗೆ ಕಟ್ಟಿ ಹಾಕಿದೆ. ಭಾರಿ ಮೊತ್ತ ಕಲೆಹಾಕುವ ನಿರೀಕ್ಷೆಯಲ್ಲಿದ್ದ ಚಾಲೆಂಜರ್ಸ್‌ಗೆ ರಾಜಸ್ಥಾನ್‌ ಬೌಲರ್‌ಗಳು ದೊಡ್ಡ ಸವಾಲಾದರು. ಮೊದಲೆರಡು ಓವರ್‌ಗಳಲ್ಲಿ ದುಬಾರಿಯಾಗಿದ್ದ ಆವೇಶ್‌ ಖಾನ್‌ ಕೊನೆಯ ಎರಡು ಓವರ್‌ಗಳಲ್ಲಿ ಖರಾರುವಕ್‌ ದಾಳಿ ನಡೆಸಿ 3 ವಿಕೆಟ್‌ ಪಡೆದರು. ಆರ್‌ಸಿಬಿ ತಂಡದ ಯಾವೊಬ್ಬ ಬ್ಯಾಟರ್‌ಗಳು ಕೂಡಾ 35 ರನ್‌ ದಾಟಿಲ್ಲ. ನರೇಂದ್ರ ಮೋದಿ ಕ್ರೀಡಾಂಗಣವು ಚೇಸಿಂಗ್‌ಗೆ ನೆರವಾಗಲಿದ್ದು, ರಾಜಸ್ಥಾನ ಚೇಸಿಂಗ್‌ ಕುತೂಹಲ ಮೂಡಿಸಿದೆ. ಪಂದ್ಯ ಏನಾಗುತ್ತೆ? ಆರ್‌ಸಿಬಿ ಗೆಲ್ಲುತ್ತಾ? ಕಾದು ನೋಡೋಣ…

Wed, 22 May 202403:51 PM IST

ಆರ್​ಸಿಬಿ ಇನ್ನಿಂಗ್ಸ್ ಮುಕ್ತಾಯ

ಆರ್​ಸಿಬಿ ಇನ್ನಿಂಗ್ಸ್ ಮುಕ್ತಾಯಗೊಂಡಿದೆ. 20 ಓವರ್​​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 172 ರನ್ ಕಲೆ ಹಾಕಿದೆ. ಆರ್​ಆರ್​ ಕಠಿಣ ಬೌಲಿಂಗ್​ ನಡೆಸಿ ಸ್ಪರ್ಧಾತ್ಮಕ ಮೊತ್ತಕ್ಕೆ ಕಟ್ಟಿ ಹಾಕಿದೆ. ಆವೇಶ್ ಖಾನ್ 3, ಅಶ್ವಿನ್ 2 ವಿಕೆಟ್ ಪಡೆದು ಮಿಂಚಿದರು. ಆರ್​ಸಿಬಿ ಪರ ಯಾರೊಬ್ಬರೂ ಸಹ 50 ರನ್ ಬಾರಿಸಿಲ್ಲ. ರಜತ್ ಪಾಟೀದಾರ್​ 34 ರನ್​ಗಳಿಸಿದ್ದೇ ಗರಿಷ್ಠ.

Wed, 22 May 202403:43 PM IST

ಲೊಮ್ರೊರ್ ಔಟ್

ಆರ್​ಸಿಬಿ 19 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು. ಮಹಿಪಾಲ್ ಲೊಮ್ರೊರ್ ಕೂಡ 32 ರನ್ ಗಳಿಸಿ ಔಟಾದರು.

Wed, 22 May 202403:40 PM IST

ದಿನೇಶ್ ಕಾರ್ತಿಕ್ ಔಟ್

ದಿನೇಶ್ ಕಾರ್ತಿಕ್ ನಿರಾಸೆ ಮೂಡಿಸಿದರು. ಡೆತ್​ ಓವರ್​​ಗಳಲ್ಲಿ 13 ಎಸೆತಗಳನ್ನು ಎದುರಿಸಿ ಕೇವಲ 11 ರನ್ ಗಳಿಸಿದ್ದಾರೆ. ಆವೇಶ್ ಖಾನ್ ಬೌಲಿಂಗ್​ನಲ್ಲಿ ವಿಕೆಟ್ ಒಪ್ಪಿಸಿದರು.

