ರಾಜಸ್ಥಾನ್ ರಾಯಲ್ಸ್ ಸೋಲಿಸಿ ಪ್ಲೇಆಫ್​​ ಆಸೆಯನ್ನು ಮತ್ತಷ್ಟು ಗಟ್ಟಿ ಮಾಡಿಕೊಂಡ ಚೆನ್ನೈ ಸೂಪರ್ ಕಿಂಗ್ಸ್; ಆರ್​ಸಿಬಿಗೆ ಒತ್ತಡ
ಕನ್ನಡ ಸುದ್ದಿ  /  ಕ್ರಿಕೆಟ್  /  ರಾಜಸ್ಥಾನ್ ರಾಯಲ್ಸ್ ಸೋಲಿಸಿ ಪ್ಲೇಆಫ್​​ ಆಸೆಯನ್ನು ಮತ್ತಷ್ಟು ಗಟ್ಟಿ ಮಾಡಿಕೊಂಡ ಚೆನ್ನೈ ಸೂಪರ್ ಕಿಂಗ್ಸ್; ಆರ್​ಸಿಬಿಗೆ ಒತ್ತಡ

ರಾಜಸ್ಥಾನ್ ರಾಯಲ್ಸ್ ಸೋಲಿಸಿ ಪ್ಲೇಆಫ್​​ ಆಸೆಯನ್ನು ಮತ್ತಷ್ಟು ಗಟ್ಟಿ ಮಾಡಿಕೊಂಡ ಚೆನ್ನೈ ಸೂಪರ್ ಕಿಂಗ್ಸ್; ಆರ್​ಸಿಬಿಗೆ ಒತ್ತಡ

CSK vs RR Highlights: ರಾಜಸ್ಥಾನ್ ರಾಯಲ್ಸ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ 5 ವಿಕೆಟ್​ಗಳ ಗೆಲುವು ಪ್ಲೇಆಫ್​ ಆಸೆಯನ್ನು ಜೀವಂತವಾಗಿರಿಸಿದೆ.

ರಾಜಸ್ಥಾನ್ ರಾಯಲ್ಸ್ ಸೋಲಿಸಿ ಪ್ಲೇಆಫ್​​ ಆಸೆಯನ್ನು ಮತ್ತಷ್ಟು ಗಟ್ಟಿ ಮಾಡಿಕೊಂಡ ಚೆನ್ನೈ ಸೂಪರ್ ಕಿಂಗ್ಸ್
ರಾಜಸ್ಥಾನ್ ರಾಯಲ್ಸ್ ಸೋಲಿಸಿ ಪ್ಲೇಆಫ್​​ ಆಸೆಯನ್ನು ಮತ್ತಷ್ಟು ಗಟ್ಟಿ ಮಾಡಿಕೊಂಡ ಚೆನ್ನೈ ಸೂಪರ್ ಕಿಂಗ್ಸ್ (PTI)

2008ರ ಚಾಂಪಿಯನ್​ ರಾಜಸ್ಥಾನ್ ರಾಯಲ್ಸ್ ವಿರುದ್ಧ 5 ಬಾರಿಯ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್​ ಭರ್ಜರಿ ಗೆಲುವು ಸಾಧಿಸಿ ಪ್ಲೇಆಫ್​ ಆಸೆಯನ್ನು ಜೀವಂತವಾಗಿರಿಸಿದೆ. ಚೆನ್ನೈನ ಚೆಪಾಕ್​ ಮೈದಾನದಲ್ಲಿ ನಡೆದ ನಿರ್ಣಾಯಕ ಹಣಾಹಣಿ ಹಾಗೂ ಚೆಪಾಕ್​ನಲ್ಲಿ ನಡೆದ ಕೊನೆಯ ಲೀಗ್​ ಪಂದ್ಯದಲ್ಲಿ 5 ವಿಕೆಟ್​ಗಳ ಗೆಲುವು ಸಾಧಿಸಿ ಪ್ರಮುಖ 2 ಅಂಕ ಪಡೆಯಿತು. ಆದರೆ, ಗೆದ್ದು ಪ್ಲೇಆಫ್​ ಪ್ರವೇಶಿಸುವ ಕನಸಿನಲ್ಲಿದ್ದ ರಾಜಸ್ಥಾನ್, ತನ್ನ ಕನಸನ್ನು ಮುಂದಿನ ಪಂದ್ಯಕ್ಕೆ ಶಿಫ್ಟ್ ಮಾಡಿದೆ.