Wed, 22 May 202403:35 PM IST

18 ಓವರ್ ಮುಕ್ತಾಯಕ್ಕೆ 155/5

ಆರ್​ಸಿಬಿ 18 ಓವರ್ ಮುಕ್ತಾಯಕ್ಕೆ 155 ರನ್ ಗಳಿಸಿ 5 ವಿಕೆಟ್ ಕಳೆದುಕೊಂಡಿದೆ. 18ನೇ ಓವರ್​​ನಲ್ಲಿ 11 ರನ್ ಬಂತು.

Wed, 22 May 202403:31 PM IST

17 ಓವರ್ ಮುಕ್ತಾಯ 144/5

ಆರ್​ಸಿಬಿ 17 ಓವರ್ ಮುಕ್ತಾಯಗೊಂಡಿದೆ. 5 ವಿಕೆಟ್ ನಷ್ಟಕ್ಕೆ 144 ರನ್ ಗಳಿಸಿದೆ.

Wed, 22 May 202403:12 PM IST

ರಜತ್ ಪಾಟೀದಾರ್ ಕೂಡ ಔಟ್

22 ಎಸೆತಗಳಲ್ಲಿ 34 ರನ್ ಗಳಿಸಿ ತಂಡಕ್ಕೆ ಆಸೆಯಾಗುತ್ತಿದ್ದ ರಜತ್ ಪಾಟೀದಾರ್ ಕೂಡ ಔಟ್ ಆಗಿದ್ದಾರೆ. ಆವೇಶ್ ಖಾನ್ ಬೌಲಿಂಗ್​ನಲ್ಲಿ ಪಾಟೀದಾರ್ ರಿಯಾನ್ ಪರಾಗ್​ಗೆ ಕ್ಯಾಚ್​ ನೀಡಿದರು.

Wed, 22 May 202403:09 PM IST

14ನೇ ಓವರ್​​ನಲ್ಲಿ 19 ರನ್

ಯುಜ್ವೇಂದ್ರ ಚಹಲ್ ಎಸೆದ 14ನೇ ಓವರ್​​ನಲ್ಲಿ 19 ರನ್ ಬಿಟ್ಟುಕೊಟ್ಟಿದ್ದಾರೆ. ರಜತ್ ಪಾಟೀದಾರ್ 1 ಸಿಕ್ಸರ್​, 1 ಬೌಂಡರಿ ಸಿಡಿಸಿದರು. ಮಹಿಪಾಲ್ 1 ಸಿಕ್ಸರ್ ಸಿಡಿಸಿದರು.

ಆರ್​ಸಿಬಿ 116/4 (14)

Wed, 22 May 202403:08 PM IST

ಬ್ಯಾಕ್ ಟು ಬ್ಯಾಕ್ ವಿಕೆಟ್

ಆರ್​​ಸಿಬಿ ಬ್ಯಾಕ್ ಟು ಬ್ಯಾಕ್ ಎರಡು ವಿಕೆಟ್​ ಕಳೆದುಕೊಂಡಿದೆ. 21 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಿತ 27 ರನ್ ಗಳಿಸಿದ ಕ್ಯಾಮರೂನ್ ಗ್ರೀನ್, ಅಶ್ವಿನ್ ಬೌಲಿಂಗ್​ನಲ್ಲಿ ಕ್ಯಾಚ್ ನೀಡಿದ್ದಾರೆ. ಗ್ರೀನ್ ಔಟಾದ ಮರು ಎಸೆತದಲ್ಲೇ ಗ್ಲೆನ್ ಮ್ಯಾಕ್ಸ್​ವೆಲ್ ಔಟಾಗಿದ್ದಾರೆ.

ಆರ್​ಸಿಬಿ 97/4 (12.4)

Wed, 22 May 202402:57 PM IST

12 ಓವರ್ ಮುಕ್ತಾಯ 95/2

12ನೇ ಓವರ್​​ನಲ್ಲಿ ಆರ್​ಸಿಬಿ 13 ರನ್ ಕಲೆ ಹಾಕಿತು. ಎರಡು ಬೌಂಡರಿಗಳು ಬಂದವು.