ಚೆನ್ನೈ ಆಡಿದ 13 ಪಂದ್ಯಗಳಲ್ಲಿ 7 ಗೆಲುವಿನೊಂದಿಗೆ 14 ಅಂಕ ಸಂಪಾದಿಸಿ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. 3ನೇ ಸ್ಥಾನದಲ್ಲಿದ್ದ ಸನ್​​ರೈಸರ್ಸ್ ಹೈದರಾಬಾದ್, 1 ಸ್ಥಾನ ಕುಸಿದಿದೆ. ಚೆನ್ನೈ ಈ ಗೆಲುವಿನೊಂದಿಗೆ ಆರ್​​ಸಿಬಿ ಒತ್ತಡವನ್ನು ಹೆಚ್ಚಿಸಿದೆ. ಆರ್​ಸಿಬಿ ತನ್ನ ಎರಡು ಪಂದ್ಯಗಳಲ್ಲಿ ಗೆಲ್ಲಬೇಕು ಜೊತೆಗೆ ನೆಟ್​ರನ್​ರೇಟ್​ ಅನ್ನೂ ಹೆಚ್ಚಿಸಿಕೊಳ್ಳುವುದು ಅನಿವಾರ್ಯವಾಗಿದೆ.

ಋತುರಾಜ್ ಗಾಯಕ್ವಾಡ್ ಏಕಾಂಗಿ ಹೋರಾಟ

ಮೊದಲು ಬ್ಯಾಟಿಂಗ್ ನಡೆಸಿದ ರಾಜಸ್ಥಾನ್ ರಾಯಲ್ಸ್, ಎದುರಾಳಿ ಚೆನ್ನೈ ಬೌಲರ್​ಗಳ ದಾಳಿಗೆ ಅಕ್ಷರಶಃ ತತ್ತರಿಸಿತು. ಕಳೆದುಕೊಂಡಿದ್ದು ಐದೇ ವಿಕೆಟ್​ ಆದರೂ ಗಳಿಸಿದ್ದು 141 ರನ್ ಮಾತ್ರ. ಇನ್ನಿಂಗ್ಸ್​ ಆರಂಭದಿಂದ ಕೊನೆಯವರೆಗೂ ಬೌಲರ್​​ಗಳೇ ಹಿಡಿತ ಸಾಧಿಸಿ ಬ್ಯಾಟರ್​ಗಳನ್ನು ಇಕ್ಕಟ್ಟಿಗೆ ಸಿಲುಕಿಸಿದರು. ಈ ಗುರಿ ಬೆನ್ನಟ್ಟಿದ ಸಿಎಸ್​ಕೆ ಸಹ ಬ್ಯಾಟಿಂಗ್​ ನಡೆಸಲು ಹರಸಾಹಸಪಟ್ಟಿತು. ಬೌಲಿಂಗ್ ಸ್ನೇಹಿ ಪಿಚ್​​​​ನಲ್ಲಿ ಪರದಾಡಿದರು.

142 ರನ್​ಗಳ ಸಾಧಾರಣ ಗುರಿ ಸವಾಲು ಹಿಂಬಾಲಿಸಿದ ಚೆನ್ನೈ, ಕಠಿಣವಾದ ಪಿಚ್​ ನಡುವೆಯೂ ಉತ್ತಮ ಆರಂಭ ಪಡೆಯಿತು. ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ರಚಿನ್ ರವೀಂದ್ರ 28 ರನ್ ಗಳಿಸಿ ಔಟಾದರು. ಡ್ಯಾರಿಲ್ ಮಿಚೆಲ್ 22, ಮೊಯಿನ್ ಅಲಿ 10, ಶಿವಂ ದುಬೆ 18 ರನ್ ಗಳಿಸಿ ಬ್ಯಾಕ್ ಟು ಬ್ಯಾಕ್ ವಿಕೆಟ್ ಒಪ್ಪಿಸಿದರೂ ನಾಯಕ ಋತುರಾಜ್ ಗಾಯಕ್ವಾಡ್ ಮಾತ್ರ ಕೊನೆಯವರೆಗೂ ಬ್ಯಾಟಿಂಗ್ ನಡೆಸಿ ಗಮನ ಸೆಳೆದರು.