ಆರ್​ಸಿಬಿ 95/2 (12)

ಗ್ರೀನ್ 26(19)

ಪಾಟೀದಾರ್ 15(15)

Wed, 22 May 202402:53 PM IST

ರಜತ್ ಪಾಟೀದಾರ್ ಕ್ಯಾಚ್ ಡ್ರಾಪ್

5 ರನ್ ಗಳಿಸಿದ್ದ ಅವಧಿಯಲ್ಲಿ ರಜತ್ ಪಾಟೀದಾರ್ ಅವರ ಕ್ಯಾಚ್​ ಅನ್ನು ಧ್ರುವ್ ಜುರೆಲ್ ಕೈಬಿಟ್ಟರು.

Wed, 22 May 202402:49 PM IST

10 ಓವರ್ ಮುಕ್ತಾಯ ಆರ್​ಸಿಬಿ 76/2

10ನೇ ಓವರ್​​ನಲ್ಲಿ 13 ರನ್ ಕಲೆ ಹಾಕಿತು. ಕ್ಯಾಮರೂನ್ ಗ್ರೀನ್ ಒಂದು ಬೌಂಡರಿ, 1 ಸಿಕ್ಸರ್ ಸಿಡಿಸಿದರು.

ಆರ್​ಸಿಬಿ 76/2 (10)

ಕ್ಯಾಮರೂನ್ ಗ್ರೀನ್ 18(14)

ರಜತ್ ಪಾಟೀದಾರ್ 5(8)

Wed, 22 May 202402:39 PM IST

ವಿರಾಟ್ ಕೊಹ್ಲಿ ಔಟ್

ಆರ್​ಸಿಬಿ ಎರಡನೇ ವಿಕೆಟ್ ಕಳೆದುಕೊಂಡಿದೆ. 24 ಎಸೆತಗಳಲ್ಲಿ 33 ರನ್ ಗಳಿಸಿದ ವಿರಾಟ್, ಯುಜ್ವೇಂದ್ರ ಚಹಲ್ ಬೌಲಿಂಗ್​ನಲ್ಲಿ ಔಟಾದರ.

ಆರ್​ಸಿಬಿ 56/2 (7.2)

ವಿರಾಟ್ ಕೊಹ್ಲಿ 33(24)

ಕ್ಯಾಮರೂನ್ ಗ್ರೀನ್ 3(6)

Wed, 22 May 202402:34 PM IST

ಆರ್​ಆರ್​ ಮತ್ತೊಂದು ಉತ್ತಮ ಓವರ್​

ರವಿಚಂದ್ರನ್ ಅಶ್ವಿನ್ 7ನೇ ಓವರ್​​ನಲ್ಲಿ ಕೇವಲ 6 ರನ್ ನೀಡಿದ್ದಾರೆ.

ಆರ್​ಸಿಬಿ 56/1 (7)

ವಿರಾಟ್ ಕೊಹ್ಲಿ 33(22)

ಕ್ಯಾಮರೂನ್ ಗ್ರೀನ್ 3(6)

Wed, 22 May 202402:30 PM IST

ವಿರಾಟ್ ಕೊಹ್ಲಿ 8000 ರನ್

ಇಂಡಿಯನ್ ಪ್ರೀಮಿಯರ್ ಲೀಗ್​ ಇತಿಹಾಸದಲ್ಲಿ ವಿರಾಟ್ ಕೊಹ್ಲಿ ಮತ್ತೊಂದು ಮೈಲಿಗಲ್ಲು ತಲುಪಿದ್ದಾರೆ. ಟೂರ್ನಿಯಲ್ಲಿ 800 ರನ್​ ಪೂರೈಸಿದ್ದು, ಈ ದಾಖಲೆ ಬರೆದ ಮೊದಲ ಆಟಗಾರ ಎಂಬ ದಾಖಲೆಗೆ ಒಳಗಾಗಿದ್ದಾರೆ.

ಪವರ್​ ಪ್ಲೇ ಮುಕ್ತಾಯ

ಆರ್​ಸಿಬಿ 50/1

Wed, 22 May 202402:25 PM IST

ಫಾಫ್ ಡು ಪ್ಲೆಸಿಸ್ ಔಟ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೊದಲ ವಿಕೆಟ್ ಪತನವಾಗಿದೆ. ನಾಯಕ ಫಾಫ್ ಡು ಪ್ಲೆಸಿಸ್ ಅವರು ಟ್ರೆಂಟ್ ಬೋಲ್ಟ್ ಬೌಲಿಂಗ್​​ನಲ್ಲಿ ವಿಕೆಟ್ ಒಪ್ಪಿಸಿದರು. 5ನೇ ಓವರ್​​ನಲ್ಲಿ ಕೇವಲ 3 ರನ್ ಮಾತ್ರ ಬಂತು.

ಆರ್​ಸಿಬಿ 37/1 (5)

Wed, 22 May 202402:19 PM IST

ನಾಲ್ಕನೇ ಓವರ್​ನಲ್ಲಿ 17 ರನ್

ಆವೇಶ್ ಖಾನ್ ಎಸೆದ ನಾಲ್ಕನೇ ಓವರ್​ನಲ್ಲಿ ಆರ್​ಸಿಬಿ 17 ರನ್ ಗಳಿಸಿತು. ಕೊಹ್ಲಿ ಸಿಕ್ಸರ್ ಬಾರಿಸಿದರೆ, ಫಾಫ್ ಎರಡು ಬೌಂಡರಿ ಸಿಡಿಸಿದರು.

ಆರ್​ಸಿಬಿ 34/0 (4)

Wed, 22 May 202402:14 PM IST

ಮೂರನೇ ಓವರ್​​ನಲ್ಲಿ 3 ರನ್

ಮೂರನೇ ಓವರ್​​ನಲ್ಲಿ ಆರ್​ಸಿಬಿ ಕೇವಲ 3 ರನ್ ಗಳಿಸಿದೆ. ಆರ್​ಆರ್ ಟೈಟ್ ಬೌಲಿಂಗ್ ನಡೆಸುತ್ತಿದೆ.

ಆರ್​ಸಿಬಿ 17/0 (3)

Wed, 22 May 202402:10 PM IST

2ನೇ ಓವರ್​​ನಲ್ಲಿ 12 ರನ್

ಎರಡನೇ ಓವರ್​​ನಲ್ಲಿ 12 ರನ್ ಹರಿದು ಬಂದಿದೆ. ವಿರಾಟ್ ಕೊಹ್ಲಿ ಬೌಂಡರಿ ಸಿಡಿಸಿದರೆ, ಫಾಫ್ ಡು ಪ್ಲೆಸಿಸ್ ಸಿಕ್ಸರ್ ಸಿಡಿಸಿದ್ದಾರೆ.

ಆರ್​ಸಿಬಿ 14/0 (2)

Wed, 22 May 202402:05 PM IST

ಆರ್​ಸಿಬಿ ನೀರಸ ಆರಂಭ

ಆರ್​​ಸಿಬಿ ಮೊದಲ ಓವರ್​​ನಲ್ಲಿ ಕೇವಲ 2 ರನ್ ಗಳಿಸಿದೆ.

Wed, 22 May 202402:01 PM IST

ಆರ್​ಸಿಬಿ ಬ್ಯಾಟಿಂಗ್​ ಆರಂಭ

ಮಹತ್ವದ ಪಂದ್ಯದಲ್ಲಿ ಟಾಸ್ ಸೋತಿರುವ ಆರ್​ಸಿಬಿ ಬ್ಯಾಟಿಂಗ್ ಆರಂಭಿಸಿದೆ. ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ ಆರಂಭಿಕರಾಗಿ ಬ್ಯಾಟ್ ಬೀಸುತ್ತಿದ್ದಾರೆ. ಟ್ರೆಂಟ್ ಬೋಲ್ಟ್ ಮೊದಲ ಓವರ್​ ಬೌಲಿಂಗ್ ಮಾಡುತ್ತಿದ್ದಾರೆ.