ಕೊನೆಯಲ್ಲಿ ರವೀಂದ್ರ ಜಡೇಜಾ 5 ರನ್ ಗಳಿಸಿದರೆ, ಸಮೀರ್ ರಿಜ್ವಿ ಅಜೇಯ 15 ರನ್ ಗಳಿಸಿದರು. ಇನ್ನು ಏಕಾಂಗಿ ಹೋರಾಟ ನಡೆಸಿದ ಋತುರಾಜ್ 41 ಎಸೆತಗಳಲ್ಲಿ 42 ರನ್ ಗಳಿಸಿ ಗಮನ ಸೆಳೆದರು. ರವಿಚಂದ್ರನ್ ಅಶ್ವಿನ್ 2 ವಿಕೆಟ್ ಪಡೆದರು. ಯುಜ್ವೇಂದ್ರ ಚಹಲ್ ಮತ್ತು ನಾಂಡ್ರೆ ಬರ್ಗರ್ ತಲಾ 1 ವಿಕೆಟ್ ಪಡೆದರು.

ರಿಯಾನ್ ಪರಾಗ್ ಆಸರೆ

ಮೊದಲು ಬ್ಯಾಟಿಂಗ್ ನಡೆಸಿದ ಸಂಜು ಪಡೆ, ಪವರ್​​ ಪ್ಲೇನಲ್ಲಿ 42 ರನ್ ಗಳಿಸಿತು. ಬೌಲರ್​​ಗಳಿಗೆ ನೆರವಾಗುತ್ತಿದ್ದ ಪಿಚ್​​ನಲ್ಲಿ ಜೋಸ್ ಬಟ್ಲರ್ (21) ಮತ್ತು ಯಶಸ್ವಿ ಜೈಸ್ವಾಲ್ (24) ದೊಡ್ಡ ಹೊಡೆತಗಳಿಗೆ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಸಿಮರ್​ಜಿತ್ ಸಿಂಗ್​ ಅಗ್ರ ಕ್ರಮಾಂಕದ ಮೂವರನ್ನು ಔಟ್ ಮಾಡಿ ಕಮಾಲ್ ಮಾಡಿದರು. ನಾಯಕ ಸಂಜು ಸ್ಯಾಮ್ಸನ್ (15) ಸಹ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ.

ಈ ವೇಳೆ ರಿಯಾನ್ ಪರಾಗ್ ಉತ್ತಮ ಪ್ರದರ್ಶನ ನೀಡಿ ತಂಡಕ್ಕೆ ಆಸರೆಯಾದರು. ಧ್ರುವ್ ಜುರೆಲ್ ಸಹ ಉತ್ತಮ ಸಾಥ್ ನೀಡಿದರು. ಸತತ ವಿಕೆಟ್​ ಕಳೆದುಕೊಳ್ಳದಿದ್ದರೂ ರನ್​ ಗಳಿಸಲು ಪಿಚ್ ಉತ್ತಮವಾಗಿ ಸಹಕಾರ ನೀಡಲಿಲ್ಲ. ಆದರೂ ಪರಾಗ್​ ಅಜೇಯ 47 ರನ್ ಗಳಿಸಿ ತಂಡದ ಮೊತ್ತವನ್ನು 140ರ ಗಡಿ ದಾಟಿಸಿದರು. ಜುರೆಲ್ 28 ರನ್​ಗಳ ಕಾಣಿಕೆ ನೀಡಿದರು. ಹಾಗಾಗಿ ಅಂತಿಮವಾಗಿ 141 ರನ್ ಗಳಿಸಿತು.

Whats_app_banner