Wed, 22 May 202401:40 PM IST

ರಾಯಲ್ ಚಾಲೆಂಜರ್ಸ್ ಬೆಂಗಳೂರು ಇಂಪ್ಯಾಕ್ಟ್ ಪ್ಲೇಯರ್ಸ್

ಸ್ವಪ್ನಿಲ್ ಸಿಂಗ್, ಅನುಜ್ ರಾವತ್, ಸುಯಶ್ ಪ್ರಭುದೇಸಾಯಿ, ವಿಜಯ್‌ಕುಮಾರ್ ವೈಶಾಕ್, ಹಿಮಾಂಶು ಶರ್ಮಾ

Wed, 22 May 202401:40 PM IST

ರಾಜಸ್ಥಾನ್ ರಾಯಲ್ಸ್ ಇಂಪ್ಯಾಕ್ಟ್ ಪ್ಲೇಯರ್ಸ್

ಶುಭಂ ದುಬೆ, ಡೊನೊವನ್ ಫೆರೇರಾ, ನಾಂದ್ರೆ ಬರ್ಗರ್, ಶಿಮ್ರಾನ್ ಹೆಟ್ಮೆಯರ್, ತನುಷ್ ಕೋಟ್ಯಾನ್

Wed, 22 May 202401:39 PM IST

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪ್ಲೇಯಿಂಗ್ XI)

ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ರಜತ್ ಪಾಟಿದಾರ್, ಕ್ಯಾಮರೂನ್ ಗ್ರೀನ್, ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್​), ಮಹಿಪಾಲ್ ಲೊಮ್ರೋರ್, ಕರ್ಣ್ ಶರ್ಮಾ, ಯಶ್ ದಯಾಲ್, ಮೊಹಮ್ಮದ್ ಸಿರಾಜ್, ಲಾಕಿ ಫರ್ಗುಸನ್.

Wed, 22 May 202401:38 PM IST

ರಾಜಸ್ಥಾನ್ ರಾಯಲ್ಸ್ (ಪ್ಲೇಯಿಂಗ್ XI)

ಯಶಸ್ವಿ ಜೈಸ್ವಾಲ್, ಟಾಮ್ ಕೊಹ್ಲರ್-ಕ್ಯಾಡ್ಮೋರ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್​/ನಾಯಕ), ರಿಯಾನ್ ಪರಾಗ್, ಧ್ರುವ್ ಜುರೆಲ್, ರೋವ್ಮನ್ ಪೊವೆಲ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಅವೇಶ್ ಖಾನ್, ಸಂದೀಪ್ ಶರ್ಮಾ, ಯುಜ್ವೇಂದ್ರ ಚಹಲ್

Wed, 22 May 202401:34 PM IST

ರಾಜಸ್ಥಾನ್ ರಾಯಲ್ಸ್ ಬೌಲಿಂಗ್

ಅಹ್ಮದಾಬಾದ್​ನ ನರೇಂದ್ರ ಮೋದಿ ಮೈದಾನದಲ್ಲಿ ನಡೆಯುತ್ತಿರುವ ಎಲಿಮಿನೇಟರ್ ಫೈಟ್​​ನಲ್ಲಿ ಫಾಫ್ ಡು ಪ್ಲೆಸಿಸ್ ನೇತೃತ್ವದ ಆರ್​ಸಿಬಿ ವಿರುದ್ಧ ಸಂಜು ಸ್ಯಾಮ್ಸನ್ ಸಾರಥ್ಯದ ರಾಜಸ್ಥಾನ್ ರಾಯಲ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಗೆದ್ದ ತಂಡವು ಎರಡನೇ ಕ್ವಾಲಿಫೈಯರ್​​​ಗೆ ಅರ್ಹತೆ ಪಡೆದುಕೊಳ್ಳಲಿದೆ. ಸೋತ ತಂಡವು ಎಲಿಮಿನೇಟ್​ ಆಗಲಿದೆ.

Wed, 22 May 202401:11 PM IST

ಆರ್‌ಸಿಬಿ vs ಆರ್‌ಆರ್‌ ಪಂದ್ಯಕ್ಕಿಲ್ಲ ಮಳೆ ಭೀತಿ.

ಅಹಮದಾಬಾದ್‌ನಲ್ಲಿ ಮಳೆ ಭೀತಿ ಇಲ್ಲ. ದಿನ ಪೂರ್ತಿ ತಾಪಮಾನ ಹೆಚ್ಚಿದ್ದು, ವಾತಾವರಣ ಬಿಸಿಯಾಗಿದೆ. ಹೀಗಾಗಿ ಎಲಿಮನೇಟರ್‌ ಪಂದ್ಯಕ್ಕೆ ಮಳೆಯ ಭೀತಿ ಇಲ್ಲ

Wed, 22 May 202410:22 AM IST

ವಿರಾಟ್ ಕೊಹ್ಲಿಗೆ ಭದ್ರತಾ ಭೀತಿ

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಏಕೈಕ ಅಭ್ಯಾಸ ಅವಧಿಯನ್ನು ಭದ್ರತಾ ಕಾರಣಗಳಿಂದಾಗಿ ರದ್ದುಗೊಳಿಸಿದೆ. ನಾಕೌಟ್ ಪಂದ್ಯಕ್ಕೆ ತಯಾರಿ ನಡೆಸಲು ಆರ್‌ಸಿಬಿ ಮಂಗಳವಾರ ಅಹಮದಾಬಾದ್‌ನ ಗುಜರಾತ್ ಕಾಲೇಜು ಮೈದಾನದಲ್ಲಿ ಅಭ್ಯಾಸ ನಡೆಸಬೇಕಿತ್ತು. ಆದರೆ ತಂಡವು ಯಾವುದೇ ಅಧಿಕೃತ ಕಾರಣ ನೀಡದೆ ಅದನ್ನು ರದ್ದುಗೊಳಿಸಿದೆ. ಸ್ಟಾರ್‌ ಆಟಗಾರ ವಿರಾಟ್ ಕೊಹ್ಲಿಗೆ ಬೆದರಿಕೆ ಇರುವುದರರಿಂದ, ಭದ್ರತಾ ದೃಷ್ಟಿಯಿಂದ ಈ ನಿರ್ಧಾರಕ್ಕೆ ಬರಲಾಯ್ತು ಎಂಬುದಾಗಿ ಗುಜರಾತ್ ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ಆನಂದಬಜಾರ್ ಪತ್ರಿಕೆ ವರದಿ ಮಾಡಿದೆ.

Wed, 22 May 202405:46 AM IST

ಏಪ್ರಿಲ್‌ 25ರ ನಂತರ ಸೋತೇ ಇಲ್ಲ ಆರ್‌ಸಿಬಿ

ಆರ್‌ಸಿಬಿ ತಂಡವು ಕೊನೆಯ ಬಾರಿಗೆ ಸೋತಿದ್ದು ಏಪ್ರಿಲ್‌ 21ರಲ್ಲಿ. ಆ ಬಳಿಕ ತಂಡ ಸೋತೇ ಇಲ್ಲ. ಅಂದರೆ ಒಂದು ತಿಂಗಳಿಂದ ಆರ್‌ಸಿಬಿ ಗೆಲುವಿನ ನಾಗಾಲೋಟದಲ್ಲಿದೆ. ಇದೇ ಜೋಶ್‌ನಲ್ಲಿ ಆರ್‌ಆರ್‌ ವಿರುದ್ಧ ಆಡಿದರೆ ತಂಡಕ್ಕೆ ಗಲುವ ಖಚಿತವಾಗಲಿದೆ.

Wed, 22 May 202405:45 AM IST

ಮೇ ತಿಂಗಳಲ್ಲಿ ಗೆದ್ದೇ ಇಲ್ಲ ರಾಜಸ್ಥಾನ್‌

ಏಪ್ರಿಲ್‌ ತಿಂಗಳಲ್ಲಿ ಗೆಲುವಿನ ನಾಗಾಲೋಟದಲ್ಲಿದ್ದ ರಾಯಲ್ಸ್‌, ಮೇ ತಿಂಗಳಿಗೆ ಬರುತ್ತಿದ್ದಂತೆ ಗೆಲುವಿನ ಲಯ ಕಳೆದುಕೊಂಡಿದೆ. ಈ ತಿಂಗಳಲ್ಲಿ ಆಡಿದ ಐದು ಪಂದ್ಯಗಳಲ್ಲಿ ಒಂದರಲ್ಲೂ ಸಂಜು ಸ್ಯಾಮ್ಸನ್‌ ಪಡೆ ಗೆದ್ದಿಲ್ಲ. ನಾಲ್ಕು ಪಂದ್ಯಗಳಲ್ಲಿ ಸೋತರೆ, ಕೆಕೆಆರ್‌ ವಿರುದ್ಧದ ಒಂದು ಪಂದ್ಯ ಮಳೆಯಿಂದ ರದ್ದಾಗಿದೆ.

Wed, 22 May 202404:37 AM IST

ಮುಖಾಮುಖಿ ದಾಖಲೆ

ಈವರೆಗೆ ಆರ್‌ಸಿಬಿ ಮತ್ತು ಆರ್‌ಆರ್ ಒಟ್ಟು 31 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 15 ಬಾರಿ ಗೆಲುವು ಸಾಧಿಸಿದ್ದರೆ, ರಾಜಸ್ಥಾನ್ ರಾಯಲ್ಸ್ 13 ಬಾರಿ ಗೆದ್ದಿದೆ. ಮೊದಲು ಬ್ಯಾಟಿಂಗ್ ಮಾಡಿದಾಗ ಇತ್ತಂಡಗಳು ತಲಾ 5 ಪಂದ್ಯಗಳಲ್ಲಿ ಕೆಲುವು ಕಂಡಿವೆ.

Wed, 22 May 202404:27 AM IST

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಪಿಚ್ ವರದಿ

ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಆಗಿರುವ ನರೇಂದ್ರ ಮೋದಿ ಮೈದಾನದಲ್ಲಿ 2024ರ ಐಪಿಎಲ್‌ನಲ್ಲಿ 7 ಪಂದ್ಯಗಳು ನಡೆದಿವೆ. ಈ ಪಿಚ್ ಇದುವರೆಗೆ ಬ್ಯಾಟರ್‌ಗಳು ಮತ್ತು ಬೌಲರ್‌ಗಳಿಗೆ ಸಮಾನವಾಗಿ ನೆರವಾಗಿದೆ. ಎರಡು ಬಾರಿ 200 ಪ್ಲಸ್ ಸ್ಕೋರ್‌ ಚೇಸಿ ಆಗಿದೆ. ಮೈದಾನವು ಚೇಸಿಂಗ್‌ಗೆ ಹೆಸರುವಾಸಿ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆತಿಥೇಯ ಗುಜರಾತ್ ಟೈಟಾನ್ಸ್ ತಂಡ ಇದೇ ಮೈದಾನದಲ್ಲಿ ಕೇವಲ 89ಕ್ಕೆ ಆಲೌಟ್‌ ಆಗಿತ್ತು. ಹೀಗಾಗಿ ಬ್ಯಾಟರ್‌ಗಳು ಮತ್ತು ಬೌಲರ್‌ಗಳಿಗೆ ಪಿಚ್ ಸಮಾನವಾಗಿ ಸಹಕರಿಸುವ ಸಾಧ್ಯತೆ ಇದೆ. ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಕೆಕೆಆರ್‌ ತಂಡ ಸುಲಭವಾಗಿ ಚೇಸಿಂಗ್‌ ಮಾಡಿ ಗೆದ್ದಿತ್ತು. ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಪ್ಯಾಟ್‌ ಕಮಿನ್ಸ್‌ ಕೈಸುಟ್ಟುಕೊಂಡಿದ್ದರು..

Wed, 22 May 202404:24 AM IST

ಅಹಮದಾಬಾದ್‌ ಹವಾಮಾನ ವರದಿ

ಅಹಮಾದಾಬಾದ್‌ನಲ್ಲಿಂದು (ಮೇ 22, ಬುಧವಾರ) ತಾಪಮಾನ 45 ಡಿಗ್ರಿ ಸೆಲ್ಸಿಯಸ್‌ವರೆಗೆ ಹೆಚ್ಚಾಗುವ ಸಾಧ್ಯತೆ ಇದೆ. ಆದರೆ ಶೇಕಡಾ 0 ರಷ್ಟು ಮಳೆಯ ಸಾಧ್ಯತೆ ಇದೆ. ಆರ್‌ಸಿಬಿ-ಆರ್‌ಆರ್ ನಡುವಿನ ಎಲಿಮಿನೇಟರ್-1 ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಯಾವುದೇ ಮುನ್ಸೂಚನೆ ಇಲ್ಲ. ರಾತ್ರಿ 8 ಗಂಟೆಗೆ ತಾಪಮಾನ 42 ಡಿಗ್ರಿ ಸೆಲ್ಸಿಯಸ್, ರಾತ್ರಿ 10 ಗಂಟೆಗೆ 30 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುವ ನಿರೀಕ್ಷೆ ಇದೆ. ಪಂದ್ಯದ ಸಮಯದಲ್ಲಿ ಆರ್ದ್ರತೆ ಸುಮಾರು ಶೇಕಡಾ 16 ರಿಂದ 21 ರಷ್ಟು ಇರಲಿದೆ ಎಂದು ನಿರೀಕ್ಷಿಸಲಾಗಿದೆ. ದಿನಪೂರ್ತಿ ಬಿಸಿಲು ಹೆಚ್ಚಿರಲಿದ್ದು, ಸೆಕೆ ಇರಲಿದೆ.

Wed, 22 May 202404:23 AM IST

ಆರ್‌ಸಿಬಿ ಸಂಭಾವ್ಯ 11ರ ಬಳಗ

ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ರಜತ್ ಪಟಿದಾರ್, ಕ್ಯಾಮರೂನ್ ಗ್ರೀನ್, ಗ್ಲೇನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಮಹಿಪಾಲ್ ಲೊಮ್ರೋರ್, ಯಶ್ ದಯಾಳ್, ಕರಣ್ ಶರ್ಮಾ, ಮೊಹಮ್ಮದ್ ಸಿರಾಜ್, ಲಾಕಿ ಫರ್ಗುಸನ್.

ಇಂಪ್ಯಾಕ್ಟ್ ಆಟಗಾರರು: ಅನುಜ್ ರಾವತ್, ಸುಯಶ್ ಪ್ರಭುದೇಸಾಯಿ, ಹಿಮಾಂಶು ಶರ್ಮಾ, ವೈಶಾಕ್ ವಿಜಯಕುಮಾರ್, ಸ್ವಿಪ್ನಿಲ್ ಸಿಂಗ್,

Wed, 22 May 202404:19 AM IST

ರಾಜಸ್ಥಾನ್‌ ರಾಯಲ್ಸ್‌ ಸಂಭಾವ್ಯ ತಂಡ

ಯಶಸ್ವಿ ಜೈಸ್ವಾಲ್, ಟಾಮ್ ಕೊಹ್ಲರ್-ಕ್ಯಾಡ್ಮೋರ್, ಸಂಜು ಸ್ಯಾಮ್ಸನ್ (ನಾಯಕ ಮತ್ತು ವಿಕೆಟ್‌ ಕೀಪರ್), ರಿಯಾನ್ ಪರಾಗ್, ಧ್ರುವ್ ಜುರೆಲ್, ಶಿಮ್ರಾನ್ ಹೆಟ್ಮೆಯರ್, ಆರ್ ಅಶ್ವಿನ್, ಟ್ರೆಂಟ್ ಬೌಲ್ಟ್, ಆವೇಶ್ ಖಾನ್, ಸಂದೀಪ್ ಶರ್ಮಾ, ಯುಜ್ವೇಂದ್ರ ಚಹಾಲ್, ರೋವ್ಮನ್ ಪೊವೆಲ್/ಡೊನೊವನ್ ಫೆರೇರಾ/ನಾಂದ್ರೆ ಬರ್ಗರ್ (ಇಂಪ್ಯಾಕ್ಟ್‌ ಪ್ಲೇಯರ್